ಮಾರುಕಟ್ಟೆ ಸಮಿತಿಯ ಪ್ರತಿಯೊಂದು ಸಭೆಯ ವ್ಯವಹರಣೆಗಳ ಪ್ರತಿಯನ್ನು ಆ ಸಭೆ ನಡೆದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಥವಾ ಈ ಸಂಬಂಧದಲ್ಲಿ ಅವನಿಂದ ಅಧಿಕೃತನಾದ ಅಧಿಕಾರಿಗೆ ಮತ್ತು ಸಮಿತಿಯ ಸದಸ್ಯರಿಗೆ ಕಳುಹಿಸತಕ್ಕದ್ದು.
ರಹಸ್ಯ ಸ್ವರೂಪದವುಗಳಲ್ಲದ ಮತ್ತು ಸಮಿತಿಯ ಮುದ್ರೆ ಹಾಕಿ ಕಾರ್ಯದರ್ಶಿಯು ಪ್ರಮಾಣೀಕರಿಸಿದ ಸಮಿತಿಯ ದಸ್ತಾವೇಜುಗಳ ಪ್ರತಿಗಳನ್ನು ಅಥವಾ ಪುಸ್ತಕಗಳಲ್ಲಿನ ನಮೂದುಗಳ ಪ್ರತಿಗಳನ್ನು 1 [ಕೆಳಗೆ ನಿರ್ದಿಷ್ಟಪಡಿಸಿರುವಂಥ ಫೀಜುಗಳನ್ನು ಸಂದಾಯ ಮಾಡಿದ ಮೇಲೆ ನೀಡತಕ್ಕದ್ದು:-
(ಎ) ನೂರು ಪದಗಳ ಅಥವಾ ಅದರ ಭಾಗದ ನಕಲು ತೆಗೆಯಲು ಮತ್ತು ತಾಳೆ ನೋಡಲು 30 ಪೈಸೆ
(ಬಿ) ಕೋಷ್ಟಕ ರೂಪದಲ್ಲಿರುವ ದಸ್ತಾವೇಜುಗಳ ಪ್ರತಿಯೊಂದು ಪುಟದ ಅಥವಾ ಅದರ ಭಾಗದ ನಕಲು ತೆಗೆಯಲು ಮತ್ತು ತಾಳೆ ನೋಡಲು 55 ಪೈಸೆ
(ಸಿ) ಮುದ್ರಿತ ರೂಪದಲ್ಲಿರುವ ನಕಲುಗಳನ್ನು ಕೊಡಲು ಪ್ರತಿಯೊಂದು ಪುಟಕ್ಕೆ ಅಥವಾ ಅದರ ಭಾಗಕ್ಕೆ 10 ಪೈಸೆ 1. ಅಧಿಸೂಚನೆ ಸಂಖ್ಯೆ: ಜಿಎಸ್ಆರ್ 44 ದಿನಾಂಕ 3.2.70 ರ ಮೂಲಕ ಪ್ರತಿಯೋಜಿಸಲಾಗಿದೆ. 1 [54. ಅಧಿನಿಯಮ, ನಿಯಮಗಳು ಮುಂತಾದವುಗಳ ತಹಲ್ವರೆಗಿನ ಪ್ರತಿಗಳನ್ನು ಇಟ್ಟುಕೊಂಡಿರುವುದು.- (1) ಪ್ರತಿಯೊಂದು ಸಮಿತಿಯು, ಅಧಿನಿಯಮದ, ನಿಯಮಗಳ, ಉಪವಿಧಿಗಳ ಮತ್ತು ಅವುಗಳ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳ ತಹಲ್ವರೆಗಿನ ಪ್ರತಿಗಳನ್ನು ಸಮಿತಿಯ ಕಚೇರಿಯಲ್ಲಿ ಇಟ್ಟುಕೊಂಡಿರತಕ್ಕದ್ದು ಮತ್ತು ಅವುಗಳು ಸಾರ್ವಜನಿಕರ ಪರಿಶೀಲನೆಗೆ ದೊರಕುವಂತೆ ವ್ಯವಸ್ಥೆ ಮಾಡತಕ್ಕದ್ದು.
(2) ಉಪವಿಧಿಗಳ ಮುದ್ರಿತ ಪ್ರತಿಗಳನ್ನು ಸಮಿತಿಯು ನಿಗದಿಪಡಿಸಬಹುದಾದಂಥ ಸೂಕ್ತ ಬೆಲೆಯಲ್ಲಿ ಮಾರಾಟ ಮಾಡತಕ್ಕದ್ದು, ಮತ್ತು ಸಮಿತಿಯು ಉಪವಿಧಿಗಳ ತಿದ್ದುಪಡಿಗಳ ಪ್ರಮಾಣಿತ ಪ್ರತಿಗಳನ್ನು ಪ್ರತಿ ನೂರು ಪದಕ್ಕೆ ಅಥವಾ ಅದರ ಭಾಗಕ್ಕೆ ಮೂವತ್ತು ಪೈಸೆ ಫೀಜು ಸಂದಾಯ ಮಾಡಿದ ಮೇಲೆ ನೀಡತಕ್ಕದ್ದು.
1 [(1) (ಎ) 84ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನೇಮಕಗೊಂಡ ಮಧ್ಯಸ್ಥಗಾರರ ಪಟ್ಟಿಯಲ್ಲಿ 40ಕ್ಕಿಂತ ಹೆಚ್ಚು ಜನ ಸದಸ್ಯರು ಇರತಕ್ಕದ್ದಲ್ಲ, ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಅವರಲ್ಲಿ ಶೇಕಡಾ ಐವತ್ತರಷ್ಟು ಸದಸ್ಯರು ಕೃಷಿಕರಾಗಿರತಕ್ಕದ್ದು, ಶೇಕಡಾ ಇಪ್ಪತ್ತೈದರಷ್ಟು ಸದಸ್ಯರು ವ್ಯಾಪಾರಸ್ಥರಾಗಿರತಕ್ಕದ್ದು ಮತ್ತು ಶೇಕಡಾ ಇಪ್ಪತ್ತೈದು ಸದಸ್ಯರು ಕಮಿಷನ್ ಏಜೆಂಟರಾಗಿರತಕ್ಕದ್ದು. ಈ ಸದಸ್ಯರ ಪದಾವಧಿಯು ಒಂದು ವರ್ಷವಾಗಿರತಕ್ಕದ್ದು, ಆದರೆ ಮಧ್ಯಸ್ಥಗಾರರ ಪಟ್ಟಿಯಲ್ಲಿರುವ ಸದಸ್ಯರು ಮಧ್ಯಸ್ಥಗಾರರ ಹೊಸ ಪಟ್ಟಿಯನ್ನು ರಚಿಸುವವರೆಗೆ ಅಧಿಕಾರದಲ್ಲಿ ಮುಂದುವರೆಯತಕ್ಕದ್ದು:
ಪರಂತು, ಸಮಿತಿಯು ಯಾವುದೇ ಕಾಲದಲ್ಲಿ, ಕಾರಣಗಳನ್ನು ದಾಖಲು ಮಾಡಿ ಪಟ್ಟಿಯಿಂದ ಯಾವನೇ ವ್ಯಕ್ತಿಯನ್ನು ತೆಗೆದುಹಾಕಬಹುದು ಮತ್ತು ಹಾಗೆ ತೆಗೆದುಹಾಕಲಾದ ವ್ಯಕ್ತಿಯ ಮುಕ್ತಾಯವಾಗದ ಪದಾವಧಿಯವರೆಗೆ ಅವನ ಸ್ಥಾನದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ನೇಮಕ ಮಾಡಬಹುದು.
(ಬಿ) ಸಮಿತಿಯು ಕೆಳಕಂಡ ಸದಸ್ಯರಿಂದ ಕೂಡಿದ ವಿವಾದ ಪರಿಶೀಲನಾ ಸಮಿತಿಯನ್ನು ನೇಮಕ ಮಾಡತಕ್ಕದ್ದು:-
(i) ಸಮಿತಿಯ ಉಪಾಧ್ಯಕ್ಷ;
(ii) ಅಧ್ಯಕ್ಷನ ಹೊರತಾಗಿ ಕೃಷಿಕರ ಮೂವರು ಪ್ರತಿನಿಧಿಗಳು;
(iii) ವ್ಯಾಪಾರಿಗಳ ಒಬ್ಬ ಪ್ರತಿನಿಧಿ;
(iv) ಕಮಿಷನ್ ಏಜೆಂಟರ ಒಬ್ಬ ಪ್ರತಿನಿಧಿ;
(v) ಸಹಕಾರ ಸಂಘಗಳ ಒಬ್ಬ ಪ್ರತಿನಿಧಿ;
(2) ಸಮಿತಿಯ ಉಪಾಧ್ಯಕ್ಷನು ವಿವಾದ ಪರಿಶೀಲನಾ ಸಮಿತಿಯ ಪದನಿಮಿತ್ತ ಅಧ್ಯಕ್ಷನಾಗಿರತಕ್ಕದ್ದು. ಉಪಾಧ್ಯಕ್ಷನ ಗೈರುಹಾಜರಿಯಲ್ಲಿ, 1 [ವಿವಾದ ಪರಿಶೀಲನಾ ಸಮಿತಿಯು ತನ್ನ ಸದಸ್ಯರ ಪೈಕಿ ಆಯ್ಕೆ ಮಾಡಿದ ಒಬ್ಬ ವ್ಯಕ್ತಿಯು ಸಭೆಯ ಅಧ್ಯಕ್ಷತೆಯನ್ನುವಹಿಸತಕ್ಕದ್ದು.
(iii) ಆಯ್ಕೆಯಾದ ಮಧ್ಯಸ್ಥಗಾರರಲ್ಲಿ ಯಾವನೇ ಒಬ್ಬನು ಕಾರ್ಯನಿರ್ವಹಿಸಲು ನಿರ್ಲಕ್ಷಿಸಿದರೆ ಅಥವಾ ನಿರಾಕರಿಸಿದರೆ, ಅಥವಾ ಕಾರ್ಯನಿರ್ವಹಿಸಲು ಅಸಮರ್ಥನಾದರೆ ಅಥವಾ ಮೃತನಾದರೆ, ಕಾರ್ಯದರ್ಶಿಯು ಮುಂಚಿನ ಮಧ್ಯಸ್ಥಗಾರನನ್ನು ಆಯ್ಕೆ ಮಾಡಿದ ಪಕ್ಷಕಾರನನ್ನು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಇಚ್ಫಿಸುವಂಥ ಮತ್ತು ಸಿದ್ಧನಿರುವ ಹೊಸ ಮಧ್ಯಸ್ಥಗಾರನನ್ನು ಆಯ್ಕೆ ಮಾಡುವಂತೆ ಅಗತ್ಯಪಡಿಸತಕ್ಕದ್ದು.
(iv) (vii) ನೇ ಖಂಡದಲ್ಲಿ ಉಪಬಂಧಿಸಿರುವುದನ್ನುಳಿದು, ವಿವಾದದ ಒಬ್ಬ ಪಕ್ಷಕಾರನು, ಉಪವಿಧಿಗಳ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮೇಲೆ ಹೇಳಿದಂತೆ ಪ್ರಾರಂಭದ ಮಧ್ಯಸ್ಥಗಾರನನ್ನು ಅಥವಾ ಬದಲಿ ಮಧ್ಯಸ್ಥಗಾರನನ್ನು ಆಯ್ಕೆ ಮಾಡಲು ತಪ್ಪಿದರೆ,-
(ಎ) ಅಂಥ ಪಕ್ಷಕಾರನು ದೂರು ನೀಡುವ ಪಕ್ಷಕಾರನಾಗಿದ್ದರೆ, ಅವನ ಕ್ಲೇಮನ್ನು ತಿರಸ್ಕರಿಸಿರುವುದಾಗಿ ಭಾವಿಸತಕ್ಕದ್ದು;
(ಬಿ) ಅಂಥ ಪಕ್ಷಕಾರನು ಪ್ರತಿ ಪಕ್ಷಕಾರನಾಗಿದ್ದರೆ ಮತ್ತು ದೂರು ನೀಡುವ ಪಕ್ಷಕಾರನು ಉಪವಿಧಿಗಳ ಉದ್ದೇಶಕ್ಕಾಗಿ ನಿರ್ದಿಷ್ಟಪಡಿಸಿದ ಅವಧಿಯೊಳಗೆ ಮಧ್ಯಸ್ಥಗಾರನನ್ನು ಆಯ್ಕೆ ಮಾಡಿದ್ದರೆ, ಆ ಮಧ್ಯಸ್ಥಗಾರನೇ ಏಕೈಕ ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸತಕ್ಕದ್ದು ಮತ್ತು ಅವನನ್ನು ಉಭಯ ಪಕ್ಷಕಾರರ ಸಮ್ಮತಿಯಿಂದ ನೇಮಕ ಮಾಡಿದ್ದರೆ ಹೇಗೋ ಹಾಗೆ ಅವನು ನೀಡುವ ಐತೀರ್ಪಿಗೆ ಆ ಪಕ್ಷಕಾರರು ಬದ್ಧರಾಗತಕ್ಕದ್ದು.
(v) ಕಾರ್ಯದರ್ಶಿಯು ಪಕ್ಷಕಾರನು ಆಯ್ಕೆ ಮಾಡಿದ ಮಧ್ಯಸ್ಥಗಾರನಿಗೆ ಅಥವಾ ಮಧ್ಯಸ್ಥಗಾರರಿಗೆ ವಿವಾದದ ಬಗ್ಗೆ ತಿಳಿಸತಕ್ಕದ್ದು ಮತ್ತು ಮಧ್ಯಸ್ಥಗಾರನು ಅಥವಾ ಮಧ್ಯಸ್ಥಗಾರರು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಐತೀರ್ಪು ನೀಡತಕ್ಕದ್ದು, ಮತ್ತು ಹಾಗೆ ನೀಡಲಾದ ಐತೀರ್ಪು (1)ನೇ ಖಂಡಕ್ಕೊಳಪಟ್ಟು ಅಂತಿಮವಾಗಿರತಕ್ಕದ್ದು.
(vi) ಮಧ್ಯಸ್ಥಗಾರನ ಅಥವಾ ಮಧ್ಯಸ್ಥಗಾರರ ಐತೀರ್ಪಿನ ವಿರುದ್ಧ ವಿವಾದ ಪರಿಶೀಲನಾ ಸಮಿತಿಗೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದು ಮತ್ತು ಅಂಥ ಅಪೀಲನ್ನು ಪಕ್ಷಕಾರರಿಗೆ ಐತೀರ್ಪಿನ ಮಾಹಿತಿಯನ್ನು ತಿಳಿಸಿದ ದಿನಾಂಕದಿಂದ ಏಳು ದಿನಗಳ ಅವಧಿಯೊಳಗಾಗಿ ಸಲ್ಲಿಸತಕ್ಕದ್ದು.
(vii) ಕಾರ್ಯದರ್ಶಿಯು, ಕೆಳಕಂಡ ಸಂದರ್ಭಗಳಲ್ಲಿ ವಿವಾದವನ್ನು ವಿವಾದ ಪರಿಶೀಲನಾ ಸಮಿತಿಗೆ ಒಪ್ಪಿಸತಕ್ಕದ್ದು,-
(ಎ) ಮಧ್ಯಸ್ಥಗಾರನಾಗಿ ಕಾರ್ಯನಿರ್ವಹಿಸಲು ಸಿದ್ಧವಿರುವ ಮತ್ತು ಇಚ್ಚಿಸುವಂಥ ಒಬ್ಬ ಮಧ್ಯಸ್ಥಗಾರನನ್ನು ಆಯ್ಕೆ ಮಾಡಲು ವಿವಾದಿಸುವ ಪಕ್ಷಕಾರರಲ್ಲಿ ಯಾವನೇ ಒಬ್ಬನು ತಾನು ಅಸಮರ್ಥನಾಗಿರುವುದಾಗಿ ಮಧ್ಯಸ್ಥಗಾರರ ಆಯ್ಕೆಗಾಗಿ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ಕಾರ್ಯದರ್ಶಿಗೆ ವರದಿ ಮಾಡಿದರೆ; ಅಥವಾ
(ಬಿ) ಮಧ್ಯಸ್ಥಗಾರರು ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ಐತೀರ್ಪನ್ನು ನೀಡಲು ವಿಫಲರಾದರೆ; ಅಥವಾ
(ಸಿ) ಮಧ್ಯಸ್ಥಗಾರರು ತಮ್ಮಲ್ಲಿ ಪರಸ್ಪರ ಒಡಂಬಡಿಕೆ ಏರ್ಪಡಿಸುತ್ತಿಲ್ಲವೆಂದು ಲಿಖಿತದಲ್ಲಿ ಕಾರ್ಯದರ್ಶಿಗೆ ತಿಳಿಸಿದರೆ.
(viii) ವಿವಾದ ಪರಿಶೀಲನಾ ಸಮಿತಿಯ ಒಬ್ಬ ಸದಸ್ಯನು ವಿವಾದದ ಪಕ್ಷಕಾರನಾಗಿದ್ದರೆ, ಅಥವಾ ವಿವಾದ ಪರಿಶೀಲನಾ ಸಮಿತಿಯ ಮುಂದೆ ಇರುವ ವಿವಾದದ ಯಾವನೇ ಪಕ್ಷಕಾರನಲ್ಲಿ ಹಿತಾಸಕ್ತಿಯುಳ್ಳವನಾಗಿದ್ದರೆ ಅವನು, ಸದರಿ ವಿವಾದಕ್ಕೆ ಸಂಬಂಧಿಸಿದ ವ್ಯವಹರಣೆಗಳಲ್ಲಿ ಭಾಗವಹಿಸತಕ್ಕದ್ದಲ್ಲ, ಸದರಿ ವಿವಾದದ ಉದ್ದೇಶಕ್ಕಾಗಿ, ಸಮಿತಿಯು ವಿವಾದ ಪರಿಶೀಲನಾ ಸಮಿತಿಯ ಸದಸ್ಯನೆಂದು ಬೇರೊಬ್ಬ ವ್ಯಕ್ತಿಯನ್ನು ನೇಮಿಸಬಹುದು.
(ix) ವಿವಾದ ಪರಿಶೀಲನಾ ಸಮಿತಿಯು, ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ತನ್ನ ಐತೀರ್ಪನ್ನು ನೀಡತಕ್ಕದ್ದು. ಅಂಥ ಅವಧಿಯೊಳಗೆ ಯಾವುದೇ ಐತೀರ್ಪನ್ನು ನೀಡಿದ್ದರೆ ಅಥವಾ ಪಕ್ಷಕಾರರು ತಮ್ಮ ಹಕ್ಕುಗಳನ್ನು ಸ್ಥಾಪಿಸುವುದಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆ ಪಕ್ಷಕಾರರಿಗೆ ನಿರ್ದೇಶಿಸಬಹುದೆಂದು ವಿವಾದ ಪರಿಶೀಲನಾ ಸಮಿತಿಯು ಅಭಿಪ್ರಾಯಪಟ್ಟರೆ, ಕಾರ್ಯದರ್ಶಿಯು ಆ ವಿಷಯವನ್ನು ಸಮಿತಿಗೆ ವರದಿ ಮಾಡತಕ್ಕದ್ದು ಮತ್ತು ಆ ಸಮಿತಿಯು ತದನುಸಾರವಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಪಕ್ಷಕಾರರಿಗೆ ಅನುಮತಿ ನೀಡತಕ್ಕದ್ದು.
(x) ಸಂದರ್ಭಾನುಸಾರ, ಏಕೈಕ ಮಧ್ಯಸ್ಥಗಾರನು, ಮಧ್ಯಸ್ಥಗಾರರು ಅಥವಾ ವಿವಾದ ಪರಿಶೀಲನಾ ಸಮಿತಿಯು ನೀಡಿದ ಐತೀರ್ಪಿನಲ್ಲಿ ವ್ಯವಹರಣೆಗಳ ವೆಚ್ಚಗಳ ಬಗ್ಗೆ ವ್ಯವಸ್ಥೆ ಮಾಡತಕ್ಕದ್ದು ಮತ್ತು ಆ ಐತೀರ್ಪನ್ನು ನಾಲ್ಕು ಪ್ರತಿಗಳಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಐತೀರ್ಪಿನ ಎಲ್ಲ ಪ್ರತಿಗಳಿಗೆ ಸಂದರ್ಭಾನುಸಾರ ಏಕೈಕ ಮಧ್ಯಸ್ಥಗಾರನು ಅಥವಾ ಮಧ್ಯಸ್ಥಗಾರರು ಸಹಿ ಹಾಕತಕ್ಕದ್ದು. ವಿವಾದ ಪರಿಶೀಲನಾ ಸಮಿತಿಯ ಸಭೆ ಅಥವಾ ಸಭೆಗಳಲ್ಲಿ ಅಧ್ಯಕ್ಷತೆ ವಹಿಸಿದ ಅಧ್ಯಕ್ಷನು ಅಥವಾ ಸಂದರ್ಭಾನುಸಾರ ಸದಸ್ಯನು ಸಹಿ ಹಾಕತಕ್ಕದ್ದು. ಐತೀರ್ಪಿನ ಒಂದೊಂದು ಪ್ರತಿಯನ್ನು ವಿವಾದದ ಪಕ್ಷಕಾರರಿಗೆ ಕಳುಹಿಸತಕ್ಕದ್ದು ಮತ್ತು ಉಳಿದ ಪ್ರತಿಗಳನ್ನು ದಾಖಲೆಗೆ ಸೇರಿಸತಕ್ಕದ್ದು.
(4) ವಿವಾದ ಪರಿಶೀಲನಾ ಸಮಿತಿಯ ಸಭೆಯಲ್ಲಿ ಕೊನೆ ಪಕ್ಷ ಮೂವರು ಸದಸ್ಯರು ಹಾಜರಿರುವ ಹೊರತು ಆ ಸಮಿತಿಯು ಯಾವ ವ್ಯವಹಾರವನ್ನೂ ನಡೆಸತಕ್ಕದ್ದಲ್ಲ.
(5) ವಿವಾದ ಪರಿಶೀಲನಾ ಸಮಿತಿಯ ಯಾವುದೇ ಸಭೆಯಲ್ಲಿ ಬರಬಹುದಾದಂಥ ಎಲ್ಲ ಪ್ರಶ್ನೆಗಳು, ಹಾಜರಿದ್ದು ಮತ್ತು ಮತ ನೀಡುವ ಸದಸ್ಯರ ಬಹುಮತದಿಂದ ತೀರ್ಮಾನವಾಗತಕ್ಕದ್ದು. ಸಮಾನ ಮತಗಳು ಬಂದ ಸಂದರ್ಭದಲ್ಲಿ ಸಂದರ್ಭಾನುಸಾರ ವಿವಾದ ಪರಿಶೀಲನಾ ಸಮಿತಿಯ ಅಧ್ಯಕ್ಷನು ಅಥವಾ ಸಭೆಯ ಅಧ್ಯಕ್ಷತೆ ವಹಿಸುವ ಸದಸ್ಯನು ಒಂದು ಹೆಚ್ಚಿನ ಅಥವಾ ನಿರ್ಣಾಯಕ ಮತವನ್ನು ನೀಡತಕ್ಕದ್ದು.
(6) ವಿವಾದ ಪರಿಶೀಲನಾ ಸಮಿತಿಯ ತೀರ್ಮಾನವು ಅಂತಿಮವಾಗಿರತಕ್ಕದ್ದು.
1 [(7) 1940ರ ಮಧ್ಯಸ್ಥಗಾರಿಕೆ ಅಧಿನಿಯಮದ (1940ರ ಕೇಂದ್ರಾಧಿನಿಯಮ ಸಂಖ್ಯೆ 10) 14, 15, 16, 17, 18, 41 ಮತ್ತು 43ನೇ ಪ್ರಕರಣಗಳ ಉಪಬಂಧಗಳು, ಅಧಿನಿಯಮದ, ಈ ನಿಯಮಗಳ ಮತ್ತು ಉಪನಿಧಿಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟಿಗೆ 84ನೇ ಪ್ರಕರಣದ ಮೇರೆಗಿನ ಮಧ್ಯಸ್ಥಿಕೆಗೂ ಅನ್ವಯವಾಗತಕ್ಕದ್ದು.
(1) 49ನೇ ನಿಯಮದಲ್ಲಿ ಉಲ್ಲೇಖಿತವಾದ ಸಭೆಗಳನ್ನು ಹೊರತುಪಡಿಸಿ ಸಮಿತಿಯ ಪ್ರತಿಯೊಂದು ಸಭೆಯು 48ನೇ ಪ್ರಕರಣದಲ್ಲಿ ಗೊತ್ತುಪಡಿಸಲಾದಂತೆ ಸಮಾವೇಶಗೊಳ್ಳತಕ್ಕದ್ದು.
(2) ಪ್ರತಿಯೊಂದು ಸಭೆಯ ನೋಟೀಸಿನ ಒಂದು ಪ್ರತಿಯನ್ನು ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಥವಾ ಈ ಸಂಬಂಧದಲ್ಲಿ ಅವನು ಅಧಿಕೃತಗೊಳಿಸಿದ ಯಾವನೇ ಇತರ ಅಧಿಕಾರಿಗೆ ಕಳುಹಿಸತಕ್ಕದ್ದು.
(3) ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಅವನು ಅಧಿಕೃತಗೊಳಿಸಿದ ಯಾವನೇ ಅಧಿಕಾರಿಯು ಸಮಿತಿಯ ಸಭೆಗೆ ಹಾಜರಾಗಲು ಹಕ್ಕುಳ್ಳವನಾಗಿರತಕ್ಕದ್ದು ಆದರೆ ಮತನೀಡುವ ಹಕ್ಕು ಹೊಂದಿರತಕ್ಕದ್ದಲ್ಲ.
ಸಮಿತಿಯು, ತನಗೆ ಬರಬೇಕಾದ ಯಾವುದೇ ಫೀಜನ್ನು ಅಥವಾ ಇತರ ಮೊಬಲಗನ್ನು ಮನ್ನಾ ಮಾಡುವುದಕ್ಕೆ ಮುಂಚೆ,-
(i) ಅಂಥ ಫೀಜು ಅಥವಾ ಮೊಬಲಗು ಒಂದು ನೂರು ರೂಪಾಯಿಗೆ ಮೀರಿದ್ದು, ಐದುನೂರು ರೂಪಾಯಿಗೆ ಮೀರದಿದ್ದರೆ, ಕೃಷಿ ಮಾರುಕಟ್ಟೆ ನಿರ್ದೇಶಕನ ; ಮತ್ತು
(ii) ಅಂಥ ಫೀಜು ಅಥವಾ ಮೊಬಲಗು ಐದುನೂರು ರೂಪಾಯಿಗಳನ್ನು ಮೀರಿದ್ದರೆ ಸರ್ಕಾರದ - ಮಂಜೂರಾತಿಯನ್ನು ಪಡೆಯತಕ್ಕದ್ದು.
ಸಮಿತಿಯು, ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಈ ಸಂಬಂಧದಲ್ಲಿ ಅವನು ಯುಕ್ತವಾಗಿ ಅಧಿಕೃತಗೊಳಿಸಿದ ಯಾವನೇ ಇತರ ಅಧಿಕಾರಿಯು ಅಗತ್ಯಪಡಿಸಬಹುದಾದಂಥ ಎಲ್ಲಾ ಮಾಹಿತಿಗಳನ್ನು ಒದಗಿಸತಕ್ಕದ್ದು. ಸಮಿತಿಯು ಅಧಿನಿಯಮದ ಮೂಲಕ ನಿಯಮಿಸಲಾದ ಕರ್ತವ್ಯಗಳ ಜೊತೆಗೆ ಕೆಳಕಂಡವುಗಳ ಬಗ್ಗೆ ಹೊಣೆಯಾಗಿರತಕ್ಕದ್ದು:-
(1) ಜಮೆಗಳ ಮತ್ತು ಸಂದಾಯಗಳ ಮೇಲೆ ತನ್ನ ಅಧಿಕಾರಿಗಳು ಸೂಕ್ತ ನಿಗಾ ಇಡುವಂತೆ ನೋಡಿಕೊಳ್ಳುವುದು;
(2) ಮಾರುಕಟ್ಟೆ ಸಮಿತಿಯ ನಿಧಿಗಳಿಗೆ ಖರ್ಚು ಹಾಕಬಹುದಾದ ಎಲ್ಲಾ ಕಾಮಗಾರಿಗಳ ಯುಕ್ತ ನಿರ್ವಹಣೆಗೆ;
(3) ಮಾರುಕಟ್ಟೆಗೆ ಬರುವ ಸರಕುಗಳ ಬಗ್ಗೆ ರಿಜಿಸ್ಟರು ಇಡುವುದು;
(4) ವಸೂಲು ಮಾಡಿದ ಫೀಜುಗಳ ರಿಜಿಸ್ಟರು ಇಡುವುದು;
(5) ಸಮಿತಿಯ ಅಧಿಕಾರಿಗಳಿಂದ ಮತ್ತು ನೌಕರರಿಂದ ಭದ್ರತೆಗಳನ್ನು ಪಡೆದುಕೊಳ್ಳುವುದು;
(6) ಫೀಜುಗಳನ್ನು ವಸೂಲು ಮಾಡಲು ಅಧಿಕೃತರಾದ ವ್ಯಕ್ತಿಗಳಿಗೆ ಹಣದ ಪೆಟ್ಟಿಗೆಯನ್ನು ಮತ್ತು ಪಕ್ಕ ಪ್ರತಿ ಇರುವ ರಸೀದಿ ಪುಸ್ತಕಗಳನ್ನು ಒದಗಿಸುವುದು;
(7) ತೂಕ ಮಾಡುವವನಿಗೆ, ಹಮಾಲರಿಗೆ, ಗಾಡಿ ಎಳೆಯುವವರಿಗೆ ಮತ್ತು ಜವಾನರಿಗೆ ಬಿಲ್ಲೆಗಳನ್ನು ಒದಗಿಸುವುದು;
(8) ಕಾಮಗಾರಿಗಳ ಬಗ್ಗೆ ನಕ್ಷೆಗಳನ್ನು ಮತ್ತು ಅಂದಾಜುಗಳನ್ನು ಸಿದ್ಧಪಡಿಸಿಕೊಳ್ಳುವುದು;
(9) ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಅವನು ಅಧಿಕೃತಗೊಳಿಸಿದ ಅಧಿಕಾರಿಯು ನಿರ್ದೇಶಿಸಬಹುದಾದಂಥ ನಮೂನೆಗಳಲ್ಲಿ ಲೆಕ್ಕಗಳನ್ನಿಡುವುದು;
(10) ಆಸ್ತಿಗಳು ಮತ್ತು ಹೊಣೆಗಾರಿಕೆಗಳ ವಿವರ ಪಟ್ಟಿಯನ್ನು ಪ್ರಕಟಿಸುವುದು;
(11) ಜಮೆಗಳು ಮತ್ತು ಖರ್ಚುಗಳ ಮೇಲೆ ನಿಗಾ ಇಡುವಂತೆ ನೋಡಿಕೊಳ್ಳುವುದು;
(12) ಆಯವ್ಯಯಕ್ಕನುಸಾರ ವೆಚ್ಚಗಳನ್ನು ನಿಯಂತ್ರಿಸುವುದು;
(13) ಮುಂಬರುವ ವರ್ಷದ ಆಯವ್ಯಯವನ್ನು ಸಿದ್ಧಪಡಿಸುವುದು ಮತ್ತು ಅಂಗೀಕರಿಸುವುದು;
(14) ಮಾರುಕಟ್ಟೆ ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು;
(15) ಅಧಿಸೂಚಿತ ಬೆಳೆಗಳನ್ನು ತಾತ್ಕಾಲಿಕವಾಗಿ ದಾಸ್ತಾನಿಡಲು ಅಥವಾ ಸಂಗ್ರಹಿಸಿಡಲು ವ್ಯವಸ್ಥೆ ಮಾಡುವುದು;
(16) ಸಮಿತಿಯ ಕಾರ್ಯಕಲಾಪಗಳ ದಕ್ಷ ನಿರ್ವಹಣೆಗಾಗಿ ಕಾಲಕಾಲಕ್ಕೆ ಅಗತ್ಯವಾಗಬಹುದಾದಂಥ ಇತರ ಎಲ್ಲಾ ಕೆಲಸಗಳನ್ನು ಮಾಡುವುದು.