ನಮೂನೆ ಸಂಖ್ಯೆ - V
ಗುತ್ತಿಗೆ ಸಹಿತ ಮಾರಾಟ ಒಪ್ಪಂದ
(ನಿಯಮ- 10 ನೋಡಿ)
ಈ ಗುತ್ತಿಗೆ ಒಪ್ಪಂದವನ್ನು ಒಂದು ಪಕ್ಷವಾಗಿರುವ ------------- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯಾಗಿರುವ, -------- ರವರ ಮಗನಾದ ಶ್ರೀ ------ ರವರು ಮತ್ತು ಅಧ್ಯಕ್ಷ (ಅಥವಾ ಆಡಳಿತಗಾರ)ರಾಗಿರುವ, ----- ರವರ ಮಗನಾದ -------- ರವರಿಂದ ಪ್ರತಿನಿಧಿಸಲ್ಪಟ್ಟಿರುವ --------- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಇನ್ನುಮುಂದೆ ‘ಗುತ್ತಿಗೆ ಕೊಡುವವನು' ಎಂದು ಕರೆಯಲಾಗುವ ಈ ಪದಾವಳಿಯು ಸಂದರ್ಭವು ಹಾಗೆ ಅಗತ್ಯಪಡಿಸಿದಾಗಲೆಲ್ಲಾ ಅದರ ಉತ್ತರಾಧಿಕಾರಿಗಳನ್ನು, ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಮತ್ತು ಇನ್ನೊಂದು ಪಕ್ಷವಾಗಿರುವ, ------ ರವರ ಮಗನಾದ, ------ ರಲ್ಲಿ ವಾಸಿಸುತ್ತಿರುವ ಸುಮಾರು - ---- ವರ್ಷದ ಶ್ರೀ -----ರವರನ್ನು ತನ್ನ ಮಾಲೀಕನೆಂದು ಅಥವಾ ವ್ಯವಸ್ಥಾಪಕ ಪಾಲುದಾರನೆಂದು ಪ್ರತಿನಿಧಿಸಿದ (ಇನ್ನು ಮುಂದೆ ‘ಗುತ್ತಿಗೆದಾರ' ಎಂದು ಕರೆಯಲಾಗುವ) ಮೆಸೆರ್ಸ್------ ಎಂಬ ಹೆಸರಿನ ಮಾಲೀಕತ್ವದ/ ನೋಂದಾಯಿತ ಪಾಲುದಾರಿಕೆ ಫರ್ಮಿನ ನಡುವೆ ಈ ಮುಂದಿನಂತೆ ------- ದಿನದಂದು ಕರಾರು ಮಾಡಿಕೊಳ್ಳಲಾಗಿದೆ.
-
ಗುತ್ತಿಗೆ ಕೊಡುವವನು ಮಾರುಕಟ್ಟೆ ಪ್ರಾಂಗಣದಲ್ಲಿರುವ ಮತ್ತು ಈ ಮುಂದಿನ ಅನುಸೂಚಿಯಲ್ಲಿ ಸವಿವರವಾಗಿ ಹೇಳಿರುವ --------- ಸಂಖ್ಯೆಯನ್ನು ಹೊಂದಿರುವ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ / ಗೋದಾಮಿನ ಒಡೆಯನಾಗಿರುತ್ತಾನೆ.
-
ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವ ಮತ್ತು ಗುತ್ತಿಗೆ ಕೊಡುವವನು ನೀಡಿರುವ ಲೈಸೆನ್ಸನ್ನು ಹೊಂದಿರುವ ಗುತ್ತಿಗೆದಾರನು ಅಧಿಸೂಚಿತ ಕೃಷಿ ಉತ್ಪನ್ನದ ಮಾರಾಟದ ವ್ಯವಹಾರ ಮಾಡುವುದಕ್ಕಾಗಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಹಂಚಿಕೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವುದರಿಂದ.
-
ಗುತ್ತಿಗೆದಾರನು, ---------- ರೂಪಾಯಿಗಳಿಗಾಗಿ ---------- ದಿನಾಂಕದ ----- ಸಂಖ್ಯೆಯ ಚೆಕ್/ ಪೋ.ಆ./ ಡಿ.ಡಿ. ಮೂಲಕ ಶೇ. 25 ರಷ್ಟು ಗುತ್ತಿಗೆ ಮೊಬಲಗನ್ನು ಸಂದಾಯ ಮಾಡಿರುವುದರಿಂದ;
-
ಗುತ್ತಿಗೆ ಕೊಡುವವನು --------- ರಂದು ನಡೆದ ಮಾರುಕಟ್ಟೆ ಸಮಿತಿಯ ಸಭೆಯಲ್ಲಿ ಹಂಚಿಕೆದಾರನಿಗೆ ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಗೊತ್ತುವಳಿ ಸಂಖ್ಯೆ ------ ರಲ್ಲಿ ನಿರ್ಣಯಿಸಿರುವುದರಿಂದ.
-
ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕರು ------ ದಿನಾಂಕದ ಅವರ ಆದೇಶ ಸಂಖ್ಯೆ ----- ಮೂಲಕ ಅಂಗಡಿಯ/ ಅಂಗಡಿ ಸಹಿತ ಗೋದಾಮನ್ನು/ ಗೋದಾಮಿನ ಹಂಚಿಕೆಯನ್ನು ಅನುಮೋದಿಸಿರುವುದರಿಂದ.
-
ಗುತ್ತಿಗೆ ಕೊಡುವವನು, ಈ ಮುಂದೆ ಹೇಳಿರುವ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಅನುಸೂಚಿತ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ.
ಈಗ ಈ ಪತ್ರ ಈ ಕೆಳಗಿನವುಗಳಿಗೆ ಸಾಕ್ಷಿಯಾಗಿರುತ್ತದೆ, ಎಂದರೆ:-
-
ಗುತ್ತಿಗೆ ಕೊಡುವವನು ತನ್ನ ವೆಚ್ಚದಲ್ಲಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ನಿರ್ಮಿಸಿದ್ದಾನೆ ಮತ್ತು ಅದನ್ನು 10(ಹತ್ತು) ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಒಪ್ಪಿಕೊಂಡಿರುತ್ತಾನೆ.
-
ಗುತ್ತಿಗೆ ಕೊಡುವವನು ------ ರೂಪಾಯಿಗಳಷ್ಟು (ಮಾಡಿದೆಯೆಂದು ಅಂದಾಜಿಸಲಾದ ವೆಚ್ಚ) ಗುತ್ತಿಗೆ ಮೊತ್ತವನ್ನು ನಿಗದಿಪಡಿಸಿರುತ್ತಾನೆ.
-
ಗುತ್ತಿಗೆದಾರನು ಹಂಚಿಕೆ ಪತ್ರವನ್ನು ಸ್ವೀಕರಿಸಿದ ದಿನಾಂಕದಿಂದ 90 (ತೊಂಬತ್ತು) ದಿನಗಳೊಳಗೆ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಪ್ರಾರಂಭಿಕ ಠೇವಣಿ [(ಎ.ಇ.ಇ.) (ಎಂ.ಡಿ.ಪಿ) ನಿಗದಿಪಡಿಸಿದ] ಮೊತ್ತವನ್ನು ಕಳೆದ ನಂತರ ಉಳಿದ ಮೊತ್ತವನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು ಮತ್ತು ರಸೀದಿ ಪಡೆಯತಕ್ಕದ್ದು. ಈ ಅವಧಿಯನ್ನು ಶೇಕಡಾ 12 ರಷ್ಟು ಬಡ್ಡಿ ಸಂದಾಯ ಮಾಡುವುದಕ್ಕೆ ಒಳಪಟ್ಟು ಅರವತ್ತು ದಿನಗಳವರೆಗೆ ವಿಸ್ತರಿಸಬಹುದು.
-
ಗುತ್ತಿಗೆದಾರನು ಒಂದು ಅವಿಭಕ್ತ ಕುಟುಂಬವಾಗಿದ್ದರೆ, ಅವಿಭಕ್ತ ಕುಟುಂಬದ ಯಾರೇ ಸದಸ್ಯನು ಮತ್ತು ಪಾಲುದಾರಿಕೆ ಫರ್ಮಿನ ಸಂದರ್ಭದಲ್ಲಿ ಫರ್ಮ್ನ ಯಾರೇ ಪಾಲುದಾರನು ಮಾರುಕಟ್ಟೆ ಪ್ರಾಂಗಣದಲ್ಲಿ ಒಂದಕ್ಕಿಂತ ಹೆಚ್ಚು ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಹಂಚಿಕೆ ಪಡೆಯುವುದಕ್ಕೆ ಹಕ್ಕುಳ್ಳವವನಾಗಿರತಕ್ಕದ್ದಲ್ಲ ಮತ್ತು ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಆತ/ ಅವರು ಈಗಾಗಲೇ ಹಂಚಿಕೆ ಪಡೆದಿರುವರೆಂದು ಕಂಡುಬಂದ ಸಂದರ್ಭದಲ್ಲಿ, ಗುತ್ತಿಗೆ ಕೊಟ್ಟವನು, ಗುತ್ತಿಗೆಯನ್ನು ರದ್ದುಪಡಿಸುವುದಕ್ಕೆ ಮತ್ತು ಅಲ್ಲಿಯವರೆಗೆ ಗುತ್ತಿಗೆದಾರನು ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಯಾವುದೇ ಗುತ್ತಿಗೆ ಹಣವನ್ನು ಠೇವಣಿ ಇಟ್ಟಿದ್ದರೆ ಆ ಗುತ್ತಿಗೆ ಹಣದ ಸಹಿತ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾನೆ.
-
ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು, ಅಧಿಸೂಚಿತ ಕೃಷಿ ಉತ್ಪನ್ನದಲ್ಲಿ ಮಾತ್ರವೇ ವ್ಯಾಪಾರ ಮಾಡತಕ್ಕದ್ದು ಮತ್ತು ಗುತ್ತಿಗೆ ಕೊಡುವವನು ನೀಡಿರುವ ಲೈಸೆನ್ಸಿನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಪಾಲಿಸತಕ್ಕದ್ದು. ಅಲ್ಲದೆ, ಗುತ್ತಿಗೆದಾರನು, ಕ.ಕೃ.ಉ.ಮಾ (ನಿ) ಅಧಿನಿಯಮ, 1966ರ ಉಪಬಂಧಗಳನ್ನು ಮತ್ತು ಅದರ ಮೇರೆಗೆ ರಚಿಸಿರುವ ನಿಯಮಗಳನ್ನು ಮತ್ತು ಉಪವಿಧಿಗಳನ್ನು ಪಾಲಿಸಲು ಬದ್ಧನಾಗಿರತಕ್ಕದ್ದು. ಈ ಷರತ್ತುಗಳ ಪೈಕಿ ಯಾವುದೇ ಒಂದನ್ನು ಉಲ್ಲಂಘಿಸಿದರೂ ಗುತ್ತಿಗೆ ಕೊಡುವವನು ಗುತ್ತಿಗೆ ಒಪ್ಪಂದವನ್ನು ರದ್ದುಪಡಿಸುವುದಕ್ಕೆ ಮತ್ತು ಗುತ್ತಿಗೆದಾರನಿಗೆ ನೋಟೀಸು ನೀಡಿದ ತರುವಾಯ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಹಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
-
ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು ತನಗೆ ಹಂಚಿಕೆಯಾದ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮು/ ಗೋದಾಮನ್ನು ಯಾರೇ ಇತರ ವ್ಯಕ್ತಿಗೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡತಕ್ಕದ್ದಲ್ಲ.
-
ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು, ತನಗೆ ಹಂಚಿಕೆಯಾಗಿರುವ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ವಿಭಾಗ ಮಾಡತಕ್ಕದ್ದಲ್ಲ ಅಥವಾ ಯಾರೇ ಇತರ ವ್ಯಕ್ತಿಗೆ ಪರಭಾರೆ ಮಾಡತಕ್ಕದ್ದಲ್ಲ.
-
ಗುತ್ತಿಗೆದಾರನು, ತನಗೆ ಹಂಚಿಕೆಯಾಗಿರುವ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಕಟ್ಟಡಕ್ಕೆ ಹಾನಿ, ಮಾರ್ಪಾಟು ಅಥವಾ ಬದಲಾವಣೆ ಮಾಡತಕ್ಕದ್ದಲ್ಲ. ಯಾವುದೇ ಹಾನಿ ಮಾಡಿದರೆ ಗುತ್ತಿಗೆದಾರನು ಆ ಆವರಣವನ್ನು ಸುಸ್ಥಿತಿಯಲ್ಲಿಡುವುದಕ್ಕೆ ಅಗತ್ಯವಿರುವ ದುರಸ್ತಿಗಳನ್ನು ಮಾಡಲು ಬದ್ಧನಾಗಿರತಕ್ಕದ್ದು.
-
ಗುತ್ತಿಗೆದಾರನು ಪಾಲುದಾರಿಕೆ ಫರ್ಮ್ ಆಗಿದ್ದರೆ, ಪಾಲುದಾರಿಕೆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದರೆ ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಪಾಲುದಾರಿಕೆ ಫರ್ಮಿನ ರಚನೆಯಲ್ಲಿನ ಅಂಥ ಬದಲಾವಣೆಯು ಅಂಗಡಿಯ, ಗೋದಾಮಿನ, ಅಂಗಡಿ ಸಹಿತ ಗೋದಾಮಿನ ಅಥವಾ ಅದರಲ್ಲಿನ ಹಿತಾಸಕ್ತಿಯ ವರ್ಗಾವಣೆಯಲ್ಲಿ ಪರಿಣಮಿಸಿದರೆ 12ನೇ ನಿಯಮದ ಉಪಬಂಧಗಳನ್ನು ಪಾಲಿಸಲು ಗುತ್ತಿಗೆದಾರನು ಒಪ್ಪುತ್ತಾನೆ.
-
ಗುತ್ತಿಗೆಯ ಅವಧಿಯಲ್ಲಿ ಗುತ್ತಿಗೆದಾರನು, ಅವನಿಗೆ ಹಂಚಿಕೆಯಾದ ಅಂಗಡಿಗೆ/ ಅಂಗಡಿ ಸಹಿತ ಗೋದಾಮಿಗೆ/ ಗೋದಾಮಿಗೆ ಸಂಬಂಧಪಟ್ಟ ವಿದ್ಯುಚ್ಛಕ್ತಿ ಶುಲ್ಕಗಳನ್ನು, ನೀರಿನ ಶುಲ್ಕಗಳನ್ನು ಮತ್ತು ಎಲ್ಲಾ ಇತರ ಶುಲ್ಕಗಳನ್ನು ಪಾವತಿಸತಕ್ಕದ್ದು.
-
ಗುತ್ತಿಗೆಯ ಅವಧಿಯಲ್ಲಿ, ಗುತ್ತಿಗೆದಾರನು, ಲೈಸೆನ್ಸ್ ಹೊಂದಿದ್ದ ಮಾರುಕಟ್ಟೆ ಕಾರ್ಯ ನಿರ್ವಾಹಕನಾಗಿರುವುದು ನಿಂತುಹೋದರೆ, ಗುತ್ತಿಗೆ ಕೊಡುವವನು ಮುಟ್ಟುಗೋಲು ಹಾಕಿಕೊಳ್ಳುವ ದಿನಾಂಕದವರೆಗೆ, ಗುತ್ತಿಗೆದಾರನು ಠೇವಣಿಯಾಗಿಟ್ಟಿರುವ ಗುತ್ತಿಗೆ ಮೊತ್ತದ ಸಹಿತ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
-
ಆವರಣಗಳನ್ನು, 1966ರ ಕ.ಕೃ.ಉ.ಮಾ (ನಿ) ಅಧಿನಿಯಮದಲ್ಲಿ, ನಿಯಮಗಳಲ್ಲಿ ಮತ್ತು ಉಪವಿಧಿಗಳಲ್ಲಿ ತಿಳಿಸಿರುವ ಉದ್ದೇಶಗಳ ಹೊರತು ಇತರ ಉದ್ದೇಶಗಳಿಗೆ ಬಳಸಿಕೊಳ್ಳತಕ್ಕದ್ದಲ್ಲ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ಕ್ರಯವಿಕ್ರಯದ ಉದ್ದೇಶಕ್ಕಾಗಿ ಮಾತ್ರವೇ ಬಳಸಿಕೊಳ್ಳತಕ್ಕದ್ದು.
-
ಗುತ್ತಿಗೆದಾರನು, ಆಸ್ತಿಯ ಮೇಲೆ ಯಾವುದೇ ರೀತಿಯಲ್ಲೂ ಋಣಭಾರ ಹೊರಿಸತಕ್ಕದ್ದಲ್ಲ. ಹಾಗೆ ಮಾಡಿದ್ದೇ ಆದರೆ ಗುತ್ತಿಗೆ ನೀಡಿದವನು ಅದಕ್ಕೆ ಬದ್ಧನಾಗಿರತಕ್ಕದ್ದಲ್ಲ.
-
ಗುತ್ತಿಗೆದಾರನು, ಲೈಸೆನ್ಸ್ ಹೊಂದಿದ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವುದನ್ನು ಮುಂದುವರೆಸದೇ ಇರಲು ಇಚ್ಛಿಸಿದರೆ ಆತ, ಒಂದು ತಿಂಗಳು ಮುಂಚಿತವಾಗಿ ನೋಟೀಸು ನೀಡುವ ಮೂಲಕ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸತಕ್ಕದ್ದು ಮತ್ತು ಅದರ ಖಾಲಿ ಸ್ವಾಧೀನತೆಯನ್ನು ಒಪ್ಪಿಸತಕ್ಕದ್ದು ಮತ್ತು ಆ ನಂತರ ಗುತ್ತಿಗೆ ನೀಡಿದವನು ಸದರಿ ಆವರಣವನ್ನು ಇನ್ನೊಬ್ಬ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ಮರುಹಂಚಿಕೆ ಮಾಡುವ ಅಧಿಕಾರ ಹೊಂದಿರತಕ್ಕದ್ದು.
-
ಈ ಒಪ್ಪಂದದಲ್ಲಿ ಹೇಳಿರುವ ಹತ್ತು ವರ್ಷಗಳ ಅವಧಿ ಮುಕ್ತಾಯಗೊಂಡ ತರುವಾಯ ಗುತ್ತಿಗೆದಾರನು ಈ ಒಪ್ಪಂದದಲ್ಲಿ ಹೇಳಿರುವ ಎಲ್ಲಾ ಷರತ್ತುಗಳನ್ನು ನೆರವೇರಿಸಿದರೆ ಮತ್ತು ಅವುಗಳಲ್ಲಿ ಯಾವುದನ್ನೂ ಉಲ್ಲಂಘಿಸಿಲ್ಲದಿದ್ದರೆ, ಸದರಿ ಹತ್ತು ವರ್ಷಗಳ ಅವಧಿಯ ಅಂತ್ಯದಲ್ಲಿ ಸಮಿತಿಯು ಗುತ್ತಿಗೆದಾರನಿಗೆ ನಿವೇಶನವನ್ನು ಮಾರಾಟ ಮಾಡತಕ್ಕದ್ದು ಮತ್ತು ಅಂಥ ಮಾರಾಟದ ಬಗೆಗಿನ ಸ್ಟಾಂಪ್ ಶುಲ್ಕ, ನೋಂದಣಿ ಶುಲ್ಕ ಮುಂತಾದಂಥ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಗುತ್ತಿಗೆದಾರನೇ ಭರಿಸತಕ್ಕದ್ದು.
-
ಈ ಅಧಿನಿಯಮದ ಉದ್ದೇಶ ಈಡೇರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಸಂಬಂಧದಲ್ಲಿ ಗುತ್ತಿಗೆ ನೀಡುವವನು ಗುತ್ತಿಗೆದಾರನಿಗೆ ಕ್ರಯಪತ್ರ ಮಾಡಿಕೊಡುವ ಸಮಯದಲ್ಲಿ ವಿಧಿಸಬಹುದಾದಂಥ ನಿಬಂಧನೆಗಳು ಮತ್ತು ಷರತ್ತುಗಳನ್ನು ಪಾಲಿಸಲು ಈ ಮೂಲಕ ಗುತ್ತಿಗೆದಾರನು ಬದ್ಧನಾಗಿರುತ್ತಾನೆ.
-
ಗುತ್ತಿಗೆದಾರನು, ಮೇಲೆ ಹೇಳಿರುವ ನಿಬಂಧನೆಗಳಲ್ಲಿ ಮತ್ತು ಷರತ್ತುಗಳಲ್ಲಿ ಯಾವುದೇ ಒಂದನ್ನು ಉಲ್ಲಂಘಿಸಿದರೆ, ಗುತ್ತಿಗೆ ಕೊಡುವವನು ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಹಂಚಿಕೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ದಿನಾಂಕದವರೆಗೆ ಗುತ್ತಿಗೆದಾರನು ಠೇವಣಿ ಇಟ್ಟ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಬೆಲೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸ್ವಾತಂತ್ರ್ಯ ಹೊಂದಿರುತ್ತಾನೆ.
-
ಆಸ್ತಿಯಲ್ಲಿನ ಯಾವುದೇ ರಚನಾ ದೋಷಕ್ಕೆ ಅಥವಾ ಇನ್ನಾವುದೇ ದೋಷಕ್ಕೆ ಗುತ್ತಿಗೆ ಕೊಡುವವನು ಹೊಣೆಗಾರನಾಗಿರತಕ್ಕದ್ದಲ್ಲ ಮತ್ತು ಗುತ್ತಿಗೆದಾರನು ಯಾವುದೇ ವಿಧವಾದ ದೋಷಗಳಿಗೆ ಗುತ್ತಿಗೆ ಕೊಡುವವನಿಂದ ಪರಿಹಾರಕ್ಕಾಗಿ ಯಾವುದೇ ಕ್ಲೇಮನ್ನು ಮಾಡತಕ್ಕದ್ದಲ್ಲ.
-
ದೊಂಬಿಗಳ, ಕನ್ನಗಳ್ಳತನದ ಅಥವಾ ಪ್ರಜಾಕ್ಷೋಭೆಯ ಸಂಬಂಧದಲ್ಲಿ ಸದರಿ ಸ್ವತ್ತಿನ ಮೇಲೆ ವಿಮೆ ಮಾಡಿಸಲು ಗುತ್ತಿಗೆದಾರನು ಒಪ್ಪಿರುತ್ತಾನೆ.
-
ಗುತ್ತಿಗೆ ಕೊಡುವವನು ಅಥವಾ ಅದು ಅಧಿಕೃತಗೊಳಿಸಿದ ಯಾರೇ ವ್ಯಕ್ತಿಯು ಸ್ವತ್ತನ್ನು ತಪಾಸಣೆ ಮಾಡುವ ಸಲುವಾಗಿ ಯಾವುದೇ ಸಮಯದಲ್ಲಾದರೂ ಸದರಿ ಸ್ವತ್ತಿನೊಳಗೆ ಪ್ರವೇಶಿಸುವ ಹಕ್ಕು ಹೊಂದಿರತಕ್ಕದ್ದು.
-
ಮೇಲೆ ಹೇಳಿರುವ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಅರ್ಥೈಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ ಕೃಷಿ ಮಾರುಕಟ್ಟೆ ನಿರ್ದೇಶಕರ ನಿರ್ಣಯವೇ ಅಂತಿಮ ವಾಗಿರತಕ್ಕದ್ದು ಮತ್ತು ಅದಕ್ಕೆ ಉಭಯಪಕ್ಷಕಾರರೂ ಬದ್ಧರಾಗಿರತಕ್ಕದ್ದು.