ಸಂದರ್ಭಾನುಸಾರ [41ನೇ ನಿಯಮದ ಮೇರೆಗೆ ಅಧ್ಯಕ್ಷನಾಗಿ ಅಥವಾ ಉಪಾಧ್ಯಕ್ಷನಾಗಿ ಚುನಾಯಿತನಾದ ಸದಸ್ಯನು 1 ಚುನಾವಣಾ ಫಲಿತಾಂಶವು ಘೋಷಣೆಯಾದ ಕೂಡಲೇ ತನ್ನ ಕರ್ತವ್ಯವನ್ನು ವಹಿಸಿಕೊಳ್ಳತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 130 ಎಂಆರ್ಇ 88 ದಿನಾಂಕ 30-1-1990ರ ಮೂಲಕ ಪ್ರತಿಯೋಜಿಸಲಾಗಿದೆ. 1 [46ಎ. ಮಾರುಕಟ್ಟೆ ಸಮಿತಿಯ ಅಧ್ಯಕ್ಷನಿಗೆ ಗೌರವಧನ ಸಂದಾಯ ಮಾಡುವುದು.- ಮಾರುಕಟ್ಟೆ ಸಮಿತಿಯ ಅಧ್ಯಕ್ಷನಿಗೆ ಈ ಕೆಳಗೆ ನಿರ್ದಿಷ್ಟಪಡಿಸಿರುವ ದರಗಳಲ್ಲಿ ಗೌರವಧನವನ್ನು ಸಂದಾಯ ಮಾಡತಕ್ಕದ್ದು: ಕಳೆದ ಮೂರು ವರ್ಷಗಳಲ್ಲಿ ಯಾವ ಮಾರುಕಟ್ಟೆ ಸಮಿತಿಯು ಮಾರುಕಟ್ಟೆ ಫೀಜು ಮತ್ತು ಲೈಸನ್ಸ್ ಫೀಜುಗಳ ರೂಪದಲ್ಲಿ ಪಡೆದ ಸರಾಸರಿ ನಿವ್ವಳ ಆದಾಯವು,-
(ಎ) ಇಪ್ಪತ್ತೈದು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇದ್ದರೆ ತಿಂಗಳಿಗೆ 1000 ರೂ.
(ಬಿ) ಇಪ್ಪತ್ತೈದು ಲಕ್ಷ ರೂಪಾಯಿಗೆ ಮೇಲ್ಪಟ್ಟಿದ್ದು ಐವತ್ತು ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ತಿಂಗಳಿಗೆ 1500 ರೂ.
(ಸಿ) ಐವತ್ತು ಲಕ್ಷ ರೂಪಾಯಿ ಮತ್ತು ಅದಕ್ಕೂ ಮೇಲ್ಪಟ್ಟು ಇದ್ದರೆ ತಿಂಗಳಿಗೆ 2500 ರೂ.
ಪರಂತು, 10ನೇಯ ಪ್ರಕರಣದ ಅಡಿಯಲ್ಲಿ ಹೊಸದಾಗಿ ರಚಿಸಲಾದ ಮಾರುಕಟ್ಟೆ ಸಮಿತಿಯ ಅಧ್ಯಕ್ಷನಿಗೆ ಸಂದಾಯವಾಗಬೇಕಾದ ಗೌರವಧನವು ಮೊದಲನೆಯ ವರ್ಷದಲ್ಲಿ ತಿಂಗಳಿಗೆ 1000 ರೂ. ಆಗಿರತಕ್ಕದ್ದು ಮತ್ತು ತದನಂತರ ಹಿಂದಿನ ವರ್ಷದ ಒಟ್ಟು ವಾರ್ಷಿಕ ವರಮಾನವನ್ನು ಆಧರಿಸಿ ಸದರಿ ಸಮಿತಿಯ ಅವಧಿಯು ಮುಗಿಯುವವರೆಗೆ ಗೌರವಧನವನ್ನು ಸಂದಾಯ ಮಾಡತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 324 ಎಂಎಂಡಿ 86 ದಿನಾಂಕ 7-3-88ರ ಮೂಲಕ ಸೇರಿಸಲಾಗಿದೆ ಮತ್ತು ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 15 ಎಂಆರ್ಇ 99 ದಿನಾಂಕ 5-2-2002ರ ಮೂಲಕ ಪ್ರತಿಯೋಜಿಸಲಾಗಿದೆ ಮತ್ತು 7-7-2002 ರಿಂದ ಜಾರಿಗೆ ಕೊಡಲಾಗಿದೆ.