68 ಮತ್ತು 69ನೇ ನಿಯಮಗಳು ಯಥೋಚಿತ ವ್ಯತ್ಯಾಸಗಳೊಂದಿದ ಗ್ರಾಮದ ನಿವೇಶನಗಳಲ್ಲಿಯ ಅಥವಾ ನಗರಗಳ ಮತ್ತು ಪಟ್ಟಣಗಳ ಪರಿಮಿತಿಗಳಲ್ಲಿಯ ಭೂಮಿಗಳ ಮತ್ತು ಅವುಗಳ ಮೇರೆಗಳ ಮೋಜಣಿಗೆ ಅನ್ವಯಿಸತಕ್ಕದ್ದು.
93ಕ: ಕಟ್ಟಡ ನಿವೇಶನಗಳ ಅಧಿಭೋಗದ ಹಕ್ಕಿನ ವಿಲೆ.- (1) ಕಟ್ಟಡ ನಿವೇಶನಗಳ ಅಧಿಭೋಗದ ಹಕ್ಕನ್ನು ಸಾಮಾನ್ಯವಾಗಿ ನಿವೇಶನಗಳಿಗೆ ಬೇಡಿಕೆ ಇದೆಯೆಂದು ಡೆಪ್ಯುಟಿ ಕಮಿಷನರು ಅಭಿಪ್ರಾಯ ಪಟ್ಟಾಗ, ಹರಾಜಿನ ಮೂಲಕ ಅತ್ಯಂತ ಹೆಚ್ಚಿನ ಸವಾಲುದಾರನಿಗೆ ಮಾರಾಟ ಮಾಡತಕ್ಕದ್ದು, ಆದರೆ ಡೆಪ್ಯುಟಿ ಕಮಿಷನರು ತಾನು ನಿಗದಿಗೊಳಿಸಿದ ಬೆಲೆಯನ್ನು ಪಡೆಯುವುದರ ಮೂಲಕ ಅಥವಾ ಯಾವ ಚಾರ್ಜೂ ಇಲ್ಲದೆ ತಾನು ವಿಧಿಸಬಹುದಾದ ಷರತ್ತುಗಳೊಂದಿಗೆ ಈ ಕೆಳಗಿನ ಎಲ್ಲಾ ಅಥವಾ ಯಾವುವೇ ಷರತ್ತುಗಳಿಗೆ ಒಳಪಟ್ಟು ತಾನು ಯುಕ್ತವೆಂದು ಭಾವಿಸುವ ಖಾಸಗಿ ಏರ್ಪಾಟುಗಳ ಮೂಲಕ ಅಂಥ ನಿವೇಶನಗಳ ಅಧಿಭೋಗದ ಹಕ್ಕನ್ನು ವಿಲೇ ಮಾಡಬಹುದು;
(ಎ) ನಿವೇಶನವನ್ನು ಪಡೆದವನು ನಿವೇಶನದ ಸ್ವಾಧೀನವನ್ನು ಪಡೆದ ದಿನಾಂಕದಿಂದ ಹದಿನೈದು ವರ್ಷಗಳ ಅವಧಿಯವರೆಗೆ ನಿವೇಶನವನ್ನು ಪರಭಾರೆ ಮಾಡತಕ್ಕದ್ದಲ್ಲ;
(ಬಿ) ಇತರ ಯಾವುದೇ ನಿವೇಶನವನ್ನು ತೆಗೆದುಕೊಳ್ಳುವುದು ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ಅಂಥ ಪರಭಾರೆಗೆ ಅನುಮತಿ ಕೊಡುವುದು ನ್ಯಾಯಾವಾದುದು ಮತ್ತು ಸೂಕ್ತವಾದುದು ಎಂದು ಸರ್ಕಾರವು ಅಭಿಪ್ರಾಯಪಟ್ಟರೆ ಸರ್ಕಾರದ ಪೂರ್ವ ಮಂಜೂರಾತಿಯೊಂದಿಗೆ ಮತ್ತು ಸರ್ಕಾರವು ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೆ ಒಳಪಟ್ಟು ಮಂಜೂರು ಮಾಡಿದ ನಿವೇಶನವನ್ನು ಪರಭಾರೆ ಮಾಡಬಹುದು;
(ಸಿ) ನಿವೇಶನವನ್ನು ಕೊಟ್ಟ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಅದನ್ನು ಉಪಯೋಗಿಸಿದ್ದರೆ ನಿವೇಶನದ ಮಂಜೂರಾತಿಯನ್ನು ರದ್ದುಗೊಳಿಸಬಹುದು ಮತ್ತು ಅದನ್ನು ವಾಪಸ್ಸು ಪಡೆದುಕೊಳ್ಳಬಹುದು;
(ಡಿ) ಮಂಜೂರಾತಿಯ ಉಪಯೋಗವು ಯಾವ ಸ್ಥಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯಲ್ಲಿ ನಿವೇಶನವು ಇರುವುದೋ ಅದಕ್ಕೆ ಸಂಬಂಧಪಟ್ಟ ಯಾವುದೇ ಕಾನೂನಿಗೆ ಒಳಪಟ್ಟಿರತಕ್ಕದ್ದು;
(ಇ) ಮೇಲೆ ಹೇಳಿದಂತೆ ನೇಮಿಸಲಾದ ಯಾವುವೇ ಷರತ್ತುಗಳನ್ನು ಪಾಲಿಸಲು ತಪ್ಪಿದರೆ ಡೆಪ್ಯುಟಿ ಕಮಿಷನರನ ವಿವೇಚನಾನುಸಾರ, ಕಟ್ಟಡ ನಿವೇಶನವನ್ನು ಅದನ್ನು ಪಡೆದವನಿಗೆ ಯಾವ ಪರಿಹಾರವನ್ನು ಸಂದಾಯ ಮಾಡದೆ ವಾಪಸ್ಸು ಪಡೆದುಕೊಳ್ಳಲು ಅವಕಾಶವುಂಟಾಗುತ್ತದೆ.
-
ನಿವೇಶನಗಳ ಮೌಲ್ಯವನ್ನು ಕನಿಷ್ಠ ಪಕ್ಷ ಅವುಗಳ ಪೂರ್ಣ ಮಾರುಕಟ್ಟೆ ಮೌಲ್ಯವನ್ನು ಪಡೆಯುವಷ್ಟರ ಮಟ್ಟಿಗಾದರೂ ಗೊತ್ತು ಮಾಡತಕ್ಕದ್ದು, ಆದರೆ, ಅಂಥ ನಿವೇಶನಗಳ ವಿಸ್ತೀರ್ಣ, ಅವು ಇರುವ ಸ್ಥಳ ಮತ್ತು ಇತರ ಪ್ರಾಕೃತಿಕ ಅನುಕೂಲಗಳನ್ನು ಅಥವಾ ಅನಾನುಕೂಲಗಳನ್ನು ಗಮನಿಸಿ ಬಿಡಿ ನಿವೇಶನಗಳ ಮೌಲ್ಯವನ್ನು ಸರಾಸರಿ ಮೌಲ್ಯಕ್ಕಿಂತ ಹೆಚ್ಚಾಗಿ ಅಥವಾ ಕಡಿಮೆಯಾಗಿ ಗೊತ್ತುಪಡಿಸಬಹುದು.
-
ಡೆಪ್ಯುಟಿ ಕಮಿಷನರು ಕಟ್ಟಡ ನಿವೇಶನಗಳನ್ನು ಖಾಸಗಿ ಏರ್ಪಾಟುಗಳ ಮೂಲಕ ವಿಲೆ ಮಾಡಬೇಕೆಂದು ತೀರ್ಮಾನಿಸುವ ಸಂದರ್ಭಗಳಲ್ಲಿ, ಅವನು:-
(ಎ) ಅಂಥ ಕಟ್ಟಡ ನಿವೇಶನಗಳ ವಿಲೇವಾರಿಯ ಪ್ರಸ್ತಾಪದ ಬಗ್ಗೆ ಜಾಹೀರಾತು ಕೊಡತಕ್ಕದ್ದು; ಮತ್ತು
(ಬಿ) ಮೂರು ತಿಂಗಳುಗಳ ಕಾಲಾವಧಿಯನ್ನು ಕೊಟ್ಟು ಅರ್ಜಿಗಳನ್ನು ಕರೆಯತಕ್ಕದ್ದು.
-
ಅರ್ಜಿಗಳನ್ನು ವಿಲೆ ಮಾಡುವಾಗ ಕಟ್ಟಡ ನಿವೇಶನವನ್ನು ಸ್ವತಂತ್ರ ನಿವೇಶನವಾಗಿ ಅನುಕೂಲಕರವಾಗಿ ವಿಲೆ ಮಾಡಲಾಗದ ಸಂದರ್ಭದಲ್ಲಿ ಪಕ್ಕದ ನಿವೇಶನ ಪಡೆದಿರುವವನಿಗೆ ಸೂಕ್ತವಾದ ಗಮನವನ್ನು ಕೊಡತಕ್ಕದ್ದು.
-
ಇತರ ಸಂದರ್ಭಗಳಲ್ಲಿ, ನಿವೇಶನಗಳನ್ನು ಈ ಕೆಳಗಿನ ಆದ್ಯತಾಕ್ರಮಗಳಲ್ಲಿ ವಿಲೆ ಮಾಡತಕ್ಕದ್ದು, ಅಂದರೆ:-
(ಎ) ಗ್ರಾಮದಲ್ಲಿ, ಪಟ್ಟಣದಲ್ಲಿ ಅಥವಾ ನಗರದಲ್ಲಿ ಅಥವಾ ಬೇರೆ ಕಡೆಯಲ್ಲಿ ನಿವೇಶನವನ್ನು ಅಥವಾ ಮನೆಯನ್ನು ಹೊಂದಿಲ್ಲದ ಬಡ ವ್ಯಕ್ತಿಗಳು;
(ಬಿ) ಸಂಬಂಧಪಟ್ಟ ಗ್ರಾಮದಲ್ಲಿ ಪಟ್ಟಣದಲ್ಲಿ ಅಥವಾ ನಗರದಲ್ಲಿ ತಮ್ಮ ಸ್ವಂತ ಮನೆಗಳನ್ನು ಹೊಂದಿಲ್ಲದ ಬಡ ವ್ಯಕ್ತಿಗಳು;
(ಸಿ) ರಾಜ್ಯ ಅಥವಾ ಕೇಂದ್ರ ಸರ್ಕಾರದ IVನೇ ವರ್ಗದ ನೌಕರರು,
(ಡಿ) ರಾಜ್ಯ ಅಥವಾ ಕೇಂದ್ರ ಸರ್ಕಾರದ IIIನೇ ವರ್ಗದ ನೌಕರರು ಮತ್ತು ಮಾಜಿ ಸೈನಿಕರು;
(ಇ) ರಾಜ್ಯ ಅಥವಾ ಕೇಂದ್ರ ಸರ್ಕಾರದ IIನೇ ವರ್ಗದ ನೌಕರರು;
(ಎಫ್) ರಾಜ್ಯ ಅಥವಾ ಕೇಂದ್ರ ಸರ್ಕಾರದ Iನೇ ವರ್ಗದ ನೌಕರರು
ಪರಂತು, ಸಂಬಂಧಪಟ್ಟ ಗ್ರಾಮದಲ್ಲಿ, ಪಟ್ಟಣದಲ್ಲಿ ಅಥವಾ ನಗರದಲ್ಲಿ ಅವರು ಯಾವುದೇ ನಿವೇಶನವನ್ನು ಅಥವಾ ಮನೆಯನ್ನು ಹೊಂದಿಲ್ಲದಿದ್ದರೆ ಮತ್ತು ಅವರಿಗೆ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಯಾವ ನಿವೇಶನವನ್ನು ಮಂಜೂರು ಮಾಡಿಲ್ಲದಿದ್ದರೆ ಮಾತ್ರ ನಿವೇಶನವನ್ನು ಮಂಜೂರು ಮಾಡತಕ್ಕದ್ದು; ಮತ್ತು
(ಛ) ಕಟ್ಟಡ ನಿವೇಶನಗಳ ಅವಶ್ಯಕತೆಯಿರುವ ಇತರ ವ್ಯಕ್ತಿಗಳು.
6. ಈ ನಿಯಮದಲ್ಲಿ ಏನೇ ಇದ್ದರೂ, ಡೆಪ್ಯುಟಿ ಕಮಿಷನರು, ಸರ್ಕಾರದ ವಿಶೇಷ ಅಥವಾ ಸಾಮಾನ್ಯ ಆದೇಶಗಳಿಗೆ ಒಳಪಟ್ಟು, ಅವನಿಂದ ನಿರ್ಧರಿಸಲ್ಪಟ್ಟ ಮೌಲ್ಯವು ಸಂದಾಯವಾದ ಮೇಲೆ ಶೈಕ್ಷಣಿಕ ಅಥವಾ ಧರ್ಮಾರ್ಥ ಸಂಸ್ಥೆಗೆ ಅಥವಾ ಸಾರ್ವಜನಿಕ ಪ್ರಾಧಿಕಾರಕ್ಕೆ ನಿವೇಶನವನ್ನು ಮಂಜೂರು ಮಾಡಬಹುದು.