ಅನಾವೃಷ್ಟಿಯ ಅಥವಾ ಇತರ ಯಾವುದೇ ಕಾರಣದ ಮೂಲಕ ಯಾವುದೇ ಭೂ ಭಾಗದ ಪೂರ್ತಾ ಬೆಳೆಗಳು ಭಾಗಶಃ ಅಥವಾ ಪೂರ್ಣವಾಗಿ ನಷ್ಟ ಹೊಂದಿವೆ ಅಥವಾ ನಾಶವಾಗಿವೆ ಎಂದು ವಿಚಾರಣೆಗಳು ಮೂಲಕ ಡೆಪ್ಯುಟಿ ಕಮೀಷನರು ಮನದಟ್ಟು ಮಾಡಿಕೊಂಡರೆ, ಅವನು ಪ್ರತಿ ಎಕರೆಯ ಸರಾಸರಿ ಉತ್ಪನ್ನವನ್ನು ನಿರ್ಧರಿಸುವುದಕ್ಕಾಗಿ ಅಂಥ ಭೂ ಭಾಗದ ಎಲ್ಲಾ ಪ್ರದೇಶಗಳಲ್ಲಿ ಬೆಳೆ ಕೊಯ್ಯುವ ಪ್ರಯೋಗಗಳನ್ನು ಮಾಡಿಸತಕ್ಕದ್ದು. ಭೂಕಂದಾಯದ ವಸೂಲಿಯನ್ನು ಮುಂದಕ್ಕೆ ಹಾಕುವ ಅಥವಾ ಮಾಫಿ ಮಾಡುವ ಪ್ರಶ್ನೆಯನ್ನು ಪರಿಶೀಲಿಸುವುದಕ್ಕಾಗಿ ಆ ಭೂ ಭಾಗದ ಕನಿಷ್ಠ ಪಕ್ಷ ಶೇಕಡಾ ಐದರಷ್ಟು ಗ್ರಾಮಗಳಲ್ಲಿ ತಹಶೀಲ್ದಾರನು ಅಂಥ ಬೆಳೆ ಕೊಯ್ಯುವ ಪ್ರಯೋಗಗಳನ್ನು ನಡೆಸತಕ್ಕದ್ದು; ರೆವೆನ್ಯೂ ಇನ್ಸ್ಟೆಕ್ಟರನ್ನು ಕನಿಷ್ಟ ಪಕ್ಷ ಶೇಕಡಾ ಇಪ್ಪತ್ತರಷ್ಟು ಗ್ರಾಮಗಳಲ್ಲಿ ಮತ್ತು ಗ್ರಾಮ ಲೆಕ್ಕಿಗನು, ತಹಶೀಲ್ದಾರನಾಗಲೀ ಅಥವಾ ರೆವೆನ್ಯೂ ಇನ್ಸ್ಪೆಕ್ಟರನಾಗಲೀ ಪ್ರಯೋಗ ನಡೆಸದಿರುವ ಹಾಗೂ ತನ್ನ ವಶದಲ್ಲಿರುವ, ಎಲ್ಲ ಗ್ರಾಮಗಳಲ್ಲಿ ಅಂಥ ಪ್ರಯೋಗಗಳನ್ನು ನಡೆಸತಕ್ಕದ್ದು.
147ಕ. ಭೂ ಕಂದಾಯದ ವಸೂಲಿಯನ್ನು ಮುಂದೆ ಹಾಕುವುದು.- (1) 147ನೇ ನಿಯಮಕ್ಕನುಸಾರವಾಗಿ ನಿರ್ಧರಿಸಲಾದ ಪ್ರತಿ ಎಕರೆಯ ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಮೂವತ್ತೇಳು ಆಗಿದ್ದರೆ ಮತ್ತು ಶೇಕಡಾ ಇಪ್ಪತ್ತೈದಕ್ಕೆ ಕಡಿಮೆಯಿಲ್ಲದಿದ್ದರೆ ಭೂಕಂದಾಯದ ವಸೂಲಿಯನ್ನು ಪೂರ್ತಿಯಾಗಿ ಮುಂದಕ್ಕೆ ಹಾಕತಕ್ಕದ್ದು.
(2) ಬೆಳೆಯ ಉತ್ಪನ್ನವು ಶೇಕಡಾಮೂವತ್ತೇಳಕ್ಕಿಂತ ಹೆಚ್ಚಾಗಿದ್ದರೆ ಮತ್ತು ಶೇಕಡಾ ಐವತ್ತನ್ನು ಮೀರಿದ್ದರೆ, ಶೇಕಡಾ ಐವತ್ತರಷ್ಟು ಭೂಕಂದಾಯದ ವಸೂಲಿಯನ್ನು ಮುಂದೆಕ್ಕೆ ಹಾಕಬಹುದು.
(3) ಅಂಥ ಬೆಳೆಯ ಉತ್ಪನ್ನವು ಶೇಕಡಾ ಐವತ್ತಕ್ಕಿಂತ ಹೆಚ್ಚಾಗಿದ್ದರೆ, ಭೂ ಕಂದಾಯದ ವಸೂಲಿಯನ್ನು ಮುಂದಕ್ಕೆಹಾಕತಕ್ಕದ್ದಲ್ಲ.
147ಖ. ಮುಂದಕ್ಕೆ ಹಾಕಲಾದ ಭೂಕಂದಾಯದ ವಸೂಲಿ.- (1) ವಸೂಲಿಯನ್ನು ಮುಂದಕ್ಕೆ ಹಾಕಿರುವ ಭೂಕಂದಾಯವನ್ನು ಯಾವುದೇ ವರ್ಷದ ಬಗ್ಗೆ ಸಂದಾಯ ಮಾಡಬೇಕಾದ ಭೂಕಂದಾಯದ ಜೊತೆಗೆ ಈ ಕೆಳಗಿನ ಪ್ರಮಾಣದಲ್ಲಿ ವಸೂಲು ಮಾಡತಕ್ಕದ್ದು.
(i) ಕಂದಾಯ ವಸೂಲಿಯ ವರ್ಷದಲ್ಲಿ ಪ್ರತಿ ಎಕರೆಗೆ ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಎಪ್ಪತ್ತೈದು ಅಥವಾ ಹೆಚ್ಚಿಗೆ ಇದ್ದರೆ, ಒಂದು ವರ್ಷದ ಭೂಕಂದಾಯಕ್ಕೆ ಸಮನಾದ ಮೊಬಲಗು; ಮತ್ತು
(ii) ಕಂದಾಯ ವಸೂಲಿಯ ವರ್ಷದಲ್ಲಿ ಅಂಥ ಬೆಳೆಯ ಉತ್ಪನ್ನವು ಶೇಕಡಾ ಎಪ್ಪತ್ತೈದಕ್ಕಿಂತ ಕಡಿಮೆಯಿದ್ದರೆ, ಆದರೆ ಶೇಕಡಾ ಅರವತ್ತೈರಡಕ್ಕಿಂತ ಕಡಿಮೆ ಇಲ್ಲದಿದ್ದರೆ ಒಂದು ವರ್ಷದ ಭೂಕಂದಾಯದ ಶೇಕಡಾ ಅರವತ್ತೆರಡಕ್ಕೆ ಸಮನಾದ ಮೊಬಲಗು.
(2) ಕಂದಾಯ ವಸೂಲಿಯ ವರ್ಷದಲ್ಲಿ ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಅರವತ್ತೆರಡಕ್ಕೆ ಕಡಿಮೆಯಿದ್ದರೆ, ಮುಂದಕ್ಕೆ ಹಾಕಲಾದ ಭೂಕಂದಾಯವನ್ನು ವಸೂಲು ಮಾಡತಕ್ಕದ್ದಲ್ಲ.
147ಗ. ಭೂಕಂದಾಯದ ಮಾಫಿ.- (1) ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಇಪ್ಪತ್ತೈದಕ್ಕೆ ಕಡಿಮೆಯಿದ್ದರೆ ಭೂಕಂದಾಯವನ್ನು ಪೂರ್ಣವಾಗಿ ಮಾಫಿ ಮಾಡತಕ್ಕದ್ದು.
(2) ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಇಪ್ಪತತೈದು ಮತ್ತು ಅದಕ್ಕಿಂತ ಹೆಚ್ಚಾಗಿದ್ದರೆ ಭೂಕಂದಾಯವನ್ನು ಮಾಫಿ ಮಾಡತಕ್ಕದ್ದಲ್ಲ.
147ಘ. ಮುಂದಕ್ಕೆ ಹಾಕಲಾದ ಭೂಕಂದಾಯದ ಮಾಫಿ.- (1) ಭೂಕಂದಾಯದ ವಸೂಲಿಯನ್ನು ನಿರ್ದಿಷ್ಟ ಅವಧಿಯವರೆಗೆ ಮುಂದಕ್ಕೆ ಹಾಕಿದ್ದರೆ ಮತ್ತು ಸರಾಸರಿ ಬೆಳೆಯ ಉತ್ಪನ್ನವು ಶೇಕಡಾ ಮೂವತ್ತೇಳರಷ್ಟಿದ್ದು ಮತ್ತು ಶೇಕಡಾ ಇಪ್ಪತ್ತೈದಕ್ಕೆ ಕಡಿಮೆಯಿಲ್ಲದುದರ ಕಾರಣದಿಂದಾಗಿ ಮುಂದಿನ ವರ್ಷದಲ್ಲಿ ಅದನ್ನು ವಸೂಲು ಮಾಡಲಾಗದಿದ್ದರೆ, ಅಂಥ ಭೂಕಂದಾಯದ ಸಂದಾಯವನ್ನು ಮೂರನೇ ವರ್ಷದಲ್ಲಿ ಮಾಫಿ ಮಾಡತಕ್ಕದ್ದು.
(2) (1)ನೇ ಉಪನಿಯಮಕ್ಕನುಸಾರವಾಗಿ ಮಾಫಿ ಮಾಡಲಾಗದ, ಮುಂದಕ್ಕೆ ಹಾಕಲಾದ ಭೂಕಂದಾಯವನ್ನು ನಾಲ್ಕನೆ ವರ್ಷದಲ್ಲಿ ಮಾಫಿ ಮಾಡತಕ್ಕದ್ದು.