ಅನುಸೂಚಿಯಲ್ಲಿ, ಕೊನೆಯಲ್ಲಿ ಈ ಕೆಳಕಂಡ ವಿವರಣೆಯನ್ನು ಸೇರಿಸತಕ್ಕದ್ದು:-
‘‘ವಿವರಣೆ: ಈ ಅನುಸೂಚಿಯ ಉದ್ದೇಶಕ್ಕಾಗಿ, ಬಾಬು IV ಆಹಾರ ಬೆಳೆಗಳ, ಬಾಬು VII ಎಣ್ಣೆಬೀಜಗಳು, ಬಾಬು VIIIರ ಉಪಬಾಬು 7 ಕೊತ್ತಂಬರಿಯನ್ನು ಮತ್ತು ಬಾಬು Xರ ಉಪಬಾಬು 5 ಆಲುಗಡ್ಡೆಯ ಅಡಿಯಲ್ಲಿ ಬರುವ ಕೃಷಿ ಉತ್ಪನ್ನಗಳಲ್ಲಿ ಪ್ರಮಾಣಿತ ಹಾಗೂ ಸಂಸ್ಕರಿಸಿದ ಬೀಜಗಳಂಥ, ವಿಷವೆಂದು ಗುರುತು ಮಾಡಿ ಸರಿಯಾಗಿ ಚೀಟಿ ಅಂಟಿಸಿರುವಂಥ ಎಲ್ಲ ಕೃಷಿ ಉತ್ಪನ್ನದ ಬೀಜಗಳು ಸೇರತಕ್ಕದ್ದಲ್ಲ.''