1 [(1) ಮಾರುಕಟ್ಟೆ ಪ್ರದೇಶದಲ್ಲಿ ವಾಸವಾಗಿರುವ ಮತ್ತು ಯಾವ ವರ್ಷದಲ್ಲಿ ಮತದಾರರ ಪಟ್ಟಿಯನ್ನು ತಯಾರಿಸಲಾಗುವುದೋ ಆ ವರ್ಷದ ಜನವರಿ 1ರಂದು 2 [ಹದಿನೆಂಟು ವರ್ಷ ವಯಸ್ಸಿಗೆ ಕಡಿಮೆ ಇಲ್ಲದ ವಯಸ್ಸಿನವರಾಗಿರುವ ಎಲ್ಲ ಕೃಷಿಕರು, ಕೃಷಿಕರ ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 44 ದಿನಾಂಕ 3-2-1970ರ ಮೂಲಕ ಪ್ರತಿಯೋಜಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 39 ಎಂಆರ್ಇ 90 ದಿನಾಂಕ 12-11-1990ರ ಮೂಲಕ ಪ್ರತಿಯೋಜಿಸಲಾಗಿದೆ. (2) ಯಾರೇ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಕೃಷಿಕರ ಚುನಾವಣಾ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲಿ ತನ್ನ ಹೆಸರನ್ನು ನಮೂದಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕುದಲ್ಲ. ಅವನ ಹೆಸರನ್ನು ತಪ್ಪಾಗಿ ಅಥವಾ ಅನ್ಯಥಾ ಎರಡು ಅಥವಾ ಹೆಚ್ಚು ಚುನಾವಣಾ ಕ್ಷೇತ್ರಗಳ ಪಟ್ಟಿಗಳಲ್ಲಿ ನಮೂದಿಸಿದ್ದಾಗ್ಯೂ, ಅವನು ಒಂದು ಚುನಾವಣಾ ಕ್ಷೇತ್ರದಲ್ಲಿ ಮಾತ್ರ ತನ್ನ ಮತವನ್ನು ಚಲಾಯಿಸತಕ್ಕದ್ದು. ಅವನು ಎರಡು ಅಥವಾ ಹೆಚ್ಚು ಚುನಾವಣಾ ಕ್ಷೇತ್ರಗಳಲ್ಲಿ ತನ್ನ ಮತವನ್ನು ಚಲಾಯಿಸಿದರೆ, ಆ ಎಲ್ಲ ಚುನಾವಣಾ ಕ್ಷೇತ್ರಗಳಲ್ಲಿ ದಾಖಲಾದ ಅವನ ಮತಗಳು ಶೂನ್ಯವಾಗಿರುವುದಾಗಿ ಭಾವಿಸತಕ್ಕದ್ದು.
1 [(3) ಮಾರುಕಟ್ಟೆ ಪ್ರದೇಶದಲ್ಲಿರುವ ಚಿಲ್ಲರೆ ವ್ಯಾಪಾರಿಗಳಲ್ಲದ ಇತರ ಎಲ್ಲ ವ್ಯಾಪಾರಿಗಳು, ವ್ಯಾಪಾರಿಗಳ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಲು ಹಕ್ಕುಳ್ಳವರಾಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ 130 ಎಂಆರ್ಇ 88 ದಿನಾಂಕ 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ. 1 [(4) ಬಿಟ್ಟುಬಿಡಲಾಗಿದೆ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ ಬಿಟ್ಟುಬಿಡಲಾಗಿದೆ. (5) ಯಾವುದೇ ಚುನಾವಣಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಯಾರೇ ವ್ಯಕ್ತಿಯ ಹೆಸರನ್ನು ಒಂದಕ್ಕಿಂತ ಹೆಚ್ಚು ಬಾರಿ ಸೇರಿಸಿದ್ದರೂ ಅವನು ಆ ಚುನಾವಣಾ ಕ್ಷೇತ್ರದ ಯಾವುದೇ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತವನ್ನು ಚಲಾಯಿಸತಕ್ಕದ್ದಲ್ಲ ಮತ್ತು ಅವನು ಒಂದಕ್ಕಿಂತ ಹೆಚ್ಚು ಬಾರಿ ಮತ ನೀಡಿದಲ್ಲಿ ಆ ಚುನಾವಣಾ ಕ್ಷೇತ್ರದಲ್ಲಿ ದಾಖಲಾದ ಅವನ ಎಲ್ಲ ಮತಗಳು ಶೂನ್ಯವಾಗಿರುವುದಾಗಿ ಭಾವಿಸತಕ್ಕದ್ದು.