ನಮೂನೆ - 27ಬಿ (ನಿಯಮ 60ಎ(12) ನೋಡಿ)
ಒಪ್ಪಂದ ಪತ್ರ
................................................. ಇವರ ಮಗನಾದ ಮತ್ತು ............................ ನಿವಾಸಿಯಾದ ನಾನು ಈ ಮುಂದಿನ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ನನಗೆ ಸೇರಿದ ......................... ಚೀಲಗಳ ......... ಅನ್ನು ಒತ್ತೆಯಿಟ್ಟು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ..................... ಇವರಿಂದ .............. ರೂ, ಅಲ್ಪಾವಧಿ ಮುಂಗಡವನ್ನು ಪಡೆದಿದ್ದೇನೆ.
-
ಮಾರುಕಟ್ಟೆ ಸಮಿತಿಗೆ ನಾನು ಒತ್ತೆಯಿಟ್ಟಿರುವ ಉತ್ಪನ್ನವು ನನ್ನ ಸ್ವಂತದ್ದಾಗಿದ್ದು, ಮಾರುಕಟ್ಟೆ ಸಮಿತಿಯ ವಶದಲ್ಲಿರಲು ನನ್ನಿಂದ ಯಾವುದೇ ಅಡ್ಡಿಯಿಲ್ಲ.
-
ಒತ್ತೆಯಿಟ್ಟು ದಾಸ್ತಾನನ್ನು ತೊಂಬತ್ತು ದಿನಗಳೊಳಗಾಗಿ ನಾನು ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತೇನೆ ಮತ್ತು ಮಾರುಕಟ್ಟೆ ಸಮಿತಿಯ ಮಳಿಗೆಗಳಿಂದ ಖರೀದಿದಾರನು ದಾಸ್ತಾನನ್ನು ಎತ್ತುವುದಕ್ಕೆ ಮುಂಚೆ ಮಾರಾಟದಿಂದ ಬಂದ ಹಣದಿಂದ ಮುಂಗಡವನ್ನು ಬಡ್ಡಿ ಸಹಿತವಾಗಿ ತೀರಿಸುತ್ತೇನೆ.
-
ನಾನು ಮುಂಗಡ ಮೊಬಲಗನ್ನು ಬಿಡುಗಡೆ ಮಾಡಿದ ದಿನಾಂಕದ ತರುವಾಯ 31ನೇ ದಿನದಿಂದ ಮೊದಲುಗೊಂಡು ಮಳಿಗೆಯಿಂದ ಉತ್ಪನ್ನವನ್ನು ಎತ್ತುವ ದಿನದವರೆಗೆ ಮಾರುಕಟ್ಟೆ ಸಮಿತಿಯು ಮಂಜೂರು ಮಾಡಿದ ಅಲ್ಪಾವಧಿ ಮುಂಗಡದ ಮೇಲೆ ವರ್ಷಕ್ಕೆ ಶೇಕಡ ಎಂಟರಂತೆ ಬಡ್ಡಿಯನ್ನು ಸಂದಾಯ ಮಾಡುತ್ತೇನೆ.
-
ಒತ್ತೆಯಿಡಲಾದ ದಾಸ್ತಾನಿನ ಶೇಖರಣೆಯ ದಿನಾಂಕದಿಂದ ತೊಂಬತ್ತೊಂದನೆಯ ದಿನದಂದು ಉತ್ಪನ್ನವನ್ನು ಬಹಿರಂಗ ಹರಾಜಿನಲ್ಲಿ ಅಥವಾ ಟೆಂಡರಿನಲ್ಲಿ ಮಾರಾಟ ಮಾಡಿ, ಮುಂಗಡವನ್ನು ಮತ್ತು ಬಡ್ಡಿ ಹಾಗೂ ಇತರ ಯಾವುವೇ ವೆಚ್ಚಗಳಿದ್ದರೆ ಅವುಗಳನ್ನು ಸಹ ಮಾರಾಟದಿಂದ ಬಂದ ಹಣದಲ್ಲಿ ಕಳೆದು ಉಳಿದ ಹಣವನ್ನು ನನಗೆ ಸಂದಾಯ ಮಾಡಲು ಮಾರುಕಟ್ಟೆ ಸಮಿತಿಯು ಹಕ್ಕನ್ನು ಹೊಂದಿರುತ್ತದೆ. ನನ್ನಿಂದ ಬಾಕಿಯಿರುವ ಸಾಲ ಮತ್ತು ಅದರ ಮೇಲಿನ ಬಡ್ಡಿ ಹಾಗೂ ಇತರೆ ಬಾಕಿಗಳನ್ನು ಮಾರಾಟದಿಂದ ಬಂದ ಹಣದಿಂದ ಸಂಪೂರ್ಣವಾಗಿ ತೀರಿಸಲು ಸಾಧ್ಯವಾಗದಿದ್ದರೆ ಹಾಗೆ ಬಾಕಿ ಉಳಿದ ಹಣವನ್ನು ಬಡ್ಡಿ ಸಹಿತವಾಗಿ ಸಂದಾಯ ಮಾಡುವುದಾಗಿ ವಾಗ್ದಾನ ಮಾಡುತ್ತೇನೆ.
-
ಮೇಲ್ಕಂಡ ಅಲ್ಪಾವಧಿ ಮುಂಗಡ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರುಸಂದಾಯ ಮಾಡಿದ ತರುವಾಯ ಉಳಿದ ದಾಸ್ತಾನನ್ನು ಅಥವಾ ಮಾರಾಟದ ಹಣವನ್ನು ಮಾರುಕಟ್ಟೆ ಸಮಿತಿಯು ನನಗೆ ಒಪ್ಪಿಸಬೇಕು.
-
ಒತ್ತೆಯಿಡಲಾದ ಕೃಷಿ ಉತ್ಪನ್ನವು ಮಾರುಕಟ್ಟೆ ಸಮಿತಿಯ ಅಭಿರಕ್ಷೆಯಲ್ಲಿರುವಾಗ ಅದರ ತೂಕದಲ್ಲಿ, ಪರಿಮಾಣದಲ್ಲಿ, ಸ್ಥಿತಿಯಲ್ಲಿ ಉಂಟಾಗಬಹುದಾದ ಯಾವುದೇ ವ್ಯತ್ಯಾಸದ ಬಗ್ಗೆ ಮಾರುಕಟ್ಟೆ ಸಮಿತಿಯು ಹೊಣೆಗಾರವಲ್ಲವೆಂದು ನಾನು ಒಪ್ಪಿಕೊಳ್ಳುತ್ತೇನೆ.
-
ಮೇಲ್ಕಂಡ ವ್ಯವಹಾರ ನಡೆಯುವ ಅವಧಿಯಲ್ಲಿ ನಾನು ಮೃತನಾದರೆ, ಮಾರಾಟದ ಹಣದಿಂದ ಅಲ್ಪಾವಧಿ ಮುಂಗಡದ ಎಲ್ಲಾ ಬಾಕಿಯನ್ನು ವಸೂಲು ಮಾಡಿಕೊಂಡು ಉಳಿಯುವ ಹಣವನ್ನು ಸಮಿತಿಯು ನನ್ನ ಉತ್ತರಾಧಿಕಾರಿಗೆ ಕೊಡಬೇಕು ಅಥವಾ
ಸ್ಥಳ:
ದಿನಾಂಕ :
ಸಾಕ್ಷಿದಾರರು:
ಮಾರಾಟದ ಹಣವನ್ನು ಹೊಂದಾಣಿಕೆ ಮಾಡಿದ ನಂತರವೂ ನಾನು ಸಂದಾಯ ಮಾಡಬೇಕಾದ ಬಾಕಿಯೇನಾದರೂ ಉಳಿದರೆ ಆ ಬಾಕಿಯನ್ನು ನನ್ನ ಉತ್ತರಾಧಿಕಾರಿಯಿಂದ ವಸೂಲು ಮಾಡಿಕೊಳ್ಳಬಹುದು.
- ಈ ಒಪ್ಪಂದ ಪತ್ರಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದಲ್ಲಿ ನಾನು : ನಾವು ಕೃಷಿ ಮಾರುಕಟ್ಟೆ ನಿರ್ದೇಶಕನ ಅಥವಾ ಸದರಿ ಉದ್ದೇಶಕ್ಕಾಗಿ ಅವನು ಅಧಿಕೃತಗೊಳಿಸಿದ ಅಧಿಕಾರಿಯ ತೀರ್ಮಾನಕ್ಕೆ ಬದ್ಧನಾಗಿದ್ದೇನೆ:ರಾಗಿದ್ದೇವೆ, ಮತ್ತು ಸದರಿ ತೀರ್ಮಾನದ ಮೇಲೆ ಯಾವುದೇ ಸಿವಿಲ್ ದಾವೆ ಹೂಡುವುದಿಲ್ಲವೆಂದು ವಾಗ್ದಾನ ಮಾಡುತ್ತೇನೆ:ವೆ
ಅರ್ಜಿದಾರನ ಸಹಿ
- ಹೆಸರು ..................
ವಿಳಾಸ .................
- ಹೆಸರು ................. ವಿಳಾಸ.................