ಈ ನಿಯಮಗಳ ಮೇರೆಗೆ ವ್ಯಾಪಾರಿಗಳ ಚುನಾವಣಾ ಕ್ಷೇತ್ರದಲ್ಲಿ 1 ಮತನೀಡಲು ಅರ್ಹವಾಗಿರುವ ಪ್ರತಿಯೊಂದು ಫರ್ಮು ಅಥವಾ ನಿಗಮವು ಅಥವಾ ಸಹಕಾರ ಸಂಘವು ತನ್ನ ಪರವಾಗಿ ಮತನೀಡಲು ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶಿಸತಕ್ಕದ್ದು ಮತ್ತು ಹಾಗೆ ನಾಮನಿರ್ದೇಶಿಸಿದ ವ್ಯಕ್ತಿಯ ಹೆಸರನ್ನು 2 [ಡೆಪ್ಯೂಟಿ ಕಮಿಷನರನು ಈ ಸಂಬಂಧದಲ್ಲಿ ನಿಗದಿಪಡಿಸಿದ ದಿನಾಂಕದೊಳಗೆ ಸಮಿತಿಗೆ ಅಥವಾ ಡೆಪ್ಯೂಟಿ ಕಮಿಷನರನಿಗೆ ಅಥವಾ ಈ ಸಂಬಂಧದಲ್ಲಿ ಅವನಿಂದ ಅಧಿಕೃತನಾದ ಯಾವನೇ ಇತರ ಅಧಿಕಾರಿಗೆ ಲಿಖಿತದಲ್ಲಿ ತಿಳಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ ಬಿಟ್ಟುಬಿಡಲಾಗಿದೆ. 2. ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ. 1 [5. ಕೃಷಿಕರ ಚುನಾವಣಾ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವುದು.- (1) ಕೃಷಿಕರ ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಲು ಹಕ್ಕುಳ್ಳ ಮತದಾರರ ಪಟ್ಟಿಗಳನ್ನು ಡೆಪ್ಯೂಟಿ ಕಮಿಷನರನು ಅಥವಾ ಈ ಸಂಬಂಧದಲ್ಲಿ ಅವರಿಂದ ಅಧಿಕೃತನಾದ ಯಾರೇ ಅಧಿಕಾರಿಯು (ಇದರಲ್ಲಿ ಇನ್ನು ಮುಂದೆ ಅಧಿಕೃತ ಅಧಿಕಾರಿ ಎಂದು ಉಲ್ಲೇಖಿಸಲಾಗಿದೆ) ಕನ್ನಡದಲ್ಲಿ ಮತ್ತು ಅವರು ಅವಶ್ಯವೆಂದು ಭಾವಿಸುವಂಥ ಇತರ ಭಾಷೆಯಲ್ಲಿ ಅಥವಾ ಭಾಷೆಗಳಲ್ಲಿ ತಯಾರಿಸುವ ವ್ಯವಸ್ಥೆ ಮಾಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3-2-1970ರ ಮೂಲಕ ನಿಯಮ 5, 5ಎ ಮತ್ತು 5ಬಿ ಯನ್ನು ಪ್ರತಿಯೋಜಿಸಲಾಗಿದೆ. (2) ಪಟ್ಟಿಗಳನ್ನು ಅನುಕೂಲಕ್ಕೆ ತಕ್ಕಂತೆ ವಿಭಜಿಸತಕ್ಕದ್ದು, ಪ್ರತಿಯೊಂದು ಭಾಗವು, ಒಂದು ಗ್ರಾಮದಲ್ಲಿರುವ ಅಥವಾ ಹೊಂದಿಕೊಂಡಿರುವ ಗ್ರಾಮಗಳ ಸಮೂಹದಲ್ಲಿದ್ದು ಮತದಾರರನ್ನು ಒಳಗೊಂಡಿರತಕ್ಕದ್ದು ಮತ್ತು ಆ ಭಾಗಗಳಿಗೆ ಕ್ರಮಸಂಖ್ಯೆ ಕೊಡತಕ್ಕದ್ದು ಮತ್ತು ಯಾವುದೇ ಭಾಗದಲ್ಲಿ ಸೇರಿಸಲಾದ ಹೆಸರುಗಳ ಸಂಖ್ಯೆಯು ಸಾಮಾನ್ಯವಾಗಿ ಎಂಟುನೂರನ್ನು ಮೀರತಕ್ಕದ್ದಲ್ಲ.
(3) ಮತದಾರರ ಪಟ್ಟಿಗಳ ಪ್ರತಿಯೊಂದು ಭಾಗದಲ್ಲಿರುವ ಮತದಾರರ ಹೆಸರುಗಳು, ಪ್ರತಿಯೊಬ್ಬ ಕೃಷಿಕನು ಆ ಗ್ರಾಮದಲ್ಲಿ ಸಾಗುವಳಿ ಮಾಡುವ ಭೂಮಿಯ ಮೋಜಣಿ ಸಂಖ್ಯೆಗನುಸಾರ ಅಥವಾ ಮೋಜಣಿ ಸಂಖ್ಯೆಯ ಉಪವಿಭಾಗಕ್ಕನುಸಾರ ಇರತಕ್ಕದ್ದು ಮತ್ತು ಯಾರೇ ಕೃಷಿಕನು ಒಂದಕ್ಕಿಂತ ಹೆಚ್ಚು ಮೋಜಣಿ ಸಂಖ್ಯೆಗಳಲ್ಲಿ ಅಥವಾ ಮೋಜಣಿ ಸಂಖ್ಯೆಯ ಒಂದಕ್ಕಿಂತ ಹೆಚ್ಚು ಉಪವಿಭಾಗಗಳಲ್ಲಿ ಸಾಗುವಳಿ ಮಾಡುತ್ತಿರುವಲ್ಲಿ ಅವನ ಹೆಸರನ್ನು ಅಂಥ ಎಲ್ಲ ಭೂಮಿಗಳ ಸಂಬಂಧದಲ್ಲಿ ಒಂದೇ ಬಾರಿಗೆ ಮಾತ್ರ ನಮೂದಿಸತಕ್ಕದ್ದು ಮತ್ತು ಪಟ್ಟಿಯ ಪ್ರತಿಯೊಂದು ಭಾಗದಲ್ಲಿರುವ ಎಲ್ಲ ಮತದಾರರ ಹೆಸರುಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಕ್ರಮಸಂಖ್ಯೆ 1 ರಿಂದ ಪ್ರಾರಂಭವಾಗುವ ಪ್ರತ್ಯೇಕ ಸರಣಿಗಳಲ್ಲಿ ಕ್ರಮಸಂಖ್ಯೆ ನೀಡತಕ್ಕದ್ದು.
(4) ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು, ಮತದಾರರ ಹೆಸರು, ಅಡ್ಡಹೆಸರು ಯಾವುದಾದರೂ ಇದ್ದರೆ, ಅದು ಅವನ ವಯಸ್ಸು ಮತ್ತು 1964ರ ಕರ್ನಾಟಕ ಭೂ ಕಂದಾಯ ಅಧಿನಿಯಮದ (1964ರ ಕರ್ನಾಟಕ ಅಧಿನಿಯಮ 12) ಮೇರೆಗೆ ನಮೂನೆ 16ರಲ್ಲಿ ಇಡಲಾದ ಹಕ್ಕು ದಾಖಲೆಯಲ್ಲಿನ ನಮೂದುಗಳ ಆಧಾರದ ಮೇಲೆ ಅಥವಾ ಕೃಷಿ ಭೂಮಿಗಳನ್ನು ಸಾಗುವಳಿ ಮಾಡುತ್ತಿರುವ ವ್ಯಕ್ತಿಗಳ ವಿವರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿರ್ವಹಿಸುವ ಅಥವಾ ಅದರ ಪರವಾಗಿ ನಿರ್ವಹಿಸಲಾಗುವ ಯಾವುದೇ ಇತರ ದಾಖಲೆಯ ಆಧಾರದ ಮೇಲೆ ಗ್ರಾಮದಲ್ಲಿ ಕೃಷಿಕನು ಸಾಗುವಳಿ ಮಾಡುವ ಭೂಮಿಯ ಮೋಜಣಿ ಸಂಖ್ಯೆ ಅಥವಾ ಮೋಜಣಿ ಸಂಖ್ಯೆಯ ಉಪವಿಭಾಗದ ಸಂಖ್ಯೆ - ಇವುಗಳನ್ನೊಳಗೊಂಡ ಮತದಾರರ ಪ್ರಾರಂಭಿಕ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು:
ಪರಂತು, ಯಾವುದೇ ಗ್ರಾಮಕ್ಕೆ ಸಂಬಂಧಪಟ್ಟಂತೆ ಸುಸಂಗತ ವಿವರಗಳನ್ನೊಳಗೊಂಡ ದಾಖಲೆಯು ಲಭ್ಯವಿಲ್ಲದಿರುವಲ್ಲಿ, ಕೃಷಿ ಭೂಮಿಗಳನ್ನು ಅಧಿಭೋಗದಾರರಾಗಿ ಅಥವಾ ಅಧಿಭೋಗದಾರರ ಗೇಣಿದಾರರಾಗಿ ಸಾಗುವಳಿ ಮಾಡುತ್ತಿರುವ ವ್ಯಕ್ತಿಗಳ ಹೆಸರುಗಳನ್ನು ಮತ್ತು ವಯಸ್ಸನ್ನು ಖಚಿತಪಡಿಸಿಕೊಂಡ ತರುವಾಯ ಪ್ರಾರಂಭಿಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.
(5) ಮತದಾರರ ಪ್ರಾರಂಭಿಕ ಪಟ್ಟಿಯು ಸಿದ್ಧವಾದ ಕೂಡಲೇ ಡೆಪ್ಯೂಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಅದನ್ನು ಪ್ರಕಟಿಸತಕ್ಕದ್ದು ಮತ್ತು ಅದರ ಪ್ರತಿಯನ್ನು ಪರಿಶೀಲನೆಗಾಗಿ ದೊರೆಯುವಂತೆ ಏರ್ಪಾಟುಮಾಡಿ ಆ ಸಂಬಂಧದಲ್ಲಿ ನಮೂನೆ 1ರಲ್ಲಿರುವ ನೋಟೀಸನ್ನು,
(i) ತನ್ನ ಕಚೇರಿಯಲ್ಲಿ, ಮತ್ತು
(ii) ಈ ಉದ್ದೇಶಕ್ಕಾಗಿ ತಾನು ನಿರ್ದಿಷ್ಟಪಡಿಸಬಹುದಾದ ಮಾರುಕಟ್ಟೆ ಪ್ರದೇಶದಲ್ಲಿರುವಂಥ ಇತರ ಸ್ಥಳಗಳಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡತಕ್ಕದ್ದು.
ಅಲ್ಲದೆ ಅವನು,
(ಎ) ನಮೂನೆ 1ರಲ್ಲಿರುವ ನೋಟೀಸಿನ ಪ್ರತಿಯೊಂದಿಗೆ ಪಟ್ಟಿಯ ಪ್ರತಿಯೊಂದು ಪ್ರತ್ಯೇಕ ಭಾಗದ ಪ್ರತಿಯು ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ನಿರ್ದಿಷ್ಟಪಡಿಸಲಾದ ಸ್ಥಳದಲ್ಲಿ ಮತ್ತು ಆ ಭಾಗಕ್ಕೆ ಸಂಬಂಧಪಟ್ಟಂಥ ಪ್ರದೇಶದಲ್ಲಿ ಅಥವಾ ಅದರ ಸಮೀಪದಲ್ಲಿ ಪರಿಶೀಲನೆಗೆ ದೊರೆಯುವಂತೆ ಮಾಡತಕ್ಕದ್ದು.
(ಬಿ) ನಮೂನೆ 1ರಲ್ಲಿರುವ ನೋಟೀಸಿನ ಬಗ್ಗೆ ತಾನು ಅವಶ್ಯವೆಂದು ಪರಿಗಣಿಸಬಹುದಾದಂಥ ಹೆಚ್ಚಿನ ಪ್ರಚಾರವನ್ನು ನೀಡತಕ್ಕದ್ದು.
(6) ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರ್ಪಡೆ ಬಗ್ಗೆ ಪ್ರತಿಯೊಂದು ಕ್ಲೇಮನ್ನು ಮತ್ತು ಅದರಲ್ಲಿನ ಯಾವುದೇ ನಮೂದಿನ ಬಗ್ಗೆ ಪ್ರತಿಯೊಂದು ಆಕ್ಷೇಪಣೆಯನ್ನು, (5)ನೇ ಉಪನಿಯಮದ ಮೇರೆಗೆ ‘‘ಮತದಾರರ ಪ್ರಾರಂಭಿಕ ಪಟ್ಟಿ'' ಪ್ರಕಟಣೆಯ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೊಳಗೆ ದಾಖಲು ಮಾಡತಕ್ಕದ್ದು:
ಪರಂತು, ಕೃಷಿ ಮಾರಾಟ ನಿರ್ದೇಶಕನು, ರಾಜ್ಯಪತ್ರದಲ್ಲಿ ಅಧಿಸೂಚಿಸುವ ಮೂಲಕ ಆ ಅವಧಿಯನ್ನು ವಿಸ್ತರಿಸಬಹುದು.
(7) (ಎ) ಪ್ರತಿಯೊಂದು ಕ್ಲೇಮು,-
(i) ನಮೂನೆ 2ರಲ್ಲಿರತಕ್ಕದ್ದು;
(ii) ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಇಷ್ಟಪಡುವಂಥ ವ್ಯಕ್ತಿಯು ಅದಕ್ಕೆ ರುಜು ಹಾಕತಕ್ಕದ್ದು; ಮತ್ತು
(iii) ಕ್ಲೇಮುದಾರನು ಮತದಾರರ ಪಟ್ಟಿಯ ಯಾವ ಭಾಗದಲ್ಲಿ ತನ್ನ ಹೆಸರನ್ನು ಸೇರಿಸಬೇಕೆಂದು ಇಷ್ಟಪಡುವನೋ ಆ ಭಾಗದಲ್ಲಿ ಈಗಾಗಲೇ ಯಾವ ವ್ಯಕ್ತಿಯ ಹೆಸರನ್ನು ಸೇರಿಸಲಾಗಿದೆಯೋ ಆ ಯಾರೇ ಇತರ ವ್ಯಕ್ತಿಯು ಕ್ಲೇಮಿಗೆ ಮೇಲುರುಜು ಹಾಕತಕ್ಕದ್ದು.
(ಬಿ) ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದಕ್ಕೆ ಸಂಬಂಧಪಟ್ಟಂತೆ,-
(i) ಪ್ರತಿಯೊಂದು ಆಕ್ಷೇಪಣೆಯು ನಮೂನೆ 3ರಲ್ಲಿ ಇರತಕ್ಕದ್ದು;
(ii) ಅಂಥ ಆಕ್ಷೇಪಣೆಯನ್ನು ಈಗಾಗಲೇ ಮತದಾರರ ಪಟ್ಟಿಯಲ್ಲಿ ಯಾವ ವ್ಯಕ್ತಿಯ ಹೆಸರನ್ನು ಸೇರಿಸಲಾಗಿದೆಯೋ ಆ ವ್ಯಕ್ತಿಯು ಮಾತ್ರ ಸಲ್ಲಿಸತಕ್ಕದ್ದು; ಮತ್ತು
(iii) ಆಕ್ಷೇಪಿಸಲಾದ ಹೆಸರು ಮತದಾರರ ಪಟ್ಟಿಯ ಯಾವ ಭಾಗದಲ್ಲಿ ಕಂಡು ಬರುವುದೋ ಆ ಭಾಗದಲ್ಲಿ ಈಗಾಗಲೇ ಯಾವ ವ್ಯಕ್ತಿಯ ಹೆಸರನ್ನು ಸೇರಿಸಲಾಗಿರುವುದೋ ಆ ಯಾರೇ ಇತರ ವ್ಯಕ್ತಿಯು ಆ ಆಕ್ಷೇಪಣೆಗೆ ಮೇಲುರುಜು ಹಾಕತಕ್ಕದ್ದು.
(ಸಿ) ಮತದಾರರ ಪಟ್ಟಿಯಲ್ಲಿರುವ ನಮೂದಿನ ಯಾವುದೇ ವಿವರ ಅಥವಾ ವಿವರಗಳಿಗೆ ಸಂಬಂಧಪಟ್ಟಂತೆ,-
(i) ಪ್ರತಿಯೊಂದು ಆಕ್ಷೇಪಣೆಯು ನಮೂನೆ 4ರಲ್ಲಿ ಇರತಕ್ಕದ್ದು; ಮತ್ತು
(ii) ಅಂಥ ಪ್ರತಿಯೊಂದು ಆಕ್ಷೇಪಣೆಯನ್ನು ಆ ನಮೂದು ಸಂಬಂಧಪಡುವ ವ್ಯಕ್ತಿಯು ಮಾತ್ರ ಸಲ್ಲಿಸತಕ್ಕದ್ದು.
(8) ಪ್ರತಿಯೊಂದು ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು,-
(i) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ಸಲ್ಲಿಸತಕ್ಕದ್ದು; ಅಥವಾ
(ii) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.
(9) ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು,-
(ಎ) ನಮೂನೆ 5ರಲ್ಲಿ ದ್ವಿಪ್ರತಿಯಲ್ಲಿ ಕ್ಲೇಮುಗಳ ಪಟ್ಟಿಯನ್ನು, ನಮೂನೆ 6ರಲ್ಲಿ ಹೆಸರುಗಳ ಸೇರ್ಪಡೆಯ ಬಗೆಗಿನ ಆಕ್ಷೇಪಣೆಗಳ ಪಟ್ಟಿಯನ್ನು ಮತ್ತು ನಮೂನೆ 7ರಲ್ಲಿ ವಿವರಗಳ ಬಗೆಗಿನ ಆಕ್ಷೇಪಣೆಗಳ ಪಟ್ಟಿಯನ್ನು ಇಡತಕ್ಕದ್ದು, ಮತ್ತು
(ಬಿ) ತನ್ನ ಕಚೇರಿಯಲ್ಲಿರುವ ಸೂಚನಾ ಫಲಕದ ಮೇಲೆ ಅಂಥ ಪ್ರತಿಯೊಂದು ಪಟ್ಟಿಗಳ ಪ್ರತಿಯನ್ನು ಪ್ರದರ್ಶಿಸತಕ್ಕದ್ದು.
(10) ನಿರ್ದಿಷ್ಟಪಡಿಸಿರುವ ಅವಧಿಯೊಳಗೆ ಅಥವಾ ನಮೂನೆಯಲ್ಲಿ ಮತ್ತು ರೀತಿಯಲ್ಲಿ ಸಲ್ಲಿಸದಿರುವ ಯಾವುದೇ ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ತಿರಸ್ಕರಿಸತಕ್ಕದ್ದು.
(11) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ, ಯಾವುದೇ ಕ್ಲೇಮಿನ ಅಥವಾ ಆಕ್ಷೇಪಣೆಯ ಸಿಂಧುತ್ವದ ಬಗ್ಗೆ ಮನದಟ್ಟಾದರೆ (9)ನೇ ಉಪನಿಯಮದ (ಬಿ) ಖಂಡದ ಮೇರೆಗೆ ತಾನು ಪ್ರದರ್ಶಿಸಿದ ಪಟ್ಟಿಗಳಲ್ಲಿ ಆ ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ನಮೂದಿಸಲಾದ ದಿನಾಂಕದಿಂದ ಒಂದು ವಾರದ ಅವಧಿಯು ಮುಕ್ತಾಯವಾದ ತರುವಾಯ ಆ ಸಂಬಂಧದಲ್ಲಿ ಹೆಚ್ಚಿನ ವಿಚಾರಣೆಯಿಲ್ಲದೆಯೇ ಅದನ್ನು ಅಂಗೀಕರಿಸಬಹುದು:
ಪರಂತು, ಅಂಥ ಯಾವುದೇ ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ಅಂಗೀಕರಿಸುವ ಮೊದಲು, ಯಾರೇ ವ್ಯಕ್ತಿಯು ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ಆ ಸಂಬಂಧದಲ್ಲಿ ವಿಚಾರಣೆ ಮಾಡುವಂತೆ ಲಿಖಿತದಲ್ಲಿ ಕೋರಿಕೆ ಸಲ್ಲಿಸಿದರೆ ಆ ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ಹೆಚ್ಚಿನ ವಿಚಾರಣೆಯಿಲ್ಲದೆ ಅಂಗೀಕರಿಸತಕ್ಕದ್ದಲ್ಲ.
(12) (10)ನೇ ಉಪನಿಯಮ ಅಥವಾ (11)ನೇ ಉಪನಿಯಮದ ಮೇರೆಗೆ ಯಾವುದೇ ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ಇತ್ಯರ್ಥ ಮಾಡದಿರುವಲ್ಲಿ, ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಪ್ರಾಧಿಕಾರಿಯು,-
(ಎ) (9)ನೇ ಉಪನಿಯಮದ (ಬಿ) ಖಂಡದ ಮೇರೆಗೆ ತಾನು ಪ್ರದರ್ಶಿಸಿದ ಪಟ್ಟಿಗಳಲ್ಲಿ ಕ್ಲೇಮಿನ ಅಥವಾ ಆಕ್ಷೇಪಣೆಯ ಬಗೆಗಿನ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸತಕ್ಕದ್ದು; ಮತ್ತು
(ಬಿ) ವಿಚಾರಣೆಯ ನೋಟೀಸನ್ನು,-
(i) ಕ್ಲೇಮಿನ ಸಂಬಂಧದಲ್ಲಿ ಕ್ಲೇಮುದಾರನಿಗೆ ನಮೂನೆ 8ರಲ್ಲಿ;
(ii) ಒಂದು ಹೆಸರಿನ ಸೇರ್ಪಡೆಯ ಬಗೆಗಿನ ಆಕ್ಷೇಪಣೆಯ ಸಂಬಂಧದಲ್ಲಿ ಅರ್ಜಿದಾರನಿಗೆ ನಮೂನೆ 9ರಲ್ಲಿ ಮತ್ತು ಆಕ್ಷೇಪಣೆಗೆ ಗುರಿಯಾದ ವ್ಯಕ್ತಿಗೆ ನಮೂನೆ 10ರಲ್ಲಿ; ಮತ್ತು
(iii) ನಮೂದಿನಲ್ಲಿರುವ ವಿವರದ ಅಥವಾ ವಿವರಗಳ ಬಗೆಗಿನ ಆಕ್ಷೇಪಣೆಯ ಸಂಬಂಧದಲ್ಲಿ ಆಕ್ಷೇಪಣೆದಾರನಿಗೆ ನಮೂನೆ 11ರಲ್ಲಿ -ನೀಡತಕ್ಕದ್ದು, ಈ ಉಪನಿಯಮದ ಮೇರೆಗಿನ ನೋಟೀಸನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಅಥವಾ ವ್ಯಕ್ತಿಯ ನಿವಾಸದಲ್ಲಿ ಅಥವಾ ಮಾರುಕಟ್ಟೆ ಪ್ರದೇಶದಲ್ಲಿ ಅವನು ಕಡೆಯದಾಗಿ ವಾಸಿಸಿದ್ದನೆಂದು ತಿಳಿದುಬಂದ ನಿವಾಸದಲ್ಲಿ ಅದನ್ನು ಅಂಟಿಸುವ ಮೂಲಕ ಜಾರಿಗೊಳಿಸಬಹುದು.
(13) (ಎ) ಡೆಪ್ಯುಟಿ ಕಮಿಷನರನು ಅಥವಾ ಪ್ರಾಧಿಕೃತ ಅಧಿಕಾರಿಯು ಯಾವ ಕ್ಲೇಮಿನ ಅಥವಾ ಆಕ್ಷೇಪಣೆಯ ಸಂಬಂಧದಲ್ಲಿ (12)ನೇ ಉಪನಿಯಮದ ಮೇರೆಗೆ ನೋಟೀಸನ್ನು ನೀಡಲಾಗಿದೆಯೋ ಅಂಥ ಪ್ರತಿಯೊಂದು ಕ್ಲೇಮನ್ನು ಅಥವಾ ಆಕ್ಷೇಪಣೆಯನ್ನು ಕುರಿತು ಕ್ಷಿಪ್ರ ವಿಚಾರಣೆ ನಡೆಸತಕ್ಕದ್ದು ಮತ್ತು ಆ ಕುರಿತು ತನ್ನ ನಿರ್ಣಯವನ್ನು ದಾಖಲು ಮಾಡತಕ್ಕದ್ದು.
(ಬಿ) ಕ್ಲೇಮುದಾರನು ಅಥವಾ ಸಂದರ್ಭಾನುಸಾರ, ಆಕ್ಷೇಪಣೆ ಎತ್ತಿದ ಮತ್ತು ಆಕ್ಷೇಪಣೆಗೆ ಗುರಿಯಾದ ವ್ಯಕ್ತಿಗಳು ಮತ್ತು ಡೆಪ್ಯುಟಿ ಕಮಿಷನರನ ಅಥವಾ ಅಧಿಕೃತ ಅಧಿಕಾರಿಯ ಅಭಿಪ್ರಾಯದಲ್ಲಿ ಅವನಿಗೆ ಸಹಾಯ ಮಾಡಬಹುದಾದಂಥ ಯಾವನೇ ಇತರ ವ್ಯಕ್ತಿಯು ವಿಚಾರಣೆಯಲ್ಲಿ ಹಾಜರಾಗಲು ಮತ್ತು ತಮ್ಮ ಅಹವಾಲನ್ನು ಹೇಳಿಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.
(ಸಿ) ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ತನ್ನ ವಿವೇಚನಾನುಸಾರ, ಯಾರೇ ಕ್ಲೇಮುದಾರನನ್ನು, ಆಕ್ಷೇಪಣೆ ಎತ್ತಿದ ವ್ಯಕ್ತಿಯನ್ನು ಅಥವಾ ಆಕ್ಷೇಪಣೆಗೆ ಗುರಿಯಾದ ವ್ಯಕ್ತಿಯನ್ನು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಅಗತ್ಯಪಡಿಸಬಹುದು.
(14) ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವಾಗ ಅಜಾಗರೂಕತೆಯಿಂದ ಅಥವಾ ತಪ್ಪಿನಿಂದ ಆ ಮತದಾರರ ಪಟ್ಟಿಗಳಲ್ಲಿ ಯಾರೇ ಮತದಾರನ ಹೆಸರು ಬಿಟ್ಟುಹೋಗಿರುವುದೆಂದು ಮತ್ತು ಆ ಬಗ್ಗೆ ಈ ಉಪನಿಯಮದ ಮೇರೆಗೆ ಸರಿಪಡಿಸುವ ಕ್ರಮ ಕೈಗೊಳ್ಳಬೇಕೆಂದು ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ಕಂಡುಬಂದರೆ ಆ ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು,-
(ಎ) ಅಂಥ ಮತದಾರರ ಹೆಸರುಗಳ ಮತ್ತು ಇತರ ವಿವರಗಳ ಪಟ್ಟಿಯೊಂದನ್ನು ಸಿದ್ಧಪಡಿಸತಕ್ಕದ್ದು;
(ಬಿ) ತನ್ನ ಕಛೇರಿಯ ಸೂಚನಾ ಫಲಕದ ಮೇಲೆ ಅಂಥ ಪಟ್ಟಿಯ ಒಂದು ಪ್ರತಿಯನ್ನು ಆ ಪಟ್ಟಿಯಲ್ಲಿ ಆ ಹೆಸರುಗಳ ಸೇರ್ಪಡೆಯ ವಿಷಯವನ್ನು ಪರಿಶೀಲಿಸುವ ಸಮಯ ಮತ್ತು ಸ್ಥಳವನ್ನು ಕುರಿತ ನೋಟೀಸನ್ನು ಪ್ರದರ್ಶಿಸತಕ್ಕದ್ದು ಮತ್ತು ತಾನು ಯುಕ್ತವೆಂದು ಯೋಚಿಸಬಹುದಾದಂಥ ಇತರ ರೀತಿಯಲ್ಲಿ ಆ ಪಟ್ಟಿಯನ್ನು ಮತ್ತು ನೋಟೀಸನ್ನು ಪ್ರಕಟಿಸತಕ್ಕದ್ದು; ಮತ್ತು
(ಸಿ) ಸಲ್ಲಿಸಬಹುದಾದ ಯಾವುದೇ ಮೌಖಿಕ ಅಥವಾ ಲಿಖಿತ ಆಕ್ಷೇಪಣೆಗಳನ್ನು ಪರಿಶೀಲಿಸಿದ ತರುವಾಯ, ಮತದಾರರ ಪಟ್ಟಿಯಲ್ಲಿ ಆ ಎಲ್ಲ ಅಥವಾ ಆ ಪೈಕಿ ಯಾವುದೇ ಹೆಸರನ್ನು ಸೇರಿಸುವ ಬಗ್ಗೆ ತೀರ್ಮಾನಿಸತಕ್ಕದ್ದು.
(15) (ಎ) ಆ ತರುವಾಯ, ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು,-
(i) (11) (13) ಮತ್ತು (14)ನೇ ಉಪನಿಯಮಗಳ ಮೇರೆಗೆ ತನ್ನ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಆ ತರುವಾಯ ಕಂಡುಬಂದ ಯಾವುದೇ ಲಿಪಿಕ ಅಥವಾ ಮುದ್ರಣ ದೋಷಗಳನ್ನು ಅಥವಾ ಇತರ ನ್ಯೂನತೆಗಳನ್ನು ಸರಿಪಡಿಸಿ ತಿದ್ದುಪಡಿಗಳ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು; ಮತ್ತು
(ii) ತಿದ್ದುಪಡಿಗಳೂ ಸೇರಿದ ಮತದಾರರ ಪಟ್ಟಿಗಳ ಒಂದು ಪೂರ್ಣ ಪ್ರತಿಯು ಪರಿಶೀಲನೆಗೆ ದೊರೆಯುವಂತೆ ಮಾಡುವ ಮೂಲಕ ಮತ್ತು ಆ ಬಗ್ಗೆ ನಮೂನೆ 12ರಲ್ಲಿ ಒಂದು ನೋಟೀಸನ್ನು ತನ್ನ ಕಛೇರಿಯಲ್ಲಿ ಪ್ರದರ್ಶಿಸುವ ಮೂಲಕ ಆ ಮತದಾರರ ಪಟ್ಟಿಗಳನ್ನು ಪ್ರಕಟಿಸತಕ್ಕದ್ದು.
(ಬಿ) ಅಂಥ ಪ್ರಕಟಣೆಯ ತರುವಾಯ ತಿದ್ದುಪಡಿಗಳ ಪಟ್ಟಿಯೂ ಸೇರಿದ ಆ ಮತದಾರರ ಪಟ್ಟಿಗಳು ಕೃಷಿಕರ ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಗಳಾಗಿರತಕ್ಕದ್ದು.
(16) (ಎ) ಉಪನಿಯಮ (13) ಅಥವಾ ಉಪನಿಯಮ (14)ರ ಮೇರೆಗೆ ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಕೈಗೊಂಡ ಯಾವುದೇ ತೀರ್ಮಾನದ ಮೇಲೆ 1 [ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದು:
- 2004ರ ಅಧಿಸೂಚನೆ ಸಂಖ್ಯೆ ಸಂ.ಸಿಡಿ 248 ಎಂಆರ್ಇ 2003, ಬೆಂಗಳೂರು, ದಿನಾಂಕ 3ನೇ ಫೆಬ್ರವರಿ, 2004ರ ಮೂಲಕ ಪ್ರತಿಯೋಜಿಸಲಾಗಿದೆ. ಪರಂತು, ಅಪೀಲು ಸಲ್ಲಿಸಲು ಇಚ್ಫೆಪಡುವ ವ್ಯಕ್ತಿಯು, ಅಪೀಲಿನಲ್ಲಿ ಒಳಗೊಂಡಿರುವ ವಿಷಯದ ಬಗ್ಗೆ ಡೆಪ್ಯುಟಿ ಕಮಿಷನರನ ಅಥವಾ ಅಧಿಕೃತ ಅಧಿಕಾರಿಯ ಮುಂದೆ ತನ್ನ ಅಹವಾಲು ಹೇಳಿಕೊಳ್ಳುವ ಅಥವಾ ಅವನಿಗೆ ಮನವಿ ಮಾಡಿಕೊಳ್ಳುವ ತನ್ನ ಹಕ್ಕನ್ನು ಉಪಯೋಗಿಸಿಕೊಳ್ಳದಿದ್ದಲ್ಲಿ ಅವನಿಗೆ ಅಪೀಲು ಸಲ್ಲಿಸಲು ಅವಕಾಶವಿರತಕ್ಕದ್ದಲ್ಲ.
(ಬಿ) (ಎ) ಖಂಡದ ಮೇರೆಗೆ ಸಲ್ಲಿಸುವ ಪ್ರತಿಯೊಂದು ಅಪೀಲು,-
(i) ಅರ್ಜಿದಾರನು ಸಹಿಮಾಡಿದ ಕೋರಿಕೆ ಪತ್ರದ ರೂಪದಲ್ಲಿರತಕ್ಕದ್ದು; ಮತ್ತು
(ii) ತೀರ್ಮಾನವನ್ನು ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿವಸಗಳೊಳಗೆ ಅದನ್ನು ಅಪೀಲು ಅಧಿಕಾರಿಗೆ ಸಲ್ಲಿಸತಕ್ಕದ್ದು ಅಥವಾ ಆ ಅಧಿಕಾರಿಗೆ ಆ ಅವಧಿಯೊಳಗೆ ತಲುಪುವಂತೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.
(ಸಿ) ಈ ಉಪನಿಯಮದ ಮೇರೆಗೆ ಅಪೀಲನ್ನು ಸಲ್ಲಿಸುವುದರಿಂದ (15)ನೇ ಉಪನಿಯಮದ ಮೇರೆಗೆ ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಕೈಗೊಳ್ಳಬೇಕಾದ ಯಾವುದೇ ಕಾರ್ಯವನ್ನು ತಡೆಯುವ ಅಥವಾ ಮುಂದೂಡುವ ಪರಿಣಾಮ ಉಂಟಾಗತಕ್ಕದ್ದಲ್ಲ.
(ಡಿ) ಅಪೀಲು ಅಧಿಕಾರಿಯು ಕೈಗೊಂಡ ಪ್ರತಿಯೊಂದು ತೀರ್ಮಾನವು ಅಂತಿಮವಾಗಿರತಕ್ಕದ್ದು, ಆದರೆ, ಅದು ಡೆಪ್ಯುಟಿ ಕಮಿಷನರನ ಅಥವಾ ಅಧಿಕೃತ ಅಧಿಕಾರಿಯ ತೀರ್ಮಾನವನ್ನು ವ್ಯತಿರಿಕ್ತಗೊಳಿಸುವಷ್ಟರ ಮಟ್ಟಿಗೆ ಅಥವಾ ಮಾರ್ಪಾಟುಗೊಳಿಸುವಷ್ಟರ ಮಟ್ಟಿಗೆ, ಅಪೀಲಿನಲ್ಲಿನ ತೀರ್ಮಾನದ ದಿನಾಂಕದಿಂದ ಮಾತ್ರವೇ ಪರಿಣಾಮಕಾರಿಯಾಗತಕ್ಕದ್ದು.
(ಇ) ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಈ ಉಪನಿಯಮದ ಮೇರೆಗೆ ಅಪೀಲು ಅಧಿಕಾರಿಯು ಕೈಗೊಂಡ ತೀರ್ಮಾನಗಳನ್ನು ಕಾರ್ಯಗತಗೊಳಿಸಲು ಮತದಾರರ ಪಟ್ಟಿಗಳಲ್ಲಿ ಯಾವ ತಿದ್ದುಪಡಿಗಳನ್ನು ಮಾಡುವುದು ಅವಶ್ಯವಿರುವುದೋ ಆ ತಿದ್ದುಪಡಿಗಳನ್ನು ಮಾಡುವ ವ್ಯವಸ್ಥೆ ಮಾಡತಕ್ಕದ್ದು.
(17) (ಎ) ಮತದಾರರ ಪಟ್ಟಿಗಳನ್ನು ಕೃಷಿ ಮಾರಾಟ ನಿರ್ದೇಶಕನು ನಿರ್ದೇಶಿಸಬಹುದಾದಂತೆ ಯಾವುದೇ ಕಾಲದಲ್ಲಿ ವಿವರವಾಗಿ ಅಥವಾ ಸಂಕ್ಷಿಪ್ತವಾಗಿ ಅಥವಾ ಭಾಗಶಃ ವಿವರವಾಗಿ ಅಥವಾ ಭಾಗಶಃ ಸಂಕ್ಷಿಪ್ತವಾಗಿ ಪರಿಷ್ಕರಿಸತಕ್ಕದ್ದು.
(ಬಿ) ಮತದಾರರ ಪಟ್ಟಿಗಳನ್ನು ಅಥವಾ ಅವುಗಳ ಯಾವುದೇ ಭಾಗವನ್ನು ಯಾವುದೇ ಕಾಲದಲ್ಲಿ ವಿವರವಾಗಿ ಪರಿಷ್ಕರಿಸಬೇಕಾದಲ್ಲಿ ಅದನ್ನು ಹೊಸದಾಗಿ ಸಿದ್ಧಪಡಿಸತಕ್ಕದ್ದು ಮತ್ತು ಈ ಹಿಂದಿನ ಉಪನಿಯಮಗಳು, ಮತದಾರರ ಪಟ್ಟಿಗಳನ್ನು ಮೊದಲು ಸಿದ್ಧಪಡಿಸುವುದಕ್ಕೆ ಸಂಬಂಧಿಸಿ ಅನ್ವಯವಾಗುವಂತೆ ಅಂಥ ಪರಿಷ್ಕರಣೆಗೆ ಕೂಡ ಅನ್ವಯವಾಗತಕ್ಕದ್ದು.
(ಸಿ) ಮತದಾರರ ಪಟ್ಟಿಗಳನ್ನು ಅಥವಾ ಅವುಗಳ ಯಾವುದೇ ಭಾಗವನ್ನು ಯಾವುದೇ ಕಾಲದಲ್ಲಿ ಸಂಕ್ಷಿಪ್ತವಾಗಿ ಪರಿಷ್ಕರಿಸಬೇಕಾದಾಗ, ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು, ಆ ಕೂಡಲೇ ಲಭ್ಯವಿರಬಹುದಾದಂಥ ಮಾಹಿತಿಯ ಆಧಾರದ ಮೇಲೆ ಮತದಾರರ ಪಟ್ಟಿಗಳಿಗೆ ಸಂಬಂಧಪಟ್ಟ ಭಾಗಗಳ ತಿದ್ದುಪಡಿಗಳ ಪಟ್ಟಿಯೊಂದನ್ನು ಸಿದ್ಧಪಡಿಸುವ ವ್ಯವಸ್ಥೆ ಮಾಡತಕ್ಕದ್ದು ಮತ್ತು ತಿದ್ದುಪಡಿಗಳ ಪಟ್ಟಿಯೊಂದಿಗೆ ಮತದಾರರ ಪಟ್ಟಿಗಳ ಕರಡನ್ನು ಪ್ರಕಟಿಸತಕ್ಕದ್ದು ಮತ್ತು (3) ರಿಂದ (16)ರವರೆಗಿನ ಉಪನಿಯಮಗಳ ಉಪಬಂಧಗಳು, ಮತದಾರರ ಪಟ್ಟಿಗಳನ್ನು ಮೊದಲು ಸಿದ್ಧಪಡಿಸುವುದಕ್ಕೆ ಸಂಬಂಧಿಸಿ ಅನ್ವಯವಾಗುವಂತೆ ಅಂಥ ಪರಿಷ್ಕರಣೆಗೆ ಕೂಡ ಅನ್ವಯವಾಗತಕ್ಕದ್ದು.
(ಡಿ) (ಬಿ) ಖಂಡದ ಮೇರೆಗೆ ಮತದಾರರ ಪರಿಷ್ಕೃತ ಪಟ್ಟಿಗಳ ಯಾವುದೇ ಕರಡಿನ ಅಥವಾ (ಸಿ) ಖಂಡದ ಮೇರೆಗೆ ಮತದಾರರ ಪಟ್ಟಿಗಳ ಮತ್ತು ತಿದ್ದುಪಡಿಗಳ ಪಟ್ಟಿಯ ಕರಡಿನ ಪ್ರಕಟಣೆ ಮತ್ತು (15)ನೇ ಉಪನಿಯಮದ ಮೇರೆಗೆ ಅವುಗಳ ಅಂತಿಮ ಪ್ರಕಟಣೆ - ಇವುಗಳ ಮಧ್ಯೆ ಯಾವುವೇ ಕಾಲದಲ್ಲಿ ಯಾವುದೇ ಹೆಸರುಗಳನ್ನು (16)ನೇ ಉಪನಿಯಮದ ಮೇರೆಗೆ ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಅಂಥ ಸೇರ್ಪಡೆಗೆ ಯಾವುದೇ ಸಿಂಧುವಾದ ಆಕ್ಷೇಪಣೆಗಳು ಇವೆಯೆಂದು ಅಭಿಪ್ರಾಯಪಡುವ ಹೊರತು, ಆ ಹೆಸರುಗಳನ್ನು ಮತದಾರರ ಪರಿಷ್ಕೃತ ಪಟ್ಟಿಗಳಲ್ಲಿ ಸೇರಿಸುವ ವ್ಯವಸ್ಥೆ ಮಾಡತಕ್ಕದ್ದು.
5ಎ. ಕೃಷಿಕರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಗಳಲ್ಲಿರುವ ನಮೂದುಗಳನ್ನು ಸರಿಪಡಿಸುವುದು ಮತ್ತು ಅಂಥ ಪಟ್ಟಿಗಳಲ್ಲಿ ಹೆಸರುಗಳನ್ನು ಸೇರಿಸುವುದು.- (1) ಡೆಪ್ಯುಟಿ ಕಮಿಷನರನು ಅಥವಾ ಈ ಸಂಬಂಧದಲ್ಲಿ ಅವನಿಂದ ಅಧಿಕೃತನಾದ ಯಾರೇ ಅಧಿಕಾರಿಯು (ಇನ್ನು ಮುಂದೆ ಈ ನಿಯಮದಲ್ಲಿ ಅಧಿಕೃತ ಅಧಿಕಾರಿ ಎಂದು ಉಲ್ಲೇಖಿಸಲಾಗಿದೆ) ಈ ಬಗ್ಗೆ ಯಾರಾದರೂ ಅರ್ಜಿ ಸಲ್ಲಿಸಿದಾಗ ಅಥವಾ ಸ್ವಪ್ರೇರಣೆಯಿಂದ, ತಾನು ಸೂಕ್ತವೆಂದು ಯೋಚಿಸುವಂಥ ವಿಚಾರಣೆ ನಡೆಸಿದ ತರುವಾಯ ಕೃಷಿಕರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದು,-
(ಎ) ಯಾವುದೇ ನಿರ್ದಿಷ್ಟ ವಿವರಕ್ಕೆ ಸಂಬಂಧಪಟ್ಟಂತೆ ತಪ್ಪಾಗಿದೆಯೆಂದು ಅಥವಾ ದೋಷಪೂರ್ಣವಾಗಿದೆಯೆಂದು; ಅಥವಾ
(ಬಿ) ಸಂಬಂಧಪಟ್ಟ ವ್ಯಕ್ತಿಯು ಮೃತನಾಗಿದ್ದಾನೆ ಅಥವಾ ಚುನಾವಣಾ ಕ್ಷೇತ್ರದಲ್ಲಿ ಕೃಷಿಕನಾಗಿ ಮುಂದುವರಿದಿಲ್ಲ ಅಥವಾ ಆ ಪಟ್ಟಿಯಲ್ಲಿ ನೋಂದಾಯಿತನಾಗಲು ಅನ್ಯಥಾ ಹಕ್ಕುಳ್ಳವನಾಗಿಲ್ಲ ಎಂಬ ಕಾರಣದ ಮೇಲೆ ಆ ನಮೂದನ್ನು ತೆಗೆದುಹಾಕತಕ್ಕುದೆಂದು ಡೆಪ್ಯುಟಿ ಕಮಿಷನರ್ಗೆ ಅಥವಾ ಅಧಿಕೃತ ಅಧಿಕಾರಿಗೆ ಮನದಟ್ಟಾದರೆ ಅವನು ಈ ಸಂಬಂಧದಲ್ಲಿ ಕೃಷಿ ಮಾರಾಟ ನಿರ್ದೇಶಕನು ನೀಡಬಹುದಾದಂಥ ಸಾಮಾನ್ಯ ಅಥವಾ ವಿಶೇಷ ನಿರ್ದೇಶನಗಳು ಯಾವುವಾದರೂ ಇದ್ದರೆ, ಅವುಗಳಿಗೊಳಪಟ್ಟು ಆ ನಮೂದನ್ನು ತಿದ್ದುಪಡಿ ಮಾಡತಕ್ಕದ್ದು ಅಥವಾ ತೆಗೆದುಹಾಕತಕ್ಕದ್ದು:
ಪರಂತು, (ಎ) ಖಂಡದಲ್ಲಿ ನಮೂದಿಸಿದ ಯಾವುದೇ ಆಧಾರದ ಮೇಲೆ ಯಾವುದೇ ಕ್ರಮವನ್ನು ಕೈಕೊಳ್ಳುವ ಮುಂಚೆ ಅಥವಾ ಸಂಬಂಧಪಟ್ಟ ವ್ಯಕ್ತಿಯು ಯಾವುದೇ ಚುನಾವಣೆ ಕ್ಷೇತ್ರದಲ್ಲಿ ಕೃಷಿಕನಾಗಿ ಮುಂದುವರೆಯುತ್ತಿಲ್ಲ ಅಥವಾ ಆ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತನಾಗಲು ಅನ್ಯಥಾ ಹಕ್ಕುಳ್ಳವನಾಗಿಲ್ಲ ಎಂಬ ಆಧಾರದ ಮೇಲೆ (ಬಿ) ಖಂಡದ ಮೇರೆಗೆ ಯಾವುದೇ ಕ್ರಮವನ್ನು ಕೈಗೊಳ್ಳುವ ಮುಂಚೆ, ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಸಂಬಂಧಪಟ್ಟ ವ್ಯಕ್ತಿಯ ಸಂಬಂಧದಲ್ಲಿ ಕೈಗೊಳ್ಳಬೇಕೆಂದು ಪ್ರಸ್ತಾವಿಸಲಾದ ಕ್ರಮದ ಬಗ್ಗೆ ಅಹವಾಲು ಹೇಳಿಕೊಳ್ಳುವುದಕ್ಕೆ ಅವನಿಗೆ ಸೂಕ್ತ ಅವಕಾಶವನ್ನು ನೀಡತಕ್ಕದ್ದು.
(2) (ಎ) ಕೃಷಿಕರ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಯಾವ ವ್ಯಕ್ತಿಯ ಹೆಸರು ಸೇರಿಲ್ಲಮೋ ಆ ವ್ಯಕ್ತಿಯು ಆ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸುವಂತೆ ಕೋರಿ ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು.
(ಬಿ) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ಕೃಷಿಕನು ಮತದಾರನ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿದ್ದಾನೆ ಎಂದು ಮನದಟ್ಟಾದರೆ ಅವನು ಆ ಕೃಷಿಕನ ಹೆಸರನ್ನು ಪಟ್ಟಿಯಲ್ಲಿ ಸೇರಿಸುವಂತೆ ನಿರ್ದೇಶಿಸಬಹುದು.
(ಸಿ) ಯಾವುದೇ ಚುನಾವಣಾ ಕ್ಷೇತ್ರದಲ್ಲಿ ಚುನಾವಣೆಗೆ ನಾಮನಿರ್ದೇಶನ ಮಾಡುವುದಕ್ಕೆ ನಿಗದಿಪಡಿಸಿದ ಕೊನೆಯ ದಿನಾಂಕದ ತರುವಾಯ ಮತ್ತು ಆ ಚುನಾವಣೆಯು ಪೂರ್ಣಗೊಳ್ಳುವುದಕ್ಕೆ ಮುಂಚೆ (1)ನೇ ಉಪನಿಯಮದ ಮೇರೆಗೆ ಯಾವುದೇ ನಮೂದಿನ ತಿದ್ದುಪಡಿ ಮಾಡತಕ್ಕದ್ದಲ್ಲ ಅಥವಾ ತೆಗೆದುಹಾಕತಕ್ಕದ್ದಲ್ಲ ಮತ್ತು ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವ ಬಗೆಗಿನ ಯಾವುವೇ ನಿರ್ದೇಶನಗಳನ್ನು ಈ ಉಪನಿಯಮದ ಮೇರೆಗೆ ನೀಡತಕ್ಕದ್ದಲ್ಲ.
(3) (ಎ) (1)ನೇ ಉಪನಿಯಮದ ಅಥವಾ (2)ನೇ ಉಪನಿಯಮದ (ಎ) ಖಂಡದ ಮೇರೆಗೆ ಸಲ್ಲಿಸುವ ಪ್ರತಿಯೊಂದು ಅರ್ಜಿಯನ್ನು 2, 4 ಮತ್ತು 13 ಈ ನಮೂನೆಗಳ ಪೈಕಿ ಸಮುಚಿತವಾಗಬಹುದಾದಂಥ ನಮೂನೆಯಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು.
(ಬಿ) ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು, ಅಂಥ ಅರ್ಜಿಯನ್ನು ಸ್ವೀಕರಿಸಿದ ಮೇಲೆ ಆ ಕೂಡಲೇ ಅದರ ಒಂದು ಪ್ರತಿಯನ್ನು ಆತನ ಕಛೇರಿಯ ಎದ್ದು ಕಾಣುವ ಯಾವುದಾದರೂ ಸ್ಥಳದಲ್ಲಿ ಅಂಟಿಸುವಂತೆ ಮತ್ತು ಹಾಗೆ ಅದನ್ನು ಅಂಟಿಸಿದ ದಿನಾಂಕದಿಂದ ಏಳು ದಿನಗಳ ಅವಧಿಯೊಳಗೆ ಅಂಥ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಆಹ್ವಾನಿಸುವಂಥ ನೋಟೀಸನ್ನು ಸಹ ಅಂಟಿಸುವಂತೆ ನಿರ್ದೇಶಿಸತಕ್ಕದ್ದು.
(ಸಿ) (ಬಿ) ಖಂಡದಲ್ಲಿ ನಿರ್ದಿಷ್ಟಪಡಿಸಿದ ಅವಧಿಯು ಮುಗಿದ ತರುವಾಯ ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು, ಆಕ್ಷೇಪಣೆಗಳೇನಾದರೂ ಬಂದಿದ್ದರೆ ಅವುಗಳನ್ನು ಸಾಧ್ಯವಾದಷ್ಟು ಬೇಗನೆ ಪರಿಶೀಲಿಸತಕ್ಕದ್ದು ಮತ್ತು ಅರ್ಜಿದಾರನು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿದ್ದಾನೆಂದು ತನಗೆ ಮನದಟ್ಟಾದರೆ, ಅವನ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ನಿರ್ದೇಶಿಸತಕ್ಕದ್ದು:
ಪರಂತು, ಅಂಥ ಯಾವುದೇ ಅರ್ಜಿಯನ್ನು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ತಿರಸ್ಕರಿಸಿದಾಗ ಅವನು ಹಾಗೆ ಅರ್ಜಿಯನ್ನು ತಿರಸ್ಕರಿಸಿರುವುದಕ್ಕೆ ಸಂಬಂಧಪಟ್ಟ ಕಾರಣಗಳ ಸಂಕ್ಷಿಪ್ತ ವಿವರಣೆಯನ್ನು ಲಿಖಿತದಲ್ಲಿ ದಾಖಲು ಮಾಡತಕ್ಕದ್ದು.
(4) (ಎ) (1)ನೇ ಉಪನಿಯಮದ ಅಥವಾ (2)ನೇ ಉಪನಿಯಮದ ಮೇರೆಗೆ ಮಾಡಲಾದ ಯಾವುದೇ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿಯು ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶದ ದಿನಾಂಕದಿಂದ ಹದಿನೈದು ದಿವಸಗಳ ಅವಧಿಯೊಳಗೆ 1 [ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಪೀಲು ಸಲ್ಲಿಸಬಹುದು.
(ಬಿ) (ಎ) ಖಂಡದ ಮೇರೆಗೆ ಅಪೀಲು ಸಲ್ಲಿಸುವಾಗ,-
(i) ಪ್ರತಿಯೊಂದು ಅಪೀಲು, ಅಪೀಲುದಾರನು ಸಹಿಮಾಡಿದ ಜ್ಞಾಪನ ಪತ್ರದ ರೂಪದಲ್ಲಿರತಕ್ಕದ್ದು;
(ii) ಯಾವ ಆದೇಶದ ವಿರುದ್ಧ ಅಪೀಲು ಸಲ್ಲಿಸಲಾಗಿದೆಯೋ ಆ ಆದೇಶದ ಪ್ರತಿಯನ್ನು ಅದಕ್ಕೆ ಲಗತ್ತಿಸಿರತಕ್ಕದ್ದು;
[ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ (iii) ಅದನ್ನು 1 ಸಲ್ಲಿಸತಕ್ಕದ್ದು ಅಥವಾ (ಎ) ಖಂಡದಲ್ಲಿ ನಿರ್ದಿಷ್ಟ ಪಡಿಸಿರುವ ಅವಧಿಯೊಳಗೆ ಅವನಿಗೆ ತಲುಪುವಂತೆ ನೋಂದಾಯಿತ ಅಂಚೆಯ ಮೂಲಕ ಕಳುಹಿಸತಕ್ಕದ್ದು.
(ಸಿ) ಅಪೀಲುದಾರನು ಅಥವಾ ಅವನ ಪರವಾಗಿ ಯಾರೇ ವ್ಯಕ್ತಿಯು ಸ್ವತಃ 1 [ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅಥವಾ ಈ ಸಂಬಂಧದಲ್ಲಿ ಅವನಿಂದ ನೇಮಕಗೊಂಡ ಯಾರೇ ಇತರ ಅಧಿಕಾರಿಗೆ ಅಪೀಲಿನ ಜ್ಞಾಪನ ಪತ್ರವನ್ನು ಒಪ್ಪಿಸಿದ್ದರೆ, (ಬಿ) ಖಂಡದ ಉದ್ದೇಶಗಳಿಗಾಗಿ ಆ ಅಪೀಲನ್ನು ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಸಲ್ಲಿಸಿರುವುದಾಗಿ ಭಾವಿಸತಕ್ಕದ್ದು.
- 2004ರ ಅಧಿಸೂಚನೆ ಸಂಖ್ಯೆ ಸಂ.ಸಿಡಿ 248 ಎಂಆರ್ಇ 2003, ಬೆಂಗಳೂರು, ದಿನಾಂಕ 3ನೇ ಫೆಬ್ರವರಿ, 2004ರ ಮೂಲಕ ಪ್ರತಿಯೋಜಿಸಲಾಗಿದೆ. (ಡಿ) 5ನೇ ನಿಯಮದ (16)ನೇ ಉಪನಿಯಮದ (ಡಿ) ಮತ್ತು (ಇ) ಖಂಡಗಳ ಉಪಬಂಧಗಳು ಮತ್ತು ಈ ನಿಯಮದ (2)ನೇ ಉಪನಿಯಮದ (ಸಿ) ಖಂಡವು, ಈ ಉಪನಿಯಮದ ಮೇರೆಗೆ ಅಪೀಲಿನಲ್ಲಿ ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು.
5ಬಿ. 1 [........ ವ್ಯಾಪಾರಿಗಳ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಗಳನ್ನು ತಯಾರಿಸುವುದು.- (1) ಡೆಪ್ಯುಟಿ ಕಮಿಷನರನು ಅಥವಾ ಈ ಸಂಬಂಧದಲ್ಲಿ ಅವನಿಂದ ಅಧಿಕೃತನಾದ ಯಾರೇ ಅಧಿಕಾರಿಯು (ಈ ನಿಯಮದಲ್ಲಿ ಇನ್ನು ಮುಂದೆ ಅವನನ್ನು ಅಧಿಕೃತ ಅಧಿಕಾರಿಯೆಂದು ಉಲ್ಲೇಖಿಸಲಾಗಿದೆ), ಕಾರ್ಯಾಚರಣೆ ಕೈಗೊಳ್ಳಲು ಮಾರುಕಟ್ಟೆ ಸಮಿತಿಯಿಂದ ಲೈಸೆನ್ಸ್ ಪಡೆದಿರುವ, 2 [ಚಿಲ್ಲರೆ ವ್ಯಾಪಾರಿಗಳಲ್ಲದ, ಇತರ ವ್ಯಾಪಾರಿಗಳ ಹೆಸರು, ತಂದೆಯ:ಗಂಡನ ಹೆಸರು, ವಾಸಸ್ಥಳ, ವಯಸ್ಸು, ವಿಳಾಸ ಮತ್ತು ಲೈಸೆನ್ಸ್ ನಂಬರ್ ಇವುಗಳನ್ನೊಳಗೊಂಡ ಒಂದು ಪ್ರತ್ಯೇಕ ಮತದಾರರ 3 [ಪಟ್ಟಿಯನ್ನು ತನ್ನ ಕಛೇರಿಯಲ್ಲಿ ಇಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಬಿಟ್ಟುಬಿಡಲಾಗಿದೆ. 2. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ 30-1-90ರ ಮೂಲಕ ಪ್ರತಿಯೋಜಿಸಲಾಗಿದೆ. 3. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಪ್ರತಿಯೋಜಿಸಲಾಗಿದೆ. (2) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ, (1)ನೆಯ ಉಪನಿಯಮದಲ್ಲಿ ಮತದಾರರ ಪಟ್ಟಿಗಳನ್ನು ತಹಲ್ವರೆಗೆ ಸರಿಪಡಿಸಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಪ್ರತಿಯೊಂದು [........ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯು, 1 ಲೈಸನ್ಸು ಪಡೆದ ವ್ಯಾಪಾರಿಗಳ ಪಟ್ಟಿಯಲ್ಲಿ ಉಂಟಾದ ಪ್ರತಿಯೊಂದು ಬದಲಾವಣೆಯ ಬಗ್ಗೆ ಆ ಕೂಡಲೇ ತಿಳಿಸತಕ್ಕದ್ದು ಮತ್ತು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಅಂಥ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಲೈಸನ್ಸು ಪಡೆದ ವ್ಯಾಪಾರಿಗಳಾಗಿ ಮುಂದುವರಿದಿಲ್ಲದ ವ್ಯಕ್ತಿಗಳ ಹೆಸರುಗಳನ್ನು ಸಂಬಂಧಪಟ್ಟ ಮತದಾರರ [........ ಪಟ್ಟಿಗಳಿಂದ ಹೊಡೆದು ಹಾಕತಕ್ಕದ್ದು ಮತ್ತು 1 ಲೈಸನ್ಸು ಪಡೆದು ವ್ಯಾಪಾರಿಗಳಾಗಿರುವವರ ಹೆಸರುಗಳನ್ನು ಆ ಪಟ್ಟಿಯಲ್ಲಿ ಸೇರಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಬಿಟ್ಟುಬಿಡಲಾಗಿದೆ. [........ (3) 5ಎ ನಿಯಮದ ಉಪಬಂಧಗಳು 1 ಕೃಷಿಕರ ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಸಂಬಂಧದಲ್ಲಿ ಅನ್ವಯವಾಗುವಂತೆ ವ್ಯಾಪಾರಿಗಳ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಗಳ ಸಂಬಂಧದಲ್ಲಿ ಸಹ ಅನ್ವಯವಾಗತಕ್ಕದ್ದು:
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಬಿಟ್ಟುಬಿಡಲಾಗಿದೆ. ಪರಂತು, ಹೆಸರನ್ನು ಸೇರಿಸುವಂತೆ ಕೋರಿ ಸಲ್ಲಿಸುವ ಅರ್ಜಿಯ ನಮೂನೆ 14ರಲ್ಲಿರತಕ್ಕದ್ದು:
ಮತ್ತೂ ಪರಂತು, 5ಎ ನಿಯಮದ (1)ನೇ ಉಪನಿಯಮದ ಅಥವಾ (2)ನೇ ಉಪನಿಯಮದ (ಎ) ಖಂಡದ ಮೇರೆಗೆ ಸಲ್ಲಿಸಿದ ಅರ್ಜಿಯನ್ನು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಸ್ವೀಕರಿಸಿದಲ್ಲಿ, ಅವನು ಅಂಥ ಅರ್ಜಿ ಯನ್ನು ಸಂಬಂಧಪಟ್ಟ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗೆ ಕಳುಹಿಸತಕ್ಕದ್ದು ಮತ್ತು ಸದರಿ ಕಾರ್ಯದರ್ಶಿಯಿಂದ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಿದ ಮೇಲೆ, ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು (2)ನೇ ಉಪನಿಯಮಕ್ಕನುಸಾರ ಕ್ರಮ ಕೈಕೊಳ್ಳತಕ್ಕದ್ದು.] 1 [....... [5ಸಿ. 2 [ಸಹಕಾರ ಮಾರುಕಟ್ಟೆ 3 ವ್ಯವಹಾರ ಸಂಘಗಳ ಮತ್ತು ಕೃಷಿ ಸಹಕಾರ ಸಂಸ್ಕರಣ ಸಂಘಗಳ ವ್ಯವಸ್ಥಾಪಕ ಸಮಿತಿಯ ಸದಸ್ಯರ ಹೆಸರುಗಳ ಪಟ್ಟಿಯನ್ನು ಇಡುವುದು.- (1) ಡೆಪ್ಯುಟಿ ಕಮಿಷನರನು ಅಥವಾ ಈ ಸಂಬಂಧದಲ್ಲಿ ಅವನಿಂದ ಅಧಿಕೃತನಾದ ಯಾರೇ ಅಧಿಕಾರಿಯು ಈ ನಿಯಮದಲ್ಲಿ (ಇನ್ನು ಮುಂದೆ ಅವನನ್ನು ಅಧಿಕೃತ ಅಧಿಕಾರಿಯೆಂದು ಉಲ್ಲೇಖಿಸಲಾಗಿದೆ) 11ನೇ [........ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ 2 [ಸಹಕಾರ ಮಾರುಕಟ್ಟೆ 3 ವ್ಯವಹಾರ ಸಂಘಗಳ ಮತ್ತು ಕೃಷಿ ಸಹಕಾರ ಸಂಸ್ಕರಣ ಸಂಘಗಳ ಸಂಬಂಧದಲ್ಲಿ ತನ್ನ ಕಚೇರಿಯಲ್ಲಿ ಅಂಥ ಪ್ರತಿಯೊಂದು ವರ್ಗದ ಸಂಘದ ಆಡಳಿತ ಸಮಿತಿಯ ಎಲ್ಲ ಸದಸ್ಯರ ಪಟ್ಟಿಯನ್ನು ಇಟ್ಟಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 191 ದಿನಾಂಕ 25-5-70ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ 30-1-90ರ ಮೂಲಕ ಬಿಟ್ಟುಬಿಡಲಾಗಿದೆ. (2) ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ (1)ನೇ ಉಪನಿಯಮದಲ್ಲಿ ಉಲ್ಲೇಖಿಸಲಾದ ಸದಸ್ಯರುಗಳ ಪಟ್ಟಿಯನ್ನು ತಹಲ್ವರೆಗೆ ಸರಿಪಡಿಸಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಅಂಥ ಪ್ರತಿಯೊಂದು ಸಂಘದ ವ್ಯವಸ್ಥಾಪಕನು ಅಥವಾ ಕಾರ್ಯದರ್ಶಿಯು ಅಂಥ ಸಂಘಗಳ ಆಡಳಿತ ಸಮಿತಿಯ ಸದಸ್ಯರ ಹೆಸರುಗಳಲ್ಲಿ ಉಂಟಾದ ಪ್ರತಿಯೊಂದು ಬದಲಾವಣೆಯನ್ನು ಆ ಕೂಡಲೇ ಡೆಪ್ಯುಟಿ ಕಮಿಷನರನಿಗೆ ಅಥವಾ ಅಧಿಕೃತ ಅಧಿಕಾರಿಗೆ ತಿಳಿಸತಕ್ಕದ್ದು ಮತ್ತು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಆ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಅಂಥ ಸಂಘಗಳ ಆಡಳಿತ ಸಮಿತಿಯ ಸದಸ್ಯರಾಗಿ ಮುಂದುವರಿದಿಲ್ಲದ ವ್ಯಕ್ತಿಗಳ ಹೆಸರುಗಳನ್ನು ಸಂಬಂಧಪಟ್ಟ ಮತದಾರರ ಪಟ್ಟಿಯಿಂದ ಹೊಡೆದು ಹಾಕತಕ್ಕದ್ದು ಮತ್ತು ಹೊಸದಾಗಿ ಸದಸ್ಯರಾಗಿರುವ ವ್ಯಕ್ತಿಗಳ ಹೆಸರುಗಳನ್ನು ಆ ಪಟ್ಟಿಗಳಲ್ಲಿ ಸೇರಿಸತಕ್ಕದ್ದು.
[........ (3) 5ಎ ನಿಯಮದ ಉಪಬಂಧಗಳು, 1 11ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ಸಂಘದ ಆಡಳಿತ ಸಮಿತಿಯ ಸದಸ್ಯರ ಹೆಸರುಗಳ ಪಟ್ಟಿಯ ಸಂದರ್ಭದಲ್ಲಿ ಯಥೋಚಿತ ವ್ಯತ್ಯಾಸಗಳೊಂದಿಗೆ ಅನ್ವಯವಾಗತಕ್ಕದ್ದು:
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಬಿಟ್ಟುಬಿಡಲಾಗಿದೆ. ಮತ್ತೂ ಪರಂತು, 5ಎ ನಿಯಮದ (1)ನೇ ಉಪನಿಯಮ ಅಥವಾ (2)ನೇ ಉಪನಿಯಮದ (ಎ) ಖಂಡದ ಮೇರೆಗೆ ಸಲ್ಲಿಸಿದ ಅರ್ಜಿಯನ್ನು ಡೆಪ್ಯುಟಿ ಕಮಿಷನರನು ಅಥವಾ ಅಧಿಕೃತ ಅಧಿಕಾರಿಯು ಸ್ವೀಕರಿಸಿರುವಲ್ಲಿ, ಅವನು ಅಂಥ ಅರ್ಜಿಯನ್ನು ಸಂಬಂಧಪಟ್ಟ ಸಂಘದ ವ್ಯವಸ್ಥಾಪಕನಿಗೆ ಅಥವಾ ಕಾರ್ಯದರ್ಶಿಗೆ ಕಳುಹಿಸತಕ್ಕದ್ದು, ಮತ್ತು ಸದರಿ ವ್ಯವಸ್ಥಾಪಕನಿಂದ ಅಥವಾ ಕಾರ್ಯದರ್ಶಿಯಿಂದ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸಿದ ಮೇಲೆ (2)ನೇ ಉಪನಿಯಮಕ್ಕನುಸಾರ ಕ್ರಮ ಕೈಗೊಳ್ಳತಕ್ಕದ್ದು.
1 [6. ಸದಸ್ಯರನ್ನು ಚುನಾಯಿಸುವಂತೆ ಚುನಾವಣಾ ಕ್ಷೇತ್ರಗಳಿಗೆ 2 [ಮತ್ತು ಸಹಕಾರ ಮಾರುಕಟ್ಟೆ ಕರೆ ನೀಡುವುದು.- (1) 154ಎ ವ್ಯವಹಾರ ಸಂಘಗಳಿಗೆ ಹಾಗೂ ಕೃಷಿ ಸಹಕಾರ ಸಂಸ್ಕರಣ ಸಂಘಗಳಿಗೆ ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ ಅಥವಾ 10ನೇ ಪ್ರಕರಣದ ಮೇರೆಗೆ ರಚಿಸಲಾದ ಮಾರುಕಟ್ಟೆ ಸಮಿತಿಯ ಪದಾವಧಿಯು ಮುಕ್ತಾಯವಾದ ತರುವಾಯ ಅಥವಾ ಮಾರುಕಟ್ಟೆ ಸಮಿತಿಯ ಸದಸ್ಯರ ಸ್ಥಾನಗಳು ತೆರವಾದಾಗಲೆಲ್ಲ ಅವುಗಳನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ಅಥವಾ 127ನೇ ಪ್ರಕರಣದ ಮೇರೆಗೆ ಮಾಡಲಾದ ರದ್ದಿಯಾತಿಯ ಅವಧಿಯು ಮುಕ್ತಾಯವಾದ ತರುವಾಯ ಅಥವಾ 130ನೇ ಪ್ರಕರಣದ ಮೇರೆಗೆ ನೇಮಕಗೊಂಡ ಆಡಳಿತಾಧಿಕಾರಿಯ ಪದಾವಧಿಯು ಮುಕ್ತಾಯವಾದ ತರುವಾಯ ಮಾರುಕಟ್ಟೆ ಸಮಿತಿಯನ್ನು ರಚಿಸುವ ಉದ್ದೇಶಗಳಿಗಾಗಿ ಡೆಪ್ಯುಟಿ ಕಮಿಷನರನು ಈ ಅಧಿನಿಯಮದ, ಈ ನಿಯಮಗಳ ಮತ್ತು ಈ ಅಧಿನಿಯಮದ ಅಥವಾ ಈ ನಿಯಮಗಳ ಮೇರೆಗೆ ಹೊರಡಿಸಲಾದ ಆದೇಶಗಳ ಉಪಬಂಧಗಳನುಸಾರ ಸದಸ್ಯರನ್ನು ಚುನಾಯಿಸುವಂತೆ ಚುನಾವಣಾ ಕ್ಷೇತ್ರಗಳಿಗೆ 2 [ಮತ್ತು ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ ಹಾಗೂ ಕೃಷಿ ಸಹಕಾರ ಸಂಸ್ಕರಣ ಸಂಘಗಳಿಗೆ ಆದೇಶದ ಮೂಲಕ ಕರೆ ನೀಡತಕ್ಕದ್ದು:
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3-2-70ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಪ್ರತಿಯೋಜಿಸಲಾಗಿದೆ. [ಅಥವಾ ಆಡಳಿತಾಧಿಕಾರಿಯ ಪರಂತು, ನಿವೃತ್ತರಾಗುವ ಸದಸ್ಯರ ಪದಾವಧಿಯು 1 ನೇಮಕಾತಿಯ ಅವಧಿಯು ಮುಕ್ತಾಯವಾಗುವ ದಿನಾಂಕಕ್ಕೆ ಮೂರು ತಿಂಗಳಿಗೆ ಮುಂಚೆಯಲ್ಲಿದ್ದಂತೆ ಈ ಉಪನಿಯಮದ ಮೇರೆಗೆ ಯಾವುದೇ ಆದೇಶವನ್ನು ಹೊರಡಿಸತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 191 ದಿನಾಂಕ 25-5-70ರ ಮೂಲಕ ಸೇರಿಸಲಾಗಿದೆ. (2) ಮಾರುಕಟ್ಟೆ ಸಮಿತಿಗೆ ಆಯ್ಕೆಯಾದ ಸದಸ್ಯನ ಸ್ಥಾನವು ಖಾಲಿಯಾದಾಗ ಅಥವಾ ಖಾಲಿಯಾಗಿದೆಯೆಂದು ಘೋಷಿಸಿದಾಗ ಅಥವಾ ಅವನು ಸಮಿತಿಯ ಸದಸ್ಯನಾಗಿ ಚುನಾಯಿತನಾಗಿರುವುದು ಶೂನ್ಯವೆಂದು ಘೋಷಿಸಿದಾಗ, ಡೆಪ್ಯುಟಿ ಕಮಿಷನರನು, ಆದೇಶ ಹೊರಡಿಸಿ ಹಾಗೆ ಉಂಟಾದ ಖಾಲಿಸ್ಥಾನವನ್ನು ಭರ್ತಿ ಮಾಡುವ ಉದ್ದೇಶಕ್ಕಾಗಿ ವ್ಯಕ್ತಿಯೊಬ್ಬರನ್ನು ಆ ಆದೇಶದಲ್ಲಿ ನಿರ್ದಿಷ್ಟಪಡಿಸಿದ ದಿನಾಂಕಕ್ಕೆ ಮುಂಚೆ ಚುನಾಯಿಸುವಂತೆ ಸಂಬಂಧಪಟ್ಟ ಚುನಾವಣಾ ಕ್ಷೇತ್ರಕ್ಕೆ 1 [ಮತ್ತು ಕರೆ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ ಹಾಗೂ ಕೃಷಿ ಸಹಕಾರ ಸಂಸ್ಕರಣ ಸಂಘಗಳಿಗೆ ನೀಡತಕ್ಕದ್ದು, ಮತ್ತು ಅಧಿನಿಯಮದ ಈ ನಿಯಮಗಳ ಮತ್ತು ಅಧಿನಿಯಮದ ಅಥವಾ ಈ ನಿಯಮಗಳ ಮೇರೆಗೆ ಹೊರಡಿಸಲಾದ ಆದೇಶಗಳ ಉಪಬಂಧಗಳು ಅಂಥ ಖಾಲಿಸ್ಥಾನವನ್ನು ತುಂಬುವುದಕ್ಕಾಗಿ ನಡೆಸಲಾಗುವ ಸದಸ್ಯನೊಬ್ಬನ ಚುನಾವಣೆಯ ಸಂಬಂಧದಲ್ಲಿ ಸಹ ಸಾಧ್ಯವಾದಷ್ಟು ಮಟ್ಟಿಗೆ ಅನ್ವಯವಾಗತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-94ರ ಮೂಲಕ ಪ್ರತಿಯೋಜಿಸಲಾಗಿದೆ.