107ನೇ ಪ್ರಕರಣದ ಮೇರೆಗಿನ 1ನೇಯ ನಮೂನೆಯಲ್ಲಿ ಸಾಮಾನ್ಯ ನೋಟೀಸನ್ನು ಅಂಥ ನೋಟೀಸನ್ನು ಡಂಗುರ ಬಾರಿಸುವುದರ ಮೂಲಕ ಸೂಚಿಸಿದ ಮೇಲೆ, ಮೋಜಣಿ ನಡೆಸಬೇಕಾಗಿರುವ ಗ್ರಾಮದ ಚಾವಡಿಯಲ್ಲಿ ಪ್ರಕಟಿಸತಕ್ಕದ್ದು.
(1) 108ನೇ ಪ್ರಕರಣದ ಮೇರೆಗೆ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆ ವಿಸ್ತೀರ್ಣವನ್ನುಳ್ಳ ಪ್ರತಿಯೊಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು, ವರ್ಗೀಕರಿಸತಕ್ಕದ್ದು, ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಮೇರೆ ಗುರುತುಗಳಿಂದ ನಿರ್ದಿಷ್ಟಪಡಿಸತಕ್ಕದ್ದು ಮತ್ತು ಭೂದಾಖಲೆಗಳಲ್ಲಿ ಅದನ್ನು ಒಂದು ಸರ್ವೇ ನಂಬರಾಗಿ ನಮೂದಿಸತಕ್ಕದ್ದು.
(ii) ಯಾವ ಹಿಡುವಳಿಯ ವಿಸ್ತೀರ್ಣವು ಗೊತ್ತು ಮಾಡಿದ ಕನಿಷ್ಠ ಪ್ರಮಾಣಕ್ಕಿಂತ ಕಡಿಮೆಯಿದೆಯೋ ಅಂಥ ಪ್ರತಿಒಂದು ಹಿಡುವಳಿಯನ್ನು ಪ್ರತ್ಯೇಕವಾಗಿ ಅಳೆಯತಕ್ಕದ್ದು ಮತ್ತು ಕರನಿರ್ಧಾರಣೆ ಮಾಡತಕ್ಕದ್ದು ಮತ್ತು ಈ ಮುಂದೆ ಉಲ್ಲೇಖಿಸಿರುವ ನಿಯಮಗಳ ಉಪಬಂಧಕ್ಕನುಸಾರವಾಗಿ ಯಾವ ಸರ್ವೇ ನಂಬರಿನಲ್ಲಿ ಅಡಕವಾಗಬೇಕೆಂದು ನಿರ್ದೇಶಿಸಲಾಗಿದೆಯೋ ಆ ಸರ್ವೇ ನಂಬರನ್ನು ಒಂದು ಉಪವಿಭಾಗವಾಗಿ ಭೂದಾಖಲೆಗಳಲ್ಲಿ ನಮೂದಿಸತಕ್ಕದ್ದು.
(1) ರನಿರ್ಧಾರಣೆಯ ಉದ್ದೇಶಕ್ಕಾಗಿ, ಎಲ್ಲಾ ಭೂಮಿಗಳನ್ನು ಅವುಗಳ ಉತ್ಪಾದನಾ ಗುಣಗಳಿಗನುಸಾರವಾಗಿ ವರ್ಗೀಕರಿಸತಕ್ಕದ್ದು. ಮೋಜಣಿಯು ಅನ್ವಯಿಸುವ ರಾಜ್ಯದ ವಿವಿಧ ಪ್ರದೇಶಗಳಿಗೆ ಮತ್ತು ಸಾಗುವಳಿಯ ಸ್ವರೂಪಕ್ಕೆ ಸಂಬಂಧಪಟ್ಟಂತೆ ಮೋಜಣಿ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಕಮಿಷನರ ಆದೇಶಗಳ ಮೇರೆಗೆ ವರ್ಗಗಳ ಸಂಖ್ಯೆಯನ್ನು ಮತ್ತು ಅವುಗಳ ಸಾಪೇಕ್ಷ ಮೌಲ್ಯವನ್ನು ಆಣೆಯಲ್ಲಿ (16 ಅಣೆಗಳು ಅಂದರೆ ಶೇಕಡಾ 100ರ ವರ್ಗೀಕರಣ ಮೌಲ್ಯ) ಗೊತ್ತು ಮಾಡತಕ್ಕದ್ದು, ಮತ್ತು ವರ್ಗೀಕರಣದ ಫಲಿತಾಂಶವನ್ನು ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ನಮೂದಿಸತಕ್ಕದ್ದು:
(ಎ) ಪ್ರತಿ ಪುಸ್ತಕ
(ಬಿ) ಬಾಗಾಯಿತು ತಃಖ್ತೆ
(ಸಿ) ದರವಾರಿ
(ಡಿ) ವರ್ಗಾ ಮಾಡುವವನ ರಿಜಿಸ್ಟ್ರರು
(ಇ) ಮಣ್ಣಿನ ಮತ್ತು ನೀರಿನ ಕರ ನಿರ್ಧಾರಣೆಯ ವಿಭಾಗವನ್ನು ಸೂಚಿಸುವ ವಿವರಣೆ ಪತ್ರ.
(ಎಫ್) ಅಕಾರ್ ಬಂದ್
(2) ಕೃಷಿ ಯೋಗ್ಯವಲ್ಲವೆಂದು ಸೇರಿಸಲ್ಪಟ್ಟ ಭೂಮಿಯನ್ನು “ಪೋಟ್ ಖರಾಬ್” ಎಂದು ವರ್ಗೀಕರಣದಲ್ಲಿ ಭಾವಿಸತಕ್ಕದ್ದು. ಪೋಟ್ ಖರಾಬ್ ಭೂಮಿಗಳನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು,-
(ಎ) ಹಿಡುವಳಿದಾರನ ಹೊಲದ ಮನೆಗಳು ಅಥವಾ ಕಣಗಳೂ ಸೇರಿ ಮೋಜಣಿ ಕಾಲದಲ್ಲಿ ವ್ಯವಸಾಯಕ್ಕೆ ಅನುಪಯುಕ್ತವೆಂದು ವರ್ಗೀಕರಿಸಲ್ಪಟ್ಟವುಗಳು:-
(ಬಿ) (i) ಸಾರ್ವಜನಿಕ ಉದ್ದೇಶಗಳಿಗಾಗಿ ಮೀಸಲಾಗಿರುವುದರಿಂದ ಅಥವಾ ಕೊಟ್ಟಿರುವುದರಿಂದ;
(ii) ಅದು ರಸ್ತೆಯಿಂದ ಅಥವಾ ಅಂಗೀಕೃತ ಕಾಲುದಾರಿಯಿಂದ ಅಥವಾ ಹಿಡುವಳಿದಾರರಲ್ಲದ ಇತರ ವ್ಯಕ್ತಿಗಳಿಂದ ನೀರಾವರಿಗೆ, ಕುಡಿಯುವುದಕ್ಕೆ ಅಥವಾ ಗೃಹೋದ್ದೇಶಗಳಿಗೆ ಉಪಯೋಗಿಸಲ್ಪಡುವ ಕೆರೆ ಅಥವಾ ತೊರೆಯಿಂದ ಆವೃತ್ತವಾಗಿರುವುದರಿಂದ;
(iii) ಹೂಳೂವ ಅಥವಾ ಸುಡುವ ಭೂಮಿಯಾಗಿ ಉಪಯೋಗಿಸಲ್ಪಟ್ಟಿರುವುದರಿಂದ;
(iv) ಗ್ರಾಮೀಣ ಮಣ್ಣಿನ ಪಾತ್ರೆಗಳನ್ನು ಮಾಡಲು ಕೊಟ್ಟಿರುವುದರಿಂದ ಕರನಿರ್ಧಾರಣೆ ಮಾಡಲ್ಪಡದವುಗಳು.
(1) ಕೈಗೊಳ್ಳಲಾದ ಮೋಜಣಿಯ ರೀತಿಗನುಸಾರವಾಗಿ ಈ ಕೆಳಕಂಡ ಪುಸ್ತಕಗಳಲ್ಲಿ ಮತ್ತು ನಮೂನೆಗಳಲ್ಲಿ ಅಳತೆಗಳನ್ನು ನಮೂದಿಸತಕ್ಕದ್ದು.-
(ಎ) ಸುತ್ತು ಮೋಜಣಿ ಪುಸ್ತಕ ಮತ್ತು ಸೂಚಿನಕಾಶೆ
(ಬಿ) ಟಿಪ್ಪಣಿ ಪುಸ್ತಕ ಅಥವಾ ಅಡ್ಡಣಿಗೆ ಹಾಳೆ
(ಸಿ) ಪಕ್ಕಾ ಪುಸ್ತಕ ಅಥವಾ ಗುಣಾಕಾರ ಪುಸ್ತಕ (ಮೂಲ ಮೋಜಣಿ)
(2) (1)ನೇಯ ಉಪನಿಯಮದಲ್ಲಿ ನಮೂದಿಸಿದ ಪುಸ್ತಕಗಳು ಮತ್ತು ನಮೂನೆಗಳ ಜೊತೆಗೆ ಅವಶ್ಯಕವಾದಗಲೆಲ್ಲಾ ಈ ಕೆಳಕಂಡ ಪುಸ್ತಕಗಳನ್ನು ಮತ್ತು ನಮೂನೆಗಳನ್ನು ತಯಾರಿಸಬಹುದು ಮತ್ತು ಇಡಬಹುದು.-
(ಎ) ಖಾಯಂದಾರ ತಃಖ್ತೆ.
(ಬಿ) ಪಹನಿ ತಃಖ್ತೆ
(ಸಿ) ವಸೂಲ್ ಬಾಕಿ
(ಡಿ) ಜೋಡಿದಾರ ತಃಖ್ತೆ
(ಇ) ಲಾವಣಿ ಫೈಸಲ್ ಪತ್ರಿಕೆ
(ಎಫ್) ಮರಗಳ ವಿವರಣಾ ಪತ್ರ (ಗಿಡಪತ್ರಿಕೆ)
(ಜಿ) ಗೋಮಾಳದ ವಿವರಣೆ ಪತ್ರ (ಹುಲ್ಬನ್ನಿ ತಃಖ್ತೆ)
(ಹೆಚ್) ಬಂಜರು ಭೂಮಿಗಳ ವಿವರಣೆ ಪತ್ರ (ಬಂಜರು ತಃಖ್ತೆ)
(ಐ) ಕಮ್ಮಿ ಜಾಸ್ತಿ ಪತ್ರಿಕೆ
(ಞಜೆ) ಖುಷ್ಕಿ, ತರಿ ಮತ್ತು ಬಾಗಾಯಿತು ಭೂಮಿ ಅಥವಾ ಪ್ಲಾಂಟೇಷನ್ ಭೂಮಿಗಳ ಜಂತ್ರಿಗಳು.
(i) ‘ಉತ್ತಮ ದರ್ಜೆಯ ಭೂಮಿಗಳು’ ಎಂದರೆ:-
(ಕ) ಪ್ಲಾಂಟೇಷನ್ ಭೂಮಿಯ ಸಂದರ್ಭಧಲ್ಲಿ ಶೇಕಡಾ 87ಕ್ಕಿಂತ ಮತ್ತು
(ಖ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 69ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು;
(ii) ‘ಕಳೆದ ದರ್ಜೆಯ ಭೂಮಿಗಳು’ ಎಂದರೆ:-
(ಎ) ಪ್ಲಾಂಟೇಷನ್ ಭೂಮಿ ಸಂದರ್ಭದಲ್ಲಿ ಶೇಕಡಾ 75ಕ್ಕಿಂತ ಮತ್ತು
(ಬಿ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 37ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು;
(iii) ‘ಸ್ಥಳೀಯ ವಿಚಾರಣೆ’ ಎಂದರೆ, ಪ್ರತಿಯೊಂದು ಆಯ್ದ ಗ್ರಾಮದಲ್ಲಿ ಕಂದಾಯ ವ್ಯವಸ್ಥೆಯ ಅಧಿಕಾರಿಯು ಕೈಗೊಂಡ ಕಂದಾಯ ವ್ಯವಸ್ಥೆಯ ವಿಚಾರಣೆ.
(iv) ‘ಮಧ್ಯಮ ದರ್ಜೆಯ ಭೂಮಿಗಳು’ ಎಂದರೆ:-
(ಎ) ಪ್ಲಾಂಟೇಷನ್ ಭೂಮಿಯ ಸಂದರ್ಭಧಲ್ಲಿ ಶೇಕಡಾ 75ಕ್ಕಿಂತ ಮತ್ತು
(ಬಿ) ಇತರ ಭೂಮಿಗಳ ಸಂದರ್ಭದಲ್ಲಿ ಶೇಕಡಾ 37ಕ್ಕಿಂತ ಕಡಿಮೆಯಿಲ್ಲದ ವರ್ಗೀಕರಣ ಮೌಲ್ಯವನ್ನು ಹೊಂದಿರುವ ಭೂಮಿಗಳು; 5. “ಮುಖ್ಯ ಬೆಳೆಗಳು” ಎಂದರೆ ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 20ಕ್ಕೆ ಕಡಿಮೆಯಿಲ್ಲದ ಪ್ರದೇಶದಲ್ಲಿ ಬೆಳೆದ ಎಲ್ಲಾ ಬೆಳೆಗಳು ಮತ್ತು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡ 5ಕ್ಕೆ ಕಡಿಮೆಯಿಲ್ಲದ ಪ್ರದೇಶದಲ್ಲಿ ಬೆಳೆದ ನಗದು ಬೆಳೆಗಳು. (6) “ಆಯ್ದ ಗ್ರಾಮ’ ಎಂದರೆ, ಸ್ಥಳೀಯ ವಿಚಾರಣೆ ನಡೆಸುವ ಉದ್ದೇಶಕ್ಕಾಗಿ ಕಂದಾಯ ವ್ಯವಸ್ಥೆಯ ಅಧಿಕಾರಿಯು ಆಯ್ದಕೊಂಡ ಒಂದು ಗ್ರಾಮ.
ಯಾವುದೇ ವರ್ಗದ ಸಂಬಂಧದಲ್ಲಿ ಪ್ರಮಾಣ ಭೂತವಾದ ದರವನ್ನು ಸರಾಸರಿ ಇಳುವರಿ ಮತ್ತು ಆ ವರ್ಗದಲ್ಲಿ ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕೆ ಕಡಿಮೆಯಿಲ್ಲದ ಭಾಗದಲ್ಲಿ ಬೆಳೆದ ಬೆಳೆಗಳ ಮೌಲ್ಯಕ್ಕೆ ಸಂಬಂಧಪಟ್ಟಂತೆ ನಿರ್ಧರಿಸತಕ್ಕದ್ದು. ಈ ಉದ್ದೇಶಕ್ಕಾಗಿ ಆಯ್ದ ಬೆಳೆಗಳು ಸಾಧ್ಯವಾದಷ್ಟು ಮಟ್ಟಿಗೆ ಅಂಥ ವರ್ಗದಲ್ಲಿ ಬೆಳೆದ ಮುಖ್ಯ ಬೆಳೆಗಳಾಗಿರತಕ್ಕದ್ದು. ಮುಖ್ಯ ಬೆಳೆಗಳನ್ನು ಬೆಳೆಯುವ ಪ್ರದೇಶವು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕಿಂತ ಕಡಿಮೆ ಇರುವ ಸಂದರ್ಭಗಳಲ್ಲಿ; ಅಂಥ ವರ್ಗದಲ್ಲಿ ಬೆಳೆಯಬಹುದಾದ ಮತ್ತು ಆ ಉದ್ದೇಶಕ್ಕಾಗಿ ಆರಿಸಬಹುದಾದ ಇತರ ಬೆಳೆಗಳನ್ನು ಈ ಉದ್ದೇಶಕ್ಕಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾದ ಬೆಳೆಯಾಗಿರುವ ಒಟ್ಟು ಪ್ರದೇಶವನ್ನು ಒಟ್ಟು ಬೆಳೆಯಾಗಿರುವ ಪ್ರದೇಶದ ಶೇಕಡಾ 66ಕ್ಕಿಂತ ಕಡಿಮೆಯಿಲ್ಲದಂತೆ ಮಾಡುವುದಕ್ಕಾಗಿ, ಗಮನಕ್ಕೆ ತೆಗೆದುಕೊಳ್ಳತಕ್ಕದ್ದು.
ವಿವರಣೆ.- ಒಂದು ವರ್ಗದ ಭೂಮಿಯಲ್ಲಿನ ಬೆಳೆಗಳು ಮುಖ್ಯ ಬೆಳೆಗಳಾಗಿ ಸೇರಿಸಲ್ಪಡುವುದಕ್ಕೆ ಅವಶ್ಯಕವಾದ ಶೇಕಡಾವಾರ ಒಳಗೊಂಡಿಲ್ಲದಿದ್ದಲ್ಲಿ, ಕಂದಾಯ ವ್ಯವಸ್ಥೆಯ ಅಧಿಕಾರಿಯು ಸ್ಥಳೀಯ ವಿಚಾರಣೆಗಳಿಂದ ನಿರ್ಧರಿಸಲ್ಪಟ್ಟಂತೆ ಅಂಥ ಬೆಳೆಗಳ ಇಳುವರಿ ಮತ್ತು ಬೆಲೆಯ ಆಧಾರದ ಮೇಲೆ ಮತ್ತು ಇತರ ಸಂಬಂಧಪಟ್ಟ ಸಂದರ್ಭಗಳ ಮೇಲೆ ಆ ವರ್ಗದ ಭೂಮಿಯ ಪ್ರಮಾಣಭೂತವಾದ ದರವನ್ನು ಲೆಕ್ಕ ಮಾಡತಕ್ಕದ್ದು.