ನಮೂನೆ -Vii (ನಿಯಮ 16 (2)ನ್ನು ನೋಡಿ)
ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ - ಒಪ್ಪಂದ (ಅಂಗಡಿಗಾಗಿ, ಗೋದಾಮಿಗಾಗಿ, ಅಂಗಡಿ ಸಹಿತ ಗೋದಾಮಿಗಾಗಿ)
ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ ಈ ಒಪ್ಪಂದವನ್ನು, ಒಂದು ಪಕ್ಷ --------- ರಲ್ಲಿ ಕಾರ್ಯದರ್ಶಿಯಾಗಿರುವ ಶ್ರೀ ----------- ರವರು ಮತ್ತು ---------- ರಲ್ಲಿ ವಾಸಿಸುತ್ತಿರುವ ಶ್ರೀ --------- ರವರ ಮಗನಾದ ಸುಮಾರು --------- ವರ್ಷ ವಯಸ್ಸಿನ ಅಧ್ಯಕ್ಷರಾಗಿರುವ (ಅಥವಾ ಆಡಳಿತಗಾರ) ಶ್ರೀ --------- ರವರು ಪ್ರತಿನಿಧಿಸಿದ --------- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಇಲ್ಲಿ ಇನ್ನುಮುಂದೆ ಲೈಸೆನ್ಸು ಕೊಡುವವನು ಎಂದು ಕರೆಯಲಾಗಿದ್ದು, ಈ ಪದಾವಳಿಯು ಸಂದರ್ಭವು ಹಾಗೆ ಅಗತ್ಯಪಡಿಸಿರುವಲ್ಲೆಲ್ಲಾ ಅದರ ಉತ್ತರಾಧಿಕಾರಿಗಳನ್ನು, ಹಸ್ತಾಂತರಿತರನ್ನು ಒಳಗೊಳ್ಳುತ್ತದೆ) ಮತ್ತು -------- ರಲ್ಲಿ ವಾಸಿಸುತ್ತಿರುವ ಶ್ರೀ --------- ರವರ ಮಗನಾದ ಸುಮಾರು --------- ವರ್ಷ ವಯಸ್ಸಿನ ಶ್ರೀ -------- ರವರು ಅದರ ಮಾಲೀಕ/ ವ್ಯವಸ್ಥಾಪಕ ಪಾಲುದಾರನಾಗಿದ್ದು, ಅವರ ಮೂಲಕ ಪ್ರತಿನಿಧಿಸಿದ --------- ಹೆಸರಿನ ನೋಂದಾಯಿತ ಪಾಲುದಾರಿಕೆ ಫರ್ಮು (ಇದರಲ್ಲಿ ಇನ್ನುಮುಂದೆ ಲೈಸೆನ್ಸುದಾರ ಎಂದು ಕರೆಯಲಾಗಿದೆ) ಇವರ ನಡುವೆ ಮಾಡಿಕೊಳ್ಳಲಾಗಿದ್ದು, ಅದನ್ನು ಈ ಕೆಳಕಂಡಂತೆ ಸಾಕ್ಷ್ಯೀಕರಿಸಲಾಗಿದೆ:
ಮಾರುಕಟ್ಟೆ ಕಾರ್ಯನಿರ್ವಾಹಕನಾಗಿರುವ ಮತ್ತು ಲೈಸೆನ್ಸ್ ಕೊಡುವವನಿಂದ ಲೈಸೆನ್ಸ್ ಪಡೆದಿರುವ ಲೈಸೆನ್ಸ್ದಾರನು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯವಹಾರ ಮಾಡುವುದಕ್ಕಾಗಿ ಅಂಗಡಿಯನ್ನು/ ಅಂಗಡಿ ಸಹಿತ ಗೋದಾಮನ್ನು / ಗೋದಾಮನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ;
ಲೈಸೆನ್ಸ್ ಕೊಡುವವನು, ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ವ್ಯವಹಾರ ಮಾಡುತ್ತಿರುವ ಕಾರ್ಯನಿರ್ವಾಹಕರಿಗೆ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ------- ಇಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ಸ್ಥಾಪಿಸಿರುವುದರಿಂದ.
ಲೈಸೆನ್ಸು ಕೊಡುವವನು, ಮಾರುಕಟ್ಟೆ ಪ್ರಾಂಗಣದಲ್ಲಿರುವ, -------- ಸಂಖ್ಯೆಯನ್ನು ಹೊಂದಿರುವ ಹಾಗೂ ಈ ಮುಂದೆ ಹೇಳಿರುವ ಅನುಸೂಚಿಯಲ್ಲಿ ಹೆಚ್ಚು ಸಂಪೂರ್ಣವಾಗಿ ವರ್ಣಿಸಿರುವ ಅಂಗಡಿಯ/ ಅಂಗಡಿ ಸಹಿತ ಗೋದಾಮಿನ/ ಗೋದಾಮಿನ ಮಾಲೀಕನಾಗಿರುವುದರಿಂದ,
ಲೈಸೆನ್ಸ್ದಾರನು, ಅಧಿಸೂಚಿತ ಕೃಷಿ ಉತ್ಪನ್ನ -------- (ಸರಕು/ ಸರಕುಗಳು) ವ್ಯಾಪಾರ ಮಾಡುತ್ತಿರುವುದರಿಂದ ಮತ್ತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ಮಾಡುವುದಕ್ಕಾಗಿ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಗೋದಾಮನ್ನು/ ಅಂಗಡಿ ಸಹಿತ ಗೋದಾಮನ್ನು ಹಂಚಿಕೆ ಮಾಡುವಂತೆ ಅರ್ಜಿ ಸಲ್ಲಿಸಿರುವುದರಿಂದ ಮತ್ತು ಲೈಸೆನ್ಸ್ ಕೊಡುವವನು ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ;
ಲೈಸೆನ್ಸ್ ಕೊಡುವವನು, 200 ----ರ ------- ರಂದು ನಡೆದ ತನ್ನ ಸಭೆಯ ಗೊತ್ತುವಳಿ ಸಂಖ್ಯೆ --- ರಲ್ಲಿ ಹಂಚಿಕೆದಾರನಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಆಧಾರದ ಮೇಲೆ ಅನುಸೂಚಿತ ಸ್ವತ್ತನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿರುವುದರಿಂದ;
ಕೃಷಿ ಮಾರುಕಟ್ಟೆ ನಿರ್ದೇಶಕರು/ ------- ಜಲ್ಲೆಯ ಸಹಾಯಕ ನಿರ್ದೇಶಕರು/ ಉಪನಿರ್ದೇಶಕರು 200--ರ ದಿನಾಂಕ ----- ಆದೇಶ ಸಂಖ್ಯೆ ------ ಮೂಲಕ ತಮ್ಮ ಅನುಮತಿ ನೀಡಿರುವುದರಿಂದ;
ಉಭಯ ಪಕ್ಷಕಾರರು ಈ ಕೆಳಗೆ ಹೇಳಿರುವ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಪಾಲಿಸುವುದಕ್ಕೆ ಲಿಖಿತ ರೂಪದಲ್ಲಿ ಒಪ್ಪಂದ ಮಾಡಿಕೊಳ್ಳಲು ಇಚ್ಚಿಸಿರುವುದರಿಂದ.
ನಿಬಂಧನೆಗಳು ಮತ್ತು ಷರತ್ತುಗಳು:
-
ಲೈಸೆನ್ಸ್ ಕೊಡುವವನು, ಲೈಸೆನ್ಸ್ದಾರನಿಗೆ ನೀಡಿರುವ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸು 11 ತಿಂಗಳ ಅವಧಿಯದು ಮಾತ್ರವಾದುದಾಗಿದ್ದು ಇದನ್ನು ಗರಿಷ್ಠ 55 ತಿಂಗಳ ಅವಧಿಗೆ ಒಳಪಟ್ಟು ಈ ಒಪ್ಪಂದದ ದಿನಾಂಕದಿಂದ ಪ್ರತಿ 11 (ಹನ್ನೊಂದು) ತಿಂಗಳಿಗೊಮ್ಮೆ ನವೀಕರಿಸುವಂಥದ್ದಾಗಿರತಕ್ಕದ್ದು.
-
ಈ ಲೈಸೆನ್ಸ್ನ ಅವಧಿ ಮುಕ್ತಾಯವಾದ ನಂತರ ಲೈಸೆನ್ಸ್ದಾರನು ಸದರಿ ಆವರಣವನ್ನು ಯಾವುದೇ ಹೆಚ್ಚಿನ ಅವಧಿಗಾಗಿ (ಒಂದು ಬಾರಿಗೆ 11 ತಿಂಗಳಿಗಿಂತ ಹೆಚ್ಚಿಲ್ಲದಂತೆ) ಬಳಸಲು ಲೈಸೆನ್ಸಿನ ನವೀಕರಣಕ್ಕಾಗಿ ಆತನಿಗೆ ಮೊದಲ ಆದ್ಯತೆ ನೀಡತಕ್ಕದ್ದು. ಆದರೆ ಸದರಿ ಆವರಣಗಳನ್ನು ಅಧಿಭೋಗಕ್ಕೆ ತೆಗೆದುಕೊಳ್ಳುವುದಕ್ಕೂ ಮುಂಚೆ, ಆ ಬಗ್ಗೆ ಗೊತ್ತುಪಡಿಸಿದ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಮತ್ತು ನಿಯಮಗಳನ್ನು ಪಾಲಿಸಿರಬೇಕು.
-
ಲೈಸೆನ್ಸ್ದಾರನು 11 ತಿಂಗಳ ಮತ್ತೊಂದು ಅವಧಿಗೆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ನ್ನು ನವೀಕರಿಸಿಕೊಳ್ಳುವ ಇಚ್ಛೆ ಹೊಂದಿದ್ದರೆ, ಆ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಮುಕ್ತಾಯ ವಾಗುವುದಕ್ಕೆ 2 (ಎರಡು) ತಿಂಗಳಿಗಿಂತ ಕಡಿಮೆಯಿಲ್ಲದಷ್ಟು ಮುಂಚಿತವಾಗಿ ತನ್ನ ಅರ್ಜಿಯನ್ನು ಲೈಸೆನ್ಸ್ ಕೊಡುವವನಿಗೆ ಸಲ್ಲಿಸತಕ್ಕದ್ದು.
-
ಲೈಸೆನ್ಸ್ದಾರನು, ಅನುಸೂಚಿತ ಆವರಣಕ್ಕೆ ಸಂಬಂಧಪಟ್ಟಂತೆ ಲೈಸೆನ್ ಕೊಡುವವನಿಗೆ ಭದ್ರತಾ ಠೇವಣಿಯಾಗಿ ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸಿನ 10 (ಹತ್ತು) ತಿಂಗಳ ಶುಲ್ಕಕ್ಕೆ ಸಮನಾದಷ್ಟು ಮೊತ್ತವನ್ನು ಠೇವಣಿಯಾಗಿಡತಕ್ಕದ್ದು. ಸದರಿ ಭದ್ರತಾ ಠೇವಣಿಗೆ ಯಾವುದೇ ಬಡ್ಡಿ ಇರುವುದಿಲ್ಲ.
-
ಲೈಸೆನ್ಸ್ದಾರನು, ಖಚಿತವಾದ ಒಂದು ತಿಂಗಳ ಲಿಖಿತ ನೋಟೀಸನ್ನು ನೀಡುವ ಮೂಲಕ, ಆತನು ಅನುಸೂಚಿತ ಆವರಣವನ್ನು ತೆರವು ಮಾಡುವ ಮತ್ತು ಸ್ವಾಧೀನತೆಯನ್ನು ಒಪ್ಪಿಸಿಕೊಡುವ ಇಚ್ಛೆಯನ್ನು ವ್ಯಕ್ತಪಡಿಸಿದರೆ, ಸದರಿ ಭದ್ರತಾ ಮೊತ್ತವನ್ನು ಮರುಪಾವತಿ ಮಾಡುವಂತೆ ಕೋರಲು ಹಕ್ಕುಳ್ಳವನಾಗಿರತಕ್ಕದ್ದು.
-
ಲೈಸೆನ್ಸ್ದಾರನು ಹಿಂದಿನ ತಿಂಗಳ ಲೈಸೆನ್ಸ್ ಶುಲ್ಕವನ್ನು ಅದರ ನಂತರದ ತಿಂಗಳ 10ನೇ (ಹತ್ತನೇ) ದಿನಾಂಕದೊಳಗೆ ಪಾವತಿ ಮಾಡತಕ್ಕದ್ದು. ಹಾಗೆ ಪಾವತಿ ಮಾಡಲು ತಪ್ಪಿದರೆ ಲೈಸೆನ್ಸ್ ಕೊಟ್ಟವನು ಪ್ರತಿ ತಿಂಗಳಿಗೆ ಶೇಕಡಾ 10 ರಷ್ಟು ದಂಡ ಶುಲ್ಕ ವಿಧಿಸುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದು.
-
ಲೈಸೆನ್ಸ್ದಾರನು, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕ ಸಲ್ಲಿಸುವುದರಲ್ಲಿ ಸತತ ಮೂರು ತಿಂಗಳು ವಿಫಲನಾದರೆ, ಲೈಸೆನ್ಸ್ ಕೊಡುವವನು ಬಾಕಿ ಮೊತ್ತವನ್ನು ವಸೂಲು ಮಾಡುವ ತನ್ನ ಹಕ್ಕನ್ನು ಕಾಯ್ದಿರಿಸಿಕೊಳ್ಳುವುದರ ಜೊತೆಗೆ ಭದ್ರತಾ ಠೇವಣಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮತ್ತು ಅನುಸೂಚಿತ ಸ್ವತ್ತನ್ನು ಮರು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು.
-
ಲೈಸೆನ್ಸ್ದಾರನು ಯಾವ ಉದ್ದೇಶಕ್ಕಾಗಿ ಆವರಣವನ್ನು ಹಂಚಿಕೆ ಮಾಡಲಾಗಿದೆಯೋ ಆ ಯಾವುದೇ ಉದ್ದೇಶದ ಹೊರತಾಗಿ ಇತರ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ. ಹಂಚಿಕೆ ಮಾಡಿರುವ ಆವರಣವನ್ನು, ಅದನ್ನು ಹಂಚಿಕೆ ಮಾಡಿರುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲವೆಂದು ಕಾರ್ಯದರ್ಶಿಗೆ ಮನದಟ್ಟಾದರೆ, ಲೈಸೆನ್ಸ್ ಕೊಡುವವನು ಲೈಸೆನ್ಸ್ದಾರನಿಗೆ, ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸೆನ್ಸ್ನ್ನು ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತಾನೆ.
-
ಲೈಸೆನ್ಸ್ ಶುಲ್ಕವನ್ನು ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕದ ಶೇಕಡಾ 5ರ ದರದಲ್ಲಿ ಹೆಚ್ಚಿಸುವ ಮೂಲಕ ಪ್ರತಿ 33 ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು. ಇದಕ್ಕೆ ಲೈಸೆನ್ಸ್ದಾರನು ಬದ್ಧನಾಗಿರತಕ್ಕದ್ದು.
-
ಲೈಸೆನ್ಸ್ ಕೊಡುವವನು, ಲೈಸೆನ್ಸನ್ನು ರದ್ದುಪಡಿಸಿ ಅನುಸೂಚಿತ ಆವರಣವನ್ನು ಮರುಸ್ವಾಧೀನ ಪಡಿಸಿಕೊಳ್ಳಬೇಕೆಂದು ಇಚ್ಛಿಸಿದಲ್ಲಿ, ಲೈಸೆನ್ಸ್ ಕೊಡುವವನು ಲೈಸೆನ್ಸ್ದಾರನಿಗೆ ಹೊರಹಾಕುವ ನೋಟೀಸನ್ನು ಜಾರಿಮಾಡಿದ ಮೇಲೆ ಲೈಸೆನ್ಸುದಾರನು ಈ ನೋಟೀಸನ್ನು ಜಾರಿಮಾಡಿದ ದಿನಾಂಕದಿಂದ 15 (ಹದಿನೈದು) ದಿನಗಳೊಳಗೆ ಅನುಸೂಚಿತ ಆವರಣದ ಖಾಲಿ ಸ್ವಾಧೀನವನ್ನು ಲೈಸೆನ್ಸ್ ನೀಡುವವನಿಗೆ ವಹಿಸಿಕೊಡತಕ್ಕದ್ದು. ಲೈಸೆನ್ಸ್ದಾರನು ಹಾಗೆ ಮಾಡಲು ವಿಫಲನಾದರೆ, ಲೈಸೆನ್ಸ್ ಕೊಡುವವನು ಸಮುಚಿತ ಕಾನೂನಿನ ಉಪಬಂಧಗಳ ಮೇರೆಗೆ ಲೈಸೆನ್ಸ್ದಾರನನ್ನು ಹೊರಹಾಕಲು ಸೂಕ್ತ ಕಾನೂನು ವ್ಯವಹರಣೆಗಳನ್ನು ಜರುಗಿಸುವ ಹಕ್ಕನ್ನು ಕಾಯ್ದಿರಿಸಿ ಕೊಂಡಿರುವುದರ ಜೊತೆಗೆ, ಸದರಿ ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಆತನು ಹಕ್ಕುಳ್ಳವನಾಗಿರತಕ್ಕದ್ದು.
-
ಲೈಸೆನ್ಸ್ದಾರನು, ಲೈಸೆನ್ಸ್ ಕೊಡುವವನ ಲಿಖಿತ ಒಪ್ಪಿಗೆ ಇಲ್ಲದೆ ಅನುಸೂಚಿತ ಆವರಣದ ಇಡೀ ಅಥವಾ ಯಾವುದೇ ಒಂದು ಭಾಗವನ್ನು ವಹಿಸಿಕೊಡುವುದಾಗಲೀ ಅಥವಾ ಯಾರೇ ಮೂರನೇ ಪಕ್ಷಕಾರನಿಗೆ/ ಪಕ್ಷಕಾರರಿಗೆ ಅನುಸೂಚಿತ ಆವರಣದಲ್ಲಿ ಅಧಿಭೋಗ ಹೊಂದುವುದಕ್ಕೆ ಅಥವಾ ಯಾವುದೇ ತೆರನಾದ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಅನುಮತಿ ನೀಡತಕ್ಕದ್ದಲ್ಲ ;
ಲೈಸೆನ್ಸ್ದಾರನು, ಪಾಲುದಾರಿಕೆ ಫರ್ಮ್ ಆಗಿರುವ ಸಂದರ್ಭದಲ್ಲಿ, ಪಾಲುದಾರಿಕೆ ಫರ್ಮಿನ ರಚನೆಯಲ್ಲಿ ಯಾವುದೇ ಬದಲಾವಣೆಯಾದರೆ, ಅದನ್ನು ಮಾರುಕಟ್ಟೆ ಸಮಿತಿಯ ಗಮನಕ್ಕೆ ತರತಕ್ಕದ್ದು. ಲೈಸೆನ್ಸ್ದಾರನು, ಬದಲಾವಣೆಯಾಗುವುದಕ್ಕೆ ಮೊದಲು ಇದ್ದ ಫರ್ಮ್ನ ಪಾಲುದಾರರಾಗಿದ್ದ ವ್ಯಕ್ತಿಗಳೇ ಬದಲಾವಣೆಯಾದ ನಂತರವೂ ಅವರೇ ಮುಂದುವರೆಯದ ಹೊರತು, ಪುನರ್ರಚಿತ ಪಾಲುದಾರಿಕೆಯ ಪಾಲುದಾರರಿಗೆ ಆವರಣವನ್ನು ವಹಿಸಿಕೊಡುವುದಕ್ಕೆ ಒಪ್ಪತಕ್ಕದ್ದಲ್ಲ.
-
ಲೈಸೆನ್ಸ್ದಾರನು, ಲೈಸೆನ್ಸ್ ಕೊಡುವವನ ಲಿಖಿತ ಒಪ್ಪಿಗೆಯಿಲ್ಲದೆ ಅನುಸೂಚಿತ ಆವರಣದ ಕಟ್ಟಡದ ಒಳಭಾಗ ಅಥವಾ ಹೊರಭಾಗದಲ್ಲಿ ಖಾಯಂ ಅಥವಾ ತಾತ್ಕಾಲಿಕವಾದಂಥ ಯಾವುದೇ ಬದಲಾವಣೆಗಳನ್ನು ಮಾಡತಕ್ಕದ್ದಲ್ಲ.
-
ಲೈಸೆನ್ಸ್ದಾರನು ತಾನು ಬಳಸಿದ ವಿದ್ಯುಚ್ಛಕ್ತಿ ಮತ್ತು ನೀರಿಗೆ ಸಂಬಂಧಿಸಿದಂತೆ, ಈ ಸಂಬಂಧ ಲೈಸೆನ್ಸ್ ಕೊಡುವವನು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳಿಗನುಸಾರವಾಗಿ ವಿದ್ಯುಚ್ಛಕ್ತಿ ಮತ್ತು ನೀರಿನ ವೆಚ್ಚಗಳನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಂದಾಯ ಮಾಡತಕ್ಕದ್ದು.
-
ಲೈಸೆನ್ಸ್ದಾರನು, ಅನುಸೂಚಿತ ಆವರಣವನ್ನು, ಯಾವುದೇ ಕಾನೂನುಬಾಹಿರ ಉದ್ದೇಶಗಳಾಗಿ ಎಂದರೆ, ಜೂಜು, ಮದ್ಯ/ ಸ್ಫೋಟಕಗಳು/ ಪಟಾಕಿಗಳು/ ಯಾವುದೇ ಇತರ ಸ್ಫೋಟಕಗಳು/ ದಹನ ಸರಕುಗಳನ್ನು/ ಸಾಮಗ್ರಿಗಳನ್ನು ಮಾರಾಟಮಾಡುವ/ ದಾಸ್ತಾನು ಮಾಡುವ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ ಅಥವಾ ಅದಕ್ಕಾಗಿ ಅವುಗಳನ್ನು ಬಳಸತಕ್ಕದ್ದಲ್ಲ ಅಥವಾ ಲೈಸೆನ್ಸ್ ಕೊಡುವವನ ಸ್ವತ್ತಿಗೆ ಅಥವಾ ನೆರೆಹೊರೆಯ ಅಧಿಭೋಗದಾರರ ಪ್ರಾಣ ಮತ್ತು ಆಸ್ತಿಗೆ ಅಪಾಯವುಂಟುಮಾಡಬಹುದಾದ ಯಾವುದನ್ನೂ ಮಾಡತಕ್ಕದ್ದಲ್ಲ.
-
ಲೈಸೆನ್ಸ್ದಾರನು, ಅನುಸೂಚಿತ ಆವರಣವನ್ನು ಯಾವುದೇ ನಷ್ಟಕ್ಕೆ ಭದ್ರತೆಯಾಗಿ ನೀಡಲು ಆಥವಾ ಯಾವುದೇ ಹೊಣೆಗಾರಿಕೆಯನ್ನು ಅಥವಾ ಋಣಭಾರವನ್ನು ಯಾವುದೇ ರೀತಿಯಲ್ಲಿ ಸೃಜಿಸಲು ಹಕ್ಕು ಪಡೆಯತಕ್ಕದ್ದಲ್ಲ.
-
ಲೈಸೆನ್ಸ್ದಾರನು, ಈ ಲೈಸೆನ್ಸಿನ ಯಾವುದೇ ನಿಬಂಧನೆಗಳನ್ನು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ, ಲೈಸೆನ್ಸ್ ಕೊಡುವವನು ಆತನ ಲೈಸೆನ್ಸನ್ನು ರದ್ದುಪಡಿಸುವ ಒಂದು ತಿಂಗಳ ನೋಟೀಸು ನೀಡಿದಾಗ ಆ ಒಂದು ತಿಂಗಳೊಳಗೆ ಆವರಣವನ್ನು ಖಾಲಿ ಮಾಡುವುದಕ್ಕೆ ಲೈಸೆನ್ಸುದಾರನು ಬದ್ಧನಾಗಿರತಕ್ಕದ್ದು. ಅಥವಾ ಇಲ್ಲಿ ನಿರ್ದಿಷ್ಟಪಡಿಸಿದ, ಕೇಳಿದಾಗ ಬಿಟ್ಟುಕೊಡುವ ಲೈಸೆನ್ಸ್ ಶುಲ್ಕಗಳನ್ನು ಸಂದಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಲೈಸೆನ್ಸ್ದಾರನು ಮೂರು ತಿಂಗಳುಗಳವರೆಗೆ ಸುಸ್ತಿದಾರನಾಗಿದ್ದರೆ, ಲೈಸೆನ್ಸ್ದಾರನ ಕಾನೂನುಬದ್ಧ ಉತ್ತರಾಧಿಕಾರಿಗಳು, ನಿರ್ವಾಹಕರು ಮಾರುಕಟ್ಟೆ ಸಮಿತಿಗೆ ಲೈಸೆನ್ಸ್ ಶುಲ್ಕದ ಬಾಕಿಯನ್ನು ಪಾವತಿ ಮಾಡುವುದಕ್ಕೆ ಹೊಣೆಯಾಗಿರತಕ್ಕದ್ದು.
-
ಸದರಿ ಆವರಣದ ಸಮಗ್ರ ಮೇಲ್ವಿಚಾರಣೆಯು ಮಾರುಕಟ್ಟೆ ಸಮಿತಿಯಲ್ಲಿ ನಿಹಿತವಾಗಿರತಕ್ಕದ್ದು. ಅದರ ಅಧಿಕಾರಿಗಳು/ ಸಿಬ್ಬಂದಿಯು, ಎಲ್ಲ ಸಮಂಜಸ ವೇಳೆಗಳಲ್ಲಿ ಸದರಿ ಆವರಣದ ದುರಸ್ತಿ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡುವುದಕ್ಕೆ ಹಕ್ಕುಳ್ಳವರಾಗಿರತಕ್ಕದ್ದು; ಲೈಸೆನ್ಸ್ದಾರನು, ಆವರಣವನ್ನು ಸುಸ್ಥಿತಿಯಲ್ಲಿ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಮತ್ತು ಲೈಸೆನ್ಸ್ ಅವಧಿ ಮುಕ್ತಾಯಗೊಂಡ ತರುವಾಯ ಅಥವಾ ಲೈಸನ್ಸ್ ಕೊಡುವವನು ಸದರಿ ಆವರಣವನ್ನು ಖಾಲಿ ಮಾಡುವಂತೆ ಕೇಳಿದಾಗ ಅವನಿಗೆ ಅಂಗಡಿಯನ್ನು ಸುಸ್ಥಿತಿಯಲ್ಲಿ ವಹಿಸಿಕೊಡುವುದಕ್ಕೆ ಬದ್ಧನಾಗಿರತಕ್ಕದ್ದು.
-
ಲೈಸೆನ್ಸ್ದಾರನೂ ಸಹ ಲೈಸೆನ್ಸ್ ಕೊಡುವವನಿಗೆ ಒಂದು ತಿಂಗಳ ನೋಟೀಸು ನೀಡುವ ಮೂಲಕ ಲೈಸೆನ್ಸನ್ನು ರದ್ದುಗೊಳಿಸಬಹುದು. ಲೈಸೆನ್ಸಿನ ಅವಧಿ ಮುಗಿದ ತರುವಾಯ ತನ್ನಷ್ಟಕ್ಕೇನೇ ಲೈಸೆನ್ಸ್ ರದ್ದಾಗಿದೆಯೆಂದು ಭಾವಿಸತಕ್ಕದ್ದು.