(1) 128ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗಿನ ಹಕ್ಕು ಬದಲಾವಣೆಯನ್ನನುಸರಿಸಿ ಸರ್ವೇ ನಂಬರನ್ನು ಅಥವಾ ಸರ್ವೆ ನಂಬರಿನ ಪೋಡನ್ನು ವಿಭಜಿಸಬೇಕಾದಲ್ಲಿ ಅಂಥ ಪ್ರತಿಯೊಂದು ವಿಭಜನೆಗೂ ನಾಲ್ಕು ರೂಪಾಯಿಗಳ ದರದಲ್ಲಿ ಫೀಜನ್ನು ವಸೂಲು ಮಾಡತಕ್ಕದ್ದು.
ಪರಂತು, ಅನುಸೂಚಿತ ಜಾತಿಯವರಿಗೆ ಮತ್ತು ಅನುಸೂಚಿತ ತಂಡದವರಿಗೆ ಅಂಥ ಫೀಜನ್ನು ವಿಧಿಸತಕ್ಕದ್ದಲ್ಲ ಮತ್ತು ಅವರಿಂದ ವಸೂಲು ಮಾಡತಕ್ಕದ್ದಲ್ಲ.
ಮತ್ತೂ ಪರಂತು, 1963ರ ಕರ್ನಾಟಕ ಭೂದಾನ ಯಜ್ಞ ಅಧಿನಿಯಮದ (1963ರ 34ನೇ ಕರ್ನಾಟಕ ಅಧಿನಿಯಮದ), ಮೇರೆಗೆ ಕರ್ನಾಟಕ ಭೂದಾನ ಯಜ್ಞ ಮಂಡಳಿಗೆ ದಾನವಾಗಿ ಕೊಟ್ಟ ಅಥವಾ ಆ ಮಂಡಲಿಯು ಮಂಜೂರು ಮಾಡಿದ ಭೂಮಿಗಳ ಸಂಬಂಧದಲ್ಲಿ ಅಂಥ ಯಾವ ಫೀಜನ್ನೂ ವಸೂಲು ಮಾಡತಕ್ಕದ್ದಲ್ಲ.
(2) 128ನೇ ಪ್ರಕರಣದ(4)ನೇ ಉಪ ಪ್ರಕರಣದ ಮೇರೆಗೆ ವಸೂಲು ಮಾಡಬೇಕಾದ ಫೀಜನ್ನು ಈ ಕೆಳಕಂಡ ದರದಲ್ಲಿ ವಿಧಿಸತಕ್ಕದ್ದು ಮತ್ತು ವಸೂಲು ಮಾಡತಕ್ಕದ್ದು, ಅಂದರೆ.-
(i) ಒಬ್ಬ ವ್ಯಕ್ತಿಯು ಒಂದು ಗ್ರಾಮದಲ್ಲಿ ಹೊಂದಿರುವ ಭೂಮಿಗಳಿಗೆ ಸಂಬಂಧಪಟ್ಟು ಹಾಗೂ ಒಂದೇ ಕಾಲದಲ್ಲಿ ಮಾಡಿದ ಎಲ್ಲ ನಮೂದುಗಳಿಗೆ ಗರಿಷ್ಠ ಹತ್ತು ರೂಪಾಯಿಗಳ ಮಿತಿಗೆ ಒಳಪಟ್ಟು, ಸರ್ವೆ ನಂಬರಿನ ಅಥವಾ ಸರ್ವೆ ನಂಬರಿನ ಪೋಡಿನ ಸಂಬಂಧದಲ್ಲಿ ಪ್ರತಿ ನಮೂದಿಗೆ ಒಂದು ರೂಪಾಯಿ ಫೀಜು;
(ii) ಹಕ್ಕು ಬದಲಾವಣೆಗಳಿಗೆ ಸಂಬಂಧಿಸಿ, ಅಳತೆ ಮಾಡಬೇಕಾಗಿರುವ ಹಾಗೂ ರೂಪಿಸಬೇಕಾಗಿರುವ ಸರ್ವೆ ನಂಬರಿನ ಪ್ರತಿಯೊಂದು ಹೊಸ ಪೋಡಿಗೆ ನಾಲ್ಕು ರೂಪಾಯಿಗಳ ಹೆಚ್ಚಿನ ಫೀಜು;
ಪರಂತು, ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ತಂಡಗಳಿಗೆ ಸೇರಿದ ವ್ಯಕ್ತಿಗಳ ಸಂಬಂಧದಲ್ಲಿ ಯಾವ ಫೀಜನ್ನೂ ವಸೂಲು ಮಾಡತಕ್ಕದ್ದಲ್ಲ.
(2) ಮತ್ತೂ ಪರಂತು, 1963ರ ಕರ್ನಾಟಕ ಭೂದಾನ ಯಜ್ಞ ಅಧಿನಿಯಮದ ಮೇರೆಗೆ (1963ರ 34ನೇ ಕರ್ನಾಟಕ ಅಧಿನಿಯಮ) ಕರ್ನಾಟಕ ಭೂದಾನ ಯಜ್ಞ ಮಂಡಳಿಗೆ ದಾನವಾಗಿ ಕೊಟ್ಟ ಅಥವಾ ಅ ಮಂಡಲಿಯು ಮಂಜೂರು ಮಾಡಿದ ಭೂಮಿಗಳ ಬಗ್ಗೆ ಈ ಉಪನಿಯಮದ ಮೇರೆಗೆ ಯಾವ ಫೀಜನ್ನೂ ವಸೂಲು ಮಾಡತಕ್ಕದ್ದಲ್ಲ.