(1) ಸಮಿತಿಯ ಪರವಾಗಿ ಸ್ವೀಕರಿಸಲಾದ ಎಲ್ಲಾ ಹಣದ ಸಂದರ್ಭದಲ್ಲಿ ಹಾಗೆ ಹಣ ಸ್ವೀಕರಿಸಿದ ಬಗ್ಗೆ ಕಾರ್ಯದರ್ಶಿಯು ಅಥವಾ ಯಾರೇ ಇತರ ಅಧಿಕಾರಿಯು, ನೌಕರನು ಅಥವಾ [ನಮೂನೆ ಈ ಸಂಬಂಧದಲ್ಲಿ ಸಮಿತಿಯು ಯುಕ್ತವಾಗಿ ಅಧಿಕೃತಗೊಳಿಸಿದ ಸಮಿತಿಯ ಏಜೆಂಟನು 1 35 ರಲ್ಲಿ, ಕಾರ್ಬನ್ ದ್ವಿಪ್ರತಿಯಲ್ಲಿ ರಸೀತಿಯನ್ನು ಕೊಡತಕ್ಕದ್ದು ಮತ್ತು ಆ ರಸೀತಿಯನ್ನು ಹಣ ಸಂದಾಯ ಮಾಡುವ ಪಕ್ಷಕಾರನಿಗೆ ಕೊಡತಕ್ಕದ್ದು ಮತ್ತು ಕಾರ್ಬನ್ ಪ್ರತಿಯನ್ನು ಕಚೇರಿ ಪ್ರತಿಯಾಗಿ ಇಟ್ಟುಕೊಂಡಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಹಣ ಸಂದಾಯವನ್ನು ಸ್ವೀಕರಿಸಲು ಅಧಿಕೃತನಾದ ಪ್ರತಿಯೊಬ್ಬ ಅಧಿಕಾರಿಯು, ನೌಕರನು ಅಥವಾ ಏಜೆಂಟನು ಪ್ರತಿದಿನ ತಾನು ಸ್ವೀಕರಿಸಿದ ಹಣದ ಎಲ್ಲಾ ಲೆಕ್ಕಗಳನ್ನು, ಕಾರ್ಯದರ್ಶಿಗೆ ಅಥವಾ ಆ ಸಂಬಂಧದಲ್ಲಿ ಆತನು ಯುಕ್ತವಾಗಿ ಅಧಿಕೃತಗೊಳಿಸಿದ ಅಧಿಕಾರಿಗೆ ಸಲ್ಲಿಸತಕ್ಕದ್ದು ಮತ್ತು ಹಾಗೆ ಸ್ವೀಕರಿಸಲಾದ ಎಲ್ಲಾ ಹಣವನ್ನು ಲೆಕ್ಕಕ್ಕೆ ಸೇರಿಸತಕ್ಕದ್ದು.
1 [74ಎ. 65ನೇ ಪ್ರಕರಣದ (3)ನೇ ಉಪ ಪ್ರಕರಣದ ಅಡಿಯ ಪ್ರಮಾಣಪತ್ರ.- 65ನೇ ಪ್ರಕರಣದ (3)ನೇ ಉಪ ಪ್ರಕರಣದ ಉದ್ದೇಶಕ್ಕಾಗಿ, ಮಾರುಕಟ್ಟೆ ಫೀಜನ್ನು ಸಂಗ್ರಹಿಸಿದ್ದಕ್ಕಾಗಿ 35ಎ ನಮೂನೆಯಲ್ಲಿ ಪ್ರಮಾಣ ಪತ್ರ ನೀಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಒಒಪಿ 10 ಎಂಆರ್ಇ 2001, ದಿನಾಂಕ 30.10.2001ರ ಮೂಲಕ ಸೇರಿಸಲಾಗಿದೆ.