ಎಲ್ಲ ಗ್ರಾಮ ಲೆಕ್ಕಗಳನ್ನು ಪ್ರತಿಯೊಂದು ಸಂದಾಯ ವರ್ಷದ ಬಗೆಗೂ ಇಡತಕ್ಕದ್ದು.
(1) ಗ್ರಾಮ ಲೆಕ್ಕಿಗನು 162ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ತಗಾದೆ ನೋಟೀಸನ್ನು 37ನೇ ನಮೂನೆಯಲ್ಲಿ ಕೊಡತಕ್ಕದ್ದು.
(2) (1)ನೇ ಉಪ-ನಿಯಮದ ಮೇರೆಗೆ ಹೊರಡಿಸಿದ ತಗಾದೆ ನೋಟೀಸನ್ನು ಜಾರಿ ಮಾಡಿದ ತರುವಾಯದ ಏಳು ದಿನಗಳೊಳಗೆ ಸಂದಾಯ ಮಾಡಬೇಕಾದ ವ್ಯಕ್ತಿಯು ಆಮೊಬಲಗನ್ನು ಸಂದಾಯ ಮಾಡಲು ತಪ್ಪಿದರೆ, ಗ್ರಾಮ ಲೆಕ್ಕಿಗನು ಡೆಪ್ಯುಟಿ ಕಮಿಷನರಿಗೆಆ ಬಗ್ಗೆ ವರದಿ ಮಾಡತಕ್ಕದ್ದು ಮತ್ತು ಡೆಪ್ಯುಟಿ ಕಮಿಷನರು ಹಾಗೆ ಕಂದಾಯ ಕೊಡದಿರುವವರ ಚರ ಸ್ವತ್ತನ್ನು ಜಪ್ತಿ ಮಾಡಬೇಕೆಂದು ನಿರ್ದೇಶಿಸಿದರೆ, ಗ್ರಾಮ ಲೆಕ್ಕಿಗನು ಹಾಗೆ ಮಾಡತಕ್ಕದ್ದು ಮತ್ತು ಅಂಥ ಸ್ವತ್ತಿನ ಮಾರಾಟದ ಬಗ್ಗೆ ವ್ಯಾಪಕ ಪ್ರಚಾರ ಮಾಡಿದ ತರುವಾಯ, ರೆವಿನ್ಯೂ ಇನ್ಸ್ಪೆಕ್ಟರನು ಆ ಸ್ವತ್ತನ್ನು ಮಾರಾಟ ಮಾಡತಕ್ಕದ್ದು.
(1) ಪ್ರತಿಯೊಂದು ಮಾರಾಟವನ್ನು ಸಾಮಾನ್ಯವಾಗಿ, ಉದ್ಘೋಷಣೆಯಲ್ಲಿ ಸೂಚಿಸಿದ ದಿನಾಂಕದಂದು ನಡೆಸತಕ್ಕದ್ದು ಮತ್ತು ಅವಶ್ಯಕವಾದರೆ, ಉದ್ಘೋಷಣೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸ್ವತ್ತುಗಳು ಮಾರಾಟವಾಗುವವರೆಗೆ ಪ್ರತಿ ದಿನ (ರಜಾ ದಿನಗಳ ಹೊರತು) ಆ ಮಾರಾಟವನ್ನು ಮುಂದುವರೆಸತಕ್ಕದ್ದು. ಮಾರಾಟವನ್ನು ನಡೆಸುವ ಅಧಿಕಾರಿಯು, ತನ್ನ ವಿವೇಚನಾನುಸಾರವಾಗಿ ಯಾವುದೇ ಮಾರಾಟವನ್ನು ಮೂರು ದಿನಗಳಿಗೆ ಮೀರದ ಅವಧಿಯವರೆಗೆ, ಅಂಥ ಮುಂದೂಡಿಕೆಗೆ ಇರುವ ತನ್ನ ಕಾರಣಗಳನ್ನು ನಮೂದಿಸಿ, ಮುಂದೂಡಬಹುದು.
ಪರಂತು, ಮಾರಾಟವು ರೆವಿನ್ಯೂ ಇನ್ಸ್ಪೆಕ್ಟರನಿಂದ ತಹಸೀಲ್ದಾರನ ಕಛೇರಿಯಲ್ಲಿ ಅಥವಾ ಅದರ ಆವರಣದೊಳಗೆ ನಡೆದರೆ, ತಹಶೀಲ್ದಾರನು ಕಛೇರಿಯ ಮುಖ್ಯ ಸ್ಥಳದಲ್ಲಿದ್ದರೆ, ಅವನ ಅಪ್ಪಣೆಯಿಲ್ಲದ ಹಾಗೆ ಮಾರಾಟವನ್ನು ಮಾಡತಕ್ಕದ್ದಲ್ಲ.
ಯಾವ ಹಣದ ವಸೂಲಿಗಾಗಿ ಸ್ಥಿರಸ್ವತ್ತಿನ ಮಾರಾಟವನ್ನು ಮಾಡಲಾಗಿದೆಯೋ ಆ ಹಣಕ್ಕೆ ಹಕ್ಕುಳ್ಳ ಪಕ್ಷಕ್ಕೆ ಡೆಪ್ಯುಟಿ ಕಮಿಷನರ ಸ್ಪಷ್ಟ ಅನುಮತಿಯಿಲ್ಲದೆ, ಆ ಸ್ವತ್ತಿಗಾಗಿ ಹರಾಜಿನಲ್ಲಿ ಸವಾಲು ಮಾಡಲು ಅಥವಾ ಅದನ್ನು ಖರೀದಿ ಮಾಡಲು ಅವಕಾಶ ಕೊಡತಕ್ಕದ್ದಲ್ಲ.
(2) ಅಂಥ ಅನುಮತಿಯಿಲ್ಲದೆ ಪಕ್ಷವು ಸ್ವತಃ ಅಥವಾ ಮತ್ತೊಬ್ಬ ವ್ಯಕ್ತಿಯ ಮೂಲಕ ಖರೀದಿ ಮಾಡಿದರೆ, ಉಪವಿಭಾಗದ ಅಸಿಸ್ಟೆಂಟ್ ಕಮಿಷನರು, ತಾನು ಯುಕ್ತವೆಂದು, ಆಲೋಚಿಸಿದರೆ, ತಪ್ಪಿದಸ್ಥನ ಅಥವಾ ಆ ಮಾರಾಟದಿಂದ ಯಾವ ಇತರ ವ್ಯಕ್ತಿಯ ಹಿತಾಸಕ್ತಿಗಳಿಗೆ ಬಾಧಕವುಂಟಾಗುವುದೋ, ಅಂಥ ಯಾರೇವ್ಯಕ್ತಿಯ ಅರ್ಜಿಯ ಮೇಲೆ, ಆ ಮಾರಾಟವನ್ನು ಆದೇಶದ ಮೂಲಕ ತಳ್ಳಿ ಹಾಕಬಹುದು ಮತ್ತು ಅಂಥ ಅರ್ಜಿ ಮತ್ತು ಆದೇಶದ ಖರ್ಚುಗಳನ್ನು ಮತ್ತು ಮರು ಮಾರಾಟದಿಂದ ಬರುವ ಬೆಲೆಯಲ್ಲಿ ಸಂಭವಿಸಬಹುದಾದ ಯಾವುದೇ ಕೊರತೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ವೆಚ್ಚಗಳನ್ನು ಯಾವ ಪಕ್ಷದ ಕಾರಣದಿಂದಾಗಿ ಮಾರಾಟವನ್ನು ಮೂಲತಃ ನಡೆಸಲಾಗಿದೆಯೋ ಆ ಪಕ್ಷವು ಸಂದಾಯ ಮಾಡತಕ್ಕದ್ದು.
(3) ಗೊತ್ತು ಮಾಡಬೇಕಾದ ಮೊಬಲಗಿಗಿಂತ ಕಡಿಮೆ ಮೊಬಲಗಿಗೆ ಅರ್ಜಿದಾರನು ಸವಾಲು ಮಾಡುವುದಕ್ಕೆ ಅವಕಾಶ ಕೊಡಕೂಡದೆಂದು ಡೆಪ್ಯುಟಿ ಕಮಿಷನರು ಪರಿಗಣಿಸುವ ಸಂದರ್ಭಗಳಲ್ಲಿ, ಹಾಗೆ ಕನಿಷ್ಟ ಮೊಬಲಗನು ಗೊತ್ತು ಮಾಡಲು ಅವನು ಸಕ್ಷಮನಾಗಿರತಕ್ಕದ್ದು.
(4) ಅರ್ಜಿದಾರನು ಅಂಥ ಅನುಮತಿಯನ್ನು ಪಡೆದು ಖರೀದಿ ಮಾಡಿದರೆ, ಯಾವ ಮೊಬಲಗಿನ ವಸೂಲಿಗಾಗಿ ಮಾರಾಟ ಮಾಡಲಾಯಿತೋ ಆ ಮೊಬಲಗನ್ನು ಖರೀದಿ ಹಣದಲ್ಲಿ ವಜಾ ಮಾಡತಕ್ಕದ್ದು.
(5) 111ನೇ ನಿಯಮದ ಮೇರೆಗೆ ಕೊಡಲಾದ ತಗಾದೆ ನೋಟೀಸನ್ನು, ಅದರ ಒಂದು ಪ್ರತಿಯನ್ನು ಗ್ರಾಮದ ಚವಡಿಯ ಸೂಚನಾಫಲಕದ ಮೇಲೆ ಅಂಟಿಸುವುದರ ಮೂಲಕ, ಗ್ರಾಮದಲ್ಲಿ ಪ್ರಕಟಿಸತಕ್ಕದ್ದು. 30ನೇ ಪ್ರಕರಣದ ಮೇರೆಗೆ ಒಂದು ಪ್ರತಿಯನ್ನು ತಪ್ಪಿದಸ್ಥನ ಮೇಲೆಯೂ ಜಾರಿ ಮಾಡತಕ್ಕದ್ದು. ತಗಾದೆ ನೋಟೀಸಿನ ಖರ್ಚಿನ ಬಗ್ಗೆ ತಪ್ಪಿದಸ್ಥನಿಂದ 1 ರೂಪಾಯಿಯನ್ನು (ಒಂದು ರೂಪಾಯಿ ಮಾತ್ರ) ವಸೂಲು ಮಾಡತಕ್ಕದ್ದು.
ಮಾರಾಟವು ಪೂರ್ಣವಾದ ಮೇಲೆ ಚಿರಾಸ್ತಿಯ ಪೂರ್ಣ ಮೌಲ್ಯವನ್ನು ಕೂಡಲೇ ಠೇವಣಿಯಿಡತಕ್ಕದ್ದು.
(6) ಮಾರಾಟದ ಉದ್ಘೋಷಣೆ ಮತ್ತು ಆ ಬಗೆಗಿನ ನೋಟೀಸು 38ನೇ ನಮೂನೆಯಲ್ಲಿರತಕ್ಕದ್ದು. 114. (* * * * *)
ಯಾವ ಅಧಿಭೋಗ ಅಥವಾ ಪರಭಾರೆಯಾದ ಹಿಡುವಳಿಯ ಸಂಬಂಧದಲ್ಲಿ ಬಾಕಿಯನ್ನು ಸಂದಾಯ ಮಾಡಬೇಕಾಗಿದೆಯೋ ಆ ಅಧಿಭೋಗತೆ ಅಥವಾ ಪರಭಾರೆಯಾದ ಹಿಡುವಳಿಯು ಪ್ರತ್ಯೇಕವಾದ ಕಂದಾಯ ನಿರ್ಧರಣೆಯಾದ ಎರಡು ಅಥವಾ ಹೆಚ್ಚು ಸರ್ವೇ ನಂಬರುಗಳನ್ನು ಅಥವಾ ಭೂಮಿಯ ಅಥವಾ ಎಸ್ಟೇಟುಗಳ ಎರಡು ಅಥವಾ ಹೆಚ್ಚಿನ ಭಾಗಗಳನ್ನು ಒಳಗೊಂಡಿದ್ದರೆ ಮತ್ತು ಅಂಥ ಸರ್ವೇ ನಂಬರುಗಳಲ್ಲಿ ಅಥವಾ ಎಸ್ಟೇಟುಗಳ ಭಾಗಗಳಲ್ಲಿ ಒಂದನ್ನು ಮಾತ್ರ ಅಥವಾ ಹೆಚ್ಚಿನವುಗಳನ್ನು ಮಾರಾಟ ಮಾಡುವ ಮೂಲಕ ಅಂಥ ಬಾಕಿಯ ಪೂರ್ತಾ ಮೊಬಲಗನ್ನು ವಸೂಲು ಮಾಡಬಹುದೆಂದು ಡೆಪ್ಯುಟಿ ಕಮಿಷನರು ಅಭಿಪ್ರಾಯಪಟ್ಟರೆ, ಅವನು, ತನ್ನ ವಿವೇಚನೆಗನುಸಾರವಾಗಿ, ಸದರಿ ಸರ್ವೇ ನಂಬರುಗಳಲ್ಲಿ ಅಥವಾ ಎಸ್ಟೇಟುಗಳ ಭಾಗಗಳಲ್ಲಿ ಒಂದು ಅಥವಾ ಹೆಚ್ಚಿನವುಗಳ ಮುಟ್ಟುಗೋಲನ್ನು ಸೀಮಿತಗೊಳಿಸಬಹುದು. 116. (ನಿರಸಿತ)
ಸರ್ಕಾರದ ಪರವಾಗಿ ಖರೀದಿ ಮಾಡಲಾದ ಮತ್ತು ಮುಟ್ಟುಗೋಲು ಹಾಕಲಾದ ದಿನಾಂಕದಿಂದ ಮೂರು ವರ್ಷಗಳೊಳಗೆ ಬೇರೆ ರೀತಿಯಲ್ಲಿ ವಿಲೆ ಮಾಡಿರುವ ಯಾವುದೇ ಮುಟ್ಟುಗೋಲು ಹಾಕಲಾದ ಅಧಿಭೋಗದ ಹಕ್ಕನ್ನು ಅಥವಾ ಪರಭಾರೆಯಾದ ಹಿಡುವಳಿಯನ್ನು ಯಾವ ಬಾಕಿಯ ಸಲುವಾಗಿ ಮುಟ್ಟುಗೋಲು ಹಾಕಲಾಗಿತ್ತೋ. ಆ ಬಾಕಿಯನ್ನು ಮತ್ತು ಮುಟ್ಟುಗೋಲು ಹಾಕಿದ ದಿನಾಂಕದಿಂದ ಪುನಃ ಸ್ವಾಧೀನಪಡಿಸುವ ದಿನಾಂಕದವರೆಗಿನ ಹಿಡುವಳಿಯ ಬಗೆಗಿನ ಭೂ ಕಂದಾಯದ ಮೊಬಲಗನ್ನು ಮತ್ತು ಡೆಪ್ಯುಟಿ ಕಮಿಷನರು ನಡಸಲೇಬೇಕಾಗಿ ಬಂದ ವಸೂಲಿಯ ಬಗ್ಗೆ ಮತ್ತು ಮುಂದಿನ ವ್ಯವಹರಣೆಗಳ ಸಂಬಂಧದಲ್ಲಿ ಅಲ್ಲಿಯವರೆಗೆ ತಗುಲಿದ ವೆಚ್ಚಗಳನ್ನು ಸಂದಾಯ ಮಾಡಿದ ಮೇಲೆ, ಡೆಪ್ಯುಟಿ ಕಮಿಷನರು ಪುನಃ ಸ್ವಾಧೀನಪಡಿಸಬಹುದು.
(1) ಗ್ರಾಮ ಸೇವೆಗಾಗಿ, ರೆವಿನ್ಯೂಅಥವಾ ಪೊಲೀಸ್ಗಾಗಿ, ಅಥವಾ ಮತೀಯ ಅಥವಾ ಧರ್ಮಾರ್ಥ ಉದ್ದೇಶಗಳಿಗಾಗಿ ಹೊಂದಿರುವ ಇನಾಮು ಭೂಮಿಗಳನ್ನು ಮುಟ್ಟುಗೋಲು ಹಾಕಲಾಗಿದೆಯೆಂದು ಘೋಷಿಸತಕ್ಕದ್ದಲ್ಲ ಮತ್ತು ಮಾರತಕ್ಕದ್ದಲ್ಲ. ಆದರೆ, ಡೆಪ್ಯುಟಿ ಕಮಿಷನರು ಹಿಡುವಳಿದಾರರ ವೈಯಕ್ತಿಕ ಮತ್ತು ಇತರ ಚರ ಸ್ವತ್ತನ್ನು ಜಪ್ತಿ ಮಾಡುವುದರ ಮೂಲಕ ಅವರಿಂದ ಬರಬೇಕಾದ ಮೊಬಲಗನ್ನು ವಸೂಲು ಮಾಡತಕ್ಕದ್ದು.
(2) ಸಂಪೂರ್ಣ ಒಡೆತನದ ಹಕ್ಕು ಪ್ರಾಪ್ತವಾಗಿರದ ಹಿಡುವಳಿಗಳ ಬಗ್ಗೆ ಬಾಕಿ ಬರಬೇಕಾಗಿರುವಾಗ, ಡೆಪ್ಯುಟಿ ಕಮಿಷನರು ಬಾಕಿದಾರನ ವೈಯಕ್ತಿಕ ಅಥವಾ ಇತರ ಸ್ಥಿರ ಸ್ವತ್ತಿನ ಮಾರಾಟದ ಮೂಲಕ ಬಾಕಿಯನ್ನು ವಸೂಲು ಮಾಡಲು ಸಾಧ್ಯವಾಗದಿರುವ ಸಂದರ್ಭದಲ್ಲಿ, ಹಿಡುವಳಿಯು ಮುಟ್ಟುಗೋಲಾಗಿದೆಯೆಂದು ಮತ್ತು ಅವನು ಪುನಃ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಘೋಷಿಸಲು ಡಿವಿಜನಲ್ ಕಮಿಷನರ ಅನುಮತಿಯನ್ನು ಪಡೆಯಬಹುದು.
ಗ್ರಾಮ ಲೆಕ್ಕಿಗನು ತಾನು ವಸೂಲು ಮಾಡಿದ ಮೊಬಲಗು, ಐದು ಸಾವಿರ ರೂಪಾಯಿಗಳಿಗೆ ಮೀರಿದಾಗ ಅದನ್ನು ತಾಲ್ಲೂಕು ಖಜಾನೆಗೆ ಕಳುಹಿಸತಕ್ಕದ್ದು, ಮತ್ತು ಯಾವ ಸಂದರ್ಭದಲ್ಲಿಯೇ ಆಗಲಿ ಕಳೆದಸಲ ಹಣ ಕಳುಹಿಸದಂದಿನಿಂದ ಅಂಥ ದಿನಾಂಕದವರೆಗೆ ತಾನು ವಸೂಲು ಮಾಡಿರುವ ಮೊಬಲಗನ್ನು, ಅಂಥ ಮೊಬಲಗು ಐದು ಸಾವಿರ ರೂಪಾಯಿಗಳಿಗೆ ಮೀರಿರಲಿ ಅಥವಾ ಇಲ್ಲದಿರಲಿ, ವಸೂಲು ಮಾಡಿದ ಪ್ರತಿ ತಿಂಗಳ 25ನೇ ದಿನಾಂಕದೊಳಗೆ ತಾಲ್ಲೂಕು ಖಜಾನೆಗೆ ಕಳುಹಿಸತಕ್ಕದ್ದು. ಗ್ರಾಮ ಲೆಕ್ಕಿಗನು ತಾನು ಕಳುಹಿಸಿದ ಹಣವು ಖಿರ್ದಿಯಲ್ಲಿ ನಮೂದಿಸಿದ ಹಣಕ್ಕೆ ಸಂವಾದಿಯಾಗಿದೆಯೇ ಎಂಬುದನ್ನು ನೋಡಲು ತಾಲ್ಲೂಕು ಅಧಿಕಾರಿಗಳಿಗೆ ಅನುಕೂಲವಾಗುವಂತೆ, ಅಂಥ ಪ್ರತಿಯೊಂದು ಇರಸಾಲಿನ ಜೊತೆಯಲ್ಲಿ ಖಿರ್ದಿಯನ್ನು ಕಳಿಸತಕ್ಕದ್ದು. ಗ್ರಾಮ ಲೆಕ್ಕಿಗನು ಯಾವುದೇ ತಿಂಗಳಿನಲ್ಲಿ ಮೇಲೆ ಹೇಳಿದಂತೆ ಹಣ ಇರಸಾಲು ಮಾಡಲು ತಪ್ಪಿದಲ್ಲಿ, ಗ್ರಾಮ ಲೆಕ್ಕಿಗನು ಕಳುಹಿಸಲು ತಪ್ಪಿದ ಮೊಬಲಗನ್ನು ಅವನಿಂದ ವಸೂಲು ಮಾಡುವುದಕ್ಕೆ ತಕ್ಷಣ ಕ್ರಮ ಕೈಕೊಳ್ಳುವುದು ತಹಸೀಲ್ದಾರನ ಅಥವಾ ಅವನ ಗೈರು ಹಾಜರಿಯಲ್ಲಿ, ಶಿರಸ್ತೇದಾರನ ಕರ್ತವ್ಯವಾಗಿರತಕ್ಕದ್ದು.
(1) 164ನೇ ಪ್ರಕರಣದ ಮೇರೆಗಿನ ಜಫ್ತಿಯ ಆದೇಶಗಳು 40ನೇ ನಮೂನೆಯಲ್ಲಿರತಕ್ಕದ್ದು.
(2) ಈ ಕೆಳಕಂಡ ಪ್ರಕ್ರಿಯೆಯನ್ನು ಅನುಸರಿಸತಕ್ಕದ್ದು.-
(ಕ) ಗ್ರಾಮ ಲೆಕ್ಕಿಗನು ಮೂರು ಮಂದಿಗೆ ಕಡಿಮೆಯಿಲ್ಲದ ಸ್ಥಳದ ಗಣ್ಯವ್ಯಕ್ತಿಗಳನ್ನೊಳಗೊಂಡ ಪಂಚಾಯಿತಿದಾರರ ಸಮಕ್ಷಮದಲ್ಲಿ ಜಫ್ತಿ ಮಾಡತಕ್ಕದ್ದು. ಬಾಕಿದಾರನು ಹಾಜರಾಗಿದ್ದರೆ ಅವನಿಗೆ ಆದೇಶದ ಒಂದು ಪ್ರತಿಯನ್ನು ಕೊಡತಕ್ಕದ್ದು ಮತ್ತು ಅವನು ಗೈರು ಹಾಜರಾಗಿದ್ದು ಅದನ್ನು ಪಡೆಯಲು ಸೂಕ್ತ ಪ್ರಾಧಿಕಾರ ಹೊಂದಿದ ಯಾವ ಅಭಿಕರ್ತನೂ ಇಲ್ಲದಿದ್ದರೆ, ಅವನು ಸಾಮಾನ್ಯವಾಗಿ ವಾಸಿಸುವ ಸ್ಥಳದಲ್ಲಿ ಅಥವಾ ಜಫ್ತಿಯನ್ನು ಮಾಡಬೇಕಾದ ಸ್ಥಳದಲ್ಲಿ ಜಫ್ತಿಯ ಆದೇಶವನ್ನು ಜಾರಿ ಮಾಡತಕ್ಕದ್ದು. ಜಫ್ತಿಯನ್ನು ಮಾಡಿದ ತರುವಾಯ ಜಫ್ತಿ ಮಾಡಿದ ಸ್ವತ್ತಿನ ಪಟ್ಟಿಯನ್ನು ತಯಾರಿಸತಕ್ಕದ್ದು ಮತ್ತು ಅದನ್ನು ಗ್ರಾಮ ಲೆಕ್ಕಿಗ ಹಾಗೂ ಪಂಚಾಯತಿದಾರರು ಅನುಪ್ರಮಾಣಿಸತಕ್ಕದ್ದು. ಸ್ವತ್ತಿನ ಪಟ್ಟಿಯ ಒಂದು ಪ್ರತಿಯನ್ನು ಬಾಕಿದಾರನಿಗೆ ಅಥವಾ ಅವನ ಅಧಿಕೃತ ಅಭಿಕರ್ತನಿಗೆ, ಅವನು ಹಾಜರಿದ್ದರೆ, ಕೊಡತಕ್ಕದ್ದು. ಜಫ್ತಿ ಮಾಡಿದ ಸ್ವತ್ತು ವಸೂಲಾಗಬೇಕಾದ ಬಾಕಿ ಮೊಬಲಗಿಗೆ ಅನುಗುಣವಾದ ಪ್ರಮಾಣದಲ್ಲಿರತಕ್ಕದ್ದು.
(ಖ) ಜಫ್ತಿ ಮಾಡಲಾದ ಎಲ್ಲ ಸ್ವತ್ತೂ, ಇತರ ಏರ್ಪಾಟು ಹೆಚ್ಚು ಯುಕ್ತವೆಂದು ಭಾವಿಸಲಾದ ಹೊರತು, ಗ್ರಾಮ ಲೆಕ್ಕಿಗನ ವಶದಲ್ಲಿರತಕ್ಕದ್ದು. ಇತರ ಏರ್ಪಾಟಿನ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗನು ಅಂಥ ಏರ್ಪಾಡುಗಳನ್ನು ಮಾಡಬಹುದು.
(ಗ) ಈ ನಿಯಮದಲ್ಲಿ ಸ್ಪಷ್ಟವಾಗಿ ಉಪಬಂಧಿಸಿಲ್ಲದ ಎಲ್ಲ ವಿಷಯಗಳ ಬಗ್ಗೆ, ಜಫ್ತಿಯ ಸಂಬಂಧದಲ್ಲಿನ ಪ್ರಕ್ರಿಯೆಯು ಸಾಧ್ಯವಾದಷ್ಟು ಮಟ್ಟಿಗೆ, ಚರಸ್ವತ್ತನ್ನು ಜಫ್ತಿ ಮಾಡುವ ಸಂಬಂಧದಲ್ಲಿ ನ್ಯಾಯಾಲಯಗಳು ನಿಯಮಿಸಿದ ಪ್ರಕ್ರಿಯೆಯಂಥದೇ ಆಗಿರತಕ್ಕದ್ದು. 123. ಯಾವ ಸಿವಿಲ್ ನ್ಯಾಯಾಲಯಗಳ ಆದೇಶದ ಮೇರೆಗೆ ಅಂಥ ಭೂಮಿಗಳನ್ನು ಈ ಮೊದಲು ಜಫ್ತಿ ಮಾಡಲಾಯಿತೋ ಆ ಸಿವಿಲ್ ನ್ಯಾಯಾಲಯಗಳಿಗೆ ಕಂದಾಯದ ಬಾಕಿಯ ಬಗ್ಗೆ ಭೂಮಿಗಳನ್ನು ಮುಟ್ಟುಗೋಲು ಹಾಕಿದ ಸಂಬಂಧದಲ್ಲಿ ನೋಟೀಸನ್ನು ಕೊಡುವುದು.- ಕಂದಾಯದ ಯಾವುದೇ ಬಾಕಿಯನ್ನು ವಸೂಲು ಮಾಡುವ ಉದ್ದೇಶಕ್ಕಾಗಿ ಯಾವ ಅಧಿಭೋಗದ ಹಕ್ಕಿನ ಅಥವಾ ಪರಭಾರೆಯಾದ ಹಿಡುವಳಿಯ ಸಂಬಂಧದಲ್ಲಿ ಸಿವಿಲ್ ನ್ಯಾಯಾಲಯವು ಜಫ್ತಿಯ ನೋಟೀಸನ್ನು ಕೊಟ್ಟಿದೆಯೋ ಅಂಥ ಯಾವುದೇ ಅಧಿಭೋಗದ ಹಕ್ಕನ್ನು ಅಥವಾ ಪರಭಾರೆಯಾದ ಹಿಡುವಳಿಯನ್ನು ಮುಟ್ಟುಗೋಲು ಮಾಡಲಾಗಿದೆಯೆಂದು ಘೋಷಿಸಿದರೆ ಅಥವಾ ಜಫ್ತಿ ಮಾಡಬೇಕೆಂದು ಆದೇಶಿಸಿದರೆ ಬಾಕಿಯನ್ನು ತೀರಿಸಲು ತಪ್ಪಿದದುದಕ್ಕಾಗಿ ಭೂಮಿಯನ್ನು ಮುಟ್ಟುಗೋಲು ಹಾಕುವ ಅಥವಾ ಬಾಕಿಗಾಗಿ ಜಫ್ತಿ ಮಾಡುವ ಮತ್ತು ಭೂಮಿಯನ್ನು ಹಾಗೂ ಅದರಲ್ಲಿರುವ ಯಾವುದೇ ಬೆಳೆಯನ್ನು ಮಾರಾಟ ಮಾಡುವ ಉದ್ದೇಶದ ಬಗ್ಗೆ ನೋಟೀಸನ್ನು, ಯಾವ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಈ ಮೊದಲು ಹಾಗೆ ಜಫ್ತಿಯನ್ನು ಮಾಡಲಾಯಿತೋ ಅಂಥ ಸಿವಿಲ್ ನ್ಯಾಯಾಲಯಕ್ಕೆ ಕೊಡತಕ್ಕದ್ದು.
(1) (ಕ) 168ನೇ ಪ್ರಕರಣದ ಮೇರೆಗಿನ ಮಾರಾಟದ ನೋಟೀಸು ಅವಶ್ಯಕವೆಂದು ಕಂಡು ಬರಬಹುದಾದಂಥ ಮಾರ್ಪಾಟುಗಳೊಡನೆ, 38 ಮತ್ತು 39ನೇ ನಮೂನೆಗಳಿರತಕ್ಕದ್ದು.
(ಖ) ಮಾರಾಟದ ನೋಟೀಸನ್ನು ಈ ಕೆಳಕಂಡ ಸ್ಥಳಗಳಲ್ಲಿ ಅಂಟಿಸತಕ್ಕದ್ದು, ಅಂದರೆ.-
(i) ಮಾರಬೇಕಾದ ಸ್ವತ್ತು;
(ii) ಜಿಲ್ಲೆಯ ಡೆಪ್ಯುಟಿ ಕಮಿಷನರ ಕಛೇರಿಯ ಸೂಚನಾಫಲಕ;
(iii) ರೆವಿನ್ಯೂ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ ಕಛೇರಿಯ ಸೂಚನಾಫಲಕ;
(iv) ಸ್ಥಿರ ಸ್ವತ್ತು ಇರುವ ತಾಲ್ಲೂಕಿನ ತಹಸೀಲ್ದಾರನ ಕಛೇರಿಯ ಸೂಚನಾಫಲಕ;
(v) ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಸೂಚನಾಫಲಕ; ಮತ್ತು
(vi) ಸ್ಥಿರ ಸ್ವತ್ತು ಇರುವ ಗ್ರಾಮದ ಚಾವಡಿ;
(vii) ವಸೂಲು ಮಾಡಬೇಕಾದ ಬಾಕಿಯು ಐದು ಸಾವಿರ ರೂಪಾಯಿಗಳಿಗೆ ಮೀರಿರುವ ಸಂದರ್ಭಗಳಲ್ಲಿ, ಆ ಸ್ಥಳದಲ್ಲಿ ಹೆಚ್ಚಾಗಿ ಪ್ರಸಾರದಲ್ಲಿರುವ ಪ್ರದೇಶ ಭಾಷೆಯ ವೃತ್ತ ಪತ್ರಿಕೆಯಲ್ಲೂ ಸಹ ಮಾರಾಟದ ನೋಟೀಸನ್ನು ಪ್ರಕಟಿಸತಕ್ಕದ್ದು.
(2) 169ನೇ ಪ್ರಕರಣದ ಮೇರೆಗೆ ಮಾಡಿದ ಪ್ರತಿಯೊಂದು ಮಾರಾಟವು ಉದ್ಘೋಷಣೆಯಲ್ಲಿ ಸೂಚಿಸಿದ ದಿನದಂದು ನಡೆಯತಕ್ಕದ್ದು. ಮತ್ತು ಅವಶ್ಯಕವಾದರೆ, ಮಾರಾಟದ ಉದ್ಘೋಷಣೆಯಲ್ಲಿ ನಿರ್ದಿಷ್ಟಪಡಿಸಿದ ಎಲ್ಲ ಸ್ವತ್ತುಗಳು ಮಾರಾಟವಾಗುವವರೆಗೆ ಪ್ರತಿದಿನ (ಸರ್ಕಾರಿ ಅಥವಾ ಸಾರ್ವತ್ರಿಕ ರಜಾ ದಿನಗಳ ಹೊರತು) ಆ ಮಾರಾಟವನ್ನು ಮುಂದುವರಿಸತಕ್ಕದ್ದು. ಡೆಪ್ಯುಟಿ ಕಮಿಷನರು ಮೂರು ದಿನಗಳಿಗೆ ಮೀರದ ಅವಧಿಯವರೆಗೆ ಯಾವುದೇ ಮಾರಾಟವನ್ನು, ಅಂಥ ಮುಂದೂಡುವಿಕೆಗೆ ತನ್ನ ಕಾರಣಗಳನ್ನು ದಾಖಲು ಮಾಡಿ, ಮುಂದೂಡಬಹುದು.
(3) ಮೋಸದ ಉದ್ದೇಶದಿಂದ ಒಂದಾಗಿ ಅಥವಾ ಇತರ ಕಾರಣಗಳಿಗಾಗಿ ಸವಾಲುದಾರರು ಇಲ್ಲದಿದ್ದರೆ ಅಥವಾ ಮಾಡಿದ ಸವಾಲಿನ ಮೊತ್ತವು ಸಮರ್ಪಕವಾಗಿರದಿದ್ದರೆ, ಡೆಪ್ಯುಟಿ ಕಮಿಷನರು ಮಾರಾಟವನ್ನು ಮುಂದೂಡತಕ್ಕದ್ದು ಮತ್ತು 163ನೇ ಪ್ರಕರಣದ ಮೇರೆಗೆ ಮುಟ್ಟುಗೋಲು ಹಾಕಲಾದ ಭೂಮಿಯ ಸಂಬಂಧದಲ್ಲಿ ಆ ಭೂಮಿಯನ್ನು ಸರ್ಕಾರದ ಪರವಾಗಿ ಕೊಳ್ಳಬಹುದೆಂದು ಮತ್ತು ಅದರ ಬಗ್ಗೆ ಅಧಿಭೋಗದಲ್ಲಿರದ ಭೂಮಿಯಂತೆ ವ್ಯವಹರಿಸತಕ್ಕದ್ದೆಂದು ಇಲ್ಲವೆ ತಾನು ಯುಕ್ತವೆಂದು ಭಾವಿಸುವಂಥ ಇತರ ರೀತಿಯಲ್ಲಿ ವಿಲೆ ಮಾಡತಕ್ಕದ್ದೆಂದು ನಿರ್ದೇಶಿಸತಕ್ಕದ್ದು ಮತ್ತು ಸ್ವತ್ತಿನ ಸಂಬಂಧದಲ್ಲಿ ಸರ್ಕಾರದ ಪರವಾಗಿ ಆ ಸ್ವತ್ತನ್ನು ಖರೀದಿ ಮಾಡುವುದರ ಬಗ್ಗೆ ಅಥವಾ ಅದರ ಮರು ಮಾರಾಟ ಇಲ್ಲವೆ ಬೇರೆ ರೀತಿಯ ಅದರ ವಿಲೆಯ ಬಗ್ಗೆ ತನಗೆ ಸೂಕ್ತವೆಂದು ಕಂಡುಬರುವಂಥ ಆದೇಶವನ್ನು ಮಾಡತಕ್ಕದ್ದು.
(4) 179ನೇ ಪ್ರಕರಣದ ಮೇರೆಗೆ ಕೊಡಬೇಕಾದ ಸ್ಥಿರಸ್ವತ್ತಿನ ಖರೀದಿಯ ಪ್ರಮಾಣ ಪತ್ರವು 41ನೇ ನಮೂನೆಯಲ್ಲಿರತಕ್ಕದ್ದು ಮತ್ತು ಖರೀದಿದಾರನು ಒದಗಿಸುವ ಛಾಪಾ ಕಾಗದದ ಮೇಲೆ ಅಥವಾ ಛಾಪಾ ಒತ್ತಿದ ಕಾಗದದ ಮೇಲೆ ಇರತಕ್ಕದ್ದು.
(1) ಕಂದಾಯ ವರ್ಷದ ಸಲುವಾಗಿ ವಿಧಿಸಬಹುದಾದ ಭೂ ಕಂದಾಯವನ್ನು ಪ್ರತಿ ವರ್ಷ ಜನವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ನಾಲ್ಕು ಸಮಾನ ಕಂತುಗಳಲ್ಲಿ ಸಂದಾಯ ಮಾಡತಕ್ಕದ್ದು. ಪ್ರತಿಯೊಂದು ಕಂತನ್ನೂ ಅಂಥ ಪ್ರತಿ ತಿಂಗಳಿನ 20ನೇ ದಿನಾಂಕದೊಳಗೆ ಸಂದಾಯ ಮಾಡತಕ್ಕದ್ದು.
ಪರಂತು, ಯಾವುದೇ ಸಂದರ್ಭದಲ್ಲಿ ಒಂದು ವರ್ಷದ ಭೂ ಕಂದಾಯವು ಐದು ರೂಪಾಯಿಗಳಿಗೆ ಕಡಿಮೆಯಿದ್ದರೆ, ಸಂದಾಯ ಮಾಡಬೇಕಾಗಿರುವ ಪೂರ್ತಿ ಮೊಬಲಗನ್ನು ಜನವರಿ 20ನೇ ದಿನಾಂಕದೊಳಗೆ ಸಂದಾಯ ಮಾಡತಕ್ಕದ್ದು.
(2) ಇಡೀ ವರ್ಷದ ಕಂದಾಯವನ್ನು ಒಂದು ಕಂತಿನಲ್ಲಿ ಸಂದಾಯ ಮಾಡಲು ಯಾರೇವ್ಯಕ್ತಿಯು ಆಪೇಕ್ಷಿಸಿದರೆ, ಅವನು ಜನವರಿ 20ನೇ ದಿನಾಂಕದ ಒಳಗೆ ಹಾಗೆ ಮಾಡಬಹುದು.
(1) ಎಲ್ಲ ಕಂದಾಯವನ್ನು ಗ್ರಾಮ ಲೆಕ್ಕಗನಿಗೆ ಸಂದಾಯ ಮಾಡತಕ್ಕದ್ದು ಮತ್ತು ಅವನು 36ನೇ ನಮೂನೆಯಲ್ಲಿ ಅದರ ಎರಡು ಭಾಗಗಳನ್ನು ಉಪಯೋಗಿಸಿ, ದ್ವಿಪ್ರತಿಯಲ್ಲಿ ರಸೀತಿಗಳನ್ನು ತಯಾರಿಸತಕ್ಕದ್ದು ಮತ್ತು ಎರಡನೇ ಪ್ರತಿಯನ್ನು ಹಣವನ್ನು ಸಂದಾಯ ಮಾಡುವ ವ್ಯಕ್ತಿಗೆ ಕೊಡತಕ್ಕದ್ದು.
ಪರಂತು, ಸಂದಾಯ ಮಾಡುವವನ ಇಚ್ಛಾನುಸಾರ ಅಂಥ ಕಂದಾಯವನ್ನು,-
(ಕ) ಭೂಮಿಯು ಇರುವ ತಾಲ್ಲೂಕಿನ ಖಜಾನೆಗೆ;
(ಖ) ಡೆಪ್ಯುಟಿ ಕಮಿಷನರ ಅನುಮತಿಯನ್ನು ಪಡೆದು ಜಿಲ್ಲೆಯಲ್ಲಿ ಇತರ ಯಾವುದೇ ತಾಲ್ಲೂಕು ಖಜಾನೆಗೆ ಅಥವಾ ಜಿಲ್ಲಾ ಖಜಾನೆಗೆ; ಅಥವಾ
(ಗ) ಪ್ರತಿ ಸಂದರ್ಭದಲ್ಲಿ ಕೊಡಬೇಕಾಗಿರುವ ಮೊಬಲಗಿನ, ಮತ್ತು ಯಾವ ಸ್ವತ್ತುಗಳ ಸಲುವಾಗಿ ಕಂದಾಯವನ್ನು ಸಂದಾಯ ಮಾಡಲಾಗಿದೆಯೋ ಆ ಸ್ವತ್ತುಗಳ ಪೂರ್ಣ ವಿವರಗಳನ್ನು ಕೊಡುವ ವಿವರಣ ಪತ್ರವನ್ನು ಲಗತ್ತಿಸಿ ಮನಿಯಾರ್ಡರಿನ ಮೂಲಕ ಸಂದಾಯ ಮಾಡತಕ್ಕದ್ದು.
(2) ಜಿಲ್ಲಾ ಖಜಾನೆಗೆ ಅಥವಾ ತಾಲ್ಲೂಕು ಖಜಾನೆಗೆ ಅಥವಾ ಮನಿಯಾರ್ಡರಿನ ಮೂಲಕ ಯಾವುದೇ ಸಂದಾಯವನ್ನು ಮಾಡಿದಾಗ, ಅಂಥ ಸಂದಾಯವು ಮಾರಾಟವನ್ನು ನಡೆಸುವ ಅಧಿಕಾರಿಯ ಮುಂದೆ ಆ ಸಂದಾಯದ ಬಗೆಗಿನ ರಸೀತಿಯನ್ನು ಹಾಜರುಪಡಿಸುವುದಕ್ಕೆ ಮೊದಲು ಮಾಡಿದ ಯಾವುದೇ ಮಾರಾಟದ ಮೇಲೆ ಪರಿಣಾಮವುಂಟು ಮಾಡತಕ್ಕದ್ದಲ್ಲ.
(3) ಅಂಥ ಯಾವುದೇ ಸಂದಾಯವನ್ನು ಪಡೆಯುವ ಖಜಾನೆಯ ಅಧಿಕಾರಿಗಳು ಆ ಬಗ್ಗೆ, ಯಾವ ತಾಲ್ಲೂಕಿನಲ್ಲಿ ಅದನ್ನು ಸಂದಾಯ ಮಾಡಬೇಕಾಗಿದೆಯೋ ಆ ತಾಲ್ಲೂಕಿನ ತಹಸೀಲ್ದಾರನಿಗೆ ತಕ್ಷಣ ತಿಳಿಸತಕ್ಕದ್ದು; ಮತ್ತು ತಹಶೀಲ್ದಾರನು ಗ್ರಾಮ ಲೆಕ್ಕಗಳಲ್ಲಿ ಅವಶ್ಯಕ ನಮೂದನೆಯನ್ನು ಮಾಡಿಸಲು ಯಾವ ವಿಳಂಬವನ್ನು ಮಾಡತಕ್ಕದ್ದಲ್ಲ.
163ನೇ ಪ್ರಕರಣದ ಮೇರೆಗೆ ಮಾರಾಟದ ಉದ್ದೇಶಕ್ಕಾಗಿ ಮುಟ್ಟುಗೋಲು ಹಾಕಲಾಗಿದೆಯೆಂದು ಘೋಷಿಸಲಾಗಿರುವ ಸಂಪೂರ್ಣ ಒಡೆತನದ ಹಕ್ಕು ಪ್ರಾಪ್ತವಾಗಿರುವ ಪರಭಾರೆಯಾದ ಹಿಡುವಳಿಯ ಸಂದರ್ಭದಲ್ಲಿ, ಯಾವ ಅವಧಿಯವರೆಗೆ ಪರಭಾರೆಯನ್ನು ಮೂಲತಃ ಮಾಡಲಾಗಿದೆಯೋ ಅದನ್ನು ಮುಕ್ತಾಯಗೊಳಿಸುವಂತೆ ಅಂಥ ಮುಟ್ಟುಗೋಲನ್ನು ಜಾರಿಗೆ ತರತಕ್ಕದ್ದಲ್ಲ ಮತ್ತು ಸ್ವತ್ತನ್ನು ಪರಭಾರೆಯಾದ ಸ್ವತ್ತೆಂಬಂತೆ ಮಾಡಿರತಕ್ಕದ್ದು ಮತ್ತು ಖರೀದಿದಾರನಿಗೆ ಹಾಗೆ ಅದನ್ನು ವರ್ಗಾಯಿಸತಕ್ಕದ್ದು:
ಪರಂತು, ಅಂಥ ಹರಾಜಿನಲ್ಲಿ ಸ್ವತ್ತನ್ನು ಸರ್ಕಾರದ ಪರವಾಗಿ ಖರೀದಿ ಮಾಡಿದರೆ, ಡೆಪ್ಯುಟಿ ಕಮಿಷನರು ಹಿಡುವಳಿಯಲ್ಲಿರುವ ಭೂಮಿಯನ್ನು ಅಧಿಭೋಗದಲ್ಲಿಲ್ಲದ ಪರಭಾರೆಯಾಗಿರದ ಭೂಮಿಯೆಂದು ದಾಖಲೆಗಳಲ್ಲಿ ನಮೂದಿಸುವಂತೆ ಮಾಡತಕ್ಕದ್ದು.