ರಹಸ್ಯ ಸ್ವರೂಪದವುಗಳಲ್ಲದ ಮತ್ತು ಸಮಿತಿಯ ಮುದ್ರೆ ಹಾಕಿ ಕಾರ್ಯದರ್ಶಿಯು ಪ್ರಮಾಣೀಕರಿಸಿದ ಸಮಿತಿಯ ದಸ್ತಾವೇಜುಗಳ ಪ್ರತಿಗಳನ್ನು ಅಥವಾ ಪುಸ್ತಕಗಳಲ್ಲಿನ ನಮೂದುಗಳ ಪ್ರತಿಗಳನ್ನು 1 [ಕೆಳಗೆ ನಿರ್ದಿಷ್ಟಪಡಿಸಿರುವಂಥ ಫೀಜುಗಳನ್ನು ಸಂದಾಯ ಮಾಡಿದ ಮೇಲೆ ನೀಡತಕ್ಕದ್ದು:-
(ಎ) ನೂರು ಪದಗಳ ಅಥವಾ ಅದರ ಭಾಗದ ನಕಲು ತೆಗೆಯಲು ಮತ್ತು ತಾಳೆ ನೋಡಲು 30 ಪೈಸೆ
(ಬಿ) ಕೋಷ್ಟಕ ರೂಪದಲ್ಲಿರುವ ದಸ್ತಾವೇಜುಗಳ ಪ್ರತಿಯೊಂದು ಪುಟದ ಅಥವಾ ಅದರ ಭಾಗದ ನಕಲು ತೆಗೆಯಲು ಮತ್ತು ತಾಳೆ ನೋಡಲು 55 ಪೈಸೆ
(ಸಿ) ಮುದ್ರಿತ ರೂಪದಲ್ಲಿರುವ ನಕಲುಗಳನ್ನು ಕೊಡಲು ಪ್ರತಿಯೊಂದು ಪುಟಕ್ಕೆ ಅಥವಾ ಅದರ ಭಾಗಕ್ಕೆ 10 ಪೈಸೆ 1. ಅಧಿಸೂಚನೆ ಸಂಖ್ಯೆ: ಜಿಎಸ್ಆರ್ 44 ದಿನಾಂಕ 3.2.70 ರ ಮೂಲಕ ಪ್ರತಿಯೋಜಿಸಲಾಗಿದೆ. 1 [54. ಅಧಿನಿಯಮ, ನಿಯಮಗಳು ಮುಂತಾದವುಗಳ ತಹಲ್ವರೆಗಿನ ಪ್ರತಿಗಳನ್ನು ಇಟ್ಟುಕೊಂಡಿರುವುದು.- (1) ಪ್ರತಿಯೊಂದು ಸಮಿತಿಯು, ಅಧಿನಿಯಮದ, ನಿಯಮಗಳ, ಉಪವಿಧಿಗಳ ಮತ್ತು ಅವುಗಳ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳ ತಹಲ್ವರೆಗಿನ ಪ್ರತಿಗಳನ್ನು ಸಮಿತಿಯ ಕಚೇರಿಯಲ್ಲಿ ಇಟ್ಟುಕೊಂಡಿರತಕ್ಕದ್ದು ಮತ್ತು ಅವುಗಳು ಸಾರ್ವಜನಿಕರ ಪರಿಶೀಲನೆಗೆ ದೊರಕುವಂತೆ ವ್ಯವಸ್ಥೆ ಮಾಡತಕ್ಕದ್ದು.
(2) ಉಪವಿಧಿಗಳ ಮುದ್ರಿತ ಪ್ರತಿಗಳನ್ನು ಸಮಿತಿಯು ನಿಗದಿಪಡಿಸಬಹುದಾದಂಥ ಸೂಕ್ತ ಬೆಲೆಯಲ್ಲಿ ಮಾರಾಟ ಮಾಡತಕ್ಕದ್ದು, ಮತ್ತು ಸಮಿತಿಯು ಉಪವಿಧಿಗಳ ತಿದ್ದುಪಡಿಗಳ ಪ್ರಮಾಣಿತ ಪ್ರತಿಗಳನ್ನು ಪ್ರತಿ ನೂರು ಪದಕ್ಕೆ ಅಥವಾ ಅದರ ಭಾಗಕ್ಕೆ ಮೂವತ್ತು ಪೈಸೆ ಫೀಜು ಸಂದಾಯ ಮಾಡಿದ ಮೇಲೆ ನೀಡತಕ್ಕದ್ದು.
- ಅಧಿಸೂಚನೆ ಸಂಖ್ಯೆ: ಜಿಎಸ್ಆರ್ 44, ದಿನಾಂಕ 3-2-1970 ಮೂಲಕ ಪ್ರತಿಯೋಜಿಸಲಾಗಿದೆ.