Annexure
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ 16ನೇ ಪ್ರಕರಣದ (1)ನೇ ಉಪಪ್ರಕರಣದ (ಸಿ - I) ಖಂಡದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸದರಿ ಪ್ರಕರಣದ ಉದ್ದೇಶಕ್ಕಾಗಿ ಈ ಮೂಲಕ ಮಾನ್ಯತೆ ನೀಡಿದೆ.
Annexure
ಮತ್ತು ಅವರ ಹೆಸರಿನಲ್ಲಿ,
ಎ. ಪರಮೇಶ್ವರಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಇಲಾಖೆ.
ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಸಚಿವಾಲಯ ಅಧಿಸೂಚನೆ ಕ್ರಮಾಂಕ ಆರ್ಡಿಸಿ 9 ಎಂಡಬ್ಲ್ಯೂ ಎಂ 79 ಬೆಂಗಳೂರು, ದಿನಾಂಕ 30ನೇ ಮೇ 1979.
ಕರ್ನಾಟಕ ತೂಕ ಮತ್ತು ಅಳತೆ (ಜಾರಿ) ಅಧಿನಿಯಮ, 1958 (1959ರ ಕರ್ನಾಟಕ ಅಧಿನಿಯಮ 2)ರ 8ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ದಿನಾಂಕ 7ನೇ ಜುಲೈ 1979ರಿಂದ ಜಾರಿಗೆ ಬರುವಂತೆ ತರಕಾರಿ ಮಾರಾಟದ ಸಂಬಂಧದಲ್ಲಿ ನಡೆಯುವ ಯಾವುದೇ ವ್ಯವಹಾರದಲ್ಲಿ, ವಹಿವಾಟಿನಲ್ಲಿ ಅಥವಾ ಮಾಡಿಕೊಳ್ಳಲಾಗುವ ಯಾವುದೇ ಕರಾರಿನಲ್ಲಿ ತರಕಾರಿಗಳ ಮೊತ್ತವನ್ನು ತೂಕದಲ್ಲಿ ಮಾತ್ರವೇ ನಮೂದಿಸತಕ್ಕದ್ದೆಂದು ಈ ಮೂಲಕ ನಿರ್ದೇಶಿಸಿದೆ.
ತರಕಾರಿಗಳನ್ನು ರಾಶಿಗಳಲ್ಲಿ ಮಾರಾಟ ಮಾಡಿದಾಗ ಅಂತಹ ಪ್ರತಿಯೊಂದು ರಾಶಿಯ ಮೇಲೆ ಅದರ ಅಂದಾಜು ತೂಕವನ್ನು ಬರೆದು ಚೀಟಿಯೊಂದನ್ನು ಇಟ್ಟಿರಬೇಕು:
ಪರಂತು, ಯಾವ ರಾಶಿಯ ಮಾರುಕಟ್ಟೆ ಬೆಲೆಯು ಒಂದು ರೂಪಾಯಿಗೆ ಮೀರುವುದಿಲ್ಲಮೋ ಅಂತಹ ರಾಶಿಯ ಮೇಲೆ ಅಂತಹ ಯಾವುದೇ ಚೀಟಿಯನ್ನು ಇಡಬೇಕಾಗಿಲ್ಲ.
1193-ಎಸ್ಓ. 1264
Annexure
ಜಿ.ಎಸ್. ಜೋಷಿ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ ಕ್ರಮಾಂಕ : ಆರ್ಡಿಸಿ 261 ಎಂಎಂಡಿ 79.
ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ 30ನೇ ಜನವರಿ 1980.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 140ನೇ ಪ್ರಕರಣದ (2)ನೇ ಉಪಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡ ಕೋಷ್ಠಕದ ಅಂಕಣ (3)ರಲ್ಲಿ ನಿರ್ದಿಷ್ಟಪಡಿಸಿರುವಂತೆ, ಸದರಿ ಅಧಿನಿಯಮದ ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳ ಉಪಬಂಧಗಳ ಮೂಲಕ, ಮುಖ್ಯ ಮಾರುಕಟ್ಟೆ ಅಧಿಕಾರಿಗೆ ಪ್ರದಾನ ಮಾಡಲಾದ ಅಧಿಕಾರಗಳನ್ನು
(2)ನೇ ಅಂಕಣದ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವ ಅವನ ಅಧೀನ ಅಧಿಕಾರಿಗಳು ಸಹ ಚಲಾಯಿಸತಕ್ಕದ್ದೆಂದು ಈ ಮೂಲಕ ನಿರ್ದೇಶಿಸಿದೆ. ಆದರೆ ಹಾಗೆ ಅಧಿಕಾರ ಚಲಾಯಿಸುವುದು ಅದರ ಅಂಕಣ (4)ರಲ್ಲಿನ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಕೋಷ್ಟಕ ಕ್ರಮ ಅಧೀನ ಅಧಿನಿಯಮ ನಿಬಂಧನೆಗಳು ಸಂಖ್ಯೆ ಅಧಿಕಾರಿಗಳು ಮತ್ತು ನಿಯಮಗಳ ಮತ್ತು ಷರತ್ತುಗಳು ಉಪಬಂಧಗಳು --------------------------------------------------------------- 1 2 3 4 --------------------------------------------------------------- 1. ಜಂಟಿ ಮುಖ್ಯ ಪ್ರಕರಣಗಳು : (ಎ) 71 (1)ನೇ ಪ್ರಕರಣದ ಮಾರುಕಟ್ಟೆ ಅಧಿಕಾರಿ 44(2), 53(3), 71(1), ಮೂಲಕ ಮಂಜೂರಾತಿ 73(3), 74 (1) ಬಗ್ಗೆ ಪ್ರದಾನ ಮಾಡಲಾದ ಮತ್ತು 125 ಅಧಿಕಾರಗಳ ಪ್ರತ್ಯಾಯೋಜ ನಿಯಮಗಳು- 49 ನೆಯು ಐದು ನೂರು (3), 59, 64(2) ರೂಪಾಯಿಗಳನ್ನು ಮೀರದ ಮೊಬಲಗಿಗೆ ಸೀಮಿತವಾಗಿರತಕ್ಕದ್ದು. --------------------------------------------------------------- 1 2 3 1. ಜಿಲ್ಲಾ ಮಾರುಕಟ್ಟೆ ಅಧಿಕಾರಿ ಪ್ರಕರಣ 53 (3) ---------------------------------------------------------------
Annexure
ಜಿ.ಎಸ್. ಜೋಷಿ ಸರ್ಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ.
ಗೃಹ ಸಚಿವಾಲಯ ಅಧಿಸೂಚನೆ ಕ್ರಮಾಂಕ ಹೆಚ್ಡಿ 2226 ಪಿಸಿಸಿ 81 ಬೆಂಗಳೂರು, ದಿನಾಂಕ 7ನೇ ಜನವರಿ 1982.
ಕರ್ನಾಟಕ ಪೋಲೀಸು ಅಧಿನಿಯಮ, 1963ರ (1964ರ ಕರ್ನಾಟಕ ಅಧಿನಿಯಮ 4)ರ ಪ್ರಕರಣ 2ರ ಖಂಡ (11-ಎ) ದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966ರ ಮೇರೆಗೆ ಸ್ಥಾಪಿಸಲಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಸದರಿ ಅಧಿನಿಯಮದ ಉದ್ದೇಶಕ್ಕಾಗಿ ‘‘ಸ್ಥಳೀಯ ಪ್ರಾಧಿಕಾರ'' ಎಂಬುದಾಗಿ ಈ ಮೂಲಕ ಘೋಷಿಸುತ್ತದೆ.
Annexure
ಕರ್ನಾಟಕ ಸರ್ಕಾರ
ಕ್ರಮಾಂಕ :ಆರ್ಡಿಸಿ 35 ಎಂಎಂಡಿ 82.
ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, 21ನೇ ಮೇ 84.
ಆದೇಶ
ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಾಹಣೆಯ) ನಿಯಮಗಳು, 1977ರ ನಿಯಮ 6ರ ಉಪನಿಯಮ (1)ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಇಲಾಖೆಯ ಸಚಿವ ಆರ್.ಎಲ್. ಜಾಲಪ್ಪ ಎಂಬ ನಾನು, ಸರ್ಕಾರದ ಕಾರ್ಯದರ್ಶಿ. ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ, ಬಹುಮಹಡಿ ಕಟ್ಟಡ, ಬೆಂಗಳೂರು ಇವರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಅಧಿನಿಯಮ 1966ರ 126ನೇ ಪ್ರಕರಣದ ಮೇರೆಗೆ ಉದ್ಭವಿಸುವ ಪ್ರಕರಣಗಳನ್ನು ಮುಂದಿನ ಆದೇಶಗಳವರೆಗೆ ವಿಲೇ ಮಾಡತಕ್ಕದ್ದೆಂದು ಈ ಮೂಲಕ ವಿಶೇಷವಾಗಿ ನಿರ್ದೇಶಿಸಿದ್ದೇನೆ.
ಸಹಿ
ಆರ್.ಎಲ್. ಜಾಲಪ್ಪ ಸಹಕಾರ ಸಚಿವರು. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಹಿ ಅರ್ಜುನಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ, (ಪ್ರಭಾರ) ಗ್ರಾಮೀಣ ಅಭಿವೃದ್ಧಿ ಮತ್ತು ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಕ್ರಮಾಂಕ :ಸಿಎಂಡಬ್ಲ್ಯೂ 4 ಇಡಬ್ಲ್ಯೂಎಂ 86
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 31ನೇ ಮಾರ್ಚ್ 86.
ಅಧಿಸೂಚನೆ
ಕರ್ನಾಟಕ ತೂಕ ಮತ್ತು ಅಳತೆಗಳ (ಜಾರಿ) ಅಧಿನಿಯಮ 1958 (1959ರ ಕರ್ನಾಟಕ ಅಧಿನಿಯಮ 2)ರ 8ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಅಧಿಕೃತ ರಾಜ್ಯ ಪತ್ರದಲ್ಲಿ ಅಧಿಸೂಚನೆಯು ಪ್ರಕಟವಾದ ದಿನಾಂಕದಿಂದ ಇಡೀ ಕರ್ನಾಟಕ ರಾಜ್ಯದಲ್ಲಿ ತರಕಾರಿಗಳ ಸಗಟು ವ್ಯಾಪಾರಕ್ಕೆ ಸಂಬಂಧಿಸಿದಂತೆ ನಡೆಯುವ ಯಾವುದೇ ವ್ಯವಹಾರದಲ್ಲಿ, ವಹಿವಾಟಿನಲ್ಲಿ ಅಥವಾ ಮಾಡಿಕೊಳ್ಳಲಾಗುವ ಯಾವುದೇ ಕರಾರಿನಲ್ಲಿ ತರಕಾರಿಗಳ ಮೊತ್ತವನ್ನು ತೂಕದಲ್ಲಿ ಮಾತ್ರವೇ ನಮೂದಿಸತಕ್ಕದ್ದೆದೆಂದು ಈ ಮೂಲಕ ನಿರ್ದೇಶಿಸಿದೆ.
Annexure
ಸಹಕಾರ ಸಚಿವಾಲಯ
ಅಧಿಸೂಚನೆ ಕ್ರಮಾಂಕ : ಸಿಎಂಡಬ್ಲ್ಯೂ 199 ಇಎಂಡಿ 86 (ಪಿ) ಬೆಂಗಳೂರು, ದಿನಾಂಕ 2ನೇ ಡಿಸೆಂಬರ್ 1986
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ 1966ರ (1966ರ ಕರ್ನಾಟಕ ಅಧಿನಿಯಮ 27)ರ 2ನೇ ಪ್ರಕರಣದ ಖಂಡ (12-ಎ)ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಅಧಿನಿಯಮದ ಮೇರೆಗೆ ಕೃಷಿ ಮಾರುಕಟ್ಟೆ ನಿರ್ದೇಶಕನ ಎಲ್ಲ ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು ಚಲಾಯಿಸಲು ಮತ್ತು ನಿರ್ವಹಿಸಲು ಮುಖ್ಯ ಮಾರುಕಟ್ಟೆ ಅಧಿಕಾರಿಗೆ ಈ ಮೂಲಕ ಅಧಿಕಾರ ನೀಡಿದೆ.
1527-ಎಸ್.ಓ.346
Annexure
ಕರ್ನಾಟಕ ಸರ್ಕಾರ
ಕ್ರಮಾಂಕ :ಸಿಎಂಡಬ್ಲ್ಯೂ 257 ಎಂಎಂಡಿ 86
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 4.12.1986.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಅನುಸೂಚಿಯಲ್ಲಿ ಈ ಕೆಳಕಂಡ ತಿದ್ದುಪಡಿಗಳನ್ನು ಮಾಡಿದೆ:-
ಸದರಿ ಅನುಸೂಚಿಯಲ್ಲಿ :-
-
‘‘ III ಹೂಗಳು'' ಎಂಬ ಬಾಬನ್ನು ಮತ್ತು ಅದಕ್ಕೆ ಸಂಬಂಧಿಸಿದ ನಮೂದುಗಳನ್ನು ಬಿಟ್ಟುಬಿಡತಕ್ಕದ್ದು.
-
‘‘VI ಹಣ್ಣುಗಳು'' ಎಂಬ ಬಾಬಿನಲ್ಲಿ ಉಪಬಾಬು 19ರ ತರುವಾಯ ಈ ಕೆಳಕಂಡ ಬಾಬುಗಳನ್ನು ಸೇರಿಸತಕ್ಕದ್ದು, ಎಂದರೆ:- ‘‘20. ಕಿತ್ತಳೆ'' ‘‘21. ಕಲ್ಲಂಗಡಿ''
-
‘‘XIಮರ'' ಎಂಬ ಬಾಬಿನಲ್ಲಿ ಉಪಬಾಬು 19ರ ತರುವಾಯ ಈ ಕೆಳಕಂಡ ಬಾಬುಗಳನ್ನು ಸೇರಿಸತಕ್ಕದ್ದು, ಎಂದರೆ:- ‘‘20. ಸಿಲ್ವರ್ ಓಕ್'' ‘‘21 ಪಾರಿವಾಳ''.
Annexure
ಸಹಕಾರ ಸಚಿವಾಲಯ ಅಧಿಸೂಚನೆ ಕ್ರಮಾಂಕ ಆರ್ ಡಿಸಿ 180 ಎಂಎಂಡಿ 84 ಬೆಂಗಳೂರು, ದಿನಾಂಕ 11ನೇ ಡಿಸೆಂಬರ್ 1986
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966(1966ರ ಕರ್ನಾಟಕ ಅಧಿನಿಯಮ 27)ರ ಪ್ರಕರಣ 133ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 64ನೇ ಪ್ರಕರಣದ ಉಪಬಂಧಗಳು ಕರ್ನಾಟಕ ರಾಜ್ಯ ಬಿತ್ತನೆ, ನಿಗಮ ನಿಯಮಿತ, ಬೆಂಗಳೂರು (ಕರ್ನಾಟಕ ಸರ್ಕಾರದ ಉದ್ಯಮ) ಇದಕ್ಕೆ ಅನ್ವಯವಾಗದಂತೆ ಈ ಮೂಲಕ ವಿನಾಯಿತಿ ನೀಡಿದೆ.
Annexure
ಸಹಿ ಎಸ್.ಓ.ಸಂ.2205 ವಿ. ನರಸಿಂಹಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಕ್ರಮಾಂಕ :ಸಿಎಂಡಬ್ಲ್ಯೂ 272 ಎಂಎಂಡಿ 86.
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 14.1.1987.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966(1966ರ ಕರ್ನಾಟಕ ಅಧಿನಿಯಮ 27)ರ 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಮೂಲಕ ಅನುಸೂಚಿಯಲ್ಲಿ ಈ ಕೆಳಕಂಡ ತಿದ್ದುಪಡಿಗಳನ್ನು ಮಾಡಿದೆ:-
ಅನುಸೂಚಿಯಲ್ಲಿ ‘‘ಪ್ಲಾಂಟೇಷನ್ ಬೆಳೆಗಳು ಮತ್ತು ಸಾಂಬಾರ ಪದಾರ್ಥಗಳು'' ಇವುಗಳಿಗೆ ಸಂಬಂಧಿಸಿದ ಬಾಬು VIII ರಲ್ಲಿ ಕ್ರಮಸಂಖ್ಯೆ 2ರಲ್ಲಿನ ‘‘ಏಲಕ್ಕಿ'' ಎಂಬ ಪದವನ್ನು ಬಿಟ್ಟುಬಿಡತಕ್ಕದ್ದು.
Annexure
ಸಹಿ
ವಿ. ನರಸಿಂಹಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಮುಖ್ಯ ಮಾರುಕಟ್ಟೆ ಅಧಿಕಾರಿಯ ಮತ್ತು ಇತರ ಅಧೀನ ಹುದ್ದೆಗಳ ಹೆಸರಿನ ಬದಲಾವಣೆ
ಪ್ರಸ್ತಾವನೆ:
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ) ಅಧಿನಿಯಮ, 1966 ಇದನ್ನು 1988ರ ಅಧಿನಿಯಮ ಸಂಖ್ಯೆ 35ರಿಂದ ತಿದ್ದುಪಡಿ ಮಾಡಲಾಗಿದ್ದು, ಸದರಿ ತಿದ್ದುಪಡಿಯು ಇತರ ವಿಷಯಗಳೊಂದಿಗೆ ‘‘ಮುಖ್ಯ ಮಾರುಕಟ್ಟೆ ಅಧಿಕಾರಿ'' ಎಂಬ ಪದಾವಳಿಗೆ ಬದಲಾಗಿ ‘‘ಕೃಷಿ ಮಾರುಕಟ್ಟೆ ನಿರ್ದೇಶಕ'' ಎಂಬ ಪದಾವಳಿಯನ್ನು ಸೇರಿಸಲು ಅವಕಾಶ ಕಲ್ಪಿಸುತ್ತದೆ. ಆದ್ದರಿಂದ ಮುಖ್ಯ ಮಾರುಕಟ್ಟೆ ಅಧಿಕಾರಿಯು ಮತ್ತು ಇತರ ಅಧೀನ ಹುದ್ದೆಗಳ ಪದನಾಮಗಳನ್ನು ಈ ಕೆಳಕಂಡಂತೆ ಬದಲಾವಣೆ ಮಾಡಬೇಕಾಗಿದೆ:
ಈಗಿರುವ ಪದನಾಮಗಳು
ಉದ್ದೇಶಿತ ಬದಲಿ ಪದನಾಮಗಳು
ಈಗಿರುವ ಪದನಾಮಗಳು ಉದ್ದೇಶಿತ ಬದಲಿ ಪದನಾಮಗಳು
- ಮುಖ್ಯ ಮಾರುಕಟ್ಟೆ ಅಧಿಕಾರಿ
ಕೃಷಿ ಮಾರುಕಟ್ಟೆ ನಿರ್ದೇಶಕ
-
ಮುಖ್ಯ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ನಿರ್ದೇಶಕ 2) ಜಂಟಿ ಮುಖ್ಯ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕ 3) ಉಪ ಮುಖ್ಯಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಉಪ ನಿರ್ದೇಶಕ 4) ಜಿಲ್ಲಾ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ 5) ಮುಖ್ಯ ಮಾರುಕಟ್ಟೆ ಅಧಿಕಾರಿಯ ಕೃಷಿ ಮಾರುಕಟ್ಟೆ ನಿರ್ದೇಶಕನ ಕೇಂದ್ರ ಕಾರ್ಯಾಲಯದ ಗೆಜೆಟೆಡ್ ಸಹಾಯಕ ಕಾರ್ಯಾಲಯದ ಗೆಜೆಟೆಡ್ ಸಹಾಯಕ
-
mots ಮುಖ್ಯ ಮಾರುಕಟ್ಟೆ ಅಧಿಕಾರಿ
3). ಉಪ ಮುಖ್ಯಮಾರುಕಟ್ಟೆ ಅಧಿಕಾರಿ
Ba ಮಾರುಕಟ್ಟೆ ಉಪ ನಿರ್ದೇಶಕ
- ಜಿಲ್ಲಾ ಮಾರುಕಟ್ಟೆ ಅಧಿಕಾರಿ
೮ w ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ
- ಮುಖ್ಯ ಮಾರುಕಟ್ಟೆ ಅಧಿಕಾರಿಯ
ಕಾರ್ಯಾಲಯದ ಗೆಜೆಟೆಡ್ ಸಹಾಯಕ
ಲ es > ಕಾರ್ಯಾಲಯದ ಗೆಜೆಟೆಡ್ ಸಹಾಯಕ
- ಜಂಟಿ ಮುಖ್ಯ ಮಾರುಕಟ್ಟೆ ಅಧಿಕಾರಿಯ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕನ
ಕೇಂದ್ರ ಗೆಜೆಟೆಡ್ ಸಹಾಯಕ
ಕೇಂದ್ರ ಗೆಜೆಟೆಡ್ ಸಹಾಯಕ
ಕೇಂದ್ರ ಗೆಜೆಟೆಡ್ ಸಹಾಯಕ ಕೇಂದ್ರ ಗೆಜೆಟೆಡ್ ಸಹಾಯಕ
ಮೇಲ್ಕಂಡ ಹುದ್ದೆಗಳ ಪದನಾಮಗಳನ್ನು ಬದಲಾಯಿಸಲು ಒಂದು ಔಪಚಾರಿಕ ಆದೇಶವನ್ನು ಹೊರಡಿಸುವುದು ಅವಶ್ಯಕವಾಗಿದೆ.
ಆದೇಶ ಸಂಖ್ಯೆ ಸಿಎಂಡಬ್ಲ್ಯೂ 199 ಇಎಂಡಿ 86,
ಬೆಂಗಳೂರು, ದಿನಾಂಕ 5ನೇ ಫೆಬ್ರವರಿ 1987
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) (ತಿದ್ದುಪಡಿ) ಅಧಿನಿಯಮ, 1966ರ ಪ್ರಕಟಣೆಯ ಪರಿಣಾಮವಾಗಿ (ಸರ್ಕಾರಿ ಅಧಿಸೂಚನೆ ಸಂಖ್ಯೆ ಲಾ 48 ಎಲ್ ಎಂಪಿ 86 ದಿನಾಂಕ 7ನೇ ಅಕ್ಟೋಬರ್ 1986 ಇದನ್ನು ನೋಡಿ) ಮಾರುಕಟ್ಟೆ ಇಲಾಖೆಯ ಈ ಕೆಳಕಂಡ ಹುದ್ದೆಗಳ ಹೆಸರುಗಳನ್ನು ಈ ಮುಂದೆ ಸೂಚಿಸಿರುವಂತೆ ಬದಲಾಯಿಸಲಾಗಿದೆ:
ಕ್ರಮಸಂಖ್ಯೆ ಈಗಿರುವ ಪದನಾಮಗಳು ಉದ್ದೇಶಿತ ಬದಲಿ ಪದನಾಮಗಳು 1. ಮುಖ್ಯ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ನಿರ್ದೇಶಕ 2. ಜಂಟಿ ಮುಖ್ಯ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕ 3. ಉಪ ಮುಖ್ಯ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಉಪ ನಿರ್ದೇಶಕ 4. ಜಿಲ್ಲಾ ಮಾರುಕಟ್ಟೆ ಅಧಿಕಾರಿ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ 5. ಮುಖ್ಯ ಮಾರುಕಟ್ಟೆ ಅಧಿಕಾರಿಯ ಕೃಷಿ ಮಾರುಕಟ್ಟೆ ನಿರ್ದೇಶಕನ ಕೇಂದ್ರ ಕಾರ್ಯಾಲಯದ ಗೆಜೆಟೆಡ್ ಸಹಾಯಕ ಕಾರ್ಯಾಲಯದ ಗೆಜೆಟೆಡ್ ಸಹಾಯಕ 6. ಜಂಟಿ ಮುಖ್ಯ ಮಾರುಕಟ್ಟೆ ಅಧಿಕಾರಿಯ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕನ ಕೇಂದ್ರ ಗೆಜೆಟೆಡ್ ಸಹಾಯಕ ಕೇಂದ್ರ ಗೆಜೆಟೆಡ್ ಸಹಾಯಕ
Annexure
ಕರ್ನಾಟಕ ಸರ್ಕಾರ
ಕ್ರಮಾಂಕ :ಸಿಎಂಡಬ್ಲ್ಯೂ 199 ಇಎಂಡಿ 86.
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 20ನೇ ಮಾರ್ಚ್ 1987.
ಅಧಿಸೂಚನೆ
ಅಧಿಸೂಚನೆ ಕ್ರಮಾಂಕ ಡಿಪಿಎಆರ್ 435 ಎಸ್ಎಎಸ್ 86, ದಿನಾಂಕ 9.3.1987 ಇದರ ಮೇರೆಗೆ ಶ್ರೀ ಎಸ್.ಎಲ್. ಗಂಗಾಧರಪ್ಪ ಐಎಎಸ್ - ಇವರನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಕೃಷಿ ಮಾರುಕಟ್ಟೆ ನಿರ್ದೇಶಕರೆಂದು ನೇಮಕ ಮಾಡಿದೆ.
ಮೇಲೆ ಹೇಳಲಾದ ನೇಮಕಾತಿಯನ್ನು ಗಮನಿಸಿ, ಮುಖ್ಯ ಮಾರುಕಟ್ಟೆ ಅಧಿಕಾರಿಗೆ ಕೃಷಿ ಮಾರುಕಟ್ಟೆ ನಿರ್ದೇಶಕನ ಅಧಿಕಾರಗಳನ್ನು ವಹಿಸಿಕೊಟ್ಟಿರುವ ಬಗ್ಗೆ ಈ ಇಲಾಖೆಯು ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 199 ಇಎಂಡಿ 86(ಪಿ) ದಿನಾಂಕ 28ನೇ ಆಗಸ್ಟ್ 1986 ಮತ್ತು 2ನೇ ಡಿಸೆಂಬರ್ 1986 ಇವುಗಳ ಮೂಲಕ ಈಗಾಗಲೇ ಹೊರಡಿಸಿರುವ ಆದೇಶವನ್ನು ಈ ಮೂಲಕ ಹಿಂತೆಗೆದುಕೊಳ್ಳಲಾಗಿದೆ.
ಈ ಆದೇಶವು ಮಾರ್ಚ್ 9, 1987ರಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
Annexure
ಮತ್ತು ಅವರ ಹೆಸರಿನಲ್ಲಿ,
ಸಹಿ
ಎನ್.ಎಲ್. ಕುಲಕರ್ಣಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಕರ್ನಾಟಕ ಸರ್ಕಾರ
ಕ್ರಮಾಂಕ :ಸಿಎಂಡಬ್ಲ್ಯೂ 28 ಎಂಆರ್ಇ 86.
ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 20ನೇ ಜುಲೈ 1987.
ಅಧಿಸೂಚನೆ
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 133ನೇ ಪ್ರಕರಣದ ಮೇರೆಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಇದರ ಉಪವಿಧಿ ಸಂಖ್ಯೆ 24 (12) (ಎ) ಇದು ಅಡಿಕೆಗೆ ಸಂಬಂಧಪಡುವಷ್ಟರ ಮಟ್ಟಿಗೆ ಆ ಉಪವಿಧಿಯ ಉಪಬಂಧಗಳು ಕೇಂದ್ರ ಅಡಿಕೆ ಮತ್ತು ಕೊಕೊ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತ, ಮಂಗಳೂರು ಇದಕ್ಕೆ ಅನ್ವಯವಾಗದಂತೆ ಈ ಮೂಲಕ ವಿನಾಯಿತಿ ನೀಡಿದೆ.
Annexure
ವಿ. ನರಸಿಂಹಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಅಧಿಸೂಚನೆ ಕ್ರಮಾಂಕ ಸಿಎಂಡಬ್ಲ್ಯೂ 258 ಎಂಎಂಡಿ 86, ಬೆಂಗಳೂರು ದಿನಾಂಕ 7ನೇ ಜನವರಿ 1988
1980ರ ಕರ್ನಾಟಕ ಅಧಿನಿಯಮ ಸಂಖ್ಯೆ 17 ರಿಂದ ತಿದ್ದುಪಡಿಯಾದಂತೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ತಿದ್ದುಪಡಿ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 52 ‘ಎ' ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮಕ್ಕೆ ಲಗತ್ತಿಸಲಾದ ಅನುಸೂಚಿಯಲ್ಲಿ ಈ ಕೆಳಕಂಡ ತಿದ್ದುಪಡಿಯನ್ನು ಮಾಡಿದೆ:
ಅನುಸೂಚಿಯಲ್ಲಿ ‘‘XIIಇತರ ಉತ್ಪನ್ನಗಳು'' ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಕೆಳಕಂಡ ಬಾಬುಗಳನ್ನು ಬಿಟ್ಟುಬಿಡತಕ್ಕದ್ದು.
‘‘3. ಏಡಿಗಳು 4. ಮೀನು 5. ಸೀಗಡಿ''
23.ಎಸ್.ಓ.75
Annexure
ಸಹಕಾರ ಸಚಿವಾಲಯ
ಅಧಿಸೂಚನೆ ಕ್ರಮಾಂಕ ಆರ್ಡಿಸಿ 180 ಎಂಎಂಡಿ 84, ಬೆಂಗಳೂರು ದಿನಾಂಕ 2ನೇ ಫೆಬ್ರವರಿ 1988
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ ಪ್ರಕರಣ 8(3) ರೊಂದಿಗೆ (iii) ಓದಲಾದ ಪ್ರಕರಣ 133ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು, ಸದರಿ ಅಧಿನಿಯಮ ಪ್ರಕರಣ 8ರ ಉಪಬಂಧಗಳು (1) ಕರ್ನಾಟಕ ಸಹಕಾರ ಎಣ್ಣೆ ಬೀಜಗಳ ಬೆಳೆಗಾರರ ಸಂಘ ಮತ್ತು (2) ಪ್ರಾಥಮಿಕ ಎಣ್ಣೆ ಬೀಜಗಳ ಬೆಳೆಗಾರರ ಸಹಕಾರ ಸಂಘಗಳು, ಇವುಗಳಿಗೆ ಅನ್ವಯವಾಗದಂತೆ ಈ ಮೂಲಕ ವಿನಾಯಿತಿ ನೀಡಿದೆ.
ಎಸ್.ಓ.ಸಂ.411
Annexure
ಸಹಕಾರ ಸಚಿವಾಲಯ
ಅಧಿಸೂಚನೆ ಕ್ರಮಾಂಕ ಸಿಎಂಡಬ್ಲ್ಯೂ 185 ಎಂಆರ್ಇ 87 ಬೆಂಗಳೂರು ದಿನಾಂಕ 25ನೇ ಮೇ 1988
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968 ಇವುಗಳನ್ನು ಮತ್ತಷ್ಟು ತಿದ್ದುಪಡಿ ಮಾಡುವ ನಿಯಮಗಳ ಕರಡನ್ನು, ಸದರಿ ನಿಯಮಗಳಿಂದ ಬಾಧಿತರಾಗಬಹುದಾದ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಕರ್ನಾಟಕ ಕೃಷಿ ಉತ್ಪನ್ನವನ್ನು ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 146ನೇ ಪ್ರಕರಣದ (1)ನೇ ಉಪಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ ಕರ್ನಾಟಕ ರಾಜ್ಯಪತ್ರದ ಭಾಗ 1 ವಿಭಾಗ 2 ಎಫ್ ಸಿ (1) ಇದರ 7ನೇ ಜನವರಿ 1988ನೇ ದಿನಾಂಕದ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 185 ಎಂಆರ್ಇ 87 ದಿನಾಂಕ 30ನೇ ಡಿಸೆಂಬರ್ 1987 ಇದರಲ್ಲಿ ಪ್ರಕಟಿಸಲಾಗಿರುವುದರಿಂದ ಮತ್ತು ಸದರಿ ನಿಯಮಗಳ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 32 ದಿವಸಗಳ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿರುವುದರಿಂದ;
ಮತ್ತು ಸದರಿ ರಾಜ್ಯಪತ್ರವು ದಿನಾಂಕ 7ನೇ ಜನವರಿ 1988 ರಂದು ಸಾರ್ವಜನಿಕರಿಗೆ ದೊರೆಯುವ ವ್ಯವಸ್ಥೆ ಮಾಡಿರುವುದರಿಂದ;
ರಾಜ್ಯ ಸರ್ಕಾರಕ್ಕೆ ಯಾವನೇ ವ್ಯಕ್ತಿಯಿಂದ ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳು ಬಾರದಿರುವುದರಿಂದ;
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 146ನೇ ಪ್ರಕರಣದ ಮೂಲಕ ಪ್ರದಾನ ಮಾಡಲಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ:-
- ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 1988 ಎಂದು ಕರೆಯತಕ್ಕದ್ದು.
(2) ಅವು ಕೂಡಲೇ ಜಾರಿಗೆ ಬರತಕ್ಕದ್ದು.
- ‘‘ಮುಖ್ಯ ಮಾರುಕಟ್ಟೆ ಅಧಿಕಾರಿ'' ಮತ್ತು ‘‘ಜಿಲ್ಲಾ ಮಾರುಕಟ್ಟೆ ಅಧಿಕಾರಿ'' ಪದಗಳ ಬದಲಾವಣೆ.- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು, 1968 ಇವುಗಳಲ್ಲಿ ‘‘ಮುಖ್ಯ ಮಾರುಕಟ್ಟೆ ಅಧಿಕಾರಿ'' ಮತ್ತು ‘‘ಜಿಲ್ಲಾ ಮಾರುಕಟ್ಟೆ ಅಧಿಕಾರಿ'' ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ ‘‘ಕೃಷಿ ಮಾರುಕಟ್ಟೆ ನಿರ್ದೇಶಕ'' ಮತ್ತು ‘‘ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ'' ಎಂಬ ಪದಗಳನ್ನು ಅನುಕ್ರಮವಾಗಿ ಸೇರಿಸತಕ್ಕದ್ದು.
Annexure
ಎನ್.ಎಲ್. ಕುಲಕರ್ಣಿ, ಸರ್ಕಾರದ ಅಧೀನ ಕಾರ್ಯದರ್ಶಿ ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಒಪ್ಪೋಲೆ ಕ್ರಮಾಂಕ ಆರ್ಡಿಸಿ 180 ಎಂಎಂಡಿ 81, ಬೆಂಗಳೂರು, ದಿನಾಂಕ 14ನೇ ಜೂನ್ 1988.
26ನೇ ಫೆಬ್ರವರಿ 1988ನೇ ದಿನಾಂಕದ ಕರ್ನಾಟಕ ರಾಜ್ಯಪತ್ರದ (ಸಂಖ್ಯೆ 117) ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಸರ್ಕಾರಿ ಅಧಿಸೂಚನೆ ಸಂಖ್ಯೆ ಆರ್ ಡಿಪಿ 180 ಎಂಎಂಡಿ 81, ದಿನಾಂಕ 22ನೇ ಫೆಬ್ರವರಿ 1988 ಇದರ ಕೊನೆಯ ಸಾಲಿನಲ್ಲಿ ಬಂದಿರುವ ‘‘ಸದರಿ ಅಧಿನಿಯಮದ 8ನೇ ಪ್ರಕರಣ'' ಎಂಬ ಪದಗಳು ಮತ್ತು ಸಂಖ್ಯೆಗೆ ಬದಲಾಗಿ ‘ಸದರಿ ಅಧಿನಿಯಮದ 8 (2)ನೇ ಪ್ರಕರಣ' ಎಂದು ಓದಿಕೊಳ್ಳತಕ್ಕದ್ದು.
ಎಸ್.ಓ.1004
Annexure
ಹೆಚ್.ಹೆಚ್. ಸೇಠ್ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 183 ಎಂಆರ್ಇ 88, ಬೆಂಗಳೂರು ದಿನಾಂಕ 2ನೇ ಜೂನ್ 1989
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ, 1966 (1966ರ ಕರ್ನಾಟಕ ಅಧಿನಿಯಮ 27)ರ 152ಎ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಮೂಲಕ ಅನುಸೂಚಿಯಲ್ಲಿ ಈ ಕೆಳಕಂಡ ತಿದ್ದುಪಡಿಗಳನ್ನು ಮಾಡಿದೆ:-
ಅನುಸೂಚಿಯಲ್ಲಿ VIII ಪ್ಲಾಂಟೇಷನ್ ಬೆಳೆಗಳು ಮತ್ತು ಸಾಂಬಾರ ಪದಾರ್ಥಗಳು ಎಂಬ ಬಾಬಿನಲ್ಲಿ ""3 ಗೋಡಂಬಿ'' ಎಂಬ ಉಪಬಾಬಿನ ತುರವಾಯ ಈ ಕೆಳಕಂಡ ಉಪಬಾಬನ್ನು ಸೇರಿಸತಕ್ಕದ್ದು, ಎಂದರೆ:-
‘‘3ಎ ಗೋಡಂಬಿ ತಿರುಳು''
ಎಸ್.ಓ.970
Annexure
ಮತ್ತು ಅವರ ಹೆಸರಿನಲ್ಲಿ,
ಹೆಚ್. ಹೆಚ್. ಸೇಠ್
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ಅಧಿಸೂಚನೆ ಸಂಖ್ಯೆ ಸಮಾತೂ 10 ಮಾನಿಇ 89 ಬೆಂಗಳೂರು ದಿನಾಂಕ 1ನೇ ಆಗಸ್ಟ್ 1989
ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ) ಅಧಿನಿಯಮ, 1966ರ ಪ್ರಕರಣ 133 ರಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ಅನುಸೂಚಿಯಲ್ಲಿ ನಮೂದಿಸಿದ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಪ್ರಾಂಗಣ: ಉಪಪ್ರಾಂಗಣ:ಉಪ ಮಾರುಕಟ್ಟೆ ಪ್ರಾಂಗಣಗಳಲ್ಲಿ ಮಾತ್ರ ಅಡಿಕೆಯನ್ನು ಖರೀದಿಸಬೇಕೆಂಬ ಷರತ್ತಿನ ಮೇಲೆ ಸದರಿ ಮಾರುಕಟ್ಟೆ ಸಮಿತಿಗಳ ಎದುರುಗಡೆ ಸೂಚಿಸಿರುವ ಉಪನಿಯಮಗಳಲ್ಲಿ ನಿಗದಿಪಡಿಸಿರುವ ನಿಬಂಧನೆಗಳಿಂದ ಕ್ಯಾಂಪ್ಕೊ (ಕೇಂದ್ರೀಯ ಅಡಿಕೆ ಮತ್ತು ಕೋಕಾ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘ ನಿಯಮಿತ ಸಂಸ್ಥೆ) ಮಂಗಳೂರು - ಇವರಿಗೆ ವಿನಾಯಿತಿ ನೀಡಿದೆ.
ವಿನಾಯಿತಿಯು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬಂದಿದೆ.