ನಮೂನೆ - 45
(79 (2)(ii)ನೇ ನಿಯಮದೊಡನೆ ಓದಲಾದ 72ನೇ ಪ್ರಕರಣವನ್ನು ನೋಡಿ) ಹಮಾಲಿಗಳು : ಗಾಡಿ ಹೊಡೆಯುವವರು : ಪಬ್ಲಿಕ್ ಕ್ಯಾರಿಯರ್ ವಾಹನದ : ಟ್ರಕ್ನ : ಟ್ರಾಕ್ಟರ್ನ : ಮಾಲೀಕರು ಲೈಸನ್ಸ್ ನೀಡಿಕೆ : ನವೀಕರಣಕ್ಕೆ ಕೋರಿ ಸಲ್ಲಿಸುವ ಅರ್ಜಿ ನಮೂನೆ:
ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ. ..................... ಇವರಿಗೆ.
ಮಾನ್ಯರೇ, ............... ಜಿಲ್ಲೆಯ ..................... ತಾಲೂಕಿನ .................... ಸ್ಥಳದ ನಿವಾಸಿಯಾದ .............................. ಎಂಬ ನಾನು ....................... ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ : ಮಾರುಕಟ್ಟೆ ಪ್ರದೇಶದಲ್ಲಿ ಹಮಾಲಿ/ಗಾಡಿಹೊಡೆಯುವವರ/ಪಬ್ಲಿಕ್ ಕ್ಯಾರಿಯರ್ ವಾಹನದ/ ಟ್ರಕ್ನ/ಟ್ರಾಕ್ಟರ್ನ/ ಮಾಲೀಕನಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ನೀಡಿಕೆ : ನವೀಕರಣೆ ಕೋರಿ ಈ ಮೂಲಕ ಅರ್ಜಿ ಸಲ್ಲಿಸುತ್ತಿದ್ದೇನೆ.
ಮಾರುಕಟ್ಟೆ ಪ್ರದೇಶದೊಳಗೆ ಲೈಸನ್ಸು ಹೊಂದಿರುವ ಯಾವನೇ ವ್ಯಾಪಾರಿಯ/ಕಮಿಷನ್ ಏಜೆಂಟನ ಅಥವಾ ದಲ್ಲಾಳಿಯ ಯಾವುದೇ ರೀತಿಯ ಸೇವೆಗೆ ಸೇರುವುದಿಲ್ಲವೆಂದು ಈ ಮೂಲಕ ಒಪ್ಪಿಕೊಂಡಿರುತ್ತೇನೆ.
ನಾನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ 1966, ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು, ಉಪವಿಧಿಗಳ ಮತ್ತು ಸ್ಥಾಯೀ ಆದೇಶಗಳ ಉಪಬಂಧಗಳನ್ನು ಮತ್ತು ಲೈಸನ್ಸ್ನ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಹಾಗೂ ನಿರ್ಬಂಧಗಳನ್ನು ಓದಿಕೊಂಡಿದ್ದೇನೆ ಮತ್ತು ತಿಳಿದುಕೊಂಡಿದ್ದೇನೆ ಹಾಗೂ ಅವುಗಳಿಗೆ ಮಾಡಲಾಗುವ ಯಾವುದೇ ತಿದ್ದುಪಡಿಗಳಿಗೆ ಬದ್ಧನಾಗುವುದಾಗಿ ಒಪ್ಪಿಕೊಂಡಿದ್ದೇನೆ.
ನನ್ನ ವಾಹನದ ನೋಂದಣಿ ಸಂಖ್ಯೆ .............
ನಾನು ಈಗ ಲೈಸನ್ಸು ಹೊಂದಿರುವುದಾಗಿ : ಹೊಂದಿಲ್ಲವೆಂಬುದಾಗಿ ಘೋಷಿಸುತ್ತೇನೆ ಮತ್ತು ಮಾರುಕಟ್ಟೆ ಸಮಿತಿಯು ನನಗೆ ಈ ಹಿಂದೆ ನೀಡಿದ ಲೈಸನ್ಸ್ನ ಮೂಲ ಪ್ರಮಾಣಪತ್ರವನ್ನು ಈ ಮೂಲಕ ಲಗತ್ತಿಸಿದ್ದೇನೆ.
...... ಮಾರುಕಟ್ಟೆ ವರ್ಷದ ಬಗ್ಗೆ ............... ರೂ. (....... ರೂಪಾಯಿಗಳು) ಲೈಸನ್ಸ್ ಫೀಜನ್ನು ನಗದಾಗಿ : ಡಿಮ್ಯಾಂಡ್ ಡ್ರಾಫ್ಟ್ನಲ್ಲಿ ಈ ಮೂಲಕ ಸಂದಾಯ ಮಾಡುತ್ತೇನೆ.
20..........ರ 31ನೇ ಮಾರ್ಚಿಗೆ ಕೊನೆಗೊಳ್ಳುವ ಮಾರುಕಟ್ಟೆ ವರ್ಷದ ಬಗ್ಗೆ ನನಗೆ ಹಮಾಲಿಗಳ ಗಾಡಿ ಹೊಡೆಯುವವರ : ಪಬ್ಲಿಕ್ ಕ್ಯಾರಿಯರ್ ವಾಹನದ : ಟ್ರಕ್ನ: ಟ್ರಾಕ್ಟರ್ನ ಮಾಲೀಕರ ಲೈಸನ್ಸನ್ನು ನೀಡಬೇಕಾಗಿ: ನವೀಕರಿಸಬೇಕಾಗಿ ಕೋರುತ್ತೇನೆ.
ತಮ್ಮ ವಿಶ್ವಾಸಿ. ಅರ್ಜಿದಾರನ ಸಹಿ
-
ಸ್ಥಳ
-
ದಿನಾಂಕ
-
ಜಿಲ್ಲೆ
ಮೇಲ್ಕಂಡ ವಿಷಯಗಳನ್ನು ಪರಿಶೀಲಿಸಿದ ತರುವಾಯ ........... ದಿನಾಂಕದ ..... ರಸೀತಿ ಸಂಖ್ಯೆಯ ಮೇರೆಗೆ ರೂ. ................... (................... ರೂ.ಗಳು) ಲೈಸನ್ಸ್ ಫೀಜನ್ನು ವಸೂಲು ಮಾಡಲಾಗಿದೆ ಎಂಬುದಾಗಿ ಈ ಮೂಲಕ ಪ್ರಮಾಣೀಕರಿಸುತ್ತೇನೆ.
ದಿನಾಂಕ
ಲೆಕ್ಕಿಗನ ಸಹಿ
ಅಧಿನಿಯಮ ಮತ್ತು ನಿಯಮಗಳ ಮೇರೆಗೆ ಹೊರಡಿಸಲಾದ ಆದೇಶಗಳು ಮತ್ತು ಅಧಿಸೂಚನೆಗಳು ಅಭಿವೃದ್ಧಿ, ವಸತಿ, ಪಂಚಾಯತ್ ರಾಜ್ ಮತ್ತು ಸಹಕಾರಿ ಇಲಾಖೆಗಳ ಸಚಿವಾಲಯ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) (ತೊಂದರೆಗಳ ನಿವಾರಣೆ) ಆದೇಶ 1968 ಆದೇಶ
ಬೆಂಗಳೂರು, ದಿನಾಂಕ 29ನೇ ನವೆಂಬರ್, 1968
ಎಸ್.ಓ. 2659: ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 ಇದು 1968ರ ಮೇ ಒಂದನೇ ದಿನದಿಂದ ಜಾರಿಗೆ ಬಂದಿರುವುದರಿಂದ;
ಅಧಿನಿಯಮದ 4,5 ಮತ್ತು 6ನೇ ಪ್ರಕರಣಗಳ ಮೇರೆಗೆ ಕ್ರಮ ತೆಗೆದುಕೊಳ್ಳಬೇಕಾದಂಥ ಪ್ರಸ್ತಾವದ ಸಂಬಂಧದಲ್ಲಿ ಸದರಿ ಅಧಿನಿಯಮದ 112ನೇ ಪ್ರಕರಣಕ್ಕೆ ಅನುಸಾರವಾಗಿ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯೊಡನೆ ಸಮಾಲೋಚಿಸಬೇಕಾಗಿರುವುದರಿಂದ;
ಕಂದಾಯ ಜಿಲ್ಲೆಗಳ ಮಾರುಕಟ್ಟೆ ಸಮಿತಿಗಳ ಪದಾವಧಿಯು ಕೆಲವು ಪ್ರಕರಣಗಳಲ್ಲಿ ಅಂತ್ಯಗೊಂಡಿರುವುದರಿಂದ ಮತ್ತು ಇನ್ನೂ ಕೆಲವು ಪ್ರಕರಣಗಳಲ್ಲಿ ಅಂತ್ಯಗೊಳ್ಳಲಿರುವುದರಿಂದ ಮತ್ತು ಚುನಾವಣೆಗಳನ್ನು ನಡೆಸುವ ವಿಧಾನವನ್ನು ಗೊತ್ತುಪಡಿಸಲು ಮತ್ತು ಸಮಿತಿಗಳನ್ನು ಪುನಃ ರಚಿಸಲು ಕ್ರಮವನ್ನು ತೆಗೆದುಕೊಳ್ಳಲಾಗುತ್ತಿರುವುದರಿಂದ ಸದರಿ ಸಮಿತಿಗಳ ಅಧ್ಯಕ್ಷರುಗಳ ಪೈಕಿ ಸದರಿ ಮಂಡಲಿಗೆ ಸದಸ್ಯರ ಚುನಾವಣೆಯು ನಡೆಯದಿರುವ ಕಾರಣ ಸದರಿ ಮಂಡಲಿಯನ್ನು ರಚಿಸಲು ಸಾಧ್ಯವಾಗಿಲ್ಲದಿರುವುದರಿಂದ;
ಮೇಲೆ ಹೇಳಲಾದ ಕ್ರಮವನ್ನು ಪೂರ್ಣಗೊಳಿಸಲು ಕಾಲಾವಕಾಶ ಬೇಕಾಗಿರುವುದರಿಂದ ಮತ್ತು ಮೇಲೆ ಹೇಳಲಾದ 4,5 ಮತ್ತು 6ನೇ ಪ್ರಕರಣಗಳ ಮೇರೆಗೆ ಮಾರುಕಟ್ಟೆ ಪ್ರದೇಶಗಳ ಮತ್ತು ಅಲ್ಲಿ
ನಿರ್ದಿಷ್ಟಪಡಿಸಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಹಾರದ ನಿಯಂತ್ರಣದ ಘೋಷಣೆ ಮತ್ತು ಮಾರುಕಟ್ಟೆಗಳ, ಮಾರುಕಟ್ಟೆ ಪ್ರಾಂಗಣಗಳ ಸ್ಥಾಪನೆ ಹಾಗೂ ಮಾರುಕಟ್ಟೆ ಸಮಿತಿಗಳ ರಚನೆ ಇವುಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕಾಗಿರುವುದರಿಂದ;
ಈಗ, 1966ರ ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ (1966ರ ಮೈಸೂರು ಅಧಿನಿಯಮದ 27) ಪ್ರಕರಣ 152 ಉಪಪ್ರಕರಣ (1)ರ ಮೂಲಕ ಪ್ರಧಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಈ ಮುಂದಿನ ಆದೇಶವನ್ನು ಹೊರಡಿಸಿದೆ, ಎಂದರೆ:-
- ಹೆಸರು ಮತ್ತು ಪ್ರಾರಂಭ.- (1) ಈ ಆದೇಶವನ್ನು ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) (ತೊಂದರೆಗಳ ನಿವಾರಣೆ) ಆದೇಶ, 1968 ಎಂದು ಕರೆಯುತಕ್ಕದ್ದು.
(2) ಇದು ಕೂಡಲೇ ಜಾರಿಗೆ ಬರತಕ್ಕದ್ದು.
- ಮಾರುಕಟ್ಟೆ ಪ್ರದೇಶಕ್ಕೆ ಸಂಬಂಧಿಸಿದ ಘೋಷಣೆ ಇತ್ಯಾದಿಗಳಿಗೆ ಸಂಬಂಧಿಸಿದ ಉಪಬಂಧ.- ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ 112ನೇ ಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ರಾಜ್ಯ ಸರ್ಕಾರವು ಅಥವಾ ಸಂದರ್ಭಾನುಸಾರ ಮುಖ್ಯ ಮಾರುಕಟ್ಟೆ ಅಧಿಕಾರಿಯು ಸದರಿ ಅಧಿನಿಯಮದ 4,5 ಮತ್ತು 6ನೇ ಪ್ರಕರಣಗಳ ಮೇರೆಗೆ ಅಧಿಕಾರಗಳನ್ನು ಚಲಾಯಿಸಲು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಲು ಅಧಿಕಾರ ಹೊಂದಿರತಕ್ಕದ್ದು.
(ಕ್ರಮಾಂಕ ಡಿಪಿಸಿ 458 ಸಿಎಂಡಿ 68)
ಮೈಸೂರು ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,
ಆರ್. ಭರಣಯ್ಯ
ಸರ್ಕಾರದ ಕಾರ್ಯದರ್ಶಿ
ಅಭಿವೃದ್ಧಿ, ವಸತಿ, ಪಂಚಾಯತ್ ರಾಜ್ ಮತ್ತು
ಸಹಕಾರ ಇಲಾಖೆ.
ಮೈಸೂರು ಸರ್ಕಾರ
ಕ್ರಮಾಂಕ : ಡಿಪಿಸಿ 468 ಸಿಎಂಡಿ 68.
ಮೈಸೂರು ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ 19ನೇ ಜುಲೈ 1969.
ಅಧಿಸೂಚನೆ - II
ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಕರ್ನಾಟಕ ಅಧಿನಿಯಮ 27) 67ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮೈಸೂರು ಸರ್ಕಾರವು, ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳಿಗೆ ಸದರಿ ಉಪಪ್ರಕರಣದ ಉದ್ದೇಶಕ್ಕಾಗಿ ಈ ಮೂಲಕ ಅಧಿಕಾರ ನೀಡುತ್ತದೆ.
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ. ಎನ್. ನರಸಿಂಹರಾವ್ ಸರ್ಕಾರದ ಕಾರ್ಯದರ್ಶಿ ಅಭಿವೃದ್ಧಿ, ವಸತಿ, ಪಂಚಾಯತ್ ರಾಜ್ ಮತ್ತು ಸಹಕಾರ ಇಲಾಖೆ.
ಮೈಸೂರು ಸರ್ಕಾರ
ಕ್ರಮಾಂಕ: ಡಿಪಿಸಿ 468 ಸಿಎಂಡಿ 68.
ಮೈಸೂರು ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ 19ನೇ ಜುಲೈ 1969.
ಅಧಿಸೂಚನೆ - I
ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ (1966ರ ಮೈಸೂರು ಅಧಿನಿಯಮ 27) 66ನೇ ಪ್ರಕರಣದ (1) ಮತ್ತು (2)ನೇ ಉಪಪ್ರಕರಣಗಳ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮೈಸೂರು ಸರ್ಕಾರವು, ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗೆ ಸದರಿ ಉಪ ಪ್ರಕರಣದ ಉದ್ದೇಶಕ್ಕಾಗಿ ಈ ಮೂಲಕ ಅಧಿಕಾರ ನೀಡುತ್ತದೆ.
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ. ಸಹಿ ಸರ್ಕಾರದ ಕಾರ್ಯದರ್ಶಿ, ಅಭಿವೃದ್ಧಿ, ವಸತಿ, ಪಂಚಾಯತ್ ರಾಜ್ ಮತ್ತು ಸಹಕಾರ ಇಲಾಖೆ.
ಮೈಸೂರು ಸರ್ಕಾರ
ಕ್ರಮಾಂಕ: ಡಿಪಿಸಿ 457 ಸಿಎಂಡಿ 72.
ಮೈಸೂರು ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ 27ನೇ ಸೆಪ್ಟೆಂಬರ್ 1972.
ಅಧಿಸೂಚನೆ - I
ಸರ್ಕಾರಿ ಅಧಿಸೂಚನೆ ಕ್ರಮಾಂಕ ಡಿಪಿಸಿ 238 ಸಿಎಂಡಿ 71 ದಿನಾಂಕ 31ನೇ ಆಗಸ್ಟ್ 1971 ಇದನ್ನು ರದ್ದುಗೊಳಿಸಿ ಮತ್ತು ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಮೈಸೂರು ಅಧಿನಿಯಮ 27)ರ 2ನೇ ಪ್ರಕರಣದ (7)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಮೈಸೂರು ಸರ್ಕಾರವು, ಸದರಿ ಅಧಿನಿಯಮದ 11, 71 (1), 76, 90(ಎ) 131 ಮತ್ತು 145 (2) (ಎ) - ಈ ಪ್ರಕರಣಗಳ ಉಪಬಂಧಗಳ ಮೇರೆಗೆ ಮುಖ್ಯ ಮಾರುಕಟ್ಟೆ ಅಧಿಕಾರಿಯು ಹೊಂದಿರುವ ಅಧಿಕಾರಗಳನ್ನು ಚಲಾಯಿಸಲು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸಲು, ಜಂಟಿ ಮುಖ್ಯ ಮಾರುಕಟ್ಟೆ ಅಧಿಕಾರಿಗೆ ಈ ಮೂಲಕ ಅಧಿಕಾರ ನೀಡುತ್ತದೆ.
ಮೈಸೂರು ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಸಹಿ ಸಿ.ಪಿ. ಮುನಿಯಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ ಅಭಿವೃದ್ಧಿ, ವಸತಿ, ಪಂಚಾಯತ್ ರಾಜ್ ಮತ್ತು ಸಹಕಾರ ಇಲಾಖೆ.
ಅಧಿಸೂಚನೆ ಕ್ರಮಾಂಕ ಆರ್ಡಿಸಿ 96 ಎಂಎಂಡಿ 76 ಬೆಂಗಳೂರು, ದಿನಾಂಕ 23ನೇ ಮೇ, 1977
ಎಸ್.ಓ. 1241: ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 65ನೇ ಪ್ರಕರಣದ (1)ನೇ ಉಪಪ್ರಕರಣದ ಪರಂತುಕದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಂಕೇಶ್ವರ - ಇದಕ್ಕೆ ಅಧಿಸೂಚಿತ ಕೃಷಿ ಉತ್ಪನ್ನಗಳ, ಎಂದರೆ ಮೆಣಸಿನಕಾಯಿ, ತಂಬಾಕು ಮತ್ತು ಜಾನುವಾರುಗಳ ಸಂಬಂಧದಲ್ಲಿ ಮಾರಾಟಗಾರರು ಸಂದಾಯ ಮಾಡಬೇಕಾದ ಮಾರುಕಟ್ಟೆ ಫೀಜನ್ನು ವಿಧಿಸಿ ವಸೂಲು ಮಾಡುವ ಕಾರ್ಯದಿಂದ ವಿನಾಯಿತಿಗೊಳಿಸುವುದು ಅವಶ್ಯವೆಂದು ಅಭಿಪ್ರಾಯಪಟ್ಟರೆ, ಅದು ಹಾಗೆ ಮಾಡಬಹುದು.