ಈ ಅಧಿನಿಯಮದ ಮೇರೆಗೆ ಅಥವಾ ಅದರ ಉದ್ದೇಶಗಳಿಗಾಗಿ ಸಮಿತಿಯು ವಹಿಸುವ ಎಲ್ಲಾ ವೆಚ್ಚಗಳನ್ನು ಮಾರುಕಟ್ಟೆ ನಿಧಿಯಿಂದ ಭರಿಸತಕ್ಕದ್ದು ಮತ್ತು ಅಂಥ ವೆಚ್ಚವನ್ನು ಭರಿಸಿದ ತರುವಾಯ ಪ್ರತಿಯೊಂದು ಮಾರುಕಟ್ಟೆ ವರ್ಷದ ಅಂತ್ಯದಲ್ಲಿ ಉಳಿಯುವ ಯಾವುದೇ ಹೆಚ್ಚುವರಿ ಹಣವನ್ನು ಮಾರುಕಟ್ಟೆ ವರ್ಷವು ಮುಕ್ತಾಯವಾದ ಮೂರು ತಿಂಗಳೊಳಗಾಗಿ ಸಮಿತಿಯ ಖಾಯಂ ನಿಧಿಗೆ ಜಮೆ ಮಾಡತಕ್ಕದ್ದು ಮತ್ತು ಆ ಹಣವನ್ನು ಅಧಿನಿಯಮದ 90(3)ನೇ ಪ್ರಕರಣದ ಉಪಬಂಧಗಳಿಗೊಳಪಟ್ಟು ಕೃಷಿ ಮಾರುಕಟ್ಟೆ ನಿರ್ದೇಶಕನು ನಿರ್ದಿಷ್ಟಪಡಿಸಬಹುದಾದಂತೆ ಕಟ್ಟಡಗಳ ನಿರ್ಮಾಣ, ಭೂ ಆರ್ಜನೆ ಅಥವಾ ನಿವೇಶನಗಳ ಖರೀದಿ ಅಥವಾ ಇತರ ಉದ್ದೇಶಗಳಂಥ ಖಾಯಂ ಸ್ವರೂಪದ ವೆಚ್ಚವನ್ನು ಭರಿಸುವ ಸಲುವಾಗಿ ಮಾತ್ರ ಉಪಯೋಗಿಸತಕ್ಕದ್ದು.
1 [60ಎ. ಉತ್ಪಾದಕ - ಮಾರಾಟಗಾರನಿಗೆ ಅಲ್ಪಾವಧಿ ಮುಂಗಡಗಳು.- (1) ಮಾರುಕಟ್ಟೆ ಫೀಜು ಮತ್ತು ಲೈಸನ್ಸ್ ಫೀಜು ಇವುಗಳ ಮೂಲಕ ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಹಾಗೂ ತನ್ನದೇ ಆದ ಇಲಿ ನಿರೋಧಕ, ದಂಶಕ ನಿರೋಧಕ, ಸೋರಿಕೆ ಹಾಗೂ ತೇವ ನಿರೋಧಕ ಗೋದಾಮು ಸೌಲಭ್ಯಗಳನ್ನು ಹೊಂದಿರುವ ಮಾರುಕಟ್ಟೆ ಸಮಿತಿಯು, ಪ್ರಕರಣ 63ರ ಉಪಪ್ರಕರಣ (2)ರ ಖಂಡ (ಬಿ)ಯ ಉಪಖಂಡ (x)ರ ಮೇರೆಗೆ ಉತ್ಪಾದಕ ಮಾರಾಟಗಾರರಿಗೆ ಅಲ್ಪಾವಧಿ ಮುಂಗಡಗಳನ್ನು ನೀಡಬಹುದು:
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 174 ಎಂಆರ್ಇ 91 ದಿನಾಂಕ 27-1-1994ರ ಮೂಲಕ 60ಎ, 60ಬಿ, 60ಸಿ ನಿಯಮಗಳನ್ನು ಸೇರಿಸಲಾಗಿದೆ. ಪರಂತು, ಮೇಲೆ ಉಲ್ಲೇಖಿಸಲಾದ ಉಪನಿಯಮ (1)ರಲ್ಲಿ ಹೇಳಿದ ಅಲ್ಪಾವಧಿ ಮುಂಗಡ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಮೊದಲು ಮಾರುಕಟ್ಟೆ ಸಮಿತಿಯು, ಆ ಬಗ್ಗೆ ಅನುಮೋದನೆ ಕೋರಿ ಕೃಷಿ ಮಾರುಕಟ್ಟೆ ನಿರ್ದೇಶಕನಿಗೆ ಅರ್ಜಿ ಸಲ್ಲಿಸತಕ್ಕದ್ದು, ಮತ್ತು ಕೃಷಿ ಮಾರುಕಟ್ಟೆ ನಿರ್ದೇಶಕನು ಅಂಥ ಮಾರುಕಟ್ಟೆ ಸಮಿತಿಯ ಬಳಿ ಅಗತ್ಯವಾದ ಹಣ ಇದೆ ಎಂಬುದನ್ನು ಹಾಗೂ ಅದು ಗೋದಾಮು ಸೌಲಭ್ಯಗಳನ್ನು ಹೊಂದಿದೆಯೆಂಬುದನ್ನು ಸ್ವತಃ ಖಾತರಿಪಡಿಸಿಕೊಂಡು ಅಂಥ ಮಾರುಕಟ್ಟೆ ಸಮಿತಿಗೆ ಅನುಮೋದನೆ ನೀಡಬಹುದು.
(2) ಮಾರುಕಟ್ಟೆ ಸಮಿತಿಯು ಪ್ರತಿಯೊಂದು ಮಾರುಕಟ್ಟೆ ವರ್ಷದ ಪ್ರಾರಂಭದ ಮೊದಲು ಸರಕುಗಳನ್ನು ದಾಸ್ತಾನು ಮಾಡಲು ತನ್ನ ಗೋದಾಮಿನ ಸಾಮಥ್ರ್ಯಕ್ಕೆ ಸಂಬಂಧಿಸಿದಂತೆ ಒಂದು ಪ್ರಮಾಣ ಪತ್ರವನ್ನು ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್, ಮಾರುಕಟ್ಟೆ ಅಭಿವೃದ್ಧಿ ಯೋಜನೆ ಇವರಿಂದ ಪಡೆದುಕೊಳ್ಳತಕ್ಕದ್ದು.
(3) ಮಾರುಕಟ್ಟೆ ವರ್ಷದ ಅವಧಿಯಲ್ಲಿ ಅಂಥ ಮುಂಗಡ ನೀಡಲು ಮಾರುಕಟ್ಟೆ ಸಮಿತಿಯು ಮೀಸಲಿಡಬಹುದಾದ ಮೊತ್ತವು, ಹಿಂದಿನ ವರ್ಷದ ಅವಧಿಯಲ್ಲಿ ಮಾರುಕಟ್ಟೆ ಫೀಜು ಮತ್ತು ಲೈಸನ್ಸ್ ಫೀಜು - ಇವುಗಳಿಂದ ಪ್ರಾಪ್ತವಾಗುವ ಆದಾಯದ ಶೇಕಡಾ 10ಕ್ಕೆ ಮೀರತಕ್ಕದ್ದಲ್ಲ. ಹಾಗೆ ಮೀಸಲಿಟ್ಟ ಮೊತ್ತವನ್ನು ‘ಉತ್ಪಾದಕ - ಮಾರಾಟಗಾರರಿಗೆ ನೀಡಲಾಗುವ ಅಲ್ಪಾವಧಿ ಮುಂಗಡ ನಿಧಿ' ಎಂದು ಕರೆಯಲಾಗುವ ಒಂದು ಪ್ರತ್ಯೇಕ ಖಾತೆಯಲ್ಲಿ ಇಡತಕ್ಕದ್ದು. ಈ ನಿಧಿಯ ಯಾವುದೇ ಮೊತ್ತವನ್ನು ಉತ್ಪಾದಕ - ಮಾರಾಟಗಾರರಿಗೆ ಅಲ್ಪಾವಧಿ ಮುಂಗಡಗಳ ಸಂದಾಯಕ್ಕಲ್ಲದೆ ಯಾವುದೇ ಇತರ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
(4) ಈ ನಿಯಮದ ಮೇರೆಗೆ ಮುಂಗಡವನ್ನು ಪಡೆಯಬಯಸುವ ಪ್ರತಿಯೊಬ್ಬ ಉತ್ಪಾದಕ - ಮಾರಾಟಗಾರನು 1 [ಕರ್ನಾಟಕ ಕೃಷಿ ಸಾಲ ಪಾಸ್ ಪುಸ್ತಕ ಅಧಿನಿಯಮ, 1984 (1985ರ ಕರ್ನಾಟಕ ಸಹಿತ ಅಧಿನಿಯಮ 2)ರ 4ನೇ ಪ್ರಕರಣದ ಮೇರೆಗೆ ನೀಡಿರುವ ಕೃಷಿ ಸಾಲ ಪಾಸ್ ಪುಸ್ತಕದ ನಮೂನೆ 27ಎ ಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 8-2-1996ರ ಮೂಲಕ ಪ್ರತಿಯೋಜಿಸಲಾಗಿದೆ. xxxx 1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 19-10-1995ರ ಮೂಲಕ ಬಿಟ್ಟುಬಿಡಲಾಗಿದೆ.
(5) ಮುಂಗಡ ಮೊತ್ತವು, ಪ್ರತಿಯೊಂದು ಸಂದರ್ಭದಲ್ಲಿ 1 [ಐವತ್ತು ಸಾವಿರ ರೂಪಾಯಿಗಳ ಗರಿಷ್ಠ ಮಿತಿಗೊಳಪಟ್ಟು, ಮಾರುಕಟ್ಟೆ ಸಮಿತಿಗೆ ಒತ್ತೆ ಇಡುವ ಕೃಷಿ ಉತ್ಪನ್ನದ ಚಾಲ್ತಿ ಮಾರುಕಟ್ಟೆ ಮೌಲ್ಯದ ಶೇಕಡಾ ಅರವತ್ತಕ್ಕೆ ಮೀರತಕ್ಕದ್ದಲ್ಲ.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 8-2-1996ರ ಮೂಲಕ ಪ್ರತಿಯೋಜಿಸಲಾಗಿದೆ. (6) ಮುಂಗಡಗಳ ರಿಜಿಸ್ಟ್ರರನ್ನು ಇಡತಕ್ಕದ್ದು ಮತ್ತು ಈ ನಿಯಮದ ಮೇರೆಗೆ ನೀಡಲಾದ ಪ್ರತಿಯೊಂದು ಮುಂಗಡವನ್ನು ಮತ್ತು ಅದನ್ನು ಮಂಜೂರು ಮಾಡುವ ಪ್ರಾಧಿಕಾರದ ಆದೇಶವನ್ನು ದಾಖಲಿಸತಕ್ಕದ್ದು.
(7) ಮಾರುಕಟ್ಟೆ ಸಮಿತಿಯು, ಈ ನಿಯಮದ ಮೇರೆಗೆ ಮುಂಗಡ ನೀಡುವಾಗ ಕಂದಾಯ ಪ್ರಾಧಿಕಾರವು ಅಥವಾ ಜಿಲ್ಲಾ ಪರಿಷತ್ಗಳು ಸಣ್ಣ ಹಾಗೂ ಅತಿ ಸಣ್ಣ ರೈತರೆಂದು ಗುರುತಿಸಿದ ರೈತರಿಗೆ ಆದ್ಯತೆ ನೀಡತಕ್ಕದ್ದು.
(8) ಮುಂಗಡದ ಅವಧಿಯು ಕೃಷಿ ಉತ್ಪನ್ನವನ್ನು ಒತ್ತೆ ಇಟ್ಟ ದಿನಾಂಕದಿಂದ ತೊಂಬತ್ತು ದಿನಗಳಿಗೆ ಮೀರತಕ್ಕದ್ದಲ್ಲ.
(9) ಉಪನಿಯಮ (1)ರ ಮೇರೆಗೆ ಮುಂಗಡ ವಿತರಣೆ ಮಾಡಿದ ದಿನಾಂಕದಿಂದ ಮೊದಲ ಮೂವತ್ತು ದಿನಗಳಿಗೆ ಯಾವುದೇ ಬಡ್ಡಿಯನ್ನು ವಿಧಿಸತಕ್ಕದ್ದಲ್ಲ, ಮತ್ತು ಆ ತರುವಾಯ ಆ ಕೃಷಿ ಉತ್ಪನ್ನವನ್ನು ಉಪನಿಯಮ (10)ರ ಮೇರೆಗೆ ಬಿಡಿಸಿಕೊಳ್ಳುವ ಅಥವಾ ಉಪನಿಯಮ (16)ರಮೇರೆಗೆ ವಿಲೇ ಮಾಡುವ ದಿನಾಂಕದವರೆಗೆ 1 [ಈ ಕೆಳಕಂಡ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿರುವ ದರಗಳಲ್ಲಿ ಬಡ್ಡಿಯನ್ನು ವಿಧಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 8-2-1996ರ ಮೂಲಕ ಪ್ರತಿಯೋಜಿಸಲಾಗಿದೆ.
1 [ಕೋಷ್ಟಕ
1. ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 8-2-1996ರ ಮೂಲಕ ಸೇರಿಸಲಾಗಿದೆ. 1 [9(ಎ) ಈ ನಿಯಮದ ಮೇರೆಗೆ ಮುಂಗಡ ನೀಡುವ ಉದ್ದೇಶಕ್ಕಾಗಿ, ಮಾರುಕಟ್ಟೆ ಸಮಿತಿಯು ಕೃಷಿ ಮಾರುಕಟ್ಟೆ ನಿರ್ದೇಶಕರಿಂದ ಮುಂಚಿತವಾಗಿಯೇ ಅನುಮೋದನೆ ಪಡೆದು, ಯಾವುದೇ ಅನುಸೂಚಿತ ಬ್ಯಾಂಕಿನಿಂದ ಅಥವಾ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ಗಳಿಂದ ಹಣ ಸಾಲ ತೆಗೆದುಕೊಳ್ಳಬಹುದು. ಇದಕ್ಕೆ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಲಿಯು ಖಾತರಿ ನೀಡತಕ್ಕದ್ದು:ಕ್ರಮ ಸಂಖ್ಯೆ ಮೊಬಲಗು ಬಡ್ಡಿಯ ದರ 1 10,000 ರೂಪಾಯಿಯವರೆಗೆ ಒಂದು ವರ್ಷಕ್ಕೆ ಶೇ. 8 2 10,000 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು, ಆದರೆ,25,000 ರೂಪಾಯಿಗಿಂತ ಕಡಿಮೆ ಒಂದು ವರ್ಷಕ್ಕೆ ಶೇ.10 3 25,001 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ಆದರೆ50,000 ರೂಪಾಯಿಗಿಂತ ಕಡಿಮೆ ಒಂದು ವರ್ಷಕ್ಕೆ ಶೇ.12.5]1
ಪರಂತು, ಅನುಸೂಚಿತ ಬ್ಯಾಂಕುಗಳು ಅಥವಾ ಜಿಲ್ಲಾ ಕೇಂದ್ರೀಯ ಬ್ಯಾಂಕುಗಳಿಂದ ಹಣ ಸಾಲ ತೆಗೆದುಕೊಂಡ ಸಂದರ್ಭದಲ್ಲಿ, ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯು, ಚಾಲ್ತಿಯಲ್ಲಿರುವ ಬ್ಯಾಂಕ್ ಬಡ್ಡಿ ದರದ ಹಾಗೂ (9)ನೇ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿರುವ ಬಡ್ಡಿ ದರದ ನಡುವಿನ ಬಡ್ಡಿಯ ವ್ಯತ್ಯಸ್ತ ಹಣವನ್ನು ವಹಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ 135 ಎಂಆರ್ಇ 95 ದಿನಾಂಕ 8-2-1996ರ ಮೂಲಕ ಸೇರಿಸಲಾಗಿದೆ. (10) ಕೃಷಿ ಉತ್ಪನ್ನವನ್ನು ಒತ್ತೆ ಇಟ್ಟಿರುವ ಉತ್ಪಾದಕ-ಮಾರಾಟಗಾರನು, ಅದನ್ನು ಒತ್ತೆ ಇಟ್ಟ ದಿನಾಂಕದಿಂದ ತೊಂಬತ್ತು ದಿನಗಳೊಳಗಾಗಿ ಮುಂಗಡವನ್ನು ಅದರ ಮೇಲಿನ ಬಡ್ಡಿ ಸಹಿತ ಮರುಪಾವತಿ ಮಾಡಿ ಉತ್ಪನ್ನವನ್ನು ಬಿಡಿಸಿಕೊಳ್ಳತಕ್ಕದ್ದು ಹಾಗೆ ಬಿಡಿಸಿಕೊಳ್ಳಲು ತಪ್ಪಿದಲ್ಲಿ, ಮಾರುಕಟ್ಟೆ ಸಮಿತಿಯು, ಆ ಉತ್ಪನ್ನವನ್ನು ಹರಾಜು ಅಥವಾ ಟೆಂಡರಿನ ಮೂಲಕ ಮಾರಾಟ ಮಾಡಿ ಮುಂಗಡದ ಮೊತ್ತ ಮತ್ತು ಅದರ ಮೇಲೆ ಸಂದಾಯ ಮಾಡಬೇಕಾದ ಬಡ್ಡಿಯನ್ನು ಮತ್ತು ಇತರ ಖರ್ಚುಗಳೇನಾದರೂ ಇದ್ದರೆ ಅವುಗಳನ್ನು ಮುರಿದುಕೊಂಡು ಮಾರಾಟದಿಂದ ಬಂದ ಹಣದಲ್ಲಿ ಉಳಿದ ಹಣವನ್ನು ಉತ್ಪಾದಕ-ಮಾರಾಟಗಾರನಿಗೆ ಸಂದಾಯ ಮಾಡಬಹುದು.
(11) ರಾಜ್ಯ ಉಗ್ರಾಣ ನಿಗಮವು ಮತ್ತು ಕೇಂದ್ರೀಯ ಉಗ್ರಾಣ ನಿಗಮವು ನೀಡುವ ದರದಲ್ಲಿಯೇ ಮಾರುಕಟ್ಟೆ ಸಮಿತಿಯು, ಒಣಗುವಿಕೆಯ ಸಂಬಂಧದಲ್ಲಿ ರಿಯಾಯಿತಿಯನ್ನು ನೀಡತಕ್ಕದ್ದು.
(12) ಅರ್ಜಿದಾರನು ನಮೂನೆ 27ಬಿನಲ್ಲಿ ಒಪ್ಪಂದ ಪತ್ರವನ್ನು ಬರೆದುಕೊಟ್ಟ ಮೇಲೆ ಮತ್ತು ಒತ್ತೆ ಇಟ್ಟ ಉತ್ಪನ್ನದ ದಾಸ್ತಾನಿನ ಪರಿಶೀಲನೆಯಾದ ತರುವಾಯ ಮಂಜೂರಾದ ಮುಂಗಡದ ಮೊತ್ತವನ್ನು ಅವನಿಗೆ ಚೆಕ್ ಮೂಲಕ ಬಟವಾಡೆ ಮಾಡತಕ್ಕದ್ದು.
(13) ಮಾರುಕಟ್ಟೆ ಸಮಿತಿಯು ಈ ನಿಯಮದ ಮೇರೆಗೆ ಒತ್ತೆ ಇಡಲಾದ ಉತ್ಪನ್ನವನ್ನು ತನ್ನ ವೆಚ್ಚದಲ್ಲಿ ವಿಮೆ ಮಾಡಿಸತಕ್ಕದ್ದು. ಕೃಷಿ ಉತ್ಪನ್ನವನ್ನು ಒತ್ತೆ ಇಟ್ಟಿರುವ ಉತ್ಪಾದಕ-ಮಾರಾಟಗಾರನು, ಅದರ ದಾಸ್ತಾನಿಗೆ ಸಂಬಂಧಪಟ್ಟಂತೆ ಗೋದಾಮು ಬಾಡಿಗೆಯನ್ನು, ಹೊಗೆ ಹಾಯಿಸುವ ವೆಚ್ಚವನ್ನು ಮತ್ತು ಅಂಥ ಇತರ ವೆಚ್ಚಗಳನ್ನು ಸಂದಾಯ ಮಾಡಲು ಬದ್ಧನಾಗಿರತಕ್ಕದ್ದಲ್ಲ.
(14) ಕಾರ್ಯದರ್ಶಿಯು ಅಥವಾ ಆತನು ಅಧಿಕೃತಗೊಳಿಸಿದ ಯಾವನೇ ಇತರ ಅಧಿಕಾರಿಯು ಅಥವಾ ನೌಕರನು, ಗೋದಾಮಿನ ಪ್ರಭಾರ ಹೊಂದಿರತಕ್ಕದ್ದು. ಗೋದಾಮಿನ ಪ್ರಭಾರ ಹೊಂದಿರುವ ವ್ಯಕ್ತಿಯು, ದಾಸ್ತಾನಿಗಾಗಿ ತಂದ ಕೃಷಿ ಉತ್ಪನ್ನದ ತಲಾ 250 ಗ್ರಾಂ ತೂಕದ ಎರಡು ಪ್ರಾತಿನಿಧಿಕ ಮಾದರಿಗಳನ್ನು ತೆಗೆದುಕೊಳ್ಳತಕ್ಕದ್ದು ಮತ್ತು ಆ ಮಾದರಿಗಳನ್ನು ಉತ್ಪಾದಕ - ಮಾರಾಟಗಾರನ ಸಮಕ್ಷಮದಲ್ಲಿ ಮೊಹರು ಮಾಡತಕ್ಕದ್ದು ಮತ್ತು ಮಾದರಿ ಇರುವ ಚೀಲದ ಅಥವಾ ಗಂಟಿನ ಮೇಲೆ ಆತನ ಸಹಿಯನ್ನು ಪಡೆದುಕೊಳ್ಳತಕ್ಕದ್ದು ಮತ್ತು ಆ ಸಹಿಯನ್ನು ಕಾರ್ಯದರ್ಶಿಯು ಧೃಢೀಕರಿಸತಕ್ಕದ್ದು. ಮೊಹರು ಮಾಡಿದ ಮಾದರಿಯನ್ನು ಕಾರ್ಯದರ್ಶಿಯ ಅಥವಾ ಆತನು ಅಧಿಕೃತಗೊಳಿಸಿದ ಯಾವನೇ ಇತರ ಅಧಿಕಾರಿಯ ಅಭಿರಕ್ಷೆಯಲ್ಲಿ ಇಡತಕ್ಕದ್ದು.
(15) ಗೋದಾಮಿನಲ್ಲಿ ಇಟ್ಟಿರುವ ಉತ್ಪನ್ನವನ್ನು ಸೂಕ್ತವಾಗಿ ಪರಿಶೀಲಿಸಿದ ತರುವಾಯ ಆ ಬಗ್ಗೆ ಕಾರ್ಯದರ್ಶಿಯು, ಉತ್ಪಾದಕ ಮಾರಾಟಗಾರನಿಗೆ ನಮೂನೆ ‘27 ಸಿ' ಯಲ್ಲಿ ರಸೀದಿ ನೀಡತಕ್ಕದ್ದು.
(16) ಉತ್ಪಾದಕ- ಮಾರಾಟಗಾರನು ತನ್ನ ಕೃಷಿ ಉತ್ಪನ್ನವನ್ನು ನೇರವಾಗಿ ಅಥವಾ ತಾನು ಆಯ್ಕೆ ಮಾಡಿದ ಯಾವನೇ ಕಮೀಷನ್ ಏಜೆಂಟನ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕೆಂದು ಮಾರುಕಟ್ಟೆ ಸಮಿತಿಯನ್ನು ಕೋರಿದಲ್ಲಿ, ಸಮಿತಿಯು ಆ ಪ್ರಕಾರ ಮಾರಾಟದ ವ್ಯವಸ್ಥೆಮಾಡತಕ್ಕದ್ದು ಮತ್ತು ಮಾರಾಟದಿಂದ ಬಂದ ಹಣದಲ್ಲಿ ತನಗೆ ಬರಬೇಕಾದ ಬಾಕಿಯನ್ನು ವಜಾ ಮಾಡಿಕೊಂಡು ಉಳಿದ ಹಣವನ್ನು ಆತನಿಗೆ ಸಂದಾಯ ಮಾಡತಕ್ಕದ್ದು.
(17) ಯಾವನೇ ಉತ್ಪಾದಕ-ಮಾರಾಟಗಾರನು ಹಿಂದಿನ ಮುಂಗಡವನ್ನು ಅದರ ಮೇಲೆ ಬಡ್ಡಿ ಏನಾದರೂ ಇದ್ದರೆ, ಅದೂ ಸೇರಿ ಮರು ಸಂದಾಯ ಮಾಡುವ ಹೊರತು ಅವನಿಗೆ ಯಾವುದೇ ಎರಡನೇ ಮುಂಗಡ ಮಂಜೂರು ಮಾಡತಕ್ಕದ್ದಲ್ಲ.
(18) ಒತ್ತೆ ಇಡಲಾದ ಕೃಷಿ ಉತ್ಪನ್ನವನ್ನು ಬೆಂಕಿ, ಕಳವು ಮತ್ತು ಇತರ ಹಾನಿಗಳಿಂದ ರಕ್ಷಿಸಲು ಮಾರುಕಟ್ಟೆ ಸಮಿತಿಯು ಸೂಕ್ತ ಕ್ರಮಕೈಗೊಳ್ಳತಕ್ಕದ್ದು ಮತ್ತು ತನ್ನ ವೆಚ್ಚದಲ್ಲಿ ಕಾಲಕಾಲಕ್ಕೆ ಹೊಗೆ ಹಾಯಿಸಲು ವ್ಯವಸ್ಥೆ ಮಾಡತಕ್ಕದ್ದು.
(19) ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಅಥವಾ ಕೇಂದ್ರೀಯ ಉಗ್ರಾಣ ನಿಗಮವು ಉತ್ಪಾದಕ ಮಾರಾಟಗಾರನಿಗೆ ನೀಡಿದ ಉಗ್ರಾಣ ರಸೀದಿಗಳನ್ನೂ ಸಹ ಮಾರುಕಟ್ಟೆ ಸಮಿತಿಯು ಅಂಗೀಕರಿಸಬಹುದು ಮತ್ತು ಪ್ರತಿಯೊಂದು ಪ್ರಕರಣದಲ್ಲಿ ಹತ್ತು ಸಾವಿರ ರೂಪಾಯಿಗಳ ಗರಿಷ್ಠ ಮಿತಿಗೊಳಪಟ್ಟು ಅಂಥ ರಸೀತಿಯನ್ನು ಒತ್ತೆ ಇಟ್ಟುಕೊಂಡು ಒತ್ತೆ ಇಟ್ಟಿರುವ ಆ ಕೃಷಿ ಉತ್ಪನ್ನದ ಮಾರುಕಟ್ಟೆ ಮೌಲ್ಯದ ಶೇಕಡ ಅರವತ್ತರಷ್ಟು ಮೊತ್ತದ ಅಲ್ಪಾವಧಿ ಮುಂಗಡವನ್ನು ನೀಡಬಹುದು.
(20) ಈ ನಿಯಮದ ಮೇರೆಗೆ ನೀಡಲಾದ ಅಲ್ಪಾವಧಿ ಮುಂಗಡ ಅಥವಾ ಮುಂಗಡವಾಗಿ ನೀಡಿರುವ ಹಣದ ವಸೂಲಿ ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾರುಕಟ್ಟೆ ಸಮಿತಿ ಮತ್ತು ಉತ್ಪಾದಕ-ಮಾರಾಟಗಾರ-ಇವರ ನಡುವೆ ಯಾವುದೇ ವಿವಾದ ಉಂಟಾದಲ್ಲಿ, ಅದನ್ನು ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಈ ಸಂಬಂಧದಲ್ಲಿ ಅವನು ಅಧಿಕೃತಗೊಳಿಸಿದ ಯಾವನೇ ಅಧಿಕಾರಿಗೆ ಒಪ್ಪಿಸತಕ್ಕದ್ದು ಹಾಗೂ ಕೃಷಿ ಮಾರುಕಟ್ಟೆ ನಿರ್ದೇಶಕನು ಅಥವಾ ಅವನಿಂದ ಅಧಿಕೃತನಾದ ಅಧಿಕಾರಿಯು ಕೈಕೊಂಡ ನಿರ್ಣಯವೇ ಅಂತಿಮವಾಗಿರತಕ್ಕದ್ದು.
60ಬಿ. ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳು ಮತ್ತು ಕೃಷಿ ಸಂಸ್ಕರಣಾ ಸಹಕಾರ ಸಂಘಗಳು-ಇವುಗಳಿಗೆ ಸಾಲ ನೀಡುವುದು.- (1) ಮಾರುಕಟ್ಟೆ ಸಮಿತಿಯು, 63ನೇ ಪ್ರಕರಣದ (2)ನೇ ಉಪಪ್ರಕರಣದ (ಬಿ) ಖಂಡದ (viii-ಎ) ಉಪಖಂಡದ ಮೇರೆಗೆ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ ಮತ್ತು ಕೃಷಿ ಸಂಸ್ಕರಣಾ ಸಹಕಾರ ಸಂಘಗಳಿಗೆ, ಅಂಥ ಸಂಘಗಳ ವಿಲೆಮಾಡಬಹುದಾದ ನಿವ್ವಳ ಸಂಪನ್ಮೂಲಗಳ (ವಿ.ನಿ.ಸಂ) ಮೂರರಷ್ಟನ್ನು ಮೀರದಂತೆ, ಆದರೆ, ಮಾರುಕಟ್ಟೆ ಫೀಜು ಮತ್ತು ಲೈಸನ್ಸ್ ಫೀಜು- ಇವುಗಳ ಮೂಲಕ ಮಾರುಕಟ್ಟೆ ಸಮಿತಿಗೆ ಹಿಂದಿನ ವರ್ಷದ ಅವಧಿಯಲ್ಲಿ ಬಂದಿರುವ ವರಮಾನದ ಶೇಕಡಾ ಐದರ ಗರಿಷ್ಠ ಪ್ರಮಾಣಕ್ಕೆ ಒಳಪಟ್ಟು ಸಾಲಗಳನ್ನು ನೀಡಬಹುದು. ಸಾಲದ ಅವಧಿಯು ಒಂದು ವರ್ಷವನ್ನು ಮೀರತಕ್ಕದ್ದಲ್ಲ.
ವಿವರಣೆ.- (1)ನೇ ಉಪನಿಯಮದ ಉದ್ದೇಶಕ್ಕಾಗಿ ವಿಲೇ ಮಾಡಬಹುದಾದ ನಿವ್ವಳ ಸಂಪನ್ಮೂಲಗಳನ್ನು, ಸಂಘದ ಇತ್ತೀಚಿನ ಜಮಾಖರ್ಚು ಪಟ್ಟಿಯಲ್ಲಿ ಅಥವಾ ಲೆಕ್ಕಪರಿಶೋಧನಾ ವರದಿಯಲ್ಲಿ ಒದಗಿಸಲಾದ ವಿವರಗಳಿಂದ ಈ ಕೆಳಕಂಡಂತೆ ಲೆಕ್ಕಹಾಕತಕ್ಕದ್ದು.
| ಆಂತರಿಕ ಸಂಪನ್ಮೂಲಗಳು ಭಾದ್ಯತೆಗಳು | |||
| ಬಾ ಜ್ | ಸಂದಾಯಿತ ಬಂಡವಾಳ (ಸರ್ಕಾರದ ಷೇರು ಬಂಡವಾಳದ ಪಾಲು ಸೇರಿದಂತೆ. ಸರ್ಕಾರದ ಷೇರು ಬಂಡವಾಳದ ವಂತಿಗೆಯು ಸ್ಥಿರಾಸ್ತಿಗಳ ಆರ್ಜನೆಗಾಗಿ ಮಾತ್ರ ಇರುವ ಸಂದರ್ಭದಲ್ಲಿ, ಅದನ್ನು ಸಂಘದ ಆಂತರಿಕ ಸಂಪನ್ಮೂಲಗಳಲ್ಲಿ ಸೇರಿಸತಕ್ಕದ್ದಲ್ಲ.) | 1. | ಕನಿಷ್ಠ ನಗದು ಮತ್ತು ಬ್ಯಾಂಕ್ಶಿಲ್ಕು |
| 2) | ರೆವಿನ್ಯೂ | 2. | ಖಾಯಂ ಭದ್ರತಾ ಠೇವಣಿಗಳು |
| 3) | ಠೇವಣಿಗಳು ಯಾವುವಾದರೂ ಇದ್ದರೆ, ಅವು | 3. | ಬ್ಯಾಂಕ್ ಮತ್ತು ಇತರ ಸಹಕಾರಿ ಸಂಸ್ಥೆಗಳಲ್ಲಿ ಷೇರು |
| 4) | ಲಾಭ ನಷ್ಟ ಲೆಕ್ಕದಲ್ಲಿ ಹೆಚ್ಚುವರಿ ಏನಾದರೂ ಇದ್ದರೆ ಅವು. | 4. | ಸ್ವಂತ ಸಂಪನ್ಮೂಲಗಳಿಂದ ಸ್ಥಿರಾಸ್ತಿಗಳಲ್ಲಿ ಹೂಡಿಕೆಗಳು |
| 5. | ಆಮೂರ್ತ ಆಸ್ತಿಗಳು ಯಾವುದಾದರೂ ಇದ್ದರೆ ಅವು | ||
| 6. | ಸಂಚಿತ ನಷ್ಟಗಳು ಯಾವು ವಾದರೂ ಇದ್ದರೆ, ಅವು | ||
| ಒಟ್ಟು ಎ | ಒಟ್ಟು ಬಿ | ||
(ಬಿ) ಇತ್ತೀಚಿನ ಲೆಕ್ಕಪರಿಶೋಧಿತ ಜಮಾಖರ್ಚು ಪಟ್ಟಿ, ವ್ಯಾಪಾರದ ಮತ್ತು ಲಾಭ ಮತ್ತು ನಷ್ಟದ ಲೆಕ್ಕಪತ್ರಗಳು;
(ಸಿ) ಸಹಕಾರ ಮಾರುಕಟ್ಟೆ ವ್ಯವಹಾರ ಸಂಘ ಅಥವಾ ಕೃಷಿ ಸಂಸ್ಕರಣಾ ಸಹಕಾರ ಸಂಘ ಇವುಗಳು ಅಧಿಸೂಚಿತ ಕೃಷಿ ಉತ್ಪನ್ನಗಳ ಸಂಬಂಧದಲ್ಲಿ ಕಳೆದ ಸಹಕಾರ ವರ್ಷದಲ್ಲಿ ಮಾಡಿದ ಹಣಕಾಸು ವಹಿವಾಟಿನ ಹಾಗೂ ದಾಸ್ತಾನು ವಹಿವಾಟಿನ ಸಂಕ್ಷಿಪ್ತ ವಿವರಣೆ;
(ಡಿ) ಸಂಘವು ಪ್ರತಿಯೊಂದು ಅಧಿಸೂಚಿತ ಕೃಷಿ ಉತ್ಪನ್ನದ ಸಂಬಂಧದಲ್ಲಿ ವ್ಯವಹರಿಸಿದ ದಾಸ್ತಾನಿನ ಇತ್ತೀಚಿನ ಸ್ಥಿತಿಗತಿಯ ಸಂಕ್ಷಿಪ್ತ ವಿವರಣೆ.
(3) ಮಾರುಕಟ್ಟೆ ಸಮಿತಿಯು, ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕು ಮತ್ತು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ - ಇವುಗಳು ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳಿಗೆ ಅಥವಾ ಸಂಸ್ಕರಣಾ ಸಹಕಾರ ಸಂಘಗಳಿಗೆ ಮಂಜೂರು ಮಾಡುವ ಕಾರ್ಯನಿರ್ವಹಣಾ ಬಂಡವಾಳದ ಮೇಲೆ ವಿಧಿಸುವ ಬಡ್ಡಿ ದರವನ್ನು ಮೀರದ ದರದಲ್ಲಿ ಸಾಲಗಳ ಮೇಲೆ ಬಡ್ಡಿಯನ್ನು ವಿಧಿಸಬಹುದು.
(4) ಸಾಲವನ್ನು ಮರುಪಾವತಿ ಮಾಡಲು ತಪ್ಪಿದರೆ (3)ನೇ ಉಪನಿಯಮದ ಮೇರೆಗೆ ವಿಧಿಸಲಾಗುವ ಬಡ್ಡಿಯಲ್ಲದೆ ಶೇಕಡಾ 2ರ ದರದಲ್ಲಿ ಸುಸ್ತಿ ಬಡ್ಡಿಯನ್ನು ಸಹ ವಿಧಿಸತಕ್ಕದ್ದು.
(5) ಈ ನಿಯಮದ ಮೇರೆಗೆ ಮಂಜೂರಾದ ಸಾಲವನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿತ್ತೋ ಆ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕಾಗಿ ಬಳಸಿದುದು ಕಂಡುಬಂದರೆ, ಮಾರುಕಟ್ಟೆ ಸಮಿತಿಯು, ಸಾಲದ ಪೂರ್ಣ ಮೊಬಲಗನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಕೇಳಬಹುದು.
(6) ಅಂಥ ಸಾಲ ಕೋರಿ ಅರ್ಜಿಸಲ್ಲಿಸಿರುವ ಸಂಘವು, ಮಾರುಕಟ್ಟೆ ಸಮಿತಿಯ ಹೆಸರಿನಲ್ಲಿ ಸಾಲದ ಮೊಬಲಗು ಮತ್ತು ಅದರ ಶೇಕಡಾ 40ರಷ್ಟು ಮೊಬಲಗು ಇವೆರಡರ ಒಟ್ಟು ಮೊತ್ತಕ್ಕೆ ಕಡಿಮೆಯಿಲ್ಲದಷ್ಟು ಮೌಲ್ಯದ ತನ್ನ ಸ್ವತ್ತನ್ನು ಅಡಮಾನ ಮಾಡಿದ ಹೊರತು ಈ ನಿಯಮದ ಮೇರೆಗೆ ಮಾರುಕಟ್ಟೆ ಸಮಿತಿಯು ಸಾಲವನ್ನು ಮಂಜೂರು ಮಾಡತಕ್ಕದ್ದಲ್ಲ:
ಪರಂತು, ಅಂಥ ಸಾಲವನ್ನು ಬಡ್ಡಿ ಸಹಿತ ಮರುಪಾವತಿ ಮಾಡುವ ಬಗ್ಗೆ ರಾಜ್ಯ ಸರ್ಕಾರವು, ಖಾತರಿ ನೀಡಿದರೆ, ಮಾರುಕಟ್ಟೆ ಸಮಿತಿಯು ಸಂಘದ ಸ್ವತ್ತನ್ನು ಅಡಮಾನ ಮಾಡುವಂತೆ ಒತ್ತಾಯಿಸದೆ ಈ ನಿಯಮದ ಮೇರೆಗೆ ಸಾಲವನ್ನು ನೀಡಬಹುದು.
(7) ಈ ಮುಂಚಿನ ಮುಂಗಡವನ್ನು ಪೂರ್ಣವಾಗಿ ಮರುಸಂದಾಯ ಮಾಡಿದ ಹೊರತು ಎರಡನೇ ಮುಂಗಡವನ್ನು ನೀಡತಕ್ಕದ್ದಲ್ಲ.
60ಸಿ. ಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣ ಮತ್ತು ಮಾರುಕಟ್ಟೆ ಉಪಪ್ರಾಂಗಣ ಇವುಗಳ ಹೊರಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.- ಮಾರುಕಟ್ಟೆ ಸಮಿತಿಯು, ಮಾರುಕಟ್ಟೆ ಪ್ರದೇಶದಲ್ಲಿ ಈ ಕೆಳಕಂಡ ಮೂಲಭೂತ ಸೌಲಭ್ಯಗಳನ್ನು ಒದಗಿಸಬಹುದು:-
(1) ಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣ ಮತ್ತು ಮಾರುಕಟ್ಟೆ ಉಪಪ್ರಾಂಗಣ - ಇವುಗಳಿಗೆ ಕೂಡು ದಾರಿ.
(2) ಸೂರು ಹಾಕಿದ ಹರಾಜು ಕಟ್ಟೆ ಅಥವಾ ಮಾರಾಟ ಕಟ್ಟೆಗಳು.
(3) ಗ್ರಾಮೀಣ ಮಾರುಕಟ್ಟೆಗಳಲ್ಲಿ ಸರಕು ಒಣಗಿಸುವ ಕಟ್ಟೆಗಳು.
(4) ಗ್ರಾಮೀಣ ಮಾರುಕಟ್ಟೆಗಳಲ್ಲಿ ಕುಡಿಯುವ ನೀರಿನ ಸೌಕರ್ಯ.
(5) ಮಾರುಕಟ್ಟೆ ಪ್ರದೇಶದಲ್ಲಿ ಗೋದಾಮುಗಳು.
(6) ಗ್ರಾಮೀಣ ಮಾರುಕಟ್ಟೆಗಳಲ್ಲಿ ದನಗಳನ್ನು ಕಟ್ಟಲು ಕಲ್ಲು ಗೂಟಗಳು.
(7) ಸ್ವಚ್ಫತೆಗೆ, ವರ್ಗೀಕರಣಕ್ಕೆ ಮತ್ತು ಕೊಯ್ಲಿನ ನಂತರದ ಇತರ ಕಾರ್ಯಾಚರಣೆಗಳಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಇಡುವ ಸಲುವಾಗಿ ಸಾಮಾನ್ಯ ಸೌಕರ್ಯ ಕೇಂದ್ರಗಳು.
1 [(8) ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ಗಳಿಗೆ, ಮತ್ತು ತಾಲ್ಲೂಕು ಪಂಚಾಯತ್ಗಳಿಗೆ, ಗ್ರಾಮ ಪಂಚಾಯತ್ಗಳಿಗೆ, ಸಿಟಿ ಮುನಿಸಿಪಲ್ ಕಾರ್ಪೋರೇಷನ್ಗಳಿಗೆ, ಮುನಿಸಿಪಲ್ ಕೌನ್ಸಿಲ್ಗಳಿಗೆ ಮತ್ತು ಟೌನ್ ಪಂಚಾಯತ್ಗಳಿಗೆ ಸೇರಿದ ರಸ್ತೆಗಳನ್ನು ಬಿಟ್ಟು, ಮಾರುಕಟ್ಟೆ ಪ್ರದೇಶದಲ್ಲಿರುವ ಎಲ್ಲ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ:
ಪರಂತು, ಮಾರುಕಟ್ಟೆ ಸಮಿತಿಯು, ನಗರದ, ಪಟ್ಟಣದ ಅಥವಾ ಗ್ರಾಮ ಪರಿಮಿತಿಗಳ ಒಳಗಿರುವ, ಪ್ರಾಂಗಣಕ್ಕೆ ಹೋಗುವ, ಐದು ಕಿಲೋಮೀಟರುವರೆಗಿನ ಕೂಡುರಸ್ತೆಯನ್ನು ಅಭಿವೃದ್ಧಿಪಡಿಸಬಹುದು.
(9) 63ನೆಯ ಪ್ರಕರಣದ (2)ನೆಯ ಉಪ ಪ್ರಕರಣದ (ಬಿ) ಖಂಡದ(viii ಡ)ಉಪ-ಖಂಡದ ಉಪಬಂಧಗಳಿಗೆ ಒಳಪಟ್ಟು, ಮಾರುಕಟ್ಟೆ ಸಮಿತಿಯು, (8)ನೆಯ ಖಂಡದ ಮೇರೆಗೆ ಆದು ಗುರುತಿಸಿದ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಉದ್ದೇಶಕ್ಕಾಗಿ, ಈ ಕೆಳಗಿನ ತ:ಖ್ತೆಯಲ್ಲಿ ನಿರ್ಧಿಷ್ಟಪಡಿಸಿರುವಷ್ಟರಮಟ್ಟಿಗೆ ಗರಿಷ್ಠ ಮೊತ್ತವನ್ನು ಖರ್ಚು ಮಾಡಬಹುದು.
ತಃಖ್ತೆ
| ಮಾರುಕಟ್ಟೆ ಸಮಿತಿಗಳ ಪ್ರವರ್ಗಗಳು | ಕಾಮಗಾರಿಗಳ ಅಂದಾಜು ವೆಚ್ಚದ ಗರಿಷ್ಠ ಮೊತ್ತ |
| 1 | 2 |
| ಮಾರುಕಟ್ಟೆ ಶುಲ್ಕ ಮತ್ತು ಲೈಸೆನ್ಸ್ ಫೀಜು ರೂಪದಲ್ಲಿ ಹಿಂದಿನ ಮಾರುಕಟ್ಟೆ ವರ್ಷದಲ್ಲಿ ಯಾವ ಮಾರುಕಟ್ಟೆ ಸಮಿತಿಯ ವಾರ್ಷಿಕ ಆದಾಯವು ಈ ಮುಂದೆ ಹೇಳಿರುವಂತೆ ಇರುವುದೋ ಅಂತಹ ಮಾರುಕಟ್ಟೆ ಸಮಿತಿ: | |
| (1) 1.50 ಕೋಟಿ ರೂ.ಗೆ ಮೇಲ್ಪಟ್ಟು ಇದ್ದರೆ | ವಾರ್ಷಿಕ 30-00 ಲಕ್ಷ ರೂ. |
| (2) 1.00 ಕೋಟಿ ರೂ. ಮೇಲ್ಪಟ್ಟು ಮತ್ತು 1.50 ಕೋಟಿ ರೂ.ವರೆಗೆ ಇದ್ದರೆ | ವಾರ್ಷಿಕ 15.00 ಲಕ್ಷ ರೂ. |
| (3) 50.00 ಲಕ್ಷ ರೂ.ಗೆ ಮೇಲ್ಪಟ್ಟು ಮತ್ತು 1.00 ಕೋಟಿ ರೂ.ವರೆಗೆ ಇದ್ದರೆ | ವಾರ್ಷಿಕ 10.00 ಲಕ್ಷ ರೂ. |
| (4) 50.00 ಲಕ್ಷ ರೂ. ಮತ್ತು ಅದಕ್ಕೂ ಕಡಿಮೆ ಇದ್ದರೆ ವಿವರಣೆ: ಮಾರುಕಟ್ಟೆ ಸಮಿತಿಯು, ತಾನು ಉದ್ದೇಶಕ್ಕಾಗಿ, ಮೇಲಿನ ತ:ಖ್ತೆಯಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಖರ್ಚು ಮಾಡತಕ್ಕದ್ದು.]1 | ವಾರ್ಷಿಕ 5.00 ಲಕ್ಷ ರೂ. ಅಭಿವೃದ್ಧಿಪಡಿಸಿದ ರಸ್ತೆಗಳ ನಿರ್ವಹಣೆ ಮೊತ್ತದ ಶೇಕಡಾ ಮೂವತ್ತೈದರಷ್ಟು |