ಅನುಸೂಚಿ
| ಮಾರುಕಟ್ಟೆ ಸಮಿತಿಯ ಹೆಸರು | ವಿನಾಯಿತಿ ನೀಡಿರುವ ಉಪ ನಿಯಮದ ಸಂಖ್ಯೆ | |
| 1. | ಮಂಗಳೂರು ಮಾರುಕಟ್ಟೆ ಸಮಿತಿ | 23(12)(ಎ) |
| 2. | ಸಾಗರ ಮಾರುಕಟ್ಟೆ ಸಮಿತಿ | 23(10)(ಎ) |
| 3. | ಕುಮಟಾ ಮಾರುಕಟ್ಟೆ ಸಮಿತಿ | 49 |
| 4. | ಸಿದ್ದಾಪುರ ಮಾರುಕಟ್ಟೆ ಸಮಿತಿ | 34(10)(ಎ) |
| 5. | ಸಿರ್ಸಿ ಮಾರುಕಟ್ಟೆ ಸಮಿತಿ | 23(10) |
| 6. | ಚಿತ್ರದುರ್ಗ ಮಾರುಕಟ್ಟೆ ಸಮಿತಿ | 23(11)(ಎ) |
| 7. | ತುಮಕೂರು ಮಾರುಕಟ್ಟೆ ಸಮಿತಿ | 23(11) |
| 8. | ಹೊನ್ನಾವರ ಮಾರುಕಟ್ಟೆ ಸಮಿತಿ | 49 |
| 9. | ಯಲ್ಲಾಪುರ ಮಾರುಕಟ್ಟೆ ಸಮಿತಿ | 32(9)(ಎ) |
| 10. | ಕಡೂರು ಮಾರುಕಟ್ಟೆ ಸಮಿತಿ | 23(12)(ಎ) |
| 11. | ಚನ್ನಗಿರಿ ಮಾರುಕಟ್ಟೆ ಸಮಿತಿ | 24(11)(ಎ) |
ಎಸ್.ಓ. 1259
ಭಾರತದ ರಾಷ್ಟ್ರಪತಿಯವರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆಂ. ಬ. ಗುರುದೇವಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ) ಸಹಕಾರ ಇಲಾಖೆ.
ಸಹಕಾರ ಸಚಿವಾಲಯ ಅಧಿಸೂಚನೆ ಬೆಂಗಳೂರು, ದಿನಾಂಕ 1ನೇ ಆಗಸ್ಟ್ 1989
ಸಂಖ್ಯೆ ಸಮಾತೋ 10 ಮಾನಿಇ 89 11 ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ ಪ್ರಕರಣ 133 ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಕ್ಷೇತ್ರದಲ್ಲಿನ ಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣಗಳಲ್ಲಿ ಅಡಿಕೆ ಖರೀದಿಗೆ ಸಂಬಂಧಿಸಿದಂತೆ ಸದರಿ ಸಮಿತಿಯ ಉಪನಿಯಮ 23(12)(ಎ) ದಲ್ಲಿ ನಿಗದಿಪಡಿಸಿರುವ ನಿಬಂಧನೆಗಳಿಂದ ಕೇಂದ್ರೀಯ ಅಡಿಕೆ ಮತ್ತು ಕೋಕಾ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿಯಮಿತ), ಮಂಗಳೂರು ಇವರಿಗೆ ರಿಯಾಯಿತಿ ನೀಡಿದೆ.
ಈ ರಿಯಾಯಿತಿಯು ಕೂಡಲೇ ಜಾರಿಗೆ ಬರುವುದು.
ಎಸ್.ಓ.1260
ಭಾರತದ ರಾಷ್ಟ್ರಪತಿಯವರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
ಕೆಂ. ಬ. ಗುರುದೇವಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ)
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 95 ಎಂಆರ್ಇ 89, ಬೆಂಗಳೂರು, ದಿನಾಂಕ 29ನೇ ನವೆಂಬರ್ 1989
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966ರ 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಅನುಸೂಚಿಯನ್ನು ಈ ಕೆಳಕಂಡಂತೆ ಈ ಮೂಲಕ ತಿದ್ದುಪಡಿ ಮಾಡಿದೆ:-
‘‘XIಮರ'' ಈ ಬಾಬಿನಲ್ಲಿ 21ನೇ ಉಪ-ಬಾಬಿನ ತರುವಾಯ ಈ ಕೆಳಕಂಡವುಗಳನ್ನು ಸೇರಿಸತಕ್ಕದ್ದು, ಎಂದರೆ:-
-
ಸಾಲಂಗಬೆಟ್ಟು (ಸಾಲ್) (ಗಟ್ಟಿಮರ)
-
ಬಳಾವು (ಗಟ್ಟಿಮರ)
-
ಕೆರುಯಿಂಗ್ (ಮೆದು ಮರ)
-
ಸ್ವಾಂಪ್ ಎಂಎಲ್ಹೆಚ್ (ಮೆದುಮರ)
-
ಗುರ್ಜನ್ (ಮೆದುಮರ)
-
ಕಾಪುರ್ (ಕಾಡು ಮರ)
-
ಕಾಲ್ವೊಫಿಲಿಯಮ್ (ಮೆದು ಮರ)
-
ಮಿಕ್ಸೆಡ್ ಲೈಟ್ (ಗಟ್ಟಿ ಮರ)
-
ನ್ಯಾಟೋಹ್ (ಮೆದು ಮರ)
-
ಮರಂತಿ (ಕಡುಗೆಂಪು) (ಮೆದು ಮರ)
-
ರೆಸಾಕ್
-
ಸ್ವಾಂಪ್ ಮರಂತಿ (ಮೆದು ಮರ)
-
ಹಿಲ್ ಎಂಎಲ್ಹೆಚ್
-
ಹಿಲ್ಮರಂತಿ (ಮೆದು ಮರ)
-
ಮಾಂಡ್ ದಾಟಾ
-
ಕೆಂಪಾಸ್ (ಗಟ್ಟಿ ಮರ)
-
ಸಂಮಿಶ್ರಜಾತಿ ಮರಗಳು
-
ಕ್ವಿಲ್ (ಗಟ್ಟಿ ಮರ)
-
ಮರಸ್ವ ಮೇಡ್
-
ರೆಡಾಲ್
-
ಹೊಳಮತ್ತಿ (ಟರ್ಮಿನಾಲಿಯಾ)
-
ಹಸಿರು ಎಫ್ಎಸ್ಟಿ
-
ಹಳದಿ ಸಿಎಸ್ಟಿ
-
ಬ್ಲೂ ಆಲ್
-
ಬೆಟ್ಟದ ಕಣಿಗಲು (ಡೈತಿನಿಯಾ)
-
ಟರ್ಕೆಲ (ಬಹಳ ಗಟ್ಟಿ ಮರ)
-
ರೆಡೆಮಿಕ್ಸ
-
ವಾಟರ್ ಗಮ್
-
ವಾಲ್ನಟ್
-
ಟರ್ಮಿನೇಲಿಯಾ ಕೆಲಾಮಿನಿಯಾ (ಮೆದು ಮರದಿಂದ ಮಧ್ಯದ ಗಟ್ಟಿವರೆಗೆ)
-
ಯಲ್ಲೋ ಆಲ್
-
ವೈಟ್ ಆಲ್
-
ಮಲಾಸ್ (ಗಟ್ಟಿ ಮರ)
-
ಕಮರರೆ (ಮಧ್ಯಮ ಗಟ್ಟಿ)
-
ವೈಟಿಕ್ಸ್ (ನವಿಲಡಿ, ಮೈರೊಳ್) (ಗಟ್ಟಿ ಮರ)
-
ಪೈನ್ಮರ
-
ರೆಂಗಾಸ್ (ಮಿಶ್ರ)
-
ತಿಂಗಡು
-
ಬಿನಾಟಾಂಗರ್
-
ನಾಗ
-
ಟೆಟ್ರಾ ಬರ್ಲಿನಿಯಾ
-
ಕುರ್ಸಿಯಾ
-
ಡೆಡ್ಡಿಲೋಷಿಯಾ
-
ಎಕ್ಕಿ
-
ಇರೋಕೋ
-
ಹೋಪಿಯಾ (ಭೋಗಿ)
-
ಅಂಗೆಲಿಮ್ ಬ್ರಿಗಿಲಿಯನ್ ಗಟ್ಟಿಮರ
-
ಜಟೋಬ
-
ಗೊಂಬೆ
-
ದಹೋಮ
-
ಒಪೇಪೆ
-
ತಿಟ್ಕಾರ್
-
ತಾವುನ್
-
ಫಿಜಿ ಮೂಲದ ಗಟ್ಟಿಮರ
-
ವಂಡೇಜ್
-
ಅಗತಿ
-
ಎಂಜಿನಿಯಾ
-
ಮೆಂಗ್ರಿಸ್
-
ಎಂಎಲ್ಹೆಚ್
-
ಮರ್ಕೂರ್
-
ವೆಸ್ಟ್
-
ಪಾಲಿ
-
ಸಾಲಮರ
-
ಸಾರವಾಕ್
-
ನೀಲಗಿರಿ
ಭಾರತದ ರಾಷ್ಟ್ರಪತಿಯವರ
ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಹಿ.
ಸಿ.ಆರ್. ಭಾಗೀರಥಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ ಅಧಿಸೂಚನೆ ಸಂ. ಸಿಎಂಡಬ್ಲ್ಯೂ 73 ಎಂಆರ್ಇ 89, ಬೆಂಗಳೂರು, ದಿನಾಂಕ 3ನೇ ಜನವರಿ 1990
1966ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮದ (1966ರ ಕರ್ನಾಟಕ ಅಧಿನಿಯಮ 27) 66ನೇ ಪ್ರಕರಣದ (1)ನೇ ಉಪಪ್ರಕರಣದ ಮತ್ತು 67ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 66 ಮತ್ತು 67ನೇ ಪ್ರಕರಣಗಳಲ್ಲಿ ಹೇಳಿರುವ ಉದ್ದೇಶಕ್ಕಾಗಿ ಕೃಷಿ ಮಾರುಕಟ್ಟೆ ಇಲಾಖೆಯ ಈ ಕೆಳಕಂಡ ಅಧಿಕಾರಿಗಳಿಗೆ ಈ ಮೂಲಕ ಅಧಿಕಾರ ನೀಡಿದೆ:-
- ರಾಜ್ಯದ ಎಲ್ಲ ವಿಭಾಗಗಳ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕರು. 2) ರಾಜ್ಯದ ಎಲ್ಲ ಜಿಲ್ಲೆಗಳ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕರು.