(1) ಈ ನಿಯಮಗಳನ್ನು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968 ಎಂದು ಕರೆಯತಕ್ಕುದು.
(2) ಅವುಗಳು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗತಕ್ಕದ್ದು .
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968, Co-operation Department
1968 · PDF page 8
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(i) ‘‘ಅಧಿನಿಯಮ'' ಎಂದರೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966.
(ii) ‘‘ಉಪವಿಧಿಗಳು'' ಎಂದರೆ ಈ ಅಧಿನಿಯಮದ 148 ಮತ್ತು 149ನೇ ಪ್ರಕರಣಗಳ ಮೇರೆಗೆ ರಚಿಸಿದ ಉಪವಿಧಿಗಳು.
(iii) ‘‘ಅಧ್ಯಕ್ಷ'' ಎಂದರೆ ಸಮಿತಿಯ ಅಧ್ಯಕ್ಷ.
(iv) ‘‘ಸಮಿತಿ'' ಎಂದರೆ ಮಾರುಕಟ್ಟೆ ಸಮಿತಿ.
(v) ‘‘ನಮೂನೆ'' ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ.
(vi) ‘‘ಸರ್ಕಲ್'' ಎಂದರೆ ರೆವಿನ್ಯೂ ಸರ್ಕಲ್ ಮತ್ತು ಈ ಪದವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರಲ್ಲಿ ಇರುವ ಅರ್ಥವನ್ನೇ ಹೊಂದಿರತಕ್ಕದ್ದು.
(vii) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ.
(viii) ‘‘ಉಪಾಧ್ಯಕ್ಷ'' ಎಂದರೆ ಸಮಿತಿಯ ಉಪಾಧ್ಯಕ್ಷ.