ಪ್ರತಿಯೊಂದು ಸಮಿತಿಯು, ನಗದನ್ನು ನಿರ್ವಹಿಸಬೇಕಾದ ತನ್ನ ನೌಕರರಿಂದ, ತಾನು ಅವಶ್ಯಕವೆಂದು ಯೋಚಿಸುವಂಥ ಭದ್ರತೆಯನ್ನು ತೆಗೆದುಕೊಳ್ಳತಕ್ಕದ್ದು.
[ಕಮೀಷನ್ ಏಜೆಂಟರು ಮುಂತಾದವರು - (1)ಯಾವನೇ 76. ಲೈಸನ್ಸ್ ಪಡೆದ ವ್ಯಾಪಾರಿಗಳು, 1 . ವ್ಯಕ್ತಿಯು ಈ ನಿಯಮದ ಮೇರೆಗೆ ಸಮಿತಿಯು ನೀಡಿದ ಲೈಸನ್ಸ್ನ ಮೇರೆಗೆ ಮತ್ತು ಅದಕ್ಕನುಸಾರವಾಗಿ ಹೊರತು, ಮಾರುಕಟ್ಟೆ ಪ್ರದೇಶದಲ್ಲಿ, 1 [ವ್ಯಾಪಾರಿಯಾಗಿ, ಕಮಿಷನ್ ಏಜೆಂಟ್ನಾಗಿ, ಬ್ರೋಕರ್ನಾಗಿ, ಸಂಸ್ಕರಣಕಾರನಾಗಿ, ರಫ್ತುದಾರನಾಗಿ, ಆಮದುದಾರನಾಗಿ, ಜಿನ್ನರ್ನಾಗಿ, ಪ್ರೆಸರ್ನಾಗಿ, ಕ್ರಷರ್ನಾಗಿ, [ಉಗ್ರಾಣಪಾಲಕನಾಗಿ ದಾಸ್ತಾನುದಾರನಾಗಿ, 2 ಅಥವಾ ಚಿಲ್ಲರೆ ವ್ಯಾಪಾರಿಯಾಗಿ ಅಧಿಸೂಚಿತ ಕೃಷಿ ಉತ್ಪನ್ನದ ವ್ಯವಹಾರವನ್ನು ನಡೆಸತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಆರ್ಡಿಸಿ 265 ಎಂಎಂಡಿ, 84 ದಿನಾಂಕ 7-4-1988ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ ಸೇರಿಸಲಾಗಿದೆ.
1 [(1ಎ) ಮತ್ತೊಬ್ಬ ವ್ಯಕ್ತಿಯ ಸೇವೆಯಲ್ಲಿ ಅಥವಾ ಫರ್ಮಿನ ಸೇವೆಯಲ್ಲಿರುವ ಯಾವನೇ ವ್ಯಕ್ತಿಯು ಸಮಿತಿಯು ನೀಡಿದ ಯಾವುದೇ ಲೈಸನ್ಸನ್ನು ಹೊಂದಿರಲಿ ಅಥವಾ ಹೊಂದಿಲ್ಲದಿರಲಿ, ದಲ್ಲಾಳಿಯಾಗಿ ಲೈಸನ್ಸ್ ಪಡೆಯಲು ಹಕ್ಕುಳ್ಳವನಾಗತಕ್ಕದ್ದಲ್ಲ. ಲೈಸನ್ಸ್ ಪಡೆದಿರುವ ಯಾವನೇ ದಲ್ಲಾಳಿಯು ಅಂಥ ಸೇವೆಗೆ ಸೇರಿದಲ್ಲಿ ಅಥವಾ ಅವನು ಯಾವ ವ್ಯವಹಾರದ ಬಗ್ಗೆ ಲೈಸನ್ಸ್ ಹೊಂದಿರುವನೋ ಅದಕ್ಕೆ ಹೊರತಾದ ವ್ಯವಹಾರವನ್ನು ಮಾಡಿದಲ್ಲಿ, ಅವನು ಲೈಸನ್ಸ್ನ ಷರತ್ತುಗಳನ್ನು ಉಲ್ಲಂಘಿಸಿದ್ದಾನೆಂದು ಭಾವಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಆರ್ಡಿಸಿ 265 ಎಂಎಂಡಿ, 84 ದಿನಾಂಕ 7-4-1988ರ ಮೂಲಕ ಪ್ರತಿಯೋಜಿಸಲಾಗಿದೆ.
1 [(2) ಮಾರುಕಟ್ಟೆ ಪ್ರದೇಶದಲ್ಲಿ -
(i) ವ್ಯಾಪಾರಿಯಾಗಿ, ಕಮಿಷನ್ ಏಜೆಂಟ್ನಾಗಿ, ದಲ್ಲಾಳಿಯಾಗಿ, ರಫ್ತುದಾರನಾಗಿ, ಆಮದುದಾರನಾಗಿ, ದಾಸ್ತಾನುದಾರನಾಗಿ, ಉಗ್ರಾಣಪಾಲಕನಾಗಿ, ಜಿನ್ನರ್ನಾಗಿ, ಪ್ರೆಸರ್ನಾಗಿ, ಕ್ರಷರ್ನಾಗಿ ಅಥವಾ ಸಂಸ್ಕರಣಕಾರನಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ನೀಡಿಕೆಗಾಗಿ ಅಥವಾ ಲೈಸನ್ಸ್ ನವೀಕರಣಕ್ಕಾಗಿ ಸಲ್ಲಿಸಲಾಗುವ ಪ್ರತಿಯೊಂದು ಅರ್ಜಿಯು ನಮೂನೆ 41ರಲ್ಲಿ ಇರತಕ್ಕದ್ದು.
(ii) ಚಿಲ್ಲರೆ ವ್ಯಾಪಾರಿಯಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ನೀಡಿಕೆಗಾಗಿ ಅಥವಾ ಲೈಸನ್ಸ್ ನವೀಕರಣಕ್ಕಾಗಿ ಸಲ್ಲಿಸಲಾಗುವ ಅರ್ಜಿಯು ನಮೂನೆ 42ರಲ್ಲಿ ಇರತಕ್ಕದ್ದು.
(iii) ತಾತ್ಕಾಲಿಕ ವ್ಯಾಪಾರಿಯಾಗಿ ಕಾರ್ಯನಿರ್ವಹಿಸಲು ಲೈಸೆನ್ಸ್ ನೀಡಿಕೆಗಾಗಿ ಅಥವಾ ನವೀಕರಣಕ್ಕಾಗಿ ಸಲ್ಲಿಸಲಾಗುವ ಅರ್ಜಿಯು ನಮೂನೆ 43 ರಲ್ಲಿ ಇರತಕ್ಕದ್ದು.
ಮತ್ತು ಅಂಥ ಎಲ್ಲ ಅರ್ಜಿಗಳೊಂದಿಗೆ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಫೀಜನ್ನು ಸಂದಾಯ ಮಾಡತಕ್ಕದ್ದು ಮತ್ತು ಸಮಿತಿಯು ಲೈಸನ್ಸು ನೀಡಲು ಅಥವಾ ನವೀಕರಿಸಲು ನಿರಾಕರಿಸಿದರೆ ಅರ್ಜಿದಾರನಿಗೆ ಅವನು ಸಂದಾಯ ಮಾಡಿದ್ದ ಫೀಜನ್ನು ಹಿಂದಿರುಗಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ ಸೇರಿಸಲಾಗಿದೆ.
(3) ಕೆಳಕಂಡ ಕೋಷ್ಟಕದ (2)ನೆಯ ಅಂಕಣದಲ್ಲಿ ನಿರ್ದಿಷ್ಟಪಡಿಸಿರುವಂತೆ ವ್ಯಾಪಾರಿಯಾಗಿ, ಕಮಿಷನ್ ಏಜೆಂಟ್ನಾಗಿ, ದಲ್ಲಾಳಿಯಾಗಿ, ಸಂಸ್ಕರಣಕಾರನಾಗಿ, ರಫ್ತುದಾರನಾಗಿ, ಆಮದುದಾರನಾಗಿ [ಉಗ್ರಾಣಪಾಲಕನಾಗಿ ಜಿನ್ನರ್ನಾಗಿ, ಪ್ರೆಸೆರ್ನಾಗಿ, ಕ್ರಷರ್ನಾಗಿ, ದಾಸ್ತಾನುದಾರನಾಗಿ, 1 ಅಥವಾ ಚಿಲ್ಲರೆ ವ್ಯಾಪಾರಿಯಾಗಿ ವ್ಯವಹಾರ ನಡೆಸಲು ಅಗತ್ಯವಾದ ಲೈಸನ್ಸ್ ನೀಡಿಕೆಗೆ ಸಂದಾಯವಾಗಬೇಕಾದ ಗರಿಷ್ಠ 2 [ಲೈಸನ್ಸ್ ಫೀಜು ಆ ಕೋಷ್ಟಕದ (3)ನೇ ಅಂಕಣದ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿದಂತಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174, ಎಂಆರ್ಇ 91 ದಿನಾಂಕ 27-1-1994ರ ಮೂಲಕ ಸೇರಿಸಲಾಗಿದೆ. 2. ಅಧಿಸೂಚನೆ ಸಂಖ್ಯೆ ಆರ್ಡಿಸಿ, 265 ಎಂಎಂಡಿ 84 ದಿನಾಂಕ 16-4-1988ರ ಮೂಲಕ ಪ್ರತಿಯೋಜಿಸಲಾಗಿದೆ.
ಕೋಷ್ಟಕ 1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174, ಎಂಆರ್ಇ 91 ದಿನಾಂಕ 27-1-1994ರ ಮೂಲಕ ಸೇರಿಸಲಾಗಿದೆ.
| ಕ್ರಮ.ಸಂಖ್ಯೆ | ಪ್ರವರ್ಗ | ವರ್ಷಕ್ಕೆ ವಿಧಿಸಬಹುದಾದ |
| | ಗರಿಷ್ಠ ಫೀಜು |
| 1. | ವ್ಯಾಪಾರಿ | 200 |
| 2 | ಕಮಿಷನ್ ಏಜೆಂಟ್ | 200 |
| 3 | ದಲ್ಲಾಳಿ (ಬ್ರೋಕರ್) | 100 |
| 4 | ಸಂಸ್ಕರಣಕಾರ | 100 |
| 5 | ರಫ್ತುದಾರ | 100 |
| 6 | ಆಮದುದಾರ | 100 |
| 7 | ಜಿನ್ನರ್ | 100 |
| 8 | ಪ್ರೆಸ್ಸರ್ | 100 |
| 9 | ಕ್ರಷರ್ | 100 |
| 10 | ದಾಸ್ತಾನುದಾರ | 100 |
| 11 | ಚಿಲ್ಲರೆ ವ್ಯಾಪಾರಿ | 25 |
| 1 | | |
| [12 | ಉಗ್ರಾಣ ಪಾಲಕ | 100]1 |
ವಿವರಣೆ.- ಮೇಲಿನ ಕೋಷ್ಟಕದ (2)ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಿರುವ ಎರಡು ಅಥವಾ ಹೆಚ್ಚು ಪ್ರವರ್ಗಗಳ ಸಂಬಂಧದಲ್ಲಿ ಲೈಸನ್ಸ್ ನೀಡಿಕೆಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ಅಂತಹ ಪ್ರತಿಯೊಂದು ಪ್ರವರ್ಗದ ಬಗ್ಗೆ ಪ್ರತ್ಯೇಕವಾಗಿ ಫೀಜನ್ನು ಸಂದಾಯ ಮಾಡಿದ ಮೇಲೆ ಅಂಥ ಎಲ್ಲಾ ಪ್ರವರ್ಗಗಳ ಸಂಬಂಧದಲ್ಲಿ ಅವನಿಗೆ ಸಂಯೋಜಿತ ಲೈಸನ್ಸನ್ನು ನೀಡಬಹುದು.
(4) ಅಂಥ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಸಮಿತಿಯು ತಾನು ಅವಶ್ಯವೆಂದು [ನಮೂನೆ 36 ಭಾವಿಸಬಹುದಾದಂಥ ವಿಚಾರಣೆಗಳನ್ನು ನಡೆಸಿದ ತರುವಾಯ 1 ರಲ್ಲಿ ಲೈಸನ್ಸ್ ನೀಡಿಕೆಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿರುವ ಲೈಸನ್ಸನ್ನು ನಿರಾಕರಿಸಲು ಯಾವುದೇ ಆಧಾರಗಳಿಲ್ಲವೆಂದು ಕಂಡುಬಂದಲ್ಲಿ ಆತನಿಗೆ ಲೈಸನ್ಸ್ನ್ನು ನೀಡಬಹುದು. ಮತ್ತು ಅಂಥ ಲೈಸನ್ಸ ನೀಡಿದ ಮೇಲೆ, ಅವನು ಈ ನಿಯಮಗಳಿಗೆ ಮತ್ತು ಉಪವಿಧಿಗಳಿಗೆ ಬದ್ಧನಾಗಿರುವುದಕ್ಕೆ ಒಪ್ಪಿ, ಸಮಿತಿಯು ನಿರ್ಧರಿಸಿದಂಥ ನಮೂನೆಯಲ್ಲಿ ಒಂದು ಒಪ್ಪಂದ ಪತ್ರವನ್ನು ಬರೆದುಕೊಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
(5) ಅರ್ಜಿದಾರನು ದಿವಾಳಿಯಾಗಿದ್ದರೆ ಅಥವಾ ಅಧಿನಿಯಮದ, ನಿಯಮಗಳ ಅಥವಾ [ಅನರ್ಹನಾಗಿದ್ದರೆ ಉಪಬಂಧಗಳ ಮೇರೆಗೆ ಅನ್ಯಥಾ 1 ಅಥವಾ ಸಮಿತಿಯ ನಿಯಂತ್ರಣದ ಮೇರೆಗೆ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುವ ದಕ್ಷ ಕಾರ್ಯನಿರ್ವಹಣೆಗೆ, ಅವನ ಕಾರ್ಯನಿರ್ವಹಣೆಯಿಂದಾಗಿ ಅನುಕೂಲವಾಗುವ ಸಂಭವ ಇಲ್ಲದಿದ್ದರೆ ಸಮಿತಿಯು ಅವನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟ ತರುವಾಯ ಕಾರಣಗಳನ್ನು ದಾಖಲ್ಮಾಡಿ ಅವನಿಗೆ ಲೈಸನ್ಸ್ ನೀಡಲು ನಿರಾಕರಿಸಬಹುದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
(6) (4)ನೇ ಉಪನಿಯಮದ ಮೇರೆಗೆ ನೀಡಲಾದ ಲೈಸನ್ಸನ್ನು ನವೀಕರಿಸಿದ ಹೊರತು, ಯಾವ ಮಾರುಕಟ್ಟೆ ವರ್ಷಕ್ಕೆ ಅದನ್ನು ನೀಡಲಾಗಿತ್ತೋ ಆ ವರ್ಷದ ಕೊನೆಯವರೆಗೆ ಅದು ಜಾರಿಯಲ್ಲಿರತಕ್ಕದ್ದು.
(7) ಲೈಸನ್ಸ್ನ ನವೀಕರಣಕ್ಕಾಗಿ ಸಲ್ಲಿಸುವ ಪ್ರತಿಯೊಂದು ಅರ್ಜಿಯನ್ನು ಅದರ ಅವಧಿ ಮುಗಿಯುವ ಒಂದು ತಿಂಗಳ ಮೊದಲು ಸಲ್ಲಿಸತಕ್ಕದ್ದು.
(8) ಲೈಸನ್ಸಿನ ನವೀಕರಣಕ್ಕಾಗಿ ಸಲ್ಲಿಸುವ ಅರ್ಜಿಯನ್ನು, (1)ನೇ ಉಪನಿಯಮದ ಅನುಸಾರವಾಗಿ ಸಲ್ಲಿಸಿರುವಲ್ಲಿ ಅರ್ಜಿಯ ಸಂಬಂಧದಲ್ಲಿ ಆದೇಶವಾಗುವವರೆಗೆ ಅರ್ಜಿದಾರನ ಲೈಸನ್ಸು ಅವಧಿಯು ಯುಕ್ತವಾಗಿ ಮುಂದುವರಿದಿದೆಯೆಂದು ಭಾವಿಸತಕ್ಕದ್ದು.
(9) ಲೈಸನ್ಸ್ ಪಡೆದ ಎಲ್ಲಾ 1 [ವ್ಯಾಪಾರಿಗಳ, ಕಮಿಷನ್ ಏಜೆಂಟರ, ದಲ್ಲಾಳಿಗಳ, ಸಂಸ್ಕರಣಕಾರರ, ರಫ್ತುದಾರರ, ಆಮದುದಾರರ, ಜಿನ್ನರ್ಗಳ, ಪ್ರೆಸ್ಸರ್ಗಳ, ಕ್ರಷರ್ಗಳ, ದಾಸ್ತಾನುದಾರರ ಮತ್ತು ಚಿಲ್ಲರೆ ವ್ಯಾಪಾರಿಗಳ ಹೆಸರುಗಳನ್ನು ಈ ಉದ್ದೇಶಕ್ಕಾಗಿ ಇಡಲಾಗಿರುವ ರಿಜಿಸ್ಟರ್ನಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಆರ್ಡಿಸಿ. 265, ಎಂಎಂಡಿ 84 ದಿನಾಂಕ 7-4-1988ರ ಮೂಲಕ ಪ್ರತಿಯೋಜಿಸಲಾಗಿದೆ.