Annexure
ಬಿ.ಪಿ. ಕೃಷ್ಣ, ಅಧೀನ ಕಾರ್ಯದರ್ಶಿ.
ಅಧಿಸೂಚನೆ
ಬೆಂಗಳೂರು, ದಿನಾಂಕ: 30ನೇ ಆಗಸ್ಟ್, 1969
ಎಸ್.ಓ. 1939.- ಕರ್ನಾಟಕ ಭೂಕಂದಾಯ ಅಧಿನಿಯಮ, 1964ರ (ಕರ್ನಾಟಕ ಅಧಿನಿಯಮ 1964ರ 12)ರ 195ನೇ ಪ್ರಕರಣದ (1)ನೇ ಉಪಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸದರಿ ಅಧಿನಿಯಮದ ಉಪಬಂಧಗಳ ಮೇರೆಗೆ ಡೆಪ್ಯುಟಿ ಕಮೀಷನರುಗಳಿಗೆ ಪ್ರದತ್ತವಾದ ಅಧಿಕಾರಗಳನ್ನು ತಾಲ್ಲೂಕುಗಳ ಆಡಳಿತವನ್ನು ಹೊಂದಿರುವ ತಹಶೀಲ್ದಾರರಿಗೆ ಈ ಮೂಲಕ ವಹಿಸಿಕೊಡುತ್ತದೆ, ಅವರು ಆ ಅಧಿಕಾರಗಳನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಚಲಾಯಿಸತಕ್ಕದ್ದು.