(1) ಮಾರುಕಟ್ಟೆ ಪ್ರದೇಶದಲ್ಲಿ ಕಮಿಷನ್ ಏಜೆಂಟನಾಗಿ ಕಾರ್ಯ ನಿರ್ವಹಿಸಲು ಯಾವನೇ ವ್ಯಕ್ತಿಯು:-
(i) ಧನಾನುಕೂಲ ಉಳ್ಳವನೆಂದು;
(ii) ತನ್ನ ಉತ್ಪನ್ನದ ಮಾರಾಟದ ಅನಂತರ ಬಂದ ಹಣವನ್ನು ಉತ್ಪನ್ನದ ಮಾಲೀಕನು ಸಂದಾಯ ಮಾಡುವಂತೆ ತಗಾದೆ ಮಾಡಿದಾಗ ಅದನ್ನು ಸಂದಾಯ ಮಾಡಲು ತಪ್ಪಿದ ಸುಸ್ತಿದಾರನಲ್ಲವೆಂದು; ಮತ್ತು
(iii) ಉಪವಿಧಿಗಳಲ್ಲಿ ಗೊತ್ತುಪಡಿಸಬಹುದಾದಂಥ ನಗದು ಭದ್ರತೆಯನ್ನು ಸಮಿತಿಯಲ್ಲಿ ಠೇವಣಿ ಇಟ್ಟಿದ್ದಾನೆಂದು ಅಥವಾ ಬ್ಯಾಂಕ್ ಖಾತರಿಯನ್ನು ಸಮಿತಿಗೆ ಒದಗಿಸಿದ್ದಾನೆಂದು ಉಪವಿಧಿಗಳಲ್ಲಿ ಗೊತ್ತುಪಡಿಸಬಹುದಾದಂಥ ವಿಚಾರಣೆಯ ತರುವಾಯ ಸಮಿತಿಗೆ ಮನದಟ್ಟಾದ ಹೊರತು, ಸಮಿತಿಯು ಆ ಯಾವನೇ ವ್ಯಕ್ತಿಗೆ ಲೈಸನ್ಸನ್ನು ನೀಡತಕ್ಕದ್ದಲ್ಲ ಅಥವಾ ಲೈಸನ್ಸನ್ನು ಮುಂದುವರೆಸತಕ್ಕದ್ದಲ್ಲ ಅಥವಾ ನವೀಕರಿಸತಕ್ಕದ್ದಲ್ಲ.
(2) ಮಾರುಕಟ್ಟೆ ಪ್ರದೇಶದಲ್ಲಿ ಕಮಿಷನ್ ಏಜೆಂಟನಾಗಿ ಕಾರ್ಯನಿರ್ವಹಿಸಲು ಇಚ್ಫಿಸುವ ಯಾವನೇ ವ್ಯಕ್ತಿಯ ಸಂಬಂಧದಲ್ಲಿ ಉಪವಿಧಿಗಳಲ್ಲಿ ಗೊತ್ತುಪಡಿಸಬಹುದಾದಂಥ ವಿಚಾರಣೆಯ ತರುವಾಯ ಸಮಿತಿಗೆ ಕೆಳಕಂಡ ಅಂಶಗಳ ಬಗ್ಗೆ ಮನದಟ್ಟಾದರೆ ಅದು ಲೈಸನ್ಸನ್ನು ನೀಡಲು ಅಥವಾ ನವೀಕರಿಸಲು ನಿರಾಕರಿಸಬಹುದು:-
(i) ಅವನ ಲೈಸನ್ಸ್ ಕೆಲವು ದಿವಸಗಳ ಹಿಂದೆ ರದ್ದಾಗಿದ್ದು ಆ ರದ್ದಿಯಾತಿಯ ದಿನಾಂಕದಿಂದ ಆರು ತಿಂಗಳ ಅವಧಿಯು ಪೂರ್ಣಗೊಂಡಿಲ್ಲ;
(ii) ಯಾವುದೇ ನಿಯಂತ್ರಿತ ಮಾರುಕಟ್ಟೆಯಲ್ಲಿ ಅವನು ಯಾವುದೇ ಅಪರಾಧದ ಅಥವಾ ದುರ್ನಡತೆಯ ಸಂಬಂಧದಲ್ಲಿ ತಪ್ಪಿತಸ್ಥನಾಗಿದ್ದಾನೆ;
(iii) ಯಾವ ವ್ಯಕ್ತಿಗೆ ಲೈಸನ್ಸನ್ನು ನಿರಾಕರಿಸಲಾಗಿದೆಯೋ ಅಂಥ ವ್ಯಕ್ತಿಯೊಂದಿಗೆ ಅವನು ಪಾಲುದಾರನಾಗಿದ್ದಾನೆ;
(iv) 1 [ಮಧ್ಯಸ್ಥಗಾರನ ಅಥವಾ ಮಧ್ಯಸ್ಥಗಾರರ ಯಾವುದೇ ಐತೀರ್ಪನ್ನು ಅಥವಾ ವಿವಾದ ಪರಿಶೀಲನಾ ಸಮಿತಿಯ ನಿರ್ಣಯವನ್ನು ಅಥವಾ ಆದೇಶವನ್ನು ಪಾಲಿಸಲು ಉಪೇಕ್ಷಿಸಿದ್ದಾನೆ ಅಥವಾ ಅದನ್ನು ಒಪ್ಪಿಕೊಳ್ಳಲು ಅಥವಾ ಅದಕ್ಕೆ ಬದ್ಧನಾಗಲು ನಿರಾಕರಿಸಿದ್ದಾನೆ;
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44, ದಿನಾಂಕ 3-2-1970 ರ ಮೂಲಕ ಪ್ರತಿಯೋಜಿಸಲಾಗಿದೆ.
(v) ಅವನು ಸಮಿತಿಗೆ ಸಂದಾಯ ಮಾಡಬೇಕಾದ ಯಾವುದೇ ಮೊಬಲಗನ್ನು ಯುಕ್ತ ಕಾಲದಲ್ಲಿ ಸಂದಾಯ ಮಾಡಲು ತಪ್ಪಿದ್ದಾನೆ ಅಥವಾ ಉಪವಿಧಿಗಳಲ್ಲಿ ಗೊತ್ತುಪಡಿಸಲಾದಂಥ ನಗದು ಭದ್ರತೆಯನ್ನು ಸಮಿತಿಯ ಬಳಿ ಠೇವಣಿ ಇಡಲು ಅಥವಾ ಅಂಥ ಬ್ಯಾಂಕ್ ಖಾತರಿಯನ್ನು ಸಮಿತಿಗೆ ಒದಗಿಸಲು ತಪ್ಪಿದ್ದಾನೆ;
(vi) ಸಮಿತಿಗೆ ಅಥವಾ ಈ ಸಂಬಂಧದಲ್ಲಿ ಅಧಿಕೃತನಾದ ಅಧಿಕಾರಿಗೆ, ತನ್ನ ಲೆಕ್ಕದ ಪುಸ್ತಕಗಳನ್ನು ಪರಿಶೀಲನೆಗೆ ಒಪ್ಪಿಸಲು ನಿರಾಕರಿಸಿದ್ದಾನೆ ಅಥವಾ ಸಮಿತಿಯ ಯಾವುದೇ ಸಭೆಗೆ ಹಾಜರಾಗುವಂತೆ ನೀಡಲಾದ ಯಾವುದೇ ನೋಟೀಸನ್ನು ಅಥವಾ ಮಾಡಲಾದ ಕೋರಿಕೆಯನ್ನು ಪಾಲಿಸಲು ತಪ್ಪಿದ್ದಾನೆ;
(vii) ಈ ನಿಯಮಗಳಲ್ಲಿ ಅಥವಾ ಉಪವಿಧಿಗಳಲ್ಲಿ ಗೊತ್ತುಪಡಿಸಲಾದಂಥ ರೀತಿಯಲ್ಲಿ ಅಥವಾ ಸಮಿತಿಯು ನಿರ್ದಿಷ್ಟಪಡಿಸಬಹುದಾದಂಥ ಸೂಕ್ತ ಸಮಯದಲ್ಲಿ ಸಮಿತಿಗೆ ವರದಿಗಳನ್ನು ಅಥವಾ ವಿವರಪಟ್ಟಿಕೆಗಳನ್ನು ಅಥವಾ ವಿವರಗಳನ್ನು ಸಲ್ಲಿಸಲು ತಪ್ಪಿದ್ದಾನೆ;
(viii) ಮಾರುಕಟ್ಟೆಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದಂತೆ ಅಥವಾ ಈ ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಉಪಬಂಧಗಳನ್ನು ಜಾರಿಗೊಳಿಸದಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಮುಷ್ಕರವನ್ನು ಹೂಡಿದ್ದಾನೆ ಅಥವಾ ಬಹಿಷ್ಕಾರವನ್ನು ಹಾಕಿದ್ದಾನೆ ಅಥವಾ ಹಾಗೆ ಮಾಡುವಂತೆ ಪ್ರೆರೇಪಿಸುತ್ತಿದ್ದಾನೆ;
(ix) ಅವನು ಈ ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಉಪಬಂಧಗಳನ್ನು ಅಥವಾ ಸಮಿತಿಯು ನೀಡಿದ ಕಾನೂನು ಸಮ್ಮತ ನಿರ್ದೇಶನಗಳನ್ನು ರೂಢಿಗತವಾಗಿ ಉಲ್ಲಂಘಿಸಿರುತ್ತಾನೆ;
(x) ಅವನು ಯಾವನೇ ವ್ಯಕ್ತಿಯೊಂದಿಗೆ, ಅಪಕೀರ್ತಿ ತರುವಂಥ ಅಥವಾ ಮೋಸದ ಯಾವುದೇ ವ್ಯವಹಾರವನ್ನು ನಡೆಸಿರುತ್ತಾನೆ;
(xi) ಅವನು, ಲೈಸನ್ಸ್ ಅವಧಿಯಲ್ಲಿ ಅಧಿಸೂಚಿತ ಕೃಷಿ ಸರಕುಗಳಿಗೆ ಸಂಬಂಧಿಸಿದಂತೆ ಯಾವುದೇ ವ್ಯವಹಾರವನ್ನು ಮಾಡಿಲ್ಲ ಮತ್ತು ಅವನು ನಿಜವಾದ ಕಮಿಷನ್ ಏಜೆಂಟ್ನಾಗಿರದೆ, ಲೈಸನ್ಸ್ನಿಂದ ಪಡೆಯಬಹುದಾದ ಅನುಕೂಲಗಳ ಸಲುವಾಗಿ ಮಾತ್ರ ಲೈಸನ್ಸನ್ನು ಪಡೆದಿದ್ದಾನೆ.
1[79. ಲೈಸನ್ಸು ಹೊಂದಿರುವ ತೂಕದಾರರು, ಅಳತೆಗಾರರು, ಸರ್ವೇಯರ್ಗಳು, ಹಮಾಲರು, ಎತ್ತಿನ ಗಾಡಿಯವರು, ಸಾರ್ವಜನಿಕ ಸಾಗಣೆದಾರರು ಮುಂತಾದವರು.- (1) ಯಾವನೇ ವ್ಯಕ್ತಿಯು, ಮಾರುಕಟ್ಟೆ ಸಮಿತಿಯು ನೀಡಿರುವ 37ನೇ ನಮೂನೆಯಲ್ಲಿರುವ ಲೈಸನ್ಸನ್ನು ಹೊಂದಿರುವ ಹೊರತು, ಯಾವುದೇ ಮಾರುಕಟ್ಟೆ ಪ್ರದೇಶದಲ್ಲಿ ತೂಕದಾರನಾಗಿ, ಅಳತೆಗಾರನಾಗಿ ಸರ್ವೆಯರ್ನಾಗಿ, ಹಮಾಲನಾಗಿ, ಎತ್ತಿನ ಗಾಡಿಯವನಾಗಿ ಅಥವಾ ಸಾರ್ವಜನಿಕ ಸಾಗಣೆ ವಾಹನದ ಒಡೆಯನಾಗಿ ಅಥವಾ ಮಾರುಕಟ್ಟೆಯ ಇತರ ಯಾವುದೇ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ ಪ್ರತಿಯೋಜಿಸಲಾಗಿದೆ.
(2) ಮಾರುಕಟ್ಟೆ ಪ್ರದೇಶದಲ್ಲಿನ -
(i) ತೂಕದಾರನಾಗಿ, ಅಳತೆಗಾರನಾಗಿ, ಸರ್ವೇಯರನಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ಪಡೆಯಬಯಸುವ ಯಾವನೇ ವ್ಯಕ್ತಿಯು ನಮೂನೆ 44ರಲ್ಲಿ ಅರ್ಜಿ ಸಲ್ಲಿಸತಕ್ಕಯ ;
(ii) ಹಮಾಲನಾಗಿ, ಎತ್ತಿನ ಗಾಡಿಯವನಾಗಿ, ಸಾರ್ವಜನಿಕ ಸಾಗಣೆ ವಾಹನದ ಒಡೆಯನಾಗಿ ಅಥವಾ ಇತರ ಯಾವನೇ ಮಾರುಕಟ್ಟೆ ಕಾರ್ಯನಿರ್ವಾಹಕನಾಗಿ ಕಾರ್ಯನಿರ್ವಹಿಸಲು ಲೈಸನ್ಸ್ ಪಡೆಯಬಯಸುವ ವ್ಯಕ್ತಿಯು ನಮೂನೆ 45ರಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
ಮತ್ತು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಹಾಗೂ ನೂರು ರೂ.ಗಳನ್ನು ಮೀರದ ಫೀಜನ್ನು ಸಂದಾಯ ಮಾಡತಕ್ಕದ್ದು. ಮತ್ತು ಅಂಥ ಅರ್ಜಿಯನ್ನು ಸ್ವೀಕರಿಸಿದ ತರುವಾಯ ಮಾರುಕಟ್ಟೆ ಸಮಿತಿಗೆ, ಅದನ್ನು ನಿರಾಕರಿಸಲು ಯಾವುದೇ ಕಾರಣ ಕಂಡುಬರದಿದ್ದರೆ ಅದು ನಮೂನೆ 37ರಲ್ಲಿ ಲೈಸನ್ಸು ನೀಡಬಹುದು ಅಥವಾ ಅದನ್ನು ನವೀಕರಿಸಬಹುದು ಮತ್ತು ಅಂಥ ಲೈಸನ್ಸು ಪಡೆದ ತರುವಾಯ ಅರ್ಜಿದಾರನು ಮಾರುಕಟ್ಟೆ ಸಮಿತಿಯು ನಿರ್ಧರಿಸಬಹುದಾದಂಥ ನಮೂನೆಯಲ್ಲಿ ಈ ನಿಯಮಗಳಲ್ಲಿ ಮತ್ತು ಮಾರುಕಟ್ಟೆ ಸಮಿತಿಯ ಉಪವಿಧಿಗಳನ್ನು ಅನುಸರಿಸಲು ಒಪ್ಪಿ, ಒಂದು ಕರಾರು ಪತ್ರವನ್ನು ಬರೆದುಕೊಡತಕ್ಕದ್ದು
(3) (2)ನೇ ಉಪನಿಯಮದ ಮೇರೆಗೆ ನೀಡಿದ ಲೈಸನ್ಸನ್ನು ನವೀಕರಿಸಿದ ಹೊರತು, ಅದನ್ನು ಯಾವ ಮಾರುಕಟ್ಟೆ ವರ್ಷದಲ್ಲಿ ನೀಡಲಾಗಿದೆಯೋ ಆ ವರ್ಷದ ಅಂತ್ಯದವರೆಗೆ ಅದು ಜಾರಿಯಲ್ಲಿರತಕ್ಕದ್ದು.
(4) ಯಾರೇ ವ್ಯಕ್ತಿಯು ತಾನು ಯಾವ ವ್ಯವಹಾರಕ್ಕಾಗಿ ಲೈಸನ್ಸ್ ಪಡೆದಿರುವನೋ ಆ [ಮಾರುಕಟ್ಟೆಯ ಕಾರ್ಯನಿರ್ವಾಹಕನಾಗಿ ವ್ಯವಹಾರ ನಡೆಸಲು ವ್ಯವಹಾರದ ಹೊರತು 1 ಹಕ್ಕುಳ್ಳವನಾಗತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3.2.70 ರ ಮೂಲಕ ಪ್ರತಿಯೋಜಿಸಲಾಗಿದೆ.
(5) ಮತ್ತೊಬ್ಬ ವ್ಯಕ್ತಿಯ ಬಳಿ ಅಥವಾ ಫರ್ಮಿನಲ್ಲಿ ಕೆಲಸ ಮಾಡುತ್ತಿರುವ ಯಾವನೇ ವ್ಯಕ್ತಿಯು, ಸಮಿತಿಯು ನೀಡಿದ ಯಾವುದೇ ಲೈಸನ್ಸನ್ನು ಹೊಂದಿರಲಿ ಅಥವಾ ಹೊಂದಿಲ್ಲದಿರಲಿ, ಅವನು xxx ತೂಕದಾರನಾಗಿ ಅಥವಾ ಮಾಪಕನಾಗಿ xxx ಆ ಲೈಸನ್ಸನ್ನು ಧಾರಣಮಾಡಲು ಅರ್ಹನಾಗಿರತಕ್ಕದ್ದಲ್ಲ, ಲೈಸನ್ಸ್ ಪಡೆದಿರುವ ಯಾವನೇ ಬ್ರೋಕರನು, ತೂಕದಾರನು, ಮಾಪಕನು ಅಥವಾ ಸರ್ವೇಯರನು ಯಾವ ಕೆಲಸಕ್ಕಾಗಿ ಅಥವಾ ವ್ಯವಹಾರಕ್ಕಾಗಿ ಲೈಸನ್ಸ್ ಧಾರಣಮಾಡಿರುವನೋ ಆ ಕೆಲಸದ ಅಥವಾ ವ್ಯವಹಾರದ ಹೊರತಾಗಿ ಹಾಗೆ ಕೆಲಸ ಮಾಡುತ್ತಿದ್ದರೆ ಅಥವಾ ವ್ಯವಹಾರ ಮಾಡಿದರೆ ಅವನು ಆ ಲೈಸನ್ಸಿನ ಷರತ್ತುಗಳನ್ನು ಉಲ್ಲಂಘಿಸಿದ್ದಾನೆಂದು ಭಾವಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಆರ್ಡಿಸಿ, 265 ಎಂಎಂಡಿ 84 ದಿನಾಂಕ 7-4-1988ರ ಮೂಲಕ ಬಿಟ್ಟುಬಿಡಲಾಗಿದೆ.
(6) ಅರ್ಜಿದಾರನಿಗೆ ಲೈಸನ್ಸ್ ನೀಡಿದರೆ ಅಥವಾ ಅವನ ಲೈಸನ್ಸ್ನ್ನು ನವೀಕರಿಸಿದರೆ, ಸಮಿತಿಯ ನಿಯಂತ್ರಣದಲ್ಲಿ ನಡೆಯುವ ಮಾರುಕಟ್ಟೆ ವ್ಯವಹಾರಗಳ ದಕ್ಷ ಕಾರ್ಯನಿರ್ವಹಣೆಗೆ ಅನುಕೂಲವಾಗುವ ಸಂಭವವಿಲ್ಲವೆಂದು ಅಥವಾ ಅರ್ಜಿದಾರನು ಅಧಿನಿಯಮದ, ನಿಯಮಗಳ ಅಥವಾ ಉಪವಿಧಿಗಳ ಮೇರೆಗೆ ಅನ್ಯಥಾ ಅರ್ಹನಾಗಿಲ್ಲವೆಂದು ಅಥವಾ ಅನರ್ಹನಾಗಿರುವನೆಂದು ಸಮಿತಿಗೆ ಮನದಟ್ಟಾದರೆ, ಸಮಿತಿಯು, ಅರ್ಜಿದಾರನಿಗೆ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ಕೊಟ್ಟ ನಂತರ ಕಾರಣಗಳನ್ನು ದಾಖಲ್ಮಾಡಿ ಅವನಿಗೆ ಲೈಸನ್ಸ್ನ್ನು ನೀಡಲು ಅಥವಾ ನವೀಕರಿಸಲು ನಿರಾಕರಿಸಬಹುದು.