ನಮೂನೆ ಸಂಖ್ಯೆ- Iv (ನಿಯಮ 10 (Ii)ನ್ನು ನೋಡಿ) ಗುತ್ತಿಗೆ ಸಹಿತ ಮಾರಾಟ ಒಪ್ಪಂದ
ಈ ಒಪ್ಪಂದವನ್ನು, ಒಂದು ಪಕ್ಷವಾಗಿರುವ ----------- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರದೇಶದಲ್ಲಿ ಅಧಿಸೂಚಿತ ಕೃಷಿ ಉತ್ಪನ್ನ ವ್ಯವಹಾರ ನಡೆಸುತ್ತಿರುವ --------- - ರವರ ಮಗನಾದ ----------- ರಲ್ಲಿ ವಾಸವಾಗಿರುವ, --------- ವಯಸ್ಸಿನ, ------- ಲೈಸೆನ್ಸ್ದಾರನಾದ ಶ್ರೀ ------------ ರವರು (ಇಲ್ಲಿ ಇನ್ನು ಮುಂದೆ ಹಂಚಿಕೆದಾರ ಎಂದು ಕರೆಯಲಾಗಿದ್ದು, ಈ ಪದವು ಅದರ ಸಂದರ್ಭಕ್ಕೆ ಅಥವಾ ಅರ್ಥಕ್ಕೆ ವಿರುದ್ಧವಾದುದು ಏನಾದರೂ ಇದ್ದ ಹೊರತು ಆತನ ಆ ಪದದಲ್ಲಿರುವ ಉತ್ತರಾಧಿಕಾರಿಗಳನ್ನು ಮತ್ತು ಆತನ ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಮತ್ತು ಇನ್ನೊಂದು ಪಕ್ಷವಾಗಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ ಮೇರೆಗೆ ರಚಿಸಿರುವ ನಿಯಮಗಳೊಂದಿಗೆ ಓದಿಕೊಂಡ ಸದರಿ ಅಧಿನಿಯಮದ ಮೇರೆಗೆ ರಚಿಸಿದ ಮತ್ತು ಸ್ಥಾಪಿಸಿದ ಒಂದು ಸಂಸ್ಥೆಯಾಗಿರುವ --------- ರಲ್ಲಿ ತನ್ನ ಕಚೇರಿ ಹೊಂದಿರುವ ------------ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು (ಇನ್ನು ಮುಂದೆ ಸಮಿತಿ ಎಂದು ಕರೆಯಲಾಗಿದ್ದು ಈ ಪದವು ಅದರ ಸಂದರ್ಭಕ್ಕೆ ಅಥವಾ ಅರ್ಥಕ್ಕೆ ವಿರುದ್ಧವಾದುದು ಏನಾದರೂ ಇದ್ದ ಹೊರತು ಅಧಿಕಾರದಲ್ಲಿರುವ ಅದರ ಉತ್ತರಾಧಿಕಾರಿಗಳು ಮತ್ತು ಹಸ್ತಾಂತರಿತರನ್ನು ಒಳಗೊಳ್ಳತಕ್ಕದ್ದು) ಪ್ರತಿನಿಧಿಸುವ ಅದರ ಕಾರ್ಯದರ್ಶಿಯಾಗಿರುವ, -------- ರವರ ಮಗನಾದ ------- ವಯಸ್ಸಿನ ------ ನಿವಾಸಿಯಾದ ಶ್ರೀ --------- ಇವರನ್ನು ಮತ್ತು ಅದರ ಅಧ್ಯಕ್ಷರಾಗಿರುವ -------- ರವರ ಮಗನಾದ -------- ವಯಸ್ಸಿನ --------- ನಿವಾಸಿಯಾದ ಶ್ರೀ -------------- ನಡುವೆ ---------- ರಂದು (ಪದಗಳಲ್ಲಿ) ಮಾಡಿಕೊಳ್ಳಲಾಗಿರುತ್ತದೆ.
ಸಮಿತಿಯು ಈ ಒಪ್ಪಂದದ ಅನುಸೂಚಿಯಲ್ಲಿ ವರ್ಣಿಸಿರುವ ನಿವೇಶನದ ಮಾಲೀಕ ಆಗಿರುವುದರಿಂದ ಮತ್ತು ಹಂಚಿಕೆದಾರನು, ಅಧಿಸೂಚಿತ ಕೃಷಿ ಉತ್ಪನ್ನದ ---------- ಆಗಿ ವ್ಯವಹಾರ ನಡೆಸುತ್ತಿರುವುದರಿಂದ ಮತ್ತು ಲೈಸೆನ್ಸ್ ಪಡೆದ ವ್ಯಾಪಾರಿ/ ಕಮೀಷನ್ ಏಜೆಂಟ್/ ಆಮದುದಾರ/ ರಫ್ತುದಾರ ಇತ್ಯಾದಿಯಾಗಿ ತನ್ನ ವ್ಯಾಪಾರ ನಡೆಸಲು ಮಾರುಕಟ್ಟೆ ಪ್ರಾಂಗಣದಲ್ಲಿ ನಿವೇಶನ ಮಂಜೂರು ಮಾಡುವಂತೆ ಸಮಿತಿಯನ್ನು ಕೋರಿರುವುದರಿಂದ,-
-
ಹಂಚಿಕೆದಾರನು ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರತಕ್ಕದ್ದು ಮತ್ತು ಅಧಿಸೂಚಿತ ಸರಕುಗಳ ಬಗ್ಗೆ ವ್ಯವಹರಿಸುವುದಕ್ಕಾಗಿ ಆತ ಮಾರುಕಟ್ಟೆ ಸಮಿತಿಯು ಮಂಜೂರು ಮಾಡಿರುವ ಸದರಿ ಲೈಸೆನ್ಸನ್ನು ಕಕೃಉಮಾ(ನಿ) ಅಧಿನಿಯಮ, 1966ರ ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳು, 1968ರ ಉಪಬಂಧಗಳ ಮತ್ತು ಮಾರುಕಟ್ಟೆ ಸಮಿತಿಯ ಉಪವಿಧಿಗಳ ಮೇರೆಗೆ ಅಗತ್ಯಪಡಿಸಲಾದಂತೆ ಕಾಲಕಾಲಕ್ಕೆ ನವೀಕರಿಸತಕ್ಕದ್ದು.
-
ಹಂಚಿಕೆದಾರನಿಗೆ ಹಂಚಿಕೆ ಮಾಡಿದ ನಿವೇಶನವು ಯಾವುದೇ ಅಥವಾ ಎಲ್ಲಾ ಸನ್ನಿವೇಶಗಳಲ್ಲೂ ವಿಭಾಗ ಮಾಡಲಾಗದ್ದು (ವಿಭಜಿಸಲಾಗದ್ದು) ಆಗಿರತಕ್ಕದ್ದು ಮತ್ತು ಹಾಗೆ ಅದು ಯಾವಾಗಲೂ ಅಖಂಡವಾಗಿರತಕ್ಕದ್ದು. ಹಂಚಿಕೆದಾರನು ಮಾರುಕಟ್ಟೆ ಸಮಿತಿಯು ಅನುಮೋದಿಸಿದ ವಿನ್ಯಾಸಗಳಿಗನುಸಾರವಾಗಿ ಇಲ್ಲಿ ಇನ್ನುಮುಂದೆ ಗೊತ್ತುಪಡಿಸಿರುವ ಕಾಲಕ್ಕಿಂತ ಮುಂಚೆ ನಿವೇಶನದಲ್ಲಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು/ ಗೋದಾಮನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸತಕ್ಕದ್ದು ಮತ್ತು ಪೂರ್ಣಗೊಳಿಸತಕ್ಕದ್ದು.
-
ಹಂಚಿಕೆದಾರನು ನಿವೇಶನದಲ್ಲಿ ಕಟ್ಟಡವನ್ನು ನಿರ್ಮಿಸುವುದಕ್ಕಾಗಿ ಮಂಜೂರಾದ ನಕ್ಷೆಯನ್ನು ಮತ್ತು ಲೈಸೆನ್ಸ್ನ್ನು ಪಡೆಯುವುದಕ್ಕಾಗಿ ------- ಕೃ.ಉ.ಮಾ.ಸ.ಗೆ ಈ ಒಪ್ಪಂದವಾದ ದಿನಾಂಕದಿಂದ 1 ತಿಂಗಳೊಳಗೆ ಸಾಧ್ಯವಾದಷ್ಟು ಬೇಗನೆ ಅರ್ಜಿ ಸಲ್ಲಿಸತಕ್ಕದ್ದು, ಮತ್ತು ಒಪ್ಪಂದದ ದಿನಾಂಕದಿಂದ 1 ವರ್ಷದೊಳಗೆ ಅಥವಾ ಸಮಿತಿಯು ವಿಸ್ತರಿಸಿದ ಕಾಲಾವಧಿಯೊಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸತಕ್ಕದ್ದು.
-
ಮೇಲಿನ ಸಂಖ್ಯೆ 1 ರಿಂದ 3ರವರೆಗಿನ ಯಾವುದೇ ಖಂಡವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಪಾಲಿಸದಿದ್ದರೆ ಹಂಚಿಕೆದಾರನಿಗೆ ಹಂಚಿಕೆ ಮಾಡಿರುವ ನಿವೇಶನವು ತನ್ನಷ್ಟಕ್ಕೇನೇ ರದ್ದಾಗುತ್ತದೆ ಮತ್ತು ಆನಂತರ ಅಪೂರ್ಣಗೊಂಡ ಕಟ್ಟಡದೊಂದಿಗೆ ನಿವೇಶನದ ಸ್ವಾಧೀನತೆಯು, ಈ ಸಂಬಂಧದಲ್ಲಿ ಯಾವುದೇ ಔಪಚಾರಿಕತೆಗಳಿಲ್ಲದೆ ಅಥವಾ ತಪ್ಪಿತಸ್ಥ ಹಂಚಿಕೆದಾರನ ಒಪ್ಪಿಗೆಯಿಲ್ಲದೆ ಮಾರುಕಟ್ಟೆ ಸಮಿತಿಯ ವಶಕ್ಕೆ ಹೋಗುತ್ತದೆ. ಹಂಚಿಕೆದಾರನು ನಿವೇಶನದ ಬೆಲೆಯ ಬಾಬ್ತು ಮಾರುಕಟ್ಟೆ ಸಮಿತಿಗೆ ಈಗಾಗಲೇ ಸಂದಾಯ ಮಾಡಿರುವ ಮೊತ್ತವು ಸಹ ಮಾರುಕಟ್ಟೆ ಸಮಿತಿಗೆ ಮುಟ್ಟುಗೋಲಾಗುತ್ತದೆ.
-
ಅಂಥ ರದ್ದಿಯಾತಿಯು ಘಟಿಸಿದ ಮೇಲೆ, ಮಾರುಕಟ್ಟೆ ಸಮಿತಿಯು, ಅಪೂರ್ಣ ಕಟ್ಟಡದೊಂದಿಗೆ ನಿವೇಶನವನ್ನು ತನ್ನ ಸ್ವಂತ ಉಪಯೋಗಕ್ಕೆ ಇಟ್ಟುಕೊಳ್ಳುವುದಕ್ಕೆ ಅಥವಾ ಯಾರೇ ಇತರ ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕರಿಗೆ ಅದನ್ನು ಹಂಚಿಕೆ ಮಾಡುವುದಕ್ಕೆ ಅಥವಾ ಮಾರುಕಟ್ಟೆ ಸಮಿತಿಯು ಸೂಕ್ತವೆಂದು ಭಾವಿಸುವಂಥ ಯಾವುದೇ ಪ್ರತಿಫಲಕ್ಕಾಗಿ ಅದರ ಸಂಪೂರ್ಣ ವಿವೇಚನಾನುಸಾರ ಅದನ್ನು ಯಾವುದೇ ಇತರ ರೀತಿಯಲ್ಲಿ ವಿಲೆ ಮಾಡುವುದಕ್ಕೆ ಸ್ವಾತಂತ್ರ್ಯ ಹೊಂದಿರತಕ್ಕದ್ದು. ಮೇಲೆ ಹೇಳಿದ ಕಾರಣಗಳಿಗಾಗಿ, ಸಂದರ್ಭಾನುಸಾರ ಮಾರುಕಟ್ಟೆ ಸಮಿತಿಯಾಗಲೀ ಅಥವಾ ಮಾರುಕಟ್ಟೆ ಸಮಿತಿಯು ಯಾವ ವ್ಯಕ್ತಿಯ ಉಪಯೋಗಕ್ಕಾಗಿ ನಿವೇಶನವನ್ನು ಹಂಚಿಕೆ ಮಾಡಿದೆಯೋ ಆ ಇತರ ವ್ಯಕ್ತಿಯಾಗಲೀ ಮರುಪ್ರವೇಶ ಮಾಡಿದರೆ ಅದನ್ನು ಸಂಬಂಧಪಟ್ಟ ವ್ಯಕ್ತಿಗಳು ಮಾಡಿದ ಅತಿಕ್ರಮಣ ಪ್ರವೇಶವೆಂದು ಅರ್ಥೈಸತಕ್ಕದ್ದಲ್ಲ.
-
ಅಲ್ಲದೆ, ಯಾವುದೇ ನಿವೇಶನದ ಹಂಚಿಕೆ ಅಥವಾ ಅಪೂರ್ಣ ಕಟ್ಟಡ ಯಾವುದಾದರೂ ಇದ್ದರೆ ಅದರ ಸಹಿತ ನಿವೇಶನದ ಹಂಚಿಕೆಯು ಹಾಗೆ ರದ್ದಾದಾಗ, ಮಾರುಕಟ್ಟೆ ಸಮಿತಿಯು ತನ್ನ ವಿವೇಚನಾನುಸಾರ, ಮೇಲಣ 4ನೇ ಖಂಡದ ಮೇರೆಗೆ ಮುಟ್ಟುಗೋಲಾದ ನಿವೇಶನದ ಬೆಲೆಯನ್ನು ಮತ್ತು ಅದಕ್ಕೆ ಸಂಬಂಧಿಸಿದಂತೆ ಮಾಡಿರುವ ಎಲ್ಲಾ ವೆಚ್ಚಗಳನ್ನು ಕಳೆದ ತರುವಾಯ ಬಂದ, ಹಿಂದಿನ ಖಂಡದಲ್ಲಿ ಹೇಳಿರುವಂತೆ ಮಾರುಕಟ್ಟೆ ಸಮಿತಿಯು ಸಂಗ್ರಹಿಸಿದ ನಿವ್ವಳ
ಉತ್ಪತ್ತಿಗಳ 3/4ಕ್ಕಿಂತ ಹೆಚ್ಚಾಗದಷ್ಟು ಮೊತ್ತವನ್ನು ತಪ್ಪಿತಸ್ಥ ಹಂಚಿಕೆದಾರನಿಗೆ ಮರುಪಾವತಿಸತಕ್ಕದ್ದು.
-
ಹಂಚಿಕೆದಾರನು ಮಾರುಕಟ್ಟೆ ಸಮಿತಿಯ ಲೈಸೆನ್ಸ್ ಪಡೆದ ಮಾರುಕಟ್ಟೆ ಕಾರ್ಯನಿರ್ವಾಹಕನಾಗುವಲ್ಲಿ ವಿಫಲನಾದಾಗ 4ನೇ ಖಂಡದಲ್ಲಿ ನಮೂದಿಸಿರುವಂತೆ ನಿವೇಶನ, ಇತ್ಯಾದಿಗಳು ರದ್ದಾದಾಗ, ಆತನಿಗೆ ಹಾಗೆ ನಿವೇಶನ ಇತ್ಯಾದಿಯು ರದ್ದಾದ ವಿಷಯವನ್ನು ತಿಳಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಆತ ಮಾರುಕಟ್ಟೆ ಸಮಿತಿಯ ಲೈಸೆನ್ಸ್ದಾರನಾದರೆ, ಮಾರುಕಟ್ಟೆ ಸಮಿತಿಗೆ ವಾಪಸು ವಶಕ್ಕೆ ಬಂದಿದ್ದಂಥ ಆ ನಿವೇಶನದ ಸ್ವಾಧೀನತೆಯನ್ನು ಅದರಲ್ಲಿ ಮಾಡಿರುವ ನಿರ್ಮಾಣದ ಸಹಿತ ಮಾರುಕಟ್ಟೆ ಸಮಿತಿಯು ತನ್ನ ವಿವೇಚಾನುಸಾರ ಅವನಿಗೆ ಹಿಂದಿರುಗಿಸಬಹುದಾಗಿದೆ.
-
ಮಾರುಕಟ್ಟೆ ಸಮಿತಿಯು, ಹಂಚಿಕೆದಾರನಿಗೆ ಯಾವುದೇ ಕಟ್ಟಡವನ್ನು ನಿರ್ಮಿಸಲು ಅಥವಾ ಅದರ ವಿಸ್ತರಣೆಗಾಗಿ ಮಾತ್ರ ಅಗತ್ಯವಿರುವ ಸಾಲಗಳನ್ನು ಪಡೆಯುವುದಕ್ಕಾಗಿ ಬ್ಯಾಂಕಿಗೆ ಅಥವಾ ಯಾವುದೇ ಹಣಕಾಸು ಸಂಸ್ಥೆಗೆ ಆ ನಿವೇಶನವನ್ನು ಅಥವಾ ಅದರಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸಿದ್ದರೆ ಅದರ ಸಹಿತ ಪರಭಾರೆ ಮಾಡುವುದಕ್ಕೆ ಸಿಂಧುವಾದ ಕಾರಣಗಳಿದ್ದರೆ ಮಾತ್ರ ಅನುಮತಿ ನೀಡಬಹುದು, ಆದರೆ ಇತರ ಯಾವುದೇ ಉದ್ದೇಶಗಳಿಗಾಗಿ ಅಲ್ಲ.
-
ನಿವೇಶನವನ್ನು ಅಥವಾ ಅದರಲ್ಲಿ ಯಾವುದೇ ಕಟ್ಟಡವಿದ್ದರೆ ಆ ಕಟ್ಟಡ ಸಹಿತ ಆ ನಿವೇಶನವನ್ನು ಈ ಒಪ್ಪಂದವನ್ನು ಬರೆದುಕೊಟ್ಟ ದಿನಾಂಕದಿಂದ 10 (ಹತ್ತು) ವರ್ಷದೊಳಗೆ ವರ್ಗಾವಣೆ ಅಥವಾ ಮಾರಾಟ ಮಾಡತಕ್ಕದ್ದಲ್ಲ.
-
ಹಂಚಿಕೆದಾರನಿಗೆ ನಿವೇಶನವು ಹಂಚಿಕೆಯಾದ ತರುವಾಯ ಅದನ್ನು ಆತ ವರ್ಗಾವಣೆ ಮಾಡಲು ಬಯಸಿದರೆ, ಅದರಲ್ಲಿ ನಿರ್ಮಿಸಿರುವ ಕಟ್ಟಡ ಸಹಿತ, ನಿವೇಶನವನ್ನು, ಲೈಸೆನ್ಸು ಪಡೆದ ಯಾರೇ ಇತರ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ವರ್ಗಾವಣೆ ಅಥವಾ ಮಾರಾಟ ಮಾಡುವುದಕ್ಕಾಗಿ ಅನುಮತಿ ನೀಡುವಂತೆ ಕೋರಿರುವ ತನ್ನ ಅರ್ಜಿಯೊಂದಿಗೆ ಕ.ಕೃ.ಉ.ಮಾ. (ನಿ) (ಮಾರುಕಟ್ಟೆ ಪ್ರಾಂಗಣಗಳಲ್ಲಿ ಆಸ್ತಿ ಹಂಚಿಕೆ ನಿಯಂತ್ರಣ) ನಿಯಮಗಳು, 2004ರಲ್ಲಿ ನಿರ್ದಿಷ್ಟಪಡಿಸಿರುವ ಶುಲ್ಕವನ್ನು ಮಾರುಕಟ್ಟೆ ಸಮಿತಿಗೆ ಸಂದಾಯ ಮಾಡತಕ್ಕದ್ದು ಮತ್ತು ಮಾರುಕಟ್ಟೆ ಸಮಿತಿಯು, ಮಾರುಕಟ್ಟೆ ಸಮಿತಿಯ ಬ್ಯಾಂಕಿನ ಮತ್ತು ಇತರ ಸಂಸ್ಥೆಗಳ ಸಾಲಗಳನ್ನು ಮತ್ತು ಇತರ ಬಾಕಿಗಳನ್ನು ಸಂದಾಯ ಮಾಡಿದ ತರುವಾಯ, ಅದರಲ್ಲಿ ನಿರ್ಮಿಸಿರುವ ಕಟ್ಟಡ ಸಹಿತ ನಿವೇಶನವನ್ನು ಆ ಹಂಚಿಕೆದಾರನು ಮಾರುಕಟ್ಟೆ ಸಮಿತಿಯ ಲೈಸನ್ಸು ಹೊಂದಿರುವ ಇನ್ನೊಬ್ಬ ಮಾರುಕಟ್ಟೆ ಕಾರ್ಯನಿರ್ವಾಹಕನಿಗೆ ವರ್ಗಾವಣೆ ಅಥವಾ ಮಾರಾಟ ಮಾಡುವುದಕ್ಕೆ ಇರುವ ಸಿಂಧುವಾದ ಕಾರಣಗಳಿಗಾಗಿ ಮತ್ತು ವಿಶೇಷ ಸಂದರ್ಭಗಳಲ್ಲಿ, ತನ್ನ ವಿವೇಚನಾನುಸಾರ ಅನುಮತಿ ನೀಡಬಹುದು.
-
ಹಂಚಿಕೆದಾರನು, ನಿವೇಶನವನ್ನು ಮತ್ತು / ಅಥವಾ ಅದರಲ್ಲಿ ನಿರ್ಮಿಸಿರುವ ಕಟ್ಟಡವನ್ನು ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ನಿಗದಿಪಡಿಸಿದ ಅಧಿಸೂಚಿತ ಸರಕುಗಳನ್ನು ಅಥವಾ ನಿರ್ದಿಷ್ಟಪಡಿಸಿದ ಸರಕಿನ ಸಗಟು ವ್ಯವಹಾರವನ್ನು ಹೊರತುಪಡಿಸಿ ಇನ್ನಿತರ ಉದ್ದೇಶಕ್ಕಾಗಿ ಬಳಸಿಕೊಳ್ಳತಕ್ಕದ್ದಲ್ಲ.
-
ಹಂಚಿಕೆದಾರನು, ನಿವೇಶನವನ್ನು ಮತ್ತು / ಅಥವಾ ಅದರಲ್ಲಿ ನಿರ್ಮಿಸಿರುವ ಕಟ್ಟಡವನ್ನು ಹೊಂದಿರುವುದಕ್ಕೆ, ಮಂಜೂರು ಮಾಡುವುದಕ್ಕೆ, ಉಪಯೋಗಿಸುವುದಕ್ಕೆ ಮತ್ತು/ ಅಥವಾ ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಮಾರುಕಟ್ಟೆ ಪ್ರಾಂಗಣದಲ್ಲಿ ಶಿಸ್ತನ್ನು ಮತ್ತು ನೈರ್ಮಲ್ಯ ಸುಸ್ಥಿತಿಗಳನ್ನು ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಸಹ ಮಾರುಕಟ್ಟೆ ಸಮಿತಿಯು ಕಾಲಕಾಲಕ್ಕೆ ವಿಧಿಸಬಹುದಾದ ಎಲ್ಲಾ ಷರತ್ತುಗಳನ್ನು ಮತ್ತು ಸ್ಥಾಯೀ ಆದೇಶಗಳನ್ನು ಯಾವುದೇ ವಾದಕ್ಕೆ ಆಸ್ಪದಕೊಡದೆ ಸೂಕ್ತವಾಗಿ ಪಾಲಿಸತಕ್ಕದ್ದು ಮತ್ತು ಅವುಗಳಿಗೆ ಬದ್ಧವಾಗಿರತಕ್ಕದ್ದು.
-
ಹಂಚಿಕೆದಾರನು, ಇಲ್ಲಿ ಹೇಳಿರುವ ಯಾವುವೇ ಷರತ್ತುಗಳನ್ನು ಮತ್ತು ಸ್ಥಾಯೀ ಆದೇಶ, ಇತ್ಯಾದಿಗಳನ್ನು ಪಾಲಿಸಲು ಅಥವಾ ಅವುಗಳಿಗೆ ಬದ್ಧವಾಗಿರಲು ತಪ್ಪಿದರೆ ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಮಾರುಕಟ್ಟೆ ಸಮಿತಿಯು ಪೂರ್ಣ ಸ್ವಾತಂತ್ರ್ಯವನ್ನು, ಹಕ್ಕನ್ನು ಮತ್ತು ಅಧಿಕಾರವನ್ನು ಹೊಂದಿರುತ್ತದೆ ಎಂಬುದನ್ನು ಈ ಮೂಲಕ ಒಪ್ಪಿಕೊಳ್ಳತಕ್ಕದ್ದು.
-
ಹಂಚಿಕೆದಾರನು, ಫರ್ಮು ಆಗಿರುವ ಸಂದರ್ಭದಲ್ಲಿ, ಫರ್ಮಿನ ಪಾಲುದಾರರು ಫರ್ಮು ಬದ್ಧವಾಗಿರುವಂತೆ ಮಾಡಲು ಮಾರುಕಟ್ಟೆ ಸಮಿತಿಯ ಹೆಸರಿನಲ್ಲಿ ಸದರಿ ಫರ್ಮಿನ ಪರವಾಗಿ ಈ ಒಪ್ಪಂದವನ್ನು ಬರೆದುಕೊಡುವುದಕ್ಕೆ ಮತ್ತು ಅದಕ್ಕೆ ಸಹಿ ಹಾಕುವುದಕ್ಕೆ ಅಧಿಕಾರವನ್ನು ಮುಂಚಿತವಾಗಿಯೇ ಅದನ್ನು ಬರೆದುಕೊಡುವವವರಿಗೆ ನೀಡತಕ್ಕದ್ದು.